ಮೂಗುತಿಯನ್ನು (Nose Ring)ಧರಿಸುವ ಸಂಪ್ರದಾಯ ನಮ್ಮ ಹಿಂದೂ (Hindu) ಧರ್ಮದಲ್ಲಿ ಪುರಾತನ ಕಾಲದಿಂದಲೂ ಇದೆ. ಈ ಮೂಗುತಿ ಕೇವಲ ಮನಸ್ಸು ಸೆಳೆಯುವ ಅಲಂಕಾರದ ವಸ್ತು ಮಾತ್ರವೇ ಅಲ್ಲ.ಬದಲಾಗಿ ಇದು ಮಹಿಳೆಯರ ಆರೋಗ್ಯವನ್ನು ಸಹ ಉತ್ತಮಗೊಳಿಸುತ್ತದೆ.
ಸಾಮಾನ್ಯವಾಗಿ ಐದು, ಏಳು, ಹನ್ನೊಂದನೇ ವಯಸ್ಸಿಗೆ (womens) ಹೆಣ್ಣು ಮಕ್ಕಳಿಗೆ ಮೂಗನ್ನು ಚುಚ್ಚಿಸುತ್ತಾರೆ. ಇಲ್ಲವಾದರೆ ವಿವಾಹದ ಸಮಯಕ್ಕೆ ಮುಂಚೆ ಚುಚ್ಚುತ್ತಾರೆ. ಏಕೆಂದರೆ ವಿವಾಹಿತ ಮಹಿಳೆಯರು ಮೂಗುತಿಯನ್ನು ಕಡ್ಡಾಯವಾಗಿ ಧರಿಸಬೇಕು ಎನ್ನುವ ಸಂಪ್ರದಾಯ ತುಂಬಾ ಕುಟುಂಬಗಳಲ್ಲಿ ಇದೆ.
ಆದರೆ ಚಿಕ್ಕ ವಯಸ್ಸಿನಲ್ಲಿ ಮೂಗುತಿಯನ್ನು ಚುಚ್ಚಿಸಿ ಕೊಳ್ಳುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯ ಲಾಭಗಳು ಸಹ ಇವೆ ವೈಜ್ಞಾನಿಕವಾಗಿ ಹೇಳುವುದಾದರೆ ಮೂಗಿನ ಒಂದು ನಿರ್ದಿಷ್ಟವಾದ ನರಕ್ಕೆ ಚುಚ್ಚುವುದರಿಂದ ಹೆಣ್ಣು ಮಕ್ಕಳ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ ಹಾಗೂ ಕೋಪ ತಾಪಗಳು ನಿಯಂತ್ರಣದಲ್ಲಿರುತ್ತವೆ.
ಮೂಗಿನ ಎಡಭಾಗದಲ್ಲಿ ಚಂದ್ರ ನರವಿರುತ್ತದೆ. ಆದ್ದರಿಂದ ಮೂಗಿನ ಎಡಭಾಗದಲ್ಲಿ ಅರ್ಧಚಂದ್ರಕಾರದಲ್ಲಿರುವ ಮೂಗುತಿಯನ್ನು ಧರಿಸಿದರೆ ಒಳ್ಳೆಯದು. ಬಲಭಾಗದಲ್ಲಿ ಸೂರ್ಯನ ನರವಿರುತ್ತದೆ. ಆದ್ದರಿಂದ ಮೂಗಿನ ಬಲ ಭಾಗದಲ್ಲಿ ಮಂಡಲಕಾರವಾದ ಒಂದು ಕಲ್ಲಿನ ಮೂಗುತಿಯನ್ನು ಧರಿಸಿದರೆ ಒಳ್ಳೆಯದು. ಮೂಗುತಿಯನ್ನು ಎಡಭಾಗದಲ್ಲಿ ಧರಿಸುವುದರಿಂದ ಗರ್ಭಕೋಶಕ್ಕೆ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತವೆ.ಪ್ರಸವ ಕಾಲದಲ್ಲಿ ನೋವು ಹೆಚ್ಚಾಗಿ ಬರುವುದಿಲ್ಲ.
ಸುಖ ಪ್ರಸವ ಆಗುತ್ತದೆ. ಕಣ್ಣು, ಕಿವಿಗೆ ಸಂಬಂಧಿಸಿದ ನರಗಳು ಆರೋಗ್ಯಕರವಾಗಿರುತ್ತವೆ. ಮೂಗುತಿಯನ್ನು ಧರಿಸುವುದರಿಂದ ಉಸಿರಾಟ ಚೆನ್ನಾಗಿ ಆಗುತ್ತದೆ. ಇದರಿಂದ ಶರೀರಕ್ಕೆ ಒಳ್ಳೆಯ ಆಮ್ಲಜನಕ ಕೂಡ ದೊರೆತು ಆರೋಗ್ಯವಾಗಿ ಇರುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮೂಗುತಿ ಅಲಂಕಾರಕ್ಕೆ ಮಾತ್ರ ಬಳಸುವ ವಸ್ತು ಅಷ್ಟೇ ಅಲ್ಲ ಇದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಬಹುದಾಗಿದೆ.