ತಾಳಿ ಸರಕ್ಕೆ ಸೇಫ್ಟಿ ಪಿನ್ ಹಾಕುವ ಮಹಿಳೆಯರೇ ಇಲ್ಲಿ ಗಮನಿಸಿ, ಇದರಿಂದ ಏನಾಗುತ್ತೆ ಗೊತ್ತಾ

0 2,537

Kannada Information tips: ಒಂದು ಮನೆಯ ಬಹುಮುಖ್ಯಭಾಗವಾಗಿರುವ ಮಹಿಳೆ ಕೆಲವು ಸಾಮರ್ಥ್ಯವನ್ನು ಹೊಂದಿರಬೇಕು ಹಾಗೆಯೆ ಕೆಲವು ಎಚ್ಚರಿಕೆಯ ಕ್ರಮಗಳನ್ನು ಅಥವಾ ನಿಯಮಗಳನ್ನು ಅನುಸರಿಸಬೇಕು. ಪ್ರತಿನಿತ್ಯ ಅನೇಕ ಸವಾಲುಗಳನ್ನು ಎದುರಿಸುವ ಮಹಿಳೆ ಕೆಲವು ಅಂಶಗಳನ್ನು ಕಲಿತಿರಬೇಕಾಗುತ್ತದೆ. ಹಾಗಾದರೆ ಮನೆ ಗೃಹಿಣಿಯಾಗಿರುವ, ಲಕ್ಷ್ಮೀಯಾಗಿರುವ ಮಹಿಳೆಯರಿಗಾಗಿಯೆ ಕೆಲವು ಸಲಹೆಗಳನ್ನು ಈ ಲೇಖನದಲ್ಲಿ ನೋಡೋಣ.

ಸಾಮಾನ್ಯವಾಗಿ ಮಹಿಳೆಯರು ತಮ್ಮ ತಾಳಿ ಸರಕ್ಕೆ ಸೇಫ್ಟಿ ಪಿನ್ ಅನ್ನು ಹಾಕಿಕೊಂಡಿರುತ್ತಾರೆ ಸೇಫ್ಟಿ ಪಿನ್ ಕಬ್ಬಿಣವಾಗಿರುವುದರಿಂದ ಅದನ್ನು ನಾವು ಬಳಸಿದಾಗ ನಮ್ಮ ಮೇಲೆ ಶನಿ ದೇವರ ಪ್ರಭಾವ ಉಂಟಾಗುತ್ತದೆ ಇದರಿಂದ ಗಂಡ ಹೆಂಡತಿ ಮಧ್ಯ ಸದಾ ಮನಸ್ತಾಪ ಜಗಳ ಕಂಡುಬರುತ್ತದೆ ಗಂಡ ಹೆಂಡತಿಯ ಮಧ್ಯೆ ಬಾಂಧವ್ಯ ಹಾಳಾಗುತ್ತದೆ ಆದ್ದರಿಂದ ಮಹಿಳೆಯರು ಈ ತಪ್ಪನ್ನು ಮಾಡಲೇಬಾರದು. ಮಹಿಳೆಯರು ಮುಸ್ಸಂಜೆಯ ಸಮಯದಲ್ಲಿ ಅಕ್ಕಿ ಕೇರುತ್ತಿದ್ದರೆ ಆಗ ಅಕ್ಕಿಯನ್ನು ತಿನ್ನಬಾರದು. ಬೆಳಗ್ಗೆ ಎದ್ದು ಮಹಿಳೆಯರು ಮೊದಲು ಅಡುಗೆ ಮನೆಗೆ ಹೋಗುತ್ತಾರೆ ಅಡುಗೆ ಮನೆಯಲ್ಲಿ ಸ್ಟೌ ಹಚ್ಚುವ ಮೊದಲು ಒಲೆಗೆ ನಮಸ್ಕಾರ ಮಾಡಿ ನಂತರ ಸ್ಟವ್ ಹಚ್ಚುವ ಅಭ್ಯಾಸವನ್ನು ರೂಡಿಸಿಕೊಳ್ಳುವುದು ಒಳ್ಳೆಯದು.

ಮಹಿಳೆಯರು ಅಡುಗೆ ಮಾಡುವಾಗ ಉಪ್ಪನ್ನು ಬಳಸುತ್ತಾರೆ ಉಪ್ಪನ್ನು ಗಡಿಬಿಡಿಯಲ್ಲಿ ಎಡಗೈಯಿಂದ ಅಡುಗೆಗೆ ಹಾಕಬಾರದು. ಮಹಿಳೆಯರು ಯಾವುದೆ ಕಾರಣಕ್ಕೂ ಇನ್ನೊಬ್ಬರಿಗೆ ಬೈಯುತ್ತಾ ಪೂಜೆ ಮಾಡುವುದಾಗಲಿ ಅಡುಗೆ ಮಾಡುವುದಾಗಲಿ ಮಾಡಬಾರದು ಇದರಿಂದ ಮಾಡಿದ ಅಡುಗೆಗಾಗಲಿ ಅಥವಾ ಪೂಜೆಗಾಗಲಿ ಫಲ ಲಭಿಸುವುದಿಲ್ಲ. ಸಾಮಾನ್ಯವಾಗಿ ಮಹಿಳೆಯರಿಗೆ ಒಡವೆ ಹಾಕಿಕೊಳ್ಳುವುದು ವಿವಿಧ ರೀತಿಯ ವಿನ್ಯಾಸದ ಬಟ್ಟೆಗಳನ್ನು ಧರಿಸಿಕೊಳ್ಳುವುದೆಂದರೆ ಇಷ್ಟವಾಗುತ್ತದೆ ಆದರೆ ಬೇರೆಯವರ ಬಟ್ಟೆಯನ್ನಾಗಲಿ ಒಡವೆಯನ್ನಾಗಲಿ ಧರಿಸಿಕೊಳ್ಳಬಾರದು.

ಊಟ ಬಡಿಸುವಾಗ ಮಹಿಳೆಯರು ಅನ್ನವನ್ನು ಚೆಲ್ಲದಂತೆ ಜಾಗೃತೆವಹಿಸಿ ಬಡಿಸಬೇಕು. ಮಹಿಳೆಯರು ಕಾಲಿನಿಂದ ಬಾಗಿಲನ್ನು ಹಾಕುವುದಾಗಲಿ ಬಾಗಿಲಿಗೆ ಒದೆಯುವುದಾಗಲಿ ಮಾಡಬಾರದು ಇದು ಮನೆಗೆ ಶೋಭೆಯಲ್ಲ. ಮಲಗುವ ಹಾಸಿಗೆಯ ಮೇಲೆ ಆಹಾರ ಪದಾರ್ಥಗಳನ್ನು ಇಡಲೇಬಾರದು. ಆಹಾರ ಪದಾರ್ಥಗಳನ್ನು ಸೇವಿಸುವುದಾಗಲಿ ಇಡುವುದಾಗಲಿ ಅಡುಗೆ ಮನೆಯಲ್ಲಿ ಮಾತ್ರ ಮಾಡಬೇಕು. ಮಹಿಳೆಯರು ಎಂಜಲು ಕೈಯಲ್ಲಿ ದುಡ್ಡನ್ನು ಮುಟ್ಟುವುದಾಗಲಿ ಅಥವಾ ಎಂಜಲನ್ನು ಬೆರಳಿಗೆ ಹಚ್ಚಿಕೊಂಡು ನೋಟನ್ನು ಎಣಿಸುವುದಾಗಲಿ ಮಾಡಲೇಬಾರದು. ಹಣವನ್ನು ಲಕ್ಷ್ಮಿ ದೇವಿ ಎಂದು ಭಾವಿಸುತ್ತೇವೆ ಅಂತಹ ಲಕ್ಷ್ಮಿ ದೇವಿಯನ್ನು ನಾವು ಎಂಜಲು ಕೈಯಿಂದ ಮುಟ್ಟಲೇಬಾರದು ಇದರಿಂದ ಒಳ್ಳೆಯದಾಗುವುದಿಲ್ಲ.

ಮನೆಯ ಹೆಣ್ಣು ಮಕ್ಕಳಾಗಲಿ ಅಥವಾ ಮನೆಗೆ ಬಂದ ಸೊಸೆಯಾಗಲಿ ಸೊಂಬೇರಿತನದಿಂದ ನಡೆದುಕೊಂಡರೆ ಆ ಮನೆಗೆ ಶ್ರೇಯಸಲ್ಲ ಯಾವ ಮನೆಯಲ್ಲಿ ಮಹಿಳೆಯರು ಖುಷಿಯಿಂದ ಲವಲವಿಕೆಯಿಂದ ಓಡಾಡಿಕೊಂಡಿರುತ್ತಾರೊ ಆ ಮನೆಯಲ್ಲಿ ಸಂತೋಷ, ನೆಮ್ಮದಿ ಕಂಡುಬರುತ್ತದೆ. ಮಹಿಳೆಯರು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮನೆಯ ಪ್ರತಿಯೊಂದು ಕೋಣೆಯು ಅಡುಗೆ ಮನೆ ದೇವರ ಕೋಣೆ ಸ್ನಾನಗ್ರಹ ಶೌಚಾಲಯ ಸ್ವಚ್ಛವಾಗಿರಬೇಕು. ಮನೆಯ ಹೆಣ್ಣು ಮಕ್ಕಳು ಪ್ರತಿದಿನ ಲಕ್ಷಣವಾಗಿ ತಲೆ ಬಾಚಿಕೊಂಡು ಹಣೆಗೆ ಕುಂಕುಮವನ್ನು ಇಟ್ಟುಕೊಳ್ಳಬೇಕು ಅಂತಹ ಮಹಿಳೆಯು ನೋಡಲು ಕಳಕಳೆಯಾಗಿರುತ್ತಾಳೆ. ಮಹಿಳೆಯರು ಮದುವೆಯಾದ ತಮ್ಮ ಗಂಡನಿಗೆ ಗೌರವ ಕೊಡುವ ಗುಣವನ್ನು ಬೆಳೆಸಿಕೊಂಡಿರಬೇಕು ಗಂಡನನ್ನು ಗೌರವದಿಂದ ಕಂಡಾಗ ಆತನು ಗೌರವದಿಂದ ನಡೆದುಕೊಳ್ಳುತ್ತಾನೆ.

ಮನೆಯ ಹೆಣ್ಣು ಮಕ್ಕಳು ಪ್ರತಿದಿನ ಸೂರ್ಯೋದಯವಾದರೂ ಮಲಗುವ ಅಭ್ಯಾಸ ಮನೆಗೆ ಒಳ್ಳೆಯದಲ್ಲ. ಮಹಿಳೆಯರು ತಾವು ಮನೆಯಲ್ಲಿ ಮಾಡುವ ಅಡುಗೆ ಎಲ್ಲರಿಗೂ ಇಷ್ಟವಾಗುವಂತಿರಬೇಕು ಇರುವುದರಲ್ಲಿಯೆ ರುಚಿಕಟ್ಟಾದ ಶುದ್ಧವಾದ ಅಡುಗೆ ಮಾಡುವುದನ್ನು ಕಲಿಯಬೇಕು. ಹೆಂಡತಿಯ ಅಡುಗೆ ಗಂಡನಿಗೆ ಇಷ್ಟವಾದರೆ ಅವಳು ಅವನನ್ನು ಗೆದ್ದಂತೆ. ಮಹಿಳೆಗೆ ಒಂದು ಮನೆಯನ್ನು ನಿಭಾಯಿಸುವ ಚುರುಕುತನ ಇರಬೇಕು ಮದುವೆಯಾಗಿ ಹೋದ ಮನೆಯನ್ನು ನಿಭಾಯಿಸಲು ಕಲಿತಿರಬೇಕು ಏಕೆಂದರೆ ಆಕೆಯಿಂದ ಆ ಮನೆ ಉದ್ಧಾರವಾಗಬೇಕು. ಮಹಿಳೆಯು ತನ್ನ ಗಂಡ ಹಾಗೂ ಮಕ್ಕಳನ್ನು ಸರಿದಾರಿಯಲ್ಲಿ ನಡೆಸುವ ಜಾಣ್ಮೆಯನ್ನು ಹೊಂದಿರಬೇಕು ಪ್ರೀತಿಯಿಂದಲೆ ಮಹಿಳೆಯರು ತನ್ನ ಗಂಡ ಮಕ್ಕಳನ್ನು ನೋಡಿಕೊಂಡು ಮನೆಯನ್ನು ಸರಿದಾರಿಯಲ್ಲಿ ನಡೆಸಿಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿರಬೇಕು.

ಮಹಿಳೆಯರು ಕೂದಲನ್ನು ಬಾಚುವಾಗ ಕೂದಲು ಉದುರುವುದು ಸಹಜವಾಗಿದೆ ಕೂದಲು ಬಾಚುವಾಗ ಉದುರಿದ ಕೂದಲನ್ನು ಎಲ್ಲೆಂದರಲ್ಲಿ ಹಾಕಬಾರದು ನಿರ್ದಿಷ್ಟವಾದ ಒಂದು ಜಾಗ ಇಟ್ಟುಕೊಳ್ಳಬೇಕು ಅಲ್ಲಿಯೆ ಹಾಕಬೇಕು. ಮಹಿಳೆಯು ಯಾರ ಮೇಲೆಯೂ ಅವಲಂಬಿತಳಾಗಿರಬಾರದು ತಾವು ಬದುಕನ್ನು ನಡೆಸುವುದರೊಂದಿಗೆ ತಮ್ಮ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವನ್ನು ಕಲಿಯಬೇಕು ಮಹಿಳೆಗೆ ಒಂದು ಮನೆಯನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಇರುತ್ತದೆ ಆದರೆ ಅವಳು ಮನಸ್ಸು ಮಾಡಬೇಕಷ್ಟೆ. ಸೋಂಬೇರಿತನವನ್ನು ಬಿಟ್ಟು ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡು ನಿಭಾಯಿಸುವುದರತ್ತ ಮಹಿಳೆಯು ಗಮನ ಹರಿಸಬೇಕು.

ಒಬ್ಬ ಮಹಿಳೆಯಿಂದ ಏನನ್ನಾದರೂ ಸಾಧಿಸಲು ಸಾಧ್ಯವಿದೆ ಕೆಟ್ಟ ದಾರಿಯಲ್ಲಿ ನಡೆಯುತ್ತಿದ್ದ ಗಂಡನನ್ನು ಮಕ್ಕಳನ್ನು ಸರಿದಾರಿಗೆ ತರುವ ಸಾಮರ್ಥ್ಯ ಕೇವಲ ಮಹಿಳೆಗೆ ಇರುತ್ತದೆ ಅವಳು ತಾಯಿ ಆಗಿರಬಹುದು, ತಂಗಿ ಆಗಿರಬಹುದು, ಅಕ್ಕನಾಗಿರಬಹುದು, ಹೆಂಡತಿ ಆಗಿರಬಹುದು. ಇಂತಹ ಮಹಿಳೆಯರು ಕೆಲವು ನಿಯಮಗಳನ್ನು ಹಾಕಿಕೊಂಡು ಅದನ್ನು ಪಾಲಿಸಿಕೊಂಡು ಜೀವನ ನಡೆಸಿದರೆ ಎಂತಹ ಕಷ್ಟವನ್ನಾದರೂ ಗೆದ್ದು ಹಿರಿಯರ ಮೆಚ್ಚುಗೆಗೆ ಪಾತ್ರಳಾಗುತ್ತಾಳೆ. ಈ ಮಾಹಿತಿಯನ್ನು ಪ್ರತಿಯೊಬ್ಬ ಮಹಿಳೆಗೆ ತಲುಪಿಸಿ ಹಾಗೆಯೆ ಹೇಳಿರುವ ನಿಯಮಗಳನ್ನು ಎಚ್ಚರಿಕಾ ಕ್ರಮಗಳನ್ನು ತಪ್ಪದೆ ಅನುಸರಿಸಿ.

Leave A Reply

Your email address will not be published.