ನಾವಿಂದು ನಿಮಗೆ ಕೆಲವೊಂದು ಆಸಕ್ತಿದಾಯಕ ವಿಚಾರಗಳ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲಿ ಕ್ಯೂಆರ್ ಕೋಡ್ ಕೆಲಸ ಮಾಡುತ್ತದೆ. ಜನರು ಪ್ರತಿಯೊಂದು ಕೆಲಸಕ್ಕೂ ಕ್ಯೂಆರ್ ಕೋಡ್ ಬಳಕೆ ಮಾಡುತ್ತಾರೆ ಆದರೆ ಈ ಕ್ಯೂಆರ್ ಕೋಡ್ ಯಾವ ರೀತಿಯಾಗಿ ಕೆಲಸಮಾಡುತ್ತದೆ ಎಂದರೆ ಕ್ಯೂಆರ್ ಕೋಡ್ ಮೊದಲು ಆರು ಹಂತಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ. ಮೊದಲಿಗೆ ನಾವು ನಮ್ಮ ಫೋನ್ ನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಮೊಬೈಲ್ ಅದರ ಮೂರು ಕಡೆ ಇರುವಂತಹ ಮೂರು ಚೌಕಗಳನ್ನು ಸ್ಕ್ಯಾನ್ ಮಾಡುತ್ತದೆ. ಜೊತೆಗೆ ಅದರ ಎಡ್ಜಸ್ ಎಲ್ಲಿರುತ್ತದೆ ಅದನ್ನು ಗುರುತಿಸುತ್ತದೆ ಇದರ ಮೂಲಕ ಕ್ಯೂಆರ್ ಕೋಡ್ ಎಲ್ಲಿಂದ ಪ್ರಾರಂಭವಾಗಿ ಎಲ್ಲಿಗೆ ಕೊನೆಯಾಗಿದೆ ಎಂಬುದನ್ನು ಗುರುತಿಸಬಹುದು. ಅದರಲ್ಲಿರುವ ಬಿಳಿಯ ಭಾಗವನ್ನು ವೈಟ್ ಜೋನ್ ಎಂದು ಕರೆಯುತ್ತಾರೆ ಸ್ಕ್ಯಾನರ್ ಕೆಳಭಾಗದಿಂದ ಸ್ಕ್ಯಾನ್ ಮಾಡುವುದಕ್ಕೆ ಪ್ರಾರಂಭಿಸುತ್ತದೆ.

ಕ್ಯೂಆರ್ ಕೋಡ್ ನಲ್ಲಿ ಮೋಡ ಇಂಡಿಕೇಟರ್ ಇರುತ್ತದೆ ಇದರಲ್ಲಿ ನಾಲ್ಕು ಚಿಕ್ಕ ಚಿಕ್ಕ ಚೌಕಗಳು ಇರುತ್ತವೆ. ಅದು ಅದರಲ್ಲಿರುವ ಡೇಟಾ ಯಾವ ರೀತಿಯದ್ದು ಎಂಬುದನ್ನು ತಿಳಿಸುತ್ತದೆ. ಅಂದರೆ ಅದು ನ್ಯೂಮರಿಕಲ್ ಡೇಟಾನ ಅಥವಾ ಅಲ್ಫಬೇಟಿಕ್ ಡೇಟಾ ಅಥವಾ ಬೇರೆ ಯಾವುದಾದರೂ ರೀತಿಯ ಡೇಟಾ ಎಂಬುದನ್ನು ಕಂಡುಹಿಡಿಯುತ್ತದೆ. ಇದರ ಬಳಿಕ ಅದರ ಮೇಲೆ ಇರುವ ಕ್ಯಾರೆಕ್ಟರ್ ಕೌಂಟ್ ಇಂಡಿಕೇಟರ್ ಅನ್ನು ಸ್ಕ್ಯಾನ್ ಮಾಡುತ್ತದೆ ಇದು ಡೇಟಾ ಎಷ್ಟು ಕ್ಯಾರೆಕ್ಟರ್ ಎಂಬುದನ್ನು ತಿಳಿಸುತ್ತದೆ. ಯಾವ ಡೇಟಾ ಪ್ರಕಾರ ಮತ್ತು ಎಷ್ಟು ಕ್ಯಾರೆಕ್ಟರ್ ಎನ್ನುವುದನ್ನು ತಿಳಿದುಕೊಂಡು ಸ್ಕ್ಯಾನರ್ ಜಿಗ್ ಜಾಗ್ ಲೈನ್ನಲ್ಲಿ ಸ್ಕ್ಯಾನ್ ಮಾಡುತ್ತಾಹೋಗುತ್ತದೆ.

ನಂತರ ಇಂಡಿಕೇಟರ್ ಹತ್ತಿರ ಸೇರಿಕೊಂಡು ಆ ಕೋಡ್ ನಲ್ಲಿ ಇರುವ ಎಲ್ಲ ಮಾಹಿತಿಯನ್ನು ತೆಗೆದುಕೊಳ್ಳುತ್ತದೆ. ಕೊನೆಯ ಹಂತದಲ್ಲಿ ಎರರ್ ಕರೆಕ್ಷನ್ ಡೇಟಾ ಮಾಡೆಲ್ ಅನ್ನು ಸ್ಕ್ಯಾನ್ ಮಾಡುತ್ತದೆ ಇದರ ಉಪಯೋಗ ಏನು ಎಂದರೆ ಕ್ಯೂಆರ್ ಕೋಡ್ ಒಂದುವೇಳೆ ಶೇಕಡಾ 30 ರಷ್ಟು ಭಾಗ ಕೆತ್ತಿದ್ದರು ಕೂಡ ಅದರ ಬ್ಯಾಕಪ್ ಡೇಟಾ ಅದರಲ್ಲಿ ಇರುತ್ತದೆ. ಇದರಲ್ಲಿ ಇಷ್ಟು ಹಂತಗಳು ಇದ್ದರೂ ಕೂಡ ನಮ್ಮ ಫೋನನ್ನು ಸ್ಕ್ಯಾನರ್ ಬಳಿ ಇಟ್ಟಾಗ ಅದು ಅಷ್ಟು ಹಂತಗಳನ್ನು ಮುಗಿಸಿಕೊಂಡು ಕೆಲವೇ ಸೆಕೆಂಡುಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದೇ ಕಾರಣಕ್ಕೆ ಇದನ್ನು ಕ್ವಿಕ್ ರೆಸ್ಪಾನ್ಸ್ ಕೋಡ್ ಎಂದು ಕರೆಯುತ್ತಾರೆ ಈ ರೀತಿಯಾಗಿ ಕ್ಯೂಆರ್ ಕೋಡ್ ಕೆಲಸ ಮಾಡುತ್ತದೆ.

ಮುಂದಿನ ಆಸಕ್ತಿದಾಯಕ ವಿಷಯ ಯಾವುದು ಎಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ತೆಗೆದ ಚಿತ್ರಗಳನ್ನು ನೀವು ನೋಡಿದರೆ ಆ ಫೋಟೋಗಳಲ್ಲಿ ಸೂರ್ಯ ಯಾವಾಗಲೂ ಬಿಳಿಯಾಗಿರುವುದನ್ನು ಗಮನಿಸಿರಬಹುದು ಹಾಗಾದರೆ ನಾವು ಭೂಮಿಯಿಂದ ನೋಡಿದಾಗ ಸೂರ್ಯ ಯಾಕೆ ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿ ಕಾಣಿಸುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಸೂರ್ಯನ ನಿಜವಾದ ಬಣ್ಣ ಬಿಳಿ. ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿ ಯಾಕೆ ಸೂರ್ಯ ಕಾಣಿಸುತ್ತಾನೆ ಎಂದರೆ ಅದಕ್ಕೆ ಉತ್ತರ ಸೂರ್ಯನ ಬೆಳಕು ವಾತಾವರಣಕ್ಕೆ ತಲುಪುತ್ತಿದ್ದಂತೆ ಅದು ಇತರ ಅನಿಲ ಅಣುಗಳೊಂದಿಗೆ ಬೆರೆತು ನೀರಿನ ಹನಿಗಳ ಮೂಲಕ ಚಲಿಸುತ್ತದೆ ಇದರ ಪರಿಣಾಮವಾಗಿ ಬಣ್ಣದಲ್ಲಿ ಬದಲಾವಣೆಯಾಗುತ್ತದೆ. ಸೂರ್ಯನ ಬೆಳಕು ಚದುರಿ ಹೋಗುತ್ತದೆ ಕಿತ್ತಳೆ ಮತ್ತು ಕೆಂಪು ಹಳದಿ ಬಣ್ಣ ಗಳಂತಹ ವ್ಯಾಪಕ ಶ್ರೇಣಿಯ ಬಣ್ಣಗಳಾಗಿ ಉಳಿಯುತ್ತದೆ. ಈ ರೀತಿಯಾಗಿ ಬಿಳಿ ಮತ್ತು ನೀಲಿ ಬಣ್ಣದಿಂದ ಪ್ರಾರಂಭವಾಗುವ ಸೂರ್ಯೋದಯ ಬೆರಗುಗೊಳಿಸುವ ಚಿನ್ನದ ಛಾಯೆಯಂತೆ ಬದಲಾಗುತ್ತದೆ.

ಮುಂದಿನದಾಗಿ ಶುಕ್ರ ಗ್ರಹದ ಬಗ್ಗೆ ನಮಗೆಲ್ಲರಿಗೂ ಅಲ್ಪಸ್ವಲ್ಪ ತಿಳಿದಿದೆ ಈ ಶುಕ್ರ ಗ್ರಹದಲ್ಲಿ ಒಂದು ದಿನಕ್ಕಿಂತ ಒಂದು ವರ್ಷ ತುಂಬಾ ಬೇಗ ಆಗಿಹೋಗುತ್ತದೆ. ಕೇಳಲು ಅಚ್ಚರಿ ಎನಿಸಿದರೂ ಇದು ಸತ್ಯ ನಾವು ಒಂದು ದಿನದ ಲೆಕ್ಕವನ್ನು ಯಾವ ರೀತಿಯಾಗಿ ಹಾಕುತ್ತೇವೆ ಎಂದರೆ ನಮ್ಮ ಭೂಮಿ ಅದರ ಅಕ್ಷದ ಸುತ್ತ ಒಂದು ಸುತ್ತು ಹಾಕಲು 24 ಗಂಟೆಗಳ ಸಮಯಾವಕಾಶವನ್ನು ತೆಗೆದುಕೊಳ್ಳುತ್ತದೆ ಇದನ್ನು ಒಂದು ದಿನ ಎಂದು ನಾವು ಕರೆಯುತ್ತೇವೆ. ಹಾಗೆಯೇ ನಮ್ಮ ಭೂಮಿ ಸೂರ್ಯನ ಸುತ್ತ ಸುತ್ತುಲು 365 ದಿನ ತೆಗೆದುಕೊಳ್ಳುತ್ತದೆ ಅದನ್ನು ನಾವು ಒಂದು ವರ್ಷ ಎಂದು ಕರೆಯುತ್ತೇವೆ. ಆದರೆ ಶುಕ್ರ ಗ್ರಹ ಅದರ ಸ್ವಂತ ಅಕ್ಷದ ಸುತ್ತ ಸುತ್ತಲು ಎರಡು ನೂರಾ ನಲವತ್ಮುರು ದಿನಗಳನ್ನು ತೆಗೆದುಕೊಳ್ಳುತ್ತದೆ. ಇದನ್ನು ಅಲ್ಲಿನ ಒಂದು ದಿನ ಎಂದು ಕರೆಯಲಾಗುತ್ತದೆ ಹಾಗೆ ಸೂರ್ಯನ ಸುತ್ತ ಸುತ್ತಲು ಎರಡು ನೂರಾ ಇಪ್ಪತ್ತೈದು ದಿನಗಳನ್ನು ತೆಗೆದುಕೊಳ್ಳುತ್ತದೆ ಹಾಗಾಗಿ ಅಲ್ಲಿ ಒಂದು ದಿನಕ್ಕಿಂತ ಒಂದು ವರ್ಷ ವೇಗವಾಗಿ ಕಳೆಯುತ್ತದೆ. ಶುಕ್ರ ಗ್ರಹ ನಮ್ಮ ಭೂಮಿಗಿಂತ ತುಂಬಾ ನಿಧಾನವಾಗಿ ತಿರುಗುತ್ತದೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ.

ಮುಂದಿನ ಆಸಕ್ತಿದಾಯಕ ವಿಷಯ ಯಾವುದು ಎಂಬುದನ್ನು ನೋಡುವುದಾದರೆ ನಾವು ಸಾಮಾನ್ಯವಾಗಿ ಯಾವುದಾದರೂ ಹೊಸ ಪ್ರದೇಶಕ್ಕೆ ಹೋಗುವಾಗ ದಾರಿಯ ಸ್ಪಷ್ಟತೆಗಾಗಿ ಅಮೆರಿಕನ್ನರು ತಯಾರಿಸಿದ ಗೂಗಲ್ ಮ್ಯಾಪ್ ಅನ್ನು ಬಳಸುತ್ತೇವೆ. ಇದೇ ರೀತಿಯಾಗಿ ನಮ್ಮ ದೇಶದ ಇಸ್ರೋ ಕೂಡ ಒಂದು ಮ್ಯಾಪನ್ನು ತಯಾರಿಸಿದೆ ಅದರ ಹೆಸರು ಭುವನ್ ಇದು 3d ಹಾಗೂ 2d ಎರಡರಲ್ಲೂ ಕೂಡ ಮ್ಯಾಪನ್ನು ತೋರಿಸುತ್ತದೆ. ಹಾಗೆ ಇದರಲ್ಲಿ ಬಳಸುವ ನೇವಿಗೇಶನ್ ಸ್ಯಾಟಲೈಟ್ ನ್ನು ಕೂಡ ಭಾರತವೇ ತಯಾರಿಸಿದೆ ನೇವಿಗೇಶನ್ ಸ್ಯಾಟಲೈಟ್ ಅನ್ನು ನಾವಿಕ್ ಎಂದು ಕರೆಯುತ್ತಾರೆ. ದುರಂತ ಎಂದರೆ ನಾವೆಲ್ಲರೂ ಇದನ್ನು ಬಳಸಲಿಲ್ಲ. ಹಾಗಾಗಿ ಮ್ಯಾಪ್ ವಿಫಲವಾಗುತ್ತದೆ ಈಗಲೂ ಕೂಡ ನಮ್ಮ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇದೆ ಆದರೆ ಇದನ್ನು ಯಾರು ಬಳಸುತ್ತಿಲ್ಲ. ಮುಂದಿನದಾಗಿ ಮಾರ್ಕ್ ರಫೆಲೋ ಇವರು ಹಾಲಿವುಡ್ ನಟ ಅವೆಂಜರ್ ನಂತಹ ದೊಡ್ಡದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದಾರೆ ಈತ ಮಾರ್ಚ್ 2001 ರಲ್ಲಿ ಮಲಗಿದ್ದಾಗ ಒಂದು ಕೆಟ್ಟ ಕನಸು ಬೀಳುತ್ತದೆ

ಆ ಕನಸಿನಲ್ಲಿ ಆತನಿಗೆ ಮೆದುಳಿನಲ್ಲಿ ಗಡ್ಡೆ ಇದೆ ಎಂದು ಕಾಣಿಸುತ್ತದೆ ಮೆದುಳಿನ ಗಡ್ಡೆ ಹೇಗೆ ಉಂಟಾಗುತ್ತದೆ ಮುಂದೆ ಸಾವಿಗೆ ಹೇಗೆ ಕಾರಣವಾಗುತ್ತದೆ ಎನ್ನುವುದು ಸವಿವರವಾಗಿ ತುಂಬಾ ಭಯಾನಕವಾಗಿ ಕನಸು ಬೀಳುತ್ತದೆ. ಇದರಿಂದ ಭಯಗೊಂಡ ಆತ ಕೂಡಲೇ ವೈದ್ಯರಿಗೆ ಕರೆ ಮಾಡಿ ತನಗೆ ಮೆದುಳಿನ ಪರೀಕ್ಷೆ ಮಾಡುವಂತೆ ಹೇಳುತ್ತಾನೆ ಪರೀಕ್ಷೆಯ ನಂತರ ಆತನಿಗೆ ನಿಜವಾದ ತೊಂದರೆ ಇದೆ ಎಂಬುದು ಗೊತ್ತಾಗುತ್ತದೆ ಕೆಲವು ದಿನಗಳ ನಂತರ ಶಸ್ತ್ರಚಿಕಿತ್ಸೆಯನ್ನು ಮಾಡಿ ಗಡ್ಡೆಯನ್ನು ಹೊರಗೆ ತೆಗೆಯಲಾಗುತ್ತದೆ. ಈ ರೀತಿ ಅನುಭವಗಳು ತುಂಬಾ ಜನರಿಗೆ ಆಗಿದೆಯಂತೆ ಕೆಲವರು ಹೇಳುವ ಪ್ರಕಾರ ಕನಸಿಗು ನಮ್ಮ ಸ್ತುಪ್ತ ಮೆದುಳಿಗೂ ಸಂಬಂಧವಿದೆಯಂತೆ ಹೀಗಾಗಿ ಕನಸಿನ ಮೂಲಕ ಕೆಲವೊಂದು ಸಮಸ್ಯೆಗಳ ಬಗ್ಗೆ ಎಚ್ಚರಿಸುತ್ತದೆ ಯಂತೆ ಇದೇ ರೀತಿ ಈ ಹಾಲಿವುಡ್ ನಟನನ್ನು ಕೂಡ ಕನಸಿನ ಮೂಲಕ ಎಚ್ಚರಿಸಿ ತೊಂದರೆಯಿಂದ ಪಾರುಮಾಡಿತು.

ನೀವೆಲ್ಲರೂ ಆಸ್ಪತ್ರೆಯಲ್ಲಿ ಹಾಕಿರುವ ಅಧಿಕ ಚಿನ್ಹೆಯನ್ನು ನೋಡಿರುತ್ತೀರಿ ಅನೇಕ ಜನರು ಇದನ್ನು ಪ್ಲಸ್ ಚಿನ್ಹೆ ಎಂದುಕೊಂಡಿದ್ದಾರೆ ಆದರೆ ಇದು ಕ್ರಾಸ್ ಸಿಂಬಲ್ ಅಲ್ಲ ಇದು ಇಂಟರ್ನ್ಯಾಷನಲ್ ಕಮಿಟಿ ರೆಡ್ ಕ್ರಾಸ್ ನ ಚಿನ್ಹೆ. ಹಾಗಾದರೆ ಆಸ್ಪತ್ರೆಗಳಲ್ಲಿ ಈ ಚಿನ್ಹೆ ಅನ್ನು ಯಾಕೆ ಹಾಕುತ್ತಾರೆ ಎಂಬುದನ್ನು ನೀವು ಕೇಳಬಹುದು. ರೆಡ್ ಕ್ರಾಸ್ ನ ಮುಖ್ಯ ಉದ್ದೇಶ ಅಂತರ್ಜಾತಿಯ ಹಾಗೂ ಅಂತರ್ಗತ ಹೋರಾಟಗಳಲ್ಲಿ ಸಹಾಯ ಮಾಡುವುದು ಯುದ್ಧದಲ್ಲಿ ಗಾಯಗೊಂಡವರನ್ನು ಇತರ ರೋಗಪೀಡಿತ ಜನರನ್ನು ಇತರ ಜನಸಾಮಾನ್ಯರಿಗೆ ಸಹಾಯ ಮಾಡುತ್ತಾ ಅವರನ್ನು ಕಾಪಾಡುವುದೇ ಇವರ ಮುಖ್ಯ ಧ್ಯೇಯ.

ಹೀಗಾಗಿ ರೆಡ್ ಕ್ರಾಸ್ ರೋಗಿಗಳಿಗೆ ಸೇವೆ ಮಾಡುವ ಸಂಸ್ಥೆಯಾಗಿರುವುದರಿಂದ ಅವರ ಪ್ಲಸ್ ಸಿಂಬಲ್ ಅನ್ನು ಆಸ್ಪತ್ರೆಗಳಿಗೂ ಇಡಲಾಯಿತು ಅಷ್ಟಕ್ಕೂ ರೆಡ್ ಕ್ರಾಸ್ ಸಂಸ್ಥೆ ಗೆ ಈ ಚಿನ್ಹೆಯನ್ನು ಹೇಗೆ ಇಟ್ಟರು ಎಂದರೆ ಏನ್ರಿ ಡೊನಾಲ್ಡ್ ಎನ್ನುವ ವ್ಯಕ್ತಿ ಕೆಲವೊಬ್ಬರ ಜೊತೆ ಸೇರಿಕೊಂಡು ಈ ರೆಡ್ ಕ್ರಾಸ್ ಎನ್ನುವ ಸಂಸ್ಥೆಯನ್ನು ಆರಂಭಿಸುತ್ತಾರೆ. ಒಂದು ಸಂಸ್ಥೆ ಎಂದರೆ ಅದಕ್ಕೆ ತನ್ನದೇ ಆದ ಒಂದು ಲೋಗೋ ಇರಬೇಕು ಹೀಗಾಗಿ ಸ್ವಿಜರ್ಲ್ಯಾಂಡ್ ಜಾತೀಯತೆ ಮೀರಿದ ಪತಾಕೆ ಎನ್ನುವ ಚಿನ್ಹೆಯನ್ನು ಇಡುತ್ತಾರೆ ಹೆಸರು ರೆಡ್ ಕ್ರಾಸ್ ಆಗಿರುವುದರಿಂದ ಚಿನ್ಹೆಗೆ ಕೆಂಪು ಬಣ್ಣವನ್ನು ಬಳಿಯಲಾಗುತ್ತದೆ.

ನೀಲಗಿರಿ ಮರದ ಬಗ್ಗೆ ಎಲ್ಲರೂ ಕೇಳಿರುತ್ತೀರಿ ಬಹುತೇಕರಿಗೆ ಈ ನೀಲಗಿರಿ ಮರದ ಬಗ್ಗೆ ಪರಿಚಯ ಇರುತ್ತದೆ. ಆದರೆ ಈ ಮರವನ್ನು ಸದ್ಯಕ್ಕೆ ಕರ್ನಾಟಕದಲ್ಲಿ ಬೆಳೆಯುತ್ತಿಲ್ಲ ಈ ಮರಗಳನ್ನು ಬೆಳೆಯದಂತೆ ಹೈಕೋರ್ಟ್ ಆದೇಶ ಕೊಡ ಇದೆ 2017ರ ಫೆಬ್ರವರಿ 23 ರಂದು ಇಂತಹ ಒಂದು ಆದೇಶವನ್ನ ಕರ್ನಾಟಕದ ಹೈಕೋರ್ಟ್ ಹೊರಡಿಸುತ್ತದೆ. ಈ ಆದೇಶದ ಪ್ರಕಾರ ಕರ್ನಾಟಕದಲ್ಲಿ ಯಾರು ಕೂಡ ತಮ್ಮ ಜಮೀನಿನಲ್ಲಿ ಆಗಲಿ ಅಥವಾ ಸರ್ಕಾರಿ ಜಮೀನಿನಲ್ಲಿ ಆಗಲಿ ನೀಲಗಿರಿ ಬೆಳೆಯುವಂತಿಲ್ಲ ಅಷ್ಟಕ್ಕೂ ಈ ಮರವನ್ನು ಬೆಳೆಯುವುದಕ್ಕೆ ಯಾಕೆ ನಿಷೇಧ ಮಾಡಲಾಗಿದೆ ಈ ಮರದಿಂದ ಏನು ತೊಂದರೆ ಆಗುತ್ತದೆ ಎಂಬುದನ್ನು ತಿಳಿಯುವುದಾದರೆ ಸಸ್ಯ ಜಗತ್ತಿನಲ್ಲಿ ಅತಿ ಹೆಚ್ಚು ಅದು ಕೂಡ ಅಂತರ್ಜಲ ಮಟ್ಟದಿಂದ ನೀರನ್ನು ಹೀರಿಕೊಳ್ಳುವ ಮರ ಎಂದರೆ ಅದು ನೀಲಗಿರಿ ಮರ. ಒಂದು ನೀಲಗಿರಿ ಮರ ಪ್ರತಿದಿನ ಹದಿನೈದರಿಂದ ಇಪ್ಪತ್ತು ಲೀಟರ್ ನೀರನ್ನು ನೆಲದಿಂದ ಹೀರಿಕೊಳ್ಳುತ್ತದೆ ಹೀಗೆ ಈ ಮರಗಳು ಇಷ್ಟೊಂದು ಪ್ರಮಾಣದ ನೀರನ್ನು ನೆಲದಿಂದ ಹೀರಿಕೊಂಡರೆ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತದೆ.

ತನ್ನ ಸುತ್ತಮುತ್ತಲಿನ ಎಲ್ಲಾ ನೀರನ್ನು ಈ ಮರಗಳು ಕುಡಿಯುತ್ತಾ ಹೋಗುತ್ತವೆ ಇದರಿಂದ ಅದರ ಸುತ್ತಮುತ್ತ ಇರುವ ಬೇರೆ ಯಾವುದೇ ಮರಗಳು ಬೆಳೆಯುವುದಿಲ್ಲ ಈ ಮರಗಳು ಇರುವ ಜಾಗದಲ್ಲಿ ಬಾವಿ ತೋಡಿದರೆ ನೀರು ಸಿಗುವುದಿಲ್ಲ ಬೋರ್ವೆಲ್ ನಲ್ಲಿಯೂ ಕೂಡ ನೀರು ಸಿಗದ ಪರಿಸ್ಥಿತಿ ಬರಬಹುದು ಹೀಗಾಗಿ ಈ ಮರಗಳು ಪರಿಸರಕ್ಕೆ ಮಾರಕ ಈ ಮರಗಳಿಂದ ಇಡೀ ಅರಣ್ಯಕ್ಕೆ ತೊಂದರೆ ಆಗಬಹುದು. ಪ್ರಾಣಿ ಪಕ್ಷಿಗಳಿಗೂ ನೀರು ಸಿಗದೆ ಇರುವ ತರಹ ಆಗಬಹುದು ಒಂದು ನೀಲಗಿರಿ ಮರ ಸುಮಾರು ಹದಿನೈದರಿಂದ ಇಪ್ಪತ್ತು ಲೀಟರ್ ನೀರನ್ನು ಹೀರಿಕೊಳ್ಳುತ್ತದೆ ಎಂದರೆ ನೂರಾರು ಸಾವಿರಾರು ಮರಗಳು ಇರುವ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತದೆ. ಈಗಲೂ ಕೂಡ ಅನೇಕ ಕಡೆಗಳಲ್ಲಿ ಸರ್ಕಾರವೇ ಬೆಳೆಸಿದ ನೀಲಗಿರಿ ತೋಪುಗಳು ಹಾಗೆ ಇವೆ.

ನೀಲಗಿರಿ ಮರಗಳನ್ನು ಏಕೆ ಹೆಚ್ಚಾಗಿ ಬೆಳೆಯುತ್ತಾರೆ ಎಂದರೆ ಇವು ಬಹಳ ವೇಗವಾಗಿ ಮತ್ತು ಯಾವುದೇ ಪ್ರದೇಶದಲ್ಲಿ ಬೇಕಾದರೂ ಬೆಳೆಯುತ್ತವೆ ಅವುಗಳನ್ನು ಕತ್ತರಿಸಿ ಹಾಕಿದರು ಮತ್ತೆ ಮತ್ತೆ ಬೆಳೆಯುತ್ತಲೇ ಇರುತ್ತವೆ ಈ ಮರಗಳನ್ನು ಸಂಪೂರ್ಣವಾಗಿ ತೆಗೆಯಬೇಕು ಎಂದರೆ ಬುಡ ಸಮೇತವಾಗಿ ಕೀಳಬೇಕು ಇಲ್ಲ ಎಂದರೆ ಅದು ಮತ್ತೆ ಬೆಳೆಯುತ್ತದೆ ಈಗಲೂ ಕೂಡ ನೀಲಗಿರಿಯನ್ನು ಬೆಳೆಯುತ್ತಿರುವವರಿಗೆ ಹೈಕೋರ್ಟ್ ನ ಆದೇಶದ ಮೇರೆಗೆ ಶಿಕ್ಷೆಯಾಗುತ್ತದೆ. ಅಂಥವರ ಜಮೀನುಗಳನ್ನು ಸರ್ಕಾರ ತನ್ನ ವಶಪಡಿಸಿಕೊಳ್ಳಬಹುದು. ಹಾಗಾಗಿ ಈಗಲೂ ಕೂಡ ನಿಮ್ಮ ಜಮೀನಿನಲ್ಲಿ ನೀಲಗಿರಿ ಮರಗಳು ಇತರ ನೀವು ಅವುಗಳ ನಿರ್ಮೂಲನೆಗೆ ಕ್ರಮಕೈಗೊಳ್ಳುವುದು ಒಳ್ಳೆಯದು. ಇದಿಷ್ಟು ನಾವಿಂದು ನಿಮಗೆ ತಿಳಿಸುತ್ತಿರುವ ಆಸಕ್ತಿದಾಯಕ ವಿಚಾರಗಳಾಗಿವೆ ಇವುಗಳನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!