Splendor Plus Xtec: ಒಂದು ವೇಳೆ ನೀವು ಬೈಕ್ ಖರೀದಿ ಮಾಡಬೇಕು ಎಂದುಕೊಂಡಿದ್ದು, ಅವುಗಳ ಬೆಲೆ ಜಾಸ್ತಿ ಇರುತ್ತದೆ ಖರೀದಿ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ನಿಮಗಾಗಿ ಇಂದು ಒಂದು ಗುಡ್ ನ್ಯೂಸ್ ಕಾದಿದೆ. ಹೀರೋ ಕಂಪನಿಯ Splendor Plus Xtec ಬೈಕ್ ಬರೋಬ್ಬರಿ 70ಕಿಮೀ ಮೈಲೇಜ್ ಕೊಡಲಿದ್ದು, ಈ ಬೈಕ್ ಅನ್ನು ನೀವು ಕೇವಲ 10,000 ರೂಪಾಯಿಗೆ ಖರೀದಿ ಮಾಡಿ ಮನೆಗೆ ತರಬಹುದು.

ಈಗ ಹಬ್ಬದ ಸೀಸನ್ ಶುರುವಾಗಿದೆ, ಗೌರಿ ಗಣೇಶ ಹಬ್ಬ, ದಸರಾ ಹಬ್ಬ ಮುಗಿಯಿತು ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ..ಹಾಗಾಗಿ ವಾಹನ ತಯಾರಿಕೆ ಕಂಪನಿಗಳು ಕಡಿಮೆ ಬೆಲೆಗೆ ತಮ್ಮ ಸಂಸ್ಥೆಯ ಬೈಕ್ ಗಳನ್ನು ಈಗ ಮಾರಾಟಕ್ಕೆ ತರುತ್ತಿದ್ದಾರೆ. ಹಲವು ಕಂಪನಿಗಳಿದ್ದು, ಅವುಗಳ ಖರೀದಿಗೆ ಡಿಸ್ಕೌಂಟ್ ಗಳನ್ನು ಕೊಡಲಾಗುತ್ತಿದೆ. ಅದರಲ್ಲಿ ಒಂದು ಹೀರೋ ಸಂಸ್ಥೆ ಆಗಿದ್ದು, ಆ ಬೈಕ್ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ.

ನಮ್ಮ ದೇಶದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ಸಂಸ್ಥೆಗಳಲ್ಲಿ ಒಂದು ಹೀರೋ ಸಂಸ್ಥೆ ಆಗಿದೆ. ಇದೀಗ ಹಬ್ಬದ ಸೀಸನ್ ನಲ್ಲಿ ಹೀರೋ ಸಂಸ್ಥೆ ಒಂದು ಹೊಸ ಕೊಡುಗೆಯನ್ನು ತಮ್ಮ ಗ್ರಾಹಕರಿಗೆ ನೀಡಿದೆ. ಅದೇನು ಎಂದರೆ, ತಮ್ಮ ಸಂಸ್ಥೆಯ ಬೈಕ್ ಗಳ ಅಪ್ಡೇಟ್ ಆಗಿರುವ ಮಾಡೆಲ್ ಗಳನ್ನು ಮಾರುಕಟ್ಟೆಗೆ ತರುತ್ತಿದೆ ಹೀರೋ ಸಂಸ್ಥೆ. Hero Splendor Plus Xtec ಬೈಕ್ ಹೊಸ ಸಾಧನೆ ಮಾಡಿ, ಗ್ರಾಹಕರಿಗೆ ಒಳ್ಳೆಯ ಅನುಭವ ನೀಡಲಿ ಎನ್ನುವುದಕ್ಕೆ ಮುಂದಾಗಿದೆ.

ಇದಕ್ಕಾಗಿ ಬೈಕ್ ನಲ್ಲಿ ಕೆಲವು ಹೊಸ ಫೀಚರ್ಸ್ ಗಳನ್ನು ಅಳವಡಿಸಲಾಗಿದೆ. ಅವುಗಳು ಯಾವುವು ಎಂದರೆ, 97.2 Cc Air cold single engine ಅನ್ನು ಬೈಕ್ ಗೆ ಅಳವಡಿಸಲಾಗಿದೆ. ಈ ಬೈಕ್ ನಲ್ಲಿ 7.9bhp ಪವರ್, 8.05nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವಿದೆ. ಹಾಗೆಯೇ i3s ಇಂಜಿನ್ ಸ್ಟಾರ್ಟ್ ಅಂಡ್ ಸ್ಟಾಪ್ ಆಯ್ಕೆ ಕೂಡ ಇದೆ. ಇದರ ಮೈಲೇಜ್ 70km/l ಆಗಿದೆ. ಈ ಬೈಕ್ ಬೆಲೆ ಬಗ್ಗೆ ಹೇಳುವುದಾದರೆ, ಬೈಕ್ ನ ಆರಂಭಿಕ ಬೆಲೆ 76,346 ರೂಪಾಯಿ ಆಗಿದ್ದು, ಆನ್ ರೋಡ್ ಬೆಲೆ 90,409 ರೂಪಾಯಿ ಆಗಿದೆ.

ಈ ಬೈಕ್ ಖರೀದಿ ಮಾಡಲು ನಿಮ್ಮ ಬಳಿ 10,000 ಇದ್ದರು ಸಾಕು, ಡೌನ್ ಪೇಮೆಂಟ್ ಮಾಡಿ, ಬೈಕ್ ಖರೀದಿ ಮಾಡಿದರೆ ಬ್ಯಾಂಕ್ ಇಂದ 85,000 ಸಾಲ ಸಿಗುತ್ತದೆ. ತಿಂಗಳಿಗೆ 2,361 ರೂಪಾಯಿ ಇಎಂಐ ಕಟ್ಟಬೇಕಾಗುತ್ತದೆ. ಒಂದು ವೇಳೆ ನೀವು ಬೈಕ್ ಖರೀದಿ ಮಾಡುವ ಪ್ಲಾನ್ ಹೊಂದಿದ್ದರೆ, ಈ ಬೈಕ್ ನಿಮಗೆ ಅತ್ಯುತ್ತಮವಾದ ಆಯ್ಕೆ ಎಂದು ಹೇಳಬಹುದು.

By

Leave a Reply

Your email address will not be published. Required fields are marked *