Drone Prathap: ಒಂದೆರಡು ವರ್ಷಗಳ ಹಿಂದೆ ಡ್ರೋನ್ ಪ್ರತಾಪ್ (Drone Prathap) ಎನ್ನುವ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಳ್ಳಿಯ ರೈತರ ಮನೆತನದಲ್ಲಿ ಹುಟ್ಟಿ ಬೆಳೆದ ಹುಡುಗನೊಬ್ಬ ಡ್ರೋನ್ ಕಂಡುಹಿಡಿದು, ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾನೆ ಎಂದು ಕರ್ನಾಟಕದ ಜನತೆ ಬಹಳ ಸಂತೋಷಪಟ್ಟಿದ್ದರು. ಆದರೆ ಕೆಲವೇ ದಿನಗಳಲ್ಲಿ ಜನರಿಗೆ ಮತ್ತು ಪ್ರತಾಪ್ ಅವರಿಗು ಶಾ’ಕ್ ಅಗುವಂಥ ಶಾ’ಕ್ ವಿಚಾರ ನಡೆಯಿತು…

ಚಿಕ್ಕ ವಯಸ್ಸಿನಲ್ಲಿ ಡ್ರೋನ್ ಪ್ರತಾಪ್ ಅವರು ಸಾಧನೆ ಮಾಡಿ, ಶಾಲೆ ಕಾಲೇಜುಗಳಿಗೆ ಚೀಫ್ ಗೆಸ್ಟ್ ಆಗಿ ಹೋಗಿ, ವಿದ್ಯಾರ್ಥಿಗಳಿಗೆ ಮೋಟಿವೇಟ್ ಮಾಡಿದ್ದರು. ಆದರೆ ಕೆಲ ಸಮಯದ ನಂತರ ಡ್ರೋನ್ ಪ್ರತಾಪ್ ಅವರು ನಿಜಕ್ಕೂ ಡ್ರೋನ್ ಕಂಡು ಹಿಡಿದೆ ಇಲ್ಲ, ಅದೆಲ್ಲವೂ ಸುಳ್ಳು. ದೇಶ ವಿದೇಶದಲ್ಲಿ ಎಲ್ಲಿಯೂ ಹೋಗಿ ಸಾಧನೆ ಮಾಡಿಲ್ಲ ಎನ್ನುವುದು ಗೊತ್ತಾಯಿತು. ಆ ಕಾರಣಕ್ಕೆ ಪ್ರತಾಪ್ ಅವರಿಗೆ ಅವಮಾನ ಆಗಿದ್ದು ಇದೆ.

ಜನತೆಯ ಪಾಲಿಗೆ ಹೀರೋ ಆಗಿದ್ದ ಪ್ರತಾಪ್, ಅದೆಲ್ಲಾ ಸುಳ್ಳು ಎಂದು ಗೊತ್ತಾದ ತಕ್ಷಣವೇ, ಪ್ರತಾಪ್ ಅವರನ್ನು ಎಲ್ಲರು ಟ್ರೋಲ್ ಮಾಡುವುದಕ್ಕೂ ಶುರು ಮಾಡಿದ್ದರು. ಪ್ರತಾಪ್ ಅವರ ಹೆಸರಿನ ಜೊತೆಗಿದ್ದ ಡ್ರೋನ್ ಎನ್ನುವ ಪದ, ಬೇರೆ ರೀತಿಯಲ್ಲೇ ಎಲ್ಲರಿಗೂ ಅರ್ಥವಾಗಿತ್ತು. ಅವಮಾನಗಳನ್ನು ಎದುರಿಸಿದ ಪ್ರತಾಪ್ ಅವರು ಇಂದು ಕರ್ನಾಟಕದ ಜನತೆಗೆ ಬಹಳ ಇಷ್ಟವಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರು ಇರುವ ರೀತಿ, ಅವರ ಮುಗ್ಧತೆ, ಅವರು ಟಾಸ್ಕ್ ಅಡುತ್ತಿರುವ ರೀತಿ. ಮನೆಯಲ್ಲಿ ಎಲ್ಲರ ಜೊತೆಗೆ ಇರುವ ರೀತಿ, ಇದೆಲ್ಲವೂ ಕೂಡ ಜನರಿಗೆ ಇಷ್ಟವಾಗಿದೆ. ಮನೆಯಲ್ಲಿ ಯಾರೇ ಎಷ್ಟೇ ಕೆಣಕಿದರು ಕೂಡ ಪ್ರತಾಪ್ ಅವರು ತಮ್ಮದೇ ರೀತಿಯಲ್ಲಿ, ಹ್ಯಾಂಡಲ್ ಮಾಡುತ್ತಿದ್ದಾರೆ.

ಇದೆಲ್ಲವೂ ಜನರಿಗೆ ಇಷ್ಟವಾಗಿದ್ದು, ಹಿಂದೆ ಪ್ರತಾಪ್ ಅವರನ್ನೇ ಟ್ರೋಲ್ ಮಾಡಿದ್ದ ಜನರು ಇಂದು ಪ್ರತಾಪ್ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಅವರಿಗೆ ಭಾರಿ ಬೆಂವಲವಿದೆ. ಅಷ್ಟೇ ಅಲ್ಲದೆ, ಪ್ರತಾಪ್ ಅವರಿಗೆ ಅವರ ಊರಿನ ಜನರ ಬೆಂಬಲ ಕೂಡ ಇದೆ, ಅವರೆಲ್ಲರೂ ವಿನಯ್ ಅವರ ಬಗ್ಗೆ ಸಂತೋಷಪಟ್ಟಿದ್ದು, ನಮ್ಮೂರಿನ ಹುಡುಗ ಚೆನ್ನಾಗಿ ಅಡುತ್ತಿದ್ದಾನೆ, ಹೀಗೆ ಇರಲಿ ಎಂದು ಹೇಳಿರುವ ಜನ ಸಂತೋಷವಾಗಿ ವೋಟ್ ಮಾಡುತ್ತಿದ್ದಾರೆ.

By AS Naik

Leave a Reply

Your email address will not be published. Required fields are marked *