ಸರ್ಕಾರದ ಮನೆ ನಿರ್ಮಾಣ ಕಾರ್ಯದಿಂದ ಅನೇಕ ಜನರು ಮನೆ ಕಟ್ಟಿಸಿ ಕೊಳ್ಳಲು ಸಹಾಯಕವಾಗಿದೆ ಹಾಗೆಯೇ ಸರ್ಕಾರ ಮನೆ ನಿರ್ಮಾಣಕ್ಕೆ ಧನ ಸಹಾಯವನ್ನು ಮಾಡುತ್ತದೆ ಹಾಗೆಯೇ ಈ ಯೋಜನೆಯ ಫಲವನ್ನು ಪಡೆಯಲು ಮೊದಲು ರಾಜೀವ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಮನೆಯನ್ನು ಕಟ್ಟಲು ಅರ್ಜಿ ಸಲ್ಲಿಬೇಕು ಇದು ಕೆಲವು ಜನರಿಗೆ ತಿಳಿಯದ ಸಂಗತಿಯಾಗಿದೆ ಹಾಗೆಯೇ ಅರ್ಜಿ ಸಲ್ಲಿಸಲು ಕೆಲವು ಮುಖ್ಯ ದಾಖಲಾತಿಗಳು ಬೇಕಾಗುತ್ತದೆ.

ಹಾಗೆಯೇ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯತಿಯಲ್ಲಿ ನೀಡಬೇಕುಫಲಾನುಭವಿಗಳಿಗೆ ಒಟ್ಟಿಗೆ ಹಣ ಬರುವುದು ಇಲ್ಲ ಬದಲಾಗಿ ಹಂತ ಹಂತ ಹಂತವಾಗಿ ಹಣ ಬರುತ್ತದೆ ಈ ಯೋಜನೆಯ ಅಡಿಯಲ್ಲಿ ಹಲವಾರು ಜನರು ಮನೆ ಕಟ್ಟಿಕೊಳ್ಳಲು ಸಹಾಯವಾಗಿದೆ ನಾವು ಈ ಲೇಖನದ ಮೂಲಕ ರಾಜೀವ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಮನೆ ಕಟ್ಟಿಸಲು ಬೇಕಾದ ಅರ್ಜಿ ಯ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿಯೊಂದು ಗ್ರಾಮ ಪಂಚಾಯತಿ ಮನೆ ಕಟ್ಟುವ ಯೋಜನೆ ಬರುತ್ತದೆ ನೂರಕ್ಕೂ ಹೆಚ್ಚು ಮನೆಯನ್ನು ಕಟ್ಟಲು ಧನ ಸಹಾಯ ಬರುತ್ತದೆ ರಾಜೀವ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಮನೆಯನ್ನು ಕಟ್ಟಲು ಅರ್ಜಿ ಸಲ್ಲಿಸಲು ಮುಖ್ಯವಾಗಿ ಕೆಲವು ದಾಖಲೆಗಳು ಬೇಕಾಗುತ್ತದೆ. ಅವುಗಳೆಂದರೆ ಬಿ ಪಿ ಎಲ್ ಪಡಿತರ ಚೀಟಿ ಇದು ಕಡ್ಡಾಯವಾಗಿ ಬೇಕೆ ಬೇಕು ಹಾಗೆಯೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಹ ಬೇಕಾಗುತ್ತದೆ ಹಾಗೆಯೇ ಅರ್ಜಿ ಸಲ್ಲಿಸುವರ ಆಧಾರ ಕಾರ್ಡ್ ಸಹ ಬೇಕಾಗುತ್ತದೆ ಹಾಗೆಯೇ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಬ್ಯಾಂಕ್ ಅಕೌಂಟನ ಪಾಸಬುಕ್ ಪ್ರತಿ ಜೆರಾಕ್ಸ್ ಬೇಕಾಗುತ್ತದೆ ಈ ಯೋಜನೆಯಲ್ಲಿ ಮನೆ ಕಟ್ಟಲು ಮಾತ್ರ ಧನ ಸಹಾಯ ಮಾಡಲಾಗುತ್ತದೆಆದ್ದರಿಂದ ನಿವೇಶನದ ಹಕ್ಕು ಪತ್ರ ಕೊಡಬೇಕಾಗುತ್ತದೆ ಶೌಚಾಲಯ ಬಳಸುತ್ತೇನೆ ಎಂದು ಒಪ್ಪಿಗೆ ಪತ್ರ ಬೇಕಾಗುತ್ತದೆ .

ಮನೆಯ ಮಾಲೀಕ ಹಾಗೂ ಮನೆ ಇರುವ ಫೋಟೋಗಳು ಬೇಕಾಗುತ್ತದೆ ಇಪ್ಪತ್ತು ರೂಪಾಯಿಯ ಸ್ಟ್ಯಾಂಪ್ ಪೇಪರ್ ಮೇಲೆ ಹೇಳಿಗೆ ಪತ್ರ ಬೇಕಾಗುತ್ತದೆ ಈ ಮೇಲಿನ ಎಲ್ಲಾ ದಾಖಲೆಗಳು ಬೇಕಾಗುತ್ತದೆ ಇವೆಲ್ಲ ದಾಖಲೆಗಳನ್ನು ಗ್ರಾಮ ಪಂಚಾಯತಿಗೆ ದಾಖಲೆಗಳನ್ನು ಲಗತ್ತಿಸಬೇಕು ಅರ್ಜಿ ಸಲ್ಲಿಸಿದ ಬಳಿಕ ಗ್ರಾಮ ಪಂಚಾಯತಿಯವರು ರಶೀತಿ ಕೊಡುತ್ತಾರೆ ಇಲ್ಲಿಗೆ ಅರ್ಜಿ ಸಲ್ಲಿಸುವ ಕಾರ್ಯ ಮುಗಿಯುತ್ತದೆ ನಿಗದಿ ಪಡಿಸಿದ ದಿನದಂದು ಗ್ರಾಮ ಪಂಚಾಯತಿಯವರು ಸಭೆಯನ್ನು ಕರೆಯುತ್ತಾರೆ .ಅಲ್ಲಿ ಅರ್ಜಿದಾರರು ಅಧ್ಯಕ್ಷರು ಹಾಗೂ ಪಿಡಿಒ ಇರುತ್ತಾರೆ

ಸರ್ಕಾರ ನಿಗದಿ ಪಡಿಸಿದ ಮನೆ ಗಿಂತ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದರೆ ಚೀಟಿ ಆರಿಸುವ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ ಫಲಾನುಭವಿಗಳಿಗೆ ಒಟ್ಟಿಗೆ ಹಣ ಬರುವುದು ಇಲ್ಲ ಬದಲಾಗಿ ಹಂತ ಹಂತ ಹಂತವಾಗಿ ಹಣ ಬರುತ್ತದೆ ಶೌಚಾಲಯ ಕಟ್ಟಲು ಪ್ರತ್ಯೇಕ ಧನ ಸಹಾಯ ಇರುತ್ತದೆ ನಮ್ಮ ಮನೆಗೆ ನಾವೇ ಜಿ ಪಿ ಎಸ್ ಮೂಲಕ ಫೋಟೋ ತೆಗೆಯಬೇಕು ಈಗಾಗಲೇ ಕುಟುಂಬದ ಒಬ್ಬ ಸದಸ್ಯ ಅರ್ಜಿ ಹಾಕಿದ್ದರೆ ಮತ್ತೆ ಹಾಕುವಂತಿಲ್ಲ ಹೀಗೆ ಮನೆಯ ನಿರ್ಮಾಣ ಕಾರ್ಯ ಹೀಗೆ ಇರುತ್ತದೆ.

Leave a Reply

Your email address will not be published. Required fields are marked *