Nighty wear Women: ಮೊದಲಿನ ಕಾಲದಲ್ಲಿ ಮದುವೆಯಾದ ನಂತರ ಮಹಿಳೆಯರು ಕಡ್ಡಾಯವಾಗಿ ಸೀರೆಯನ್ನೆ ಧರಿಸಬೇಕಾಗಿತ್ತು. ಭಾರತೀಯ ಸಂಸ್ಕೃತಿಯಲ್ಲಿನ ಕೆಲವು ಆಚರಣೆಗಳು ಕೆಲವರಿಗೆ ಕಿರಿಕಿರಿ ಎನಿಸಿದರೂ ಆ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣ ಹಾಗೂ ಅನುಕೂಲ ಅಥವಾ ಶ್ರೇಯಸ್ಸು ಇರುತ್ತದೆ. ಅಂತಹ ಆಚರಣೆಯಲ್ಲಿ ಸೀರೆ ಧರಿಸುವ ಆಚರಣೆಯು ಒಂದು. ಈಗಿನ ಕಾಲದಲ್ಲಿ ಮಹಿಳೆಯರು ಸೀರೆಯನ್ನು ಕೇವಲ ನಿರ್ದಿಷ್ಟ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಧರಿಸುವುದಿಲ್ಲ ಅದಕ್ಕಾಗಿ ಅಂದಿನ ಕಾಲದ ಮಹಿಳೆಯರಿಗಿಂತ ಈಗಿನ ಮಹಿಳೆಯರು ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಾರೆ ಅದು ಹೇಗೆ ಹಾಗೂ ಸೀರೆಯನ್ನು ಧರಿಸುವುದರಿಂದ ಯಾವ ಪ್ರಯೋಜನವಿದೆ ಈಗಿನ ಕಾಲದ ಉಡುಪನ್ನು ಧರಿಸುವುದರಿಂದ ಏನೆಲ್ಲಾ ಅಪ್ರಯೋಜನಗಳಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಬಹಳಷ್ಟು ಮಹಿಳೆಯರು ಮದುವೆಯ ನಂತರ ದಿನೆ ದಿನೆ ಕಳೆಯುತ್ತಿದ್ದಂತೆ ಅವರ ಹೊಟ್ಟೆ ಜೋತು ಬಿದ್ದು ದಪ್ಪವಾಗುತ್ತಿರುತ್ತಾರೆ ಇದಕ್ಕೆ ಕಾರಣವೇನೆಂದು ಚಿಂತೆ ಪಡುತ್ತಿರುತ್ತಾರೆ. ಈಗಿನ ಬಹುತೇಕ ಮಹಿಳೆಯರು ಮದುವೆಯ ನಂತರವಂತೂ ನೈಟಿಯನ್ನು ಧರಿಸುತ್ತಾರೆ ಮೊದಲೆಲ್ಲಾ ಮಹಿಳೆಯರು ಮದುವೆಯ ನಂತರ ಸೀರೆಯನ್ನು ಧರಿಸಬೇಕಾಗಿತ್ತು. ಮಹಿಳೆಯರು ಧರಿಸುವ ನೈಟಿಗೂ ದಪ್ಪವಾಗುತ್ತಿರಲು ಸಂಬಂಧವೇನು ಎಂದು ಯೋಚಿಸುತ್ತಿದ್ದೀರಾ ಸಂಬಂಧವಿದೆ ಅದೇನೆಂದರೆ ನೈಟಿ ಎನ್ನುವುದರ ನಿಜವಾದ ಅರ್ಥ ರಾತ್ರಿ ಮಲಗಲು ಆರಾಮ ಆಗುತ್ತದೆ ಎಂದು ರಾತ್ರಿ ಮಾತ್ರ ಧರಿಸುವ ಒಂದು ಉಡುಪಾಗಿತ್ತು ಆದರೆ ನಂತರದಲ್ಲಿ ಮಹಿಳೆಯರು ನೈಟಿಯನ್ನು ಪ್ರತಿದಿನ ಧರಿಸಲು ಪ್ರಾರಂಭಿಸಿದರು ನಂತರದಲ್ಲಿ ಗೃಹಿಣಿಯರ ನಿತ್ಯ ಬಳಸುವ ಬಹಳ ಪ್ರಿಯವಾದ ಉಡುಪಾಗಿದೆ ಇದಕ್ಕೂ ಕಾರಣವಿದೆ ದಿನದ ಬಹುಪಾಲು ಗೃಹಿಣಿಯರಿಗೆ ಮನೆಯಲ್ಲಿ ಕೆಲಸ ಮಾಡಬೇಕಾಗುತ್ತದೆ ಕೆಲಸ ಮಾಡಲು ನೈಟಿ ಬಹಳ ಅನುಕೂಲಕರವಾಗಿದೆ ಸೀರೆಯನ್ನು ಧರಿಸಿ ಕೆಲಸ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ.

ನೈಟಿ ಧರಿಸಿಕೊಂಡರೆ ಬೆವರುವುದಿಲ್ಲ, ಸೆರಗು ಜಾರುತ್ತದೆ ಎನ್ನುವ ಸಮಸ್ಯೆ ಇರುವುದಿಲ್ಲ ನೈಟಿ ಏಕವಸ್ತ್ರವಾಗಿರುವುದರಿಂದ ಧರಿಸಲು ಕಂಫರ್ಟ್ ಆಗಿರುತ್ತದೆ ಮನೆಯಲ್ಲಿ ಕೆಲಸ ಮಾಡಲು ಆರಾಮ ಎನಿಸುತ್ತದೆ. ಮಹಿಳೆಯರಿಗೆ ನೈಟಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂಬುದಷ್ಟೆ ಗೊತ್ತಿದೆ ಆದರೆ ನೈಟಿ ಎಷ್ಟು ಅಗಲವಾಗಿರುತ್ತದೆ ನಮ್ಮ ದೇಹದ ಆಕೃತಿಯೂ ಅಗಲವಾಗುತ್ತಾ ಹೋಗುತ್ತದೆ ಎನ್ನುವುದು ತಿಳಿಯುವುದೆ ಇಲ್ಲ ಕೆಲವೊಮ್ಮೆ ಊಟ ತಿಂಡಿ ಸರಿಯಾಗಿ ಮಾಡದೆ ತೆಳುವಾಗಲೂಬಹುದು ನೈಟಿ ಧರಿಸಿದರೆ ತೆಳುವಾದರೂ ತಿಳಿಯುವುದಿಲ್ಲ ಏಕೆಂದರೆ ನೈಟಿ ನಿರ್ದಿಷ್ಟ ಆಕಾರವನ್ನು ಹೊಂದದೆ ಗಾಳಿಪಟದಂತೆ ಇರುತ್ತದೆ. ಭಾರತೀಯ ಸಂಸ್ಕೃತಿಯ ಉಡುಪಾದ ಸೀರೆಯನ್ನು ಧರಿಸುವುದರಿಂದ ಮಹಿಳೆಯರ ದೇಹದ ಆಕೃತಿ ಚೆನ್ನಾಗಿರುತ್ತದೆ ಕಾರಣ ಸೀರೆಯನ್ನು ಧರಿಸಿದಾಗ ಬೆವರುತ್ತಾರೆ ಜೊತೆಗೆ ಸೀರೆಯನ್ನು ಧರಿಸಬೇಕೆಂದರೆ ಸೊಂಟಕ್ಕೆ ಲಂಗವನ್ನು ಗಟ್ಟಿಯಾಗಿ ಕಟ್ಟಬೇಕಾಗುತ್ತದೆ ಬಿಗಿಯಾದ ಬ್ಲೌಸ್ ಅನ್ನು ಧರಿಸಬೇಕು ಹಾಗೂ ಎಳೆದು ಒಪ್ಪವಾಗಿ ಸೆರಗನ್ನು ಮಾಡಬೇಕಾಗುತ್ತದೆ ಇದರಿಂದ ಮಹಿಳೆಯರ ದೇಹದ ಬೊಜ್ಜು ಬರುವ ಭಾಗಗಳನ್ನು ಸೀರೆಯಿಂದ ಬಂಧಿಸಲಾಗುತ್ತದೆ.

ಮಹಿಳೆಯರು ತಮ್ಮ ದೇಹವನ್ನು ಕರಗಿಸಬೇಕಾದರೆ ಫಿಟ್ನೆಸ್ ಮೆಂಟೇನ್ ಮಾಡಬೇಕಾದರೆ ಬೆವರುವುದಕ್ಕೆ ಮೊದಲ ಆದ್ಯತೆ ಕೊಡುತ್ತಾರೆ ಅದಕ್ಕಾಗಿ ವ್ಯಾಯಾಮ ಮಾಡಿ ಬೆವರು ಸುರಿಸುತ್ತಾರೆ ಬೊಜ್ಜು ಕರಗಿಸಲು ಸೊಂಟಕ್ಕೆ ಬೆಲ್ಟ್ ಕಟ್ಟಿಕೊಳ್ಳುತ್ತಾರೆ ವ್ಯಾಯಾಮ ಶಾಲೆಯಲ್ಲಿ ಮಹಿಳೆಯರು ಮಾಡುವ ಕೆಲಸವನ್ನು ನಮ್ಮ ಸನಾತನ ಸಂಸ್ಕೃತಿಯ ಸೀರೆ ಸುಲಭವಾಗಿ ಮಾಡುತ್ತದೆ ಆದರೆ ನಾವುಗಳು ನಮ್ಮಲ್ಲೆ ಇರುವ ಸೀರೆಯನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ವಿಷಾದನೀಯವಾಗಿದೆ. ಮನೆಯಲ್ಲಿ ಪೂಜೆ ಮಾಡುವಾಗ ದೇವಸ್ಥಾನಕ್ಕೆ ಹೋಗುವಾಗ ಅಥವಾ ಇನ್ಯಾವುದೆ ಶುಭಕಾರ್ಯಗಳಿಗೆ ನೈಟಿ ಧರಿಸಿಕೊಂಡು ಪೂಜೆ ಮಾಡುವುದು ಅಥವಾ ಪೂಜೆಯಲ್ಲಿ ಭಾಗಿಯಾಗುವುದು ಶುಭಕರವಲ್ಲ ಎಂಬುದನ್ನು ಶಾಸ್ತ್ರ ತಿಳಿಸುತ್ತದೆ.

ಗೃಹಲಕ್ಷ್ಮಿಯಾದವಳು ಕಳೆಕಳೆಯಾಗಿ ಇರಬೇಕು ಮನೆಯಲ್ಲಿ ಇರುವ ಮಹಿಳೆಗೆ ಅವಳದೆ ಆದ ಸ್ಥಾನವಿದೆ ಅವಳಿಂದ ಮನೆ ಉದ್ಧಾರವಾಗಬೇಕು ಎಂದು ಹಿರಿಯರು ಬಯಸುತ್ತಾರೆ, ಮಹಿಳೆ ನೈಟಿ ಧರಿಸಿಕೊಂಡಾಗ ಗೃಹಲಕ್ಷ್ಮೀಯಾಗಿ ಮನೆಗೆ ಶೋಭಿಸುವುದಿಲ್ಲ. ನಾವು ಮನೆಯಲ್ಲಿ ಇರುತ್ತೇವೆ ಹೊರಗಡೆ ಎಲ್ಲಿಯೂ ಹೋಗುವುದಿಲ್ಲ ಹೀಗಾಗಿ ಮನೆಯಲ್ಲಿ ನೈಟಿ ಧರಿಸುವುದು ನಮಗೆ ಅನುಕೂಲಕರ ಎನ್ನುವುದು ಹಲವು ಗೃಹಿಣಿಯರ ಅಭಿಪ್ರಾಯವಾಗಿದೆ ಆದರೆ ಮನೆಯಲ್ಲಿರುವ ಹಿರಿಯರು ಹಾಗೂ ಮಕ್ಕಳ ಮುಂದೆ ನೈಟಿ ಧರಿಸುವುದು ನಮ್ಮ ಸನಾತನ ಸಂಸ್ಕೃತಿಯಲ್ಲಿ ಶೋಭೆಯಲ್ಲ.

ಇನ್ನು ನೈಟಿಯನ್ನು ಧರಿಸಿಕೊಂಡು ಹೊರಗಡೆ ಹೋಗುವುದು ದೇವಸ್ಥಾನಕ್ಕೆ ಹೋಗುವುದು ಇನ್ನೊಬ್ಬರ ಮನೆಯ ಶುಭ ಕಾರ್ಯಗಳಲ್ಲಿ ಭಾಗಿಯಾಗಲು ಹೋಗುವುದು ಶುಭಕರವಲ್ಲ ಆದ್ದರಿಂದ ಇನ್ನಾದರೂ ಮಹಿಳೆಯರೆ ರಾತ್ರಿ ಮಲಗುವಾಗ ಹಾಗೂ ಮುಟ್ಟಿನ ಸಮಯದಲ್ಲಿ ಮಾತ್ರ ನೈಟಿ ಧರಿಸಿ ಉಳಿದ ಸಮಯದಲ್ಲಿ ಸೀರೆ ಧರಿಸುವುದು ಒಳ್ಳೆಯದು. ಸೀರೆಯನ್ನು ಧರಿಸುವುದರಿಂದ ಮಹಿಳೆಯು ಮನೆಯಲ್ಲಿ ಹಿರಿಯರಿಂದ ಮಕ್ಕಳಿಂದ ಗೌರವಕ್ಕೆ ಒಳಗಾಗುತ್ತಾಳೆ ಹಾಗೂ ಗೃಹಲಕ್ಷ್ಮೀಯಾಗಿ ಮನೆ ತುಂಬಾ ಸಂತಸದ ವಾತಾವರಣಕ್ಕೆ ಕಾರಣವಾಗುತ್ತಾಳೆ, ಗಂಡನಿಗೆ ಆಕರ್ಷಕಳಾಗಿ ಕಾಣುತ್ತಾಳೆ ಇದೆಲ್ಲಕ್ಕಿಂತ ಮುಖ್ಯವಾಗಿ ಸೀರೆ ಧರಿಸುವುದರಿಂದ ಮಹಿಳೆಯರ ದೇಹದ ಆಕೃತಿ ಸುಂದರವಾಗಿರುತ್ತದೆ

ಬೊಜ್ಜಿನ ಸಮಸ್ಯೆ ಮಹಿಳೆಯ ಹತ್ತಿರ ಸುಳಿಯುವುದಿಲ್ಲ. ನೋಡಿದ್ರಲ್ಲಾ ಸೀರೆ ಧರಿಸುವುದರಿಂದ ಮಹಿಳೆಯರಿಗೆ ಇಷ್ಟೊಂದು ಲಾಭವಿದೆ ಹಾಗಾದರೆ ನೈಟಿ ಧರಿಸುವ ಮಹಿಳೆಯರೆ ಇನ್ನಾದರೂ ಇದರ ಬಗ್ಗೆ ಯೋಚಿಸಿ, ನೈಟಿಯನ್ನು ಕೇವಲ ರಾತ್ರಿ ಹಾಗೂ ಕೆಲವು ಅನಿವಾರ್ಯ ಸಂದರ್ಭವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಧರಿಸದೆ ಸೀರೆಯು ನಿಮ್ಮ ಉಡುಪಾಗಿ ಆಯ್ಕೆಮಾಡಿಕೊಳ್ಳಿ. ಈ ಮಾಹಿತಿಯನ್ನು ಪ್ರತಿಯೊಬ್ಬ ಮಹಿಳೆಯರಿಗೆ ತಿಳಿಸಿ ಒಂದು ಸಣ್ಣ ಬದಲಾವಣೆ ದೊಡ್ಡ ಸಂತೋಷಕ್ಕೆ ಕಾರಣವಾಗಬಹುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!