Oja tractor Mahindra: ಕೃಷಿಕರಿಗೆ ಟ್ರ್ಯಾಕ್ಟರ್ ಬಹಳ ಮುಖ್ಯ, ವ್ಯವಸಾಯದ ಕೆಲಸವನ್ನು ಸುಲಭ ಮಾಡುವ ಟ್ರ್ಯಾಕ್ಟರ್ ಗಳನ್ನು ಕೃಷಿಕರು ಬಳಸುತ್ತಾರೆ. ಇದೀಗ ನಮ್ಮ ದೇಶದ ಮಾರ್ಕೆಟ್ ಗೆ ಓಜಾ ಹೆಸರಿನ ಟ್ರ್ಯಾಕ್ಟರ್ (Oja tractor Mahindra) ಕಾಲಿಟ್ಟಿದೆ. ಈ ಟ್ರ್ಯಾಕ್ಟರ್ ನಲ್ಲಿ ಹೊಸ ಟೆಕ್ನಾಲಜಿ ಇದ್ದು, ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಟ್ರ್ಯಾಕ್ಟರ್ ಬಗ್ಗೆ ಪೂರ್ತಿ ಮಾಹಿತಿ ನೀಡುತ್ತೇವೆ ನೋಡಿ..

ಈ ಹೊಸ ಓಜಾ ಟ್ರ್ಯಾಕ್ಟರ್ ಅನ್ನು ಮಹೀಂದ್ರಾಎ.ಎಫ್‌.ಎಸ್‌ ನ ಆರ್ & ಡಿ ಸೆಂಟರ್ ಮತ್ತು ಜಪಾನ್‌ ನ ಮಿತ್ಸುಬಿಷಿ ಮಹೀಂದ್ರಾ ಅಗ್ರಿಕಲ್ಚರ್ ಮೆಷಿನರಿ ಈ ಎರಡು ಸಂಸ್ಥೆಗಳ ಸಹಯೋಗದಲ್ಲಿ ತಯಾರಿಸಲಾಗಿದೆ. ಇದು ಹೊಸದಾಗಿ ತಯಾರಾಗಿರುವ ಟ್ರ್ಯಾಕ್ಟರ್ ಆಗಿದ್ದು, ಜನರಿಗೆ ಸುಲಭ ಅಗುವಂಥ ಬೆಲೆ ಜೊತೆಗೆ ಒಳ್ಳೆಯ ಟೆಕ್ನಾಲಜಿ ಇಂದ ಕೂಡಿರುತ್ತದೆ. ಈಗ ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ..

ಕೃಷಿ ಕೆಲಸವನ್ನು ಮನುಷ್ಯನಿಂದ ಮಾತ್ರವಲ್ಲದೆ, ಮಷಿನ್ ಗಳ ಸಹಾಯದಿಂದ ಇನ್ನಷ್ಟು ಸುಲಭವಾಗಿ ಎಲ್ಲವೂ ನಡೆಯುವ ಹಾಗೆ ಮಾಡಲಾಗುತ್ತಿದೆ. ರೈತರಿಗೆ ಕೃಷಿ ಕೆಲಸ ಮಾಡಲು ಕೆಲವು ಉಪಕರಣಗಳು ಬೇಕಾಗಲಿದ್ದು, ಟ್ರ್ಯಾಕ್ಟರ್ ಎಲ್ಲಾ ಕೃಷಿಕರಿಗೆ ಸಹಾಯ ಮಾಡಲಿದೆ. ಈ ರೀತಿಯಾಗಿ ರೈತರಿಗೆ ಸಹಾಯ ಆಗುವಂತೆ ಓಜಾ ಟ್ರ್ಯಾಕ್ಟರ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

Oja tractor Mahindra

ಹೊಸದಾಗಿರುವ ಈ ಟ್ರ್ಯಾಕ್ಟರ್ ಖರೀದಿ ಮಾಡಲು ರೈತರು ಕೂಡ ಆಸಕ್ತಿ ತೋರಿಸುತ್ತಿದ್ದಾರೆ. ಓಜಾ ಟ್ರ್ಯಾಕ್ಟರ್ ನ ಮುಖ್ಯವಾದ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ಫೋರ್ ವೀಲ್ ಡ್ರೈವ್, ಫಾರ್ವರ್ಡ್ ರಿವರ್ಸ್ ಶಟಲ್ ಮತ್ತು ಕ್ರೀಪರ್, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಸಿಗ್ನೇಚರ್ DRLS ವಿಶೇಷತೆ, ಹಾಗೂ ಇನ್ನಿತರ ಟೆಕ್ನಾಲಜಿ ಒಳಗೊಂಡಿದೆ.

ಈ ಟ್ರ್ಯಾಕ್ಟರ್ ಒಳ್ಳೆಯ ಕ್ವಾಲಿಟಿ ಮತ್ತು ಸಾಮರ್ಥ್ಯ ಎರಡನ್ನು ಕೂಡ ಹೊಂದಿದೆ. ಈ ಟ್ರ್ಯಾಕ್ಟರ್ ನ ಬೆಲೆ ಎಷ್ಟು ಎಂದು ನೋಡುವುದಾದರೆ, 27hp ಟ್ರ್ಯಾಕ್ಟರ್ ಬೆಲೆ 5.64 ಲಕ್ಷ ರೂಪಾಯಿ ಆಗಿದೆ, 40hp ಟ್ರ್ಯಾಕ್ಟರ್ ಬೆಲೆ 7.35 ಲಕ್ಷ ರೂಪಾಯಿ ಆಗಿದೆ. ಒಂದು ವೇಳೆ ನಿಮಗೂ ಆಸಕ್ತಿ ಇದ್ದರೆ, ಈ ಟ್ರ್ಯಾಕ್ಟರ್ ಖರೀದಿ ಮಾಡಬಹುದು.

By AS Naik

Leave a Reply

Your email address will not be published. Required fields are marked *