ನಿತ್ಯಾ ಮೆನನ್ ಅವರು ಚಿರಪರಿಚಿತರಾದ ಭಾರತೀಯ ನಟಿ ಮತ್ತು ಹಿನ್ನೆಲೆ ಗಾಯಕಿ. ಇವರು ಕನ್ನಡ, ತೆಲಗು, ತಮಿಳು ಮತ್ತು ಮಳಯಾಳಂ ಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಾರೆ. ಇವರು ತೆಲಗಿನಲ್ಲಿ ಗುಂಡೆ ಜಾರಿ ಗಲಂತೈಯಿಂದಿ ಮತ್ತು ಮಳ್ಳಿ ಮಳ್ಳಿ ಇದಿ ರಾನಿ ರೋಜು ಚಿತ್ರಗಳಿಗೆ ಎರಡು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ದಕ್ಷಿಣ ಭಾರತದ ಪ್ರತಿಭಾವಂತ ತಾರೆಗಳಲ್ಲಿ ನಿತ್ಯಾ ಮೆನನ್ ಸಹ ಒಬ್ಬರು. ಎತ್ತರ ಸ್ವಲ್ಪ ಕಡಿಮೆ ಇರುವ ಕಾರಣ ಅವಕಾಶಗಳು ಅಷ್ಟಾಗಿ ಹುಡುಕಿಕೊಂಡು ಬರಲಿಲ್ಲ, ಇಲ್ಲದಿದ್ದರೆ ದಕ್ಷಿಣ ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಎಂಬ ಖ್ಯಾತಿಗೆ ಪಾತ್ರರಾಗುತ್ತಿದ್ದರು ಎಂಬ ಮಾತುಗಳೂ ಕೇಳಿಬರುತ್ತಿರುತ್ತವೆ.

ಆದರೂ ನಿತ್ಯಾ ಮೆನನ್ ಅವರಿಗೇನು ಫ್ಯಾನ್ ಫಾಲೋಯಿಂಗ್ ಕಡಿಮೆ ಇಲ್ಲ. ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಅವರದೇ ಆದಂತಹ ಅಭಿಮಾನಿ ಬಳಗವಿದೆ. ಗ್ಲಾಮರ್ ಪಾತ್ರಗಳಷ್ಟೇ ಅಲ್ಲದೆ ಅಭಿನಯಕ್ಕೆ ಒತ್ತು ನೀಡುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಗೀತ ಗೋವಿಂದಂ, ಎನ್‍ಟಿಆರ್ ಕಥಾನಾಯಕುಡು ರೀತಿಯ ಚಿತ್ರಗಳಲ್ಲೂ ಕಾಣಿಸಿಕೊಂಡರು.
ನಟಿ ನಿತ್ಯಾ ಮೆನನ್ ಈ ಮೊದಲು ಚಿತ್ರರಂಗಕ್ಕೆ ಬಂದಾಗ ಎಷ್ಟು ಸಣ್ಣಗಿದ್ದರೋ ಈಗ ಅಷ್ಟು ಸಣ್ಣಗಿಲ್ಲ. ಅವರು ದಪ್ಪ ಆದಾಗ ಕೆಲವರು ಮನ ಬಂದಂತೆ ಟ್ರೋಲ್ ಮಾಡಿದ್ದರು. ಇದರ ಬಗ್ಗೆ ನಿತ್ಯಾ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿದ ಮಲಯಾಳಿ ಸಂಪ್ರದಾಯದ ಬೆಡಗಿ ನಟಿ ನಿತ್ಯಾ ಮೆನನ್ ಈಗ ಪಂಚಭಾಷಾ ತಾರೆ. ಕನ್ನಡದ 7 o Clcok ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪೋಷಕ ನಟಿಯಾಗಿ ಕಾಲಿಟ್ಟ ನಿತ್ಯಾ ಈಗ ದಕ್ಷಿಣ ಭಾರತದ ಬಹುಬೇಡಿಕೆಯ ಹೀರೋಯಿನ್ ಆಗಿ ಹೊರಹೊಮ್ಮಿದ್ದಾರೆ. ಪತ್ರಕರ್ತೆಯಾಗಬೇಕೆಂದುಕೊಂಡಿದ್ದ ನಿತ್ಯಾಗೆ ನಟಿಯಾಗುವ ಯಾವ ಆಸೆ ಕೂಡ ಇರಲಿಲ್ಲ. ಅಚಾನಕ್ ಆಗಿ ನಟಿಯಾದ ಇವರು ಈಗ ಈ ಕ್ಷೇತ್ರವನ್ನೇ ಫುಲ್ ಟೈಮ್ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಅತ್ಯದ್ಭುತ ನಟಿಯಾಗಿರುವ ನಿತ್ಯಾ ಅನೇಕ ಸಿನಿಮಾಗಳಿಗೆ ಹಾಡು ಕೂಡ ಹಾಡಿದ್ದಾರೆ.

ನಿತ್ಯಾ ಕನ್ನಡದಲ್ಲಿ ನಟಿಸಿದ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಕೂಡ ಇವರ ಮೈನಾ ಸಿನಿಮಾವನ್ನು ಯಾರೂ ಮರೆಯೋದಿಲ್ಲ. ಅದ್ಭುತ ನಟನೆ ಮೂಲಕ ಒ ಕಾದಲ್ ಕಣ್ಮಣಿ ಮೂಲಕ ಜನರ ಮನಸ್ಸು ಗೆದ್ದರು. ಬೆಂಗಳೂರ್ ಡೇಸ್, ಕೋಟಿಗೊಬ್ಬ 2, ಗೀತಾ ಗೋವಿಂದಂ ಮುಂತಾದ ಚಿತ್ರಗಳಲ್ಲಿಯೂ ಅವರು ನಟಿಸಿದ್ದಾರೆ.

ಚಿತ್ರರಂಗಕ್ಕೆ ಬಂದ ಆರಂಭದ ಕೆಲ ವರ್ಷಗಳಲ್ಲಿ ಸಣ್ಣಗಿದ್ದ ನಿತ್ಯಾ ಬರುಬರುತ್ತ ದಪ್ಪಗಾದರು. ಹೀಗಾಗಿ ಇವರು ಅನೇಕ ಟ್ರೋಲ್‌ಗಳಿಗೆ ಆಹಾರವಾದರು. ಬಾಡಿ ಶೇಮಿಂಗ್ ವಿಚಾರವಾಗಿ ನಟಿ ನಿತ್ಯಾ ಮೆನನ್ ಈಗಾಗಲೇ ಹಲವು ಬಾರಿ ಟ್ರೋಲ್‌ಗೊಳಗಾಗಿದ್ದಾರೆ. ಬೇರೆಯವರ ದೇಹದ ಬಗ್ಗೆ ಕಾಮೆಂಟ್ ಮಾಡುವವರು ಸದಾ ಕಲ್ಪನಾ ಲೋಕದಲ್ಲಿದ್ದು, ಏನೇನೋ ಅವರವರಿಗೆ ಮನಸ್ಸಿಗೆ ಬಂದಹಾಗೆ ಅಂದುಕೊಳ್ಳುತ್ತಿರುತ್ತಾರೆ ಎಂದು ನಿತ್ಯಾ ಹೇಳಿದ್ದಾರೆ.

ಈ ರೀತಿ ಕಾಮೆಂಟ್‌ಗೆ ಒಳಗಾಗೋದರಿಂದ, ಟ್ರೋಲ್ ಆಗೋದರಿಂದ ಅದು ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಇದರಲ್ಲಿ ಯಾವುದೇ ಸಂದೇಹ ಇಲ್ಲ. ನಿಮಗಿಂತ ಮೇಲಿರುವವರಿಂದ ನೀವು ಸದಾ ವಿಮರ್ಶೆಗೆ ಒಳಪಡುತ್ತೀರಿ ಎಂದು ನೀವು ಎಂದುಕೊಳ್ಳುತ್ತೀರಿ, ಆದರೆ ನಮಗಿಂತ ಕೆಳಗಿರುವವರಿಂದಲೇ ನಾವು ಸದಾ ವಿಮರ್ಶೆಗೆ ಒಳಪಡುತ್ತಿರುತ್ತೇವೆ. ನಾವು ದಪ್ಪಗಾದಾಗ ಸಿಕ್ಕಾಪಟ್ಟೆ ತಿನ್ನುತ್ತ ಸೋಂಭೇರಿಯಾಗಿ ನಾವಿರ್ತೀವಿ ಅಂತ ಹಲವರು ಅವರಿಗೆ ಅವರೇ ಊಹೆ ಮಾಡಿಕೊಳ್ಳುತ್ತಾರೆ. ಕಲಾವಿದರು ಯಾರೂ ಸೋಮಾರಿಗಳಲ್ಲ. ಹಾರ್ಮೋನಲ್ ಸಮಸ್ಯೆಯಿಂದ ಕೂಡ ದಪ್ಪಗಾಗಬಹುದು. ನಟನೆ ಅನ್ನೋದು ನನ್ನ ಜೀವನದ ಒಂದು ಭಾಗವೇ ಹೊರತು ಜೀವನದಲ್ಲಿ ಇದಕ್ಕಿಂತ ಮಿಗಿಲಾದದ್ದು ಇದೆ ಎಂದು ನಿತ್ಯಾ ಮೆನನ್ ಅಭಿಪ್ರಾಯಪಟ್ಟಿದ್ದಾರೆ.

ನೀವು ಯಾಕೆ ದಪ್ಪ ಆದ್ರಿ ಅಂತ ಯಾರೂ ಕೂಡ ನಿಮ್ಮನ್ನು ಪ್ರಶ್ನೆ ಮಾಡಲ್ಲ, ಆದರೆ ಅವರಿಗೆ ಅವರೇ ಏನೇನೋ ಅಂದುಕೊಂಡುಬಿಡುತ್ತಾರೆ. ಇದರ ಬಗ್ಗೆ ಹಲವು ಪ್ರಶ್ನೆಗಳು ಮೂಡುತ್ತವೆ. ಏನಾದರೂ ಆರೋಗ್ಯ ಸಮಸ್ಯೆಯಿಂದ ದಪ್ಪಗಾಗಿದ್ದೇವೆಯೇ? ಅಥವಾ ಇನ್ನೂ ಗೊತ್ತಿರದ ಹಲವು ಸಮಸ್ಯೆಗಳಿರುತ್ತವೆ. ದಪ್ಪಗಾಗಿದ್ದರ ಬಗ್ಗೆ ತಾನು ಹೇಗೆ ಕಾಣುತ್ತಿದ್ದೇನೆಂದು ನಿತ್ಯಾ ಎಂದೂ ಕೂಡ ಅಳಲಿಲ್ಲವಂತೆ, ಇದಕ್ಕೆ ಕಾರಣ ಕೂಡ ನನಗೆ ತಿಳಿದಿದೆ ಎನ್ನುತ್ತಾರೆ ನಿತ್ಯಾ. ಸಣ್ಣ ಸಣ್ಣ ವಿಷಯಗಳು ಹಲವು ಇವೆ. ವೈಯಕ್ತಿಕ ವಿಷಯಗಳನ್ನು ಹೇಳೋದು, ಸಮಸ್ಯೆ ವಿರುದ್ಧ ಪ್ರತಿಭಟನೆ ಮಾಡೋದನ್ನು ನಾನು ನಂಬುವುದಿಲ್ಲ ಎಂದು ನಟಿ ನಿತ್ಯಾ ಮೆನನ್ ಹೇಳಿದ್ದಾರೆ.

Leave a Reply

Your email address will not be published. Required fields are marked *