Ultimate magazine theme for WordPress.

ಈ ಹಣ್ಣು ಯಾವೆಲ್ಲ ಕಾಯಿಲೆ, ಬೇನೆಗಳಿಗೆ ಮದ್ದು ಗೊತ್ತೇ, ಓದಿ.

0 49

ನೋನಿ ಹಣ್ಣು ತುಂಬಾ ಖಾಲಿಲೆಗಳಿಗೆ ಔಷಧಿ ಎಂದು ಕೆಲ ಸಂಶೋಧನೆಗಳಿಂದ ತಿಳಿದು ಬಂದಿದೆ. ನೋನಿ ಹಣ್ಣಿನಲ್ಲಿರುವ ಪೋಷಕಾಂಶಗಳು ಮಾನವನ ದೇಹಕ್ಕೆ ಅತ್ಯಾವಶ್ಯಕ ಆಗಿದೆ ಎಂದು ತಿಳಿದು ಬಂದಿದೆ. ಹಾಗಾದರೆ ನೋನಿ ಹಣ್ಣಿನಲ್ಲಿ ಇರುವ ಪೋಷಕಾಂಶಗಳು ಯಾವುದು? ನೋನಿ ಹಣ್ಣಿನ ಬಗ್ಗೆ ಇತರ ಮಾಹಿತಿಗಳನ್ನು ಇಲ್ಲಿರುವ ಮಾಹಿತಿಯ ಮೂಲಕ ಅರಿಯೋಣ.

ಔಷಧಿಯ ಗುಣವುಳ್ಳ ನೋನಿ ಹಣ್ಣನ್ನು ಮೊರೆಂಡಾ ಸಿಟ್ರಿಪೋಲಿಯಾ ಹಾಗೂ ಇಂಡೆನ್ ಮಲ್ಬೇರಿ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಆಂಟಿಒಕ್ಸಿಡೆಂಟ್, ಅಂಟಿ ಫಂಗಲ್, ಅಂಟಿ ವೈರಲ್, ಆಂಟಿ ಇನ್ಪೋಮೆಟರಿ, ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣ ಹೆಚ್ಚಾಗಿ ಇದೆ. ನೋನಿ ಹಣ್ಣಿನಲ್ಲಿ ವಿಟಮಿನ್ ಸಿ, ಪಾಸ್ಪರಸ್, ವಿಟಮಿನ್ ಎ, ವಿಟಮಿನ್ ಬಿ3, ಪೊಟ್ಯಾಸಿಯಮ್, ವಿಟಮಿನ್ ಇ ಹಾಗೂ ಕ್ಯಾಲ್ಸಿಯಂ ಕೂಡ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಐರನ್ ಬಿಟಾ ಕೆರೋಟಿನ್, ಮ್ಯಾಗ್ನಿಸಿಯಂ, ಬೈಯೋಟಿನ್, ಪೋಲೆಡ್ ಇಂತಹ ನೀರಾ ಐವತ್ತಕ್ಕೂ ಹೆಚ್ಚಿನ ರೀತಿಯ ಪೋಷಕಾಂಶಗಳನ್ನು ನೋನಿ ಹಣ್ಣು ಹೊಂದಿದೆ. ನೋನಿ ಹಣ್ಣಿನ ಜ್ಯೂಸ್ ಪ್ರತಿನಿತ್ಯ ಸೇವಿಸುವುದರಿಂದ ದೇಹದಲ್ಲಿನ ಪ್ರೀರೆಡಿಕಲ್ಸ್ ತೆಗೆಯುತ್ತದೆ. ಅಲರ್ಜಿ, ವಾತ ಮತ್ತು ಪಿತ್ತ ಕಡಿಮೆ ಮಾಡುತ್ತದೆ. ಅಸ್ತಮಾ, ಗಂಟಲು ನೋವು ನಿವಾರಿಸುತ್ತದೆ. ಕೂದಲು ಉದುರುವಿಕೆ ನಿಲ್ಲಿಸಿ, ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಯು.ಟಿ.ಐ ಅಂದರೆ ಯೂರಿನರಿ ಟ್ರಾಕ್ ಇನ್ಫೆಕ್ಷನ್ ಅನ್ನು ಕಡಿಮೆ ಮಾಡುತ್ತದೆ. ಆಂಟಿ ಎಜಿಂಗ್ ಆಗಿದೆ ನೋನಿ ಹಣ್ಣು.

ಕ್ಷಯ, ಬಿಪಿ ಗಳನ್ನು ಕಡಿಮೆ ಮಾಡುತ್ತದೆ. ಮಧುಮೇಹ ಇರುವವರಿಗೆ ಇದು ತುಂಬಾ ಒಳ್ಳೆಯ ಹಣ್ಣು. ಹೆಣ್ಣು ಮಕ್ಕಳ ತಿಂಗಳ ಸಮಸ್ಯೆಗಳಿಗೆ ನೋನಿ ಹಣ್ಣಿನ ರಸ ಕುಡಿಯುವುದರಿಂದ ಕಡಿಮೆಯಾಗುತ್ತದೆ. ನೋನಿ ಹಣ್ಣಿಗೆ ಪಿಸಿಓಡಿ ಕಡಿಮೆ ಮಾಡಯವ ಗುಣವಿದೆ. ಕ್ಯಾನ್ಸರ್ ಖಾಯಿಲೆ ಬರದೆ ಇರುವಂತೆ ನೋಡಿಕೊಳ್ಳುತ್ತದೆ. ಅಶಕ್ತಿಯನ್ನು ಕಡಿಮೆ ಮಾಡುತ್ತದೆ. ನೋವುಗಳಿಗೆ ರಾಮಬಾಣ ನೋನಿ ಹಣ್ಣು. ತ್ವಚೆ ಕಾಂತಿಯುತವಾಗಲು ಸಹಾಯಕ ಹಾಗೂ ತ್ವಚೆಗೆ ಮೊಶ್ಚುರಾಯಿಸರ್ ರೀತಿಯಲ್ಲಿ ನೋನಿ ಸಹಾಯ ಮಾಡುತ್ತದೆ. ನೋನಿಯಲ್ಲಿರುವ ಸೆಲಿಲಿಯಂ ಹಾಗೂ ವಿಟಮಿನ್ ಸಿ ಚರ್ಮದಲ್ಲಿ ಬೇಡವಾದ ಅಣುಗಳನ್ನು ತೆಗೆದು ಹಾಕುತ್ತದೆ. ಇನ್ಫೆಕ್ಷನ್ ಸಮಸ್ಯೆ ದೂರಗೊಳಿಸುತ್ತದೆ. ಗಾಯವನ್ನು ಬೆರಗ ವಾಸಿ ಮಾಡುತ್ತದೆ. ಮನಸ್ಸಿನ ಒತ್ತಡ ಕಡಿಮೆ ಮಾಡುತ್ತದೆ. ಜ್ವರ, ಕೆಮ್ಮು ಹಾಗೂ ಗೌಟ್ ಗಳ ನಿವಾರಿಸುತ್ತದೆ. ಹೃದಯಕ್ಕೆ ಒಳ್ಳೆಯದು. ಮಲಬದ್ಧತೆ ನಿವಾರಿಸುತ್ತದೆ. ಕಣ್ಣಿಗೆ, ಮೈಗ್ರೇನ್‌ ಗೆ ಒಳ್ಳೆಯದು. ಅಲ್ಸರ್ ಗೆ ಉತ್ತಮ ಪರಿಹಾರ ನೀಡುತ್ತದೆ. ತೂಕ ಇಳಿಕೆಗೆ ಸಹಾಯಕ. ಇದೇ ರೀತಿಯಲ್ಲಿ ನೂರಾ ಐವತ್ತಯ ಖಾಯಿಲೆಗಳಿಗೆ ನೋನಿ ಪರಿಹಾರ ನೀಡುತ್ತದೆ.

ಅರ್ಧ ಟೀ ಸ್ಪೂನ್ ನೋನಿ ಜ್ಯೂಸ್ ಅನ್ನು ಐದರಿಂದ ಹತ್ತು ವರ್ಷದ ಮಕ್ಕಳಿಗೆ ಬೆಳಿಗ್ಗೆ ತಿಂಡಿ ಹಾಗೂ ರಾತ್ರಿ ಊಟಕ್ಕಿಂತ ಅರ್ಧ ಗಂಟೆ ಮೊದಲು ಕೊಡಬಹುದು. ಹತ್ತು ವರ್ಷ ಮೇಲ್ಪಟ್ಟವರು ಮೊದಲ ಮೂರು ದಿನ ಒಂದು ಟೀ ಸ್ಪೂನ್ ಅಂದರೆ ಐದು ಎಂಎಲ್ ಅಷ್ಟು ತೆಗೆದುಕೊಳ್ಳಬೇಕು. ನಾಲ್ಕರಿಂದ ಆರು ದಿನದ ವರೆಗೆ ಹತ್ತು ಎಂಎಲ್ ಅಂದರೆ ಎರಡು ಟೀ ಸ್ಪೂನ್ ನೋನಿ ರಸ ತೆಗೆದುಕೊಳ್ಳಬೇಕು. ಏಳನೆ ದಿನದಿಂದ ಆತು ತಿಂಗಳವರೆಗೂ ಹದಿನೈದು ಎಂಎಲ್ ಅಂದರೆ ಮೂರು ಟೀ ಸ್ಪೂನ್ ತೆಗೆದುಕೊಳ್ಳಬೇಕು. ನಂತರ ಒಂದು ತಿಂಗಳು ನೋನಿ ರಸ ಸೇವಿಸದೆ ಮತ್ತೆ ಹದಿನೈದು ಎಂ ಎಲ್ ಕುಡಿಯಬೇಕು. ಹೀಗೆ ಯಾಕೆ ತೆಗೆದುಕೊಳ್ಳಬೇಕು ಎಂದರೆ ನೋನಿ ರಸದ ಡೋಸೆಜ್ ಹೆಚ್ಚು ಆಗಿ ಯಾರಿಗೂ ತೊಂದರೆ ಆಗಬಾರದು ಎಂದು. ನೋನಿಯಲ್ಲಿ ಇರುವ ಪೊಟ್ಯಾಸಿಯಮ್ ಕಾರಣ ಗರ್ಭಿಣಿಯರು ಹಾಗೂ ಬಾಣಂತಿ ಇರುವವರು ಇದನ್ನು ಸೇವಿಸದಿದ್ದರೆ ಒಳಿತು. ಕಿಡ್ನಿ ಫೆಲ್ ಆದರೆ ಹಾಗೂ ಲಿವರ್ ನಲ್ಲಿ ತೊಂದರೆ ಇದ್ದರೆ ನೋನಿ ಹಣ್ಣು ಸೇವನೆ ಬೇಡ. ಈ ನೋನಿ ಹಣ್ಣಿನ ಮೇಲೆ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಸಂಶೋಧನೆ ಮಾಡಿ ಒಂದು ಲೇಖನ ಬರೆದಿದ್ದಾರೆ. ನೋನಿ ಹಣ್ಣು ನಮ್ಮಲ್ಲಿ ಸಿಗುವುದಿಲ್ಲ ಆದರೆ ನೋನಿ ಜ್ಯೂಸ್ ದೊರೆಯುತ್ತದೆ. ಅದನ್ನು ಸೇವಿಸಿ ಆಗುತ್ತದೆ.

ಕೆಲವೊಂದು ಹಣ್ಣುಗಳು ನೈಸರ್ಗಿಕವಾಗಿ ಅತಿ ಹೆಚ್ಚು ಖಾಯಿಲೆಗಳ ಗುಣಪಡಿಸುವ ಶಕ್ತಿ ಹೊಂದಿರುತ್ತದೆ. ಕೆಲವೊಂದು ಹಣ್ಣುಗಳ ಬಗೆಗೆ ನಮಗೆ ಮಾಹಿತಿ ಇರುವುದಿಲ್ಲ. ಇದರ ಸಾಲಿನಲ್ಲಿ ನೋನಿ ಹಣ್ಣು ಬರುತ್ತದೆ. ನೋನಿ ಹಣ್ಣು ಸಿಕ್ಕರೆ ಸೇವಿಸಿ, ಸಿಗದೆ ಇದ್ದಲ್ಲಿ ನೋನಿ ಹಣ್ಣಿನ ರಸವನ್ನಾದರೂ ಸೇವಿಸಿ.

Leave A Reply

Your email address will not be published.