ಕೆಲವರಿಗೆ ಸಾಗುವಳಿ ಪ್ರಮಾಣ ಪತ್ರ ಎಲ್ಲಿ ಮಾಡಿಸುತ್ತಾರೆ ಎಂಬುದು ಗೊತ್ತಿರುವುದು ಇಲ್ಲ ಸಾಗುವಳಿ ಪತ್ರವನ್ನು ಆನ್ಲೈನ್ ಹಾಗೂ ನಾಡ ಕಚೇರಿಯಲ್ಲಿ ಸಹ ಮಾಡಬಹುದಾಗಿದೆ ಸಾಗುವಳಿ ಪ್ರಮಾಣ ಪತ್ರ ಮಾಡಿಸುವಾಗ ಪ್ರತಿಯೊಂದು ದಾಖಲೆಗಳ ಬಗ್ಗೆ ಗಮನಹರಿಸಬೇಕು ಹಾಗೆಯೇ ಸಾಗುವಳಿ ಪ್ರಮಾಣ ಪತ್ರ ತುಂಬಾ ಉಪಯೋಗಕಾರಿ ಸಾಗುವಳಿ ಪತ್ರದಿಂದ ಉದ್ಯೋಗ ಗುರುತಿಗೆ ಇದನ್ನು ತೋರಿಸಬಹುದು ಕೃಷಿ ಭೂಮಿ ಖರೀದಿಸಲು ಈ ಪ್ರಮಾಣ ಪತ್ರ ಕೆಲವೊಮ್ಮೆ ಬೇಕಾಗುತ್ತದೆ ಹಾಗೆಯೇ ಸರ್ಕಾರದ ವಿವಿಧ ಸೌಲಭ್ಯ ಹಾಗೂ ಬ್ಯಾಂಕಿನ ಸಾಲ ಪಡೆಯಲು ನೆರವಾಗುತ್ತದೆ ಹೀಗೆ ಅನೇಕ ಉಪಯೋಗವನ್ನು ಹೊಂದಿದೆ ಸಾಗುವಳಿ ಪ್ರಮಾಣ ಪತ್ರ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ನಾವು ಈ ಲೇಖನದ ಮೂಲಕ ಸಾಗುವಳಿ ಪತ್ರದ ಬಗ್ಗೆ ತಿಳಿದುಕೊಳ್ಳೋಣ.

ಕರ್ನಾಟಕ ಕಂದಾಯ ಇಲಾಖೆಯ ಮೂಲಕ ಹಲವು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಅದರಲ್ಲಿ ಗೇಣಿ ರಹಿತ ಪ್ರಮಾಣ ಪತ್ರ ಹಾಗೆಯೇ ಸಣ್ಣ ಹಿಡುವಳಿ ಪ್ರಮಾಣ ಪತ್ರ ಹಾಗೂ ಕೃಷಿ ಕಾರ್ಮಿಕರಿಗೆ ಪ್ರಮಾಣಪತ್ರ ಹಾಗೆಯೇ ಭೂ ಹಿಡುವಳಿ ಪ್ರಮಾಣ ಪತ್ರ ಹಾಗೂ ರೈತ ಪ್ರಮಾಣ ಪತ್ರ ಹಾಗೆಯೇ ಸಾಗುವಳಿ ಪ್ರಮಾಣ ಪತ್ರ ಹೀಗೆ ಹಲವಾರು ಪ್ರಮಾಣ ಪತ್ರಗಳು ಕಂದಾಯ ಇಲಾಖೆ ರೈತರಿಗೆ ವಿತರಿಸಲಾಗುತ್ತದೆ.

ಸಾಗುವಳಿ ಪ್ರಮಾಣ ಪತ್ರ ಪಡೆಯಲು ಅನೇಕ ದಾಖಲೆಗಳು ಬೇಕಾಗುತ್ತದೇ ಅದರಲ್ಲಿ ಇತ್ತೀಚಿನ ಪಹಣಿ ನೀಡಬೇಕು ಆಧಾರ ಕಾರ್ಡ್ ಕೊಡಬೇಕು ಇಪ್ಪತ್ತು ರೂಪಾಯಿ ಸ್ಟ್ಯಾಂಪ್ ಪೇಪರ್ ಮೇಲೆ ಹೇಳಿಕೆ ಬರೆದು ನೋಟ್ರಿ ಮಾಡಿಸಬೇಕು ಇವೆಲ್ಲ ದಾಖಲೆಗಳೊಂದಿಗೆ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬೇಕು ಹಾಗೆಯೇ ನಾಡ ಕಚೇರಿಯಲ್ಲಿ ಸಹ ಮಾಡಿಸಬಹುದು ಅರ್ಜಿ ಹಾಕುವಾಗ ಹಾಗೂ ತೆಗೆದುಕೊಳ್ಳುವಾಗ ಪ್ರತಿಯೊಂದು ದಾಖಲೆಗಳು ಬಗ್ಗೆ ಗಮನ ಇರಬೇಕು.

ದಾಖಲಾತಿಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ ಹಾಗಾಗಿ ಯಾವುದೇ ರೀತಿಯ ದಾಖಲೆಯನ್ನು ಕಚೇರಿಗೆ ಕೊಡುವ ಪ್ರಮೇಯ ಇರುವುದು ಇಲ್ಲ ಆನ್ಲೈನ್ ಪದ್ಧತಿಯಲ್ಲಿ ಅಧಿಕಾರಿಗಳು ತಮ್ಮ ಸಂಶಯ ನಿವಾರಣೆಗಾಗಿ ಮೂಲ ದಾಖಲಾತಿಯನ್ನು ಕೆಲವೊಮ್ಮೆ ಕೇಳಿದರು ಕೇಳಬಹುದು ಇನ್ನೊಂದು ವಿಧಾನದಲ್ಲಿ ಎಲ್ಲ ದಾಖಲೆಗಳೊಂದಿಗೆ ನಾಡ ಕಚೇರಿಗೆ ಹೋಗಿ ಅರ್ಜಿ ಕೊಟ್ಟು ರಶಿತಿ ಪಡೆದರೆ ಮುಗಿಯಿತು ಈ ಪದ್ಧತಿಯಲ್ಲಿ ಸಹ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಪರೀಕ್ಷಿಸಿ ಸಾಗುವಳಿ ಪತ್ರ ನೀಡುತ್ತಾರೆ

ಸಾಗುವಳಿ ಪತ್ರಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕ ಬಳಿ ಈ ದಾಖಲೆಗಳು ನೇರವಾಗಿ ಹೋಗುತ್ತದೆ. ಪ್ರಮಾಣ ಪತ್ರ ಪಡೆಯಲು ಯೋಗ್ಯ ವಾಗಿದ್ದರೆ ಮುಂದಿನ ಉಪ ತಹಶೀಲ್ದಾರ್ ಕಚೇರಿಗೆ ಕಳುಹಿಸಿ ಕೊಡುತ್ತಾರೆ ಆಗ ತಹಶೀಲ್ದಾರ್ ರು ಪರಿಶೀಲಿಸಿ ಅನುಮೋದಿಸಿ ಸಹಿ ಮಾಡಿದ್ದರೆ ಸಾಗುವಳಿ ಪತ್ರ ಸಿದ್ದ ಆಗುತ್ತದೆ ಸಾಗುವಳಿ ಪತ್ರದಿಂದ ಉದ್ಯೋಗ ಗುರುತಿಗೆ ಇದನ್ನು ತೋರಿಸಬಹುದು ಕೃಷಿ ಭೂಮಿ ಖರೀದಿಸಲು ಈ ಪ್ರಮಾಣ ಪತ್ರ ಕೆಲವೊಮ್ಮೆ ಬೇಕಾಗುತ್ತದೆ ಹಾಗೆಯೇ ಸರ್ಕಾರದ ವಿವಿಧ ಸೌಲಭ್ಯ ಹಾಗೂ ಬ್ಯಾಂಕಿನ ಸಾಲ ಪಡೆಯಲು ನೆರವಾಗುತ್ತದೆ ಹೀಗೆ ಸಾಗುವಳಿ ಪತ್ರ ಬಹಳ ಉಪಯೋಗವನ್ನು ಹೊಂದಿದೆ.

Leave a Reply

Your email address will not be published. Required fields are marked *