ಏಪ್ರಿಲ್ 19, 2020ರಲ್ಲಿ ನಿಖಿಲ್ ಮತ್ತು ರೇವತಿ ಬಿಡದಿ ಫಾರ್ಮ್‌ಹೌಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸೆಪ್ಟೆಂಬರ್ 24,2021ರಲ್ಲಿ ಪುತ್ರನನ್ನು ಬರ ಮಾಡಿಕೊಂಡರು. ನಿಖಿಲ್ ಅವರ ಹುಟ್ಟು ಹಬ್ಬದ ದಿನದಂದು ಹೊಸ ಸಿನಿಮಾ ಘೋಷಣೆಯಾಗಿದೆ. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದೆ ಚಿತ್ರತಂಡ. ಈ ಸಿನಿಮಾ ಕೂಡ ಅದ್ದೂರಿಯಾಗಿ ಮೂಡಿ ಬರುವುದರಿಂದ, ಚಿತ್ರಕ್ಕೂ ಅವರು ಟೈಮ್ ಕೊಡಬೇಕಿದೆ. ಈ ಎಲ್ಲದರ ಮಧ್ಯೆ ಕುಟುಂಬವನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ ನಿಖಿಲ್.

ನಿಖಿಲ್ ರಾಜಕಾರಣ ಮತ್ತು ಸಿನಿಮಾ ರಂಗ ಎರಡರಲ್ಲೂ ಸೆಣಸಬೇಕಿದೆ. ಈ ಬಾರಿಯೂ ಅವರು ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನುವ ಸುದ್ದಿಯಿದೆ. ವಿಧಾನ ಸಭೆ ಚುನಾವಣೆಗೆ ಅವರು ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲೂ ಸಾಕಷ್ಟು ಪೈಪೋಟಿ ಇದೆ. ಎರಡರಲ್ಲೂ ಅವರು ಸಖತ್ ಫೈಟ್ ಮಾಡಬೇಕು. ಈ ಎಲ್ಲ ಟೆನ್ಷನ್ ಮಧ್ಯೆ ಜಾಲಿಯಾಗಿ ಮಗನೊಂದಿಗೆ ಸಮಯ ಕಳೆಯುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ.

ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ರೇವತಿ ಮಂಜುನಾಥ್ ಅವರನ್ನು ಮದುವೆಯಾಗಿ 2 ವರ್ಷಗಳು ಕಳೆದಿವೆ. 2ನೇ ಮದುವೆ ವಾರ್ಷಿಕೋತ್ಸವಕ್ಕೆ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರು ಕಡಲ ತೀರದಲ್ಲಿ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಿಖಿಲ್ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.

ಸಿನಿಮಾ ಮತ್ತು ರಾಜಕಾರಣದ ಮಧ್ಯೆ ಕೊಂಚ ಬಿಡುವು ತಗೆದುಕೊಂಡು ಮಗನೊಂದಿಗೆ ಟ್ರೀಪ್ ಗೆ ಹೋಗಿದ್ದಾರೆ ನಟ, ಜೆಡಿಎಸ್ ಯುವ ಮೋರ್ಚಾ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ. ಬೀಚ್ ವೊಂದರಲ್ಲಿ ಮಗನನ್ನು ಮೇಲಕ್ಕೆ ಹಿಡಿದುಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿಖಿಲ್, ಆ ಫೋಟೋಗೆ ‘ಲವ್ ಯೂ ಮಗನೆ’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ಈ ಫೋಟೋಗಳಲ್ಲಿ ಮಗನ ಮುಖವನ್ನು ಅವರು ತೋರಿಸಿಲ್ಲ, ಅದರ ಜೊತೆಗೆ ಮಗ ಹುಟ್ಟಿದ ದಿನ ಬಿಟ್ಟು, ಅಲ್ಲಿಂದ ಇಲ್ಲಿಯವರೆಗೆ ಮಗನ ಫೋಟೋವನ್ನು ಅವರು ಹಂಚಿಕೊಂಡಿಲ್ಲ. ಯಾಕೆ ಎಂದು ಕೆಲವರಿಗೆ ಸಂದೇಹ ಇರಬಹುದು. ಮಗನನ್ನು ಎಕ್ಸ್‌ಪೋಸ್ ಮಾಡಲು ನಿಖಿಲ್ ಕುಮಾರಸ್ವಾಮಿ ಅವರಿಗೆ ಇಷ್ಟವಿಲ್ಲವಂತೆ.

ಸದ್ಯ ನಿಖಿಲ್ ಕುಮಾರ್ ಸ್ವಾಮಿ ಎರಡು ದೋಣಿಯ ಮೇಲೆ ಪಯಣ ಮಾಡುತ್ತಿದ್ದಾರೆ. ಒಂದು ಕಡೆ ಅವರ ಹೊಸ ಸಿನಿಮಾ ಒಡೆಯರ್ ಘೋಷಣೆಯಾಗಿದೆ. ಈ ಕಡೆ ಪಕ್ಷ ಸಂಘಟಿಸುವ ಹೊಣೆಯನ್ನು ಹೊತ್ತಿದ್ದಾರೆ. ಹಾಗಾಗಿ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಒಂದೂವರೆ ವರ್ಷದಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ ನಿಖಿಲ್ ಗುರುತರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

Leave a Reply

Your email address will not be published. Required fields are marked *