ಮನೆ ಕಟ್ಟುವಾಗ ಈ ವಿಷಯ ನಿಮಗೆ ಗೊತ್ತಿದ್ದರೆ, ಮನೆ ಗೋಡೆ ಖಂಡಿತ ಕ್ರಾಕ್ ಬರೋದಿಲ್ಲ

0 58

ಮನೆ ನಿರ್ಮಾಣ ಮಾಡುವಾಗ ಸಾಮಾನ್ಯವಾಗಿ ಎಲ್ಲರೂ ನಾಲ್ಕು ಇಂಚಿನ ಇಟ್ಟಿಗೆಯನ್ನು ಒಳಗಡೆ ಪಾರ್ಟಿಶನ್ ಮಾಡುವುದಕ್ಕೆ ಬಳಸುತ್ತಾರೆ ಹೊರಗಡೆ ಬಳಸುವುದಿಲ್ಲ ಹೊರಗಡೆ ಆರು ಅಂಚಿನ ಇಟ್ಟಿಗೆಯನ್ನು ಒಂಬತ್ತು ಇಂಚಿನ ಇಟ್ಟಿಗೆಯನ್ನು ಬಳಸುತ್ತೇವೆ. ಕಾರಣ ನಾಲ್ಕು ಇಂಚಿನ ಇಟ್ಟಿಗೆಗೆ ಶಕ್ತಿ ಕಡಿಮೆ ಇರುತ್ತದೆ. ಜೊತೆಗೆ ಇದು ಮಳೆ ಬಂದಾಗ ತೇವಾಂಶವನ್ನು ಒಳಗಡೆ ಬಿಟ್ಟುಕೊಳ್ಳುತ್ತದೆ. ಆದರೆ ಮಾಡುವ ರೀತಿಯಲ್ಲಿ ಸರಿಯಾಗಿ ಮಾಡಿದರೆ ಹೊರಗಡೆಯ ಗೋಡೆಗಳಿಗೂ ಕೂಡ ನಾಲ್ಕು ಇಂಚಿನ ಇಟ್ಟಿಗೆಯನ್ನು ಬಳಸಬಹುದು.

ಕೆಲವು ಸಮಯದಲ್ಲಿ ಒಳಗಿನ ಗೋಡೆಗಳಿಗೆ ಇದನ್ನು ಬಳಸಿದಾಗ ಸಿಳು ಬರುತ್ತದೆ ಬಣ್ಣ ಹಚ್ಚಿರುವುದು ಬೇಗನೆ ಹೋಗುತ್ತದೆ ಈ ರೀತಿಯ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಮಾಡುವ ರೀತಿಯಲ್ಲಿ ಸರಿಯಾಗಿ ಮಾಡಿದರೆ ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಬಹುದು. ಹಾಗಾದರೆ ನಾಲ್ಕು ಇಂಚಿನ ಇಟ್ಟಿಗೆ ಬಳಸಿಕೊಂಡು ಸದೃಢವಾದ ಗೋಡೆಯನ್ನು ಹೀಗೆ ನಿರ್ಮಿಸಬಹುದು ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಮೊದಲನೆಯದಾಗಿ ದುಡ್ಡನ್ನ ಉಳಿಸುವುದಕ್ಕಾಗಿ ಕೆಲವರು ನಾಲ್ಕೂವರೆ ಐದು ರೂಪಾಯಿಯ ಇಟ್ಟಿಗೆಯನ್ನು ಖರೀದಿಸುತ್ತಾರೆ. ಆದರೆ ಅದರ ಬದಲಾಗಿ ಆರರಿಂದ ಏಳು ರೂಪಾಯಿ ಇರುವ ಇಟ್ಟಿಗೆಯನ್ನು ಖರೀದಿ ಮಾಡಬೇಕು ಅಥವಾ ಸಿಮೆಂಟ್ ನಿಂದ ತಯಾರಿಸಿದ ಇಪ್ಪತ್ತೇಳು ಇಪ್ಪತ್ತೆಂಟು ರೂಪಾಯಿಗೆ ದೊರೆಯುವಂತಹ ಉತ್ತಮ ಗುಣಮಟ್ಟದ ಇಟ್ಟಿಗೆ ಖರೀದಿಸುವುದು ತುಂಬಾ ಒಳ್ಳೆಯದು. ಒಂದು ರೂಪಾಯಿ ಹೆಚ್ಚಿಗೆ ಕೊಟ್ಟರು ಒಳ್ಳೆಯ ಗುಣಮಟ್ಟದ ಇಟ್ಟಿಗೆಯನ್ನು ಪಡೆದುಕೊಳ್ಳಬೇಕು. ಇವುಗಳಿಂದ ನೀವು ಸದೃಢವಾದ ಗೋಡೆಗಳನ್ನು ನಿರ್ಮಿಸಬಹುದು.

ಎರಡನೆಯದಾಗಿ ಇಟ್ಟಿಗೆಗಳನ್ನು ಕಟ್ಟುವ ಮೊದಲು ಅವುಗಳನ್ನು ತೇವ ಮಾಡಿಕೊಳ್ಳಬೇಕು. ಅಂದರೆ ಯಾವುದೇ ಇಟ್ಟಿಗೆಗಳನ್ನು ಕಟ್ಟುವ ಮೊದಲು ಅವುಗಳನ್ನು ನೀರಿನಿಂದ ತೇವ ಮಾಡಿಕೊಳ್ಳಬೇಕು. ತೇವ ಮಾಡಿ ಕಟ್ಟುವುದರಿಂದ ಇಟ್ಟಿಗೆಗಳು ಸಿಮೆಂಟ್ ನ ಮೇಲೆ ಸದೃಢವಾಗಿ ಕುಳಿತುಕೊಳ್ಳುತ್ತವೆ. ಅದಕ್ಕೆ ಕ್ಯೂರಿಂಗ್ ಕೂಡ ಕಡಿಮೆ ಸಾಕಾಗುತ್ತದೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಉಂಟಾಗುವುದಿಲ್ಲ. ಒಣ ಇಟ್ಟಿಗೆಗಳನ್ನು ಸಿಮೆಂಟಿನ ಮೇಲೆ ಇಟ್ಟಾಗ ಅದು ಸಿಮೆಂಟ್ ನಲ್ಲಿ ಇರುವಂತಹ ನೀರಿನಂಶವನ್ನು ಹೀರಿಕೊಳ್ಳುತ್ತದೆ ಆಗ ಸಿಮೆಂಟ್ ಗಟ್ಟಿಯಾಗುತ್ತದೆ ಇದರಿಂದ ಗೋಡೆಗಳಲ್ಲಿ ಸೀಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ನೀವು ಸಿಮೆಂಟಿನ ಇಟ್ಟಿಗೆಗಳಾಗಿರಬಹುದು ಅಥವಾ ಮಣ್ಣಿನಿಂದ ನಿರ್ಮಿಸಿದ ಇಟ್ಟಿಗೆಗಳಾಗಿರಬಹುದು ಅವುಗಳನ್ನು ತೇವ ಮಾಡಿ ಕಟ್ಟುವುದು ಒಳ್ಳೆಯದು.

ಕೆಲವು ಜನರು ತುಂಡಾಗಿರುವ ಇಟ್ಟಿಗೆಗಳನ್ನು ಬಳಸುತ್ತಾರೆ ಅಂದರೆ ಇಟ್ಟಿಗೆಗಳನ್ನು ತರಿಸಿ ಅವುಗಳನ್ನು ಕೆಳಗಿಳಿಸುವಾಗ ಕೆಲವೊಂದು ಇಟ್ಟಿಗೆಗಳು ತುಂಡಾಗುತ್ತದೆ ಅವುಗಳನ್ನು ಬಳಸುತ್ತಾರೆ. ಹಾಗೆ ಮಾಡುವುದು ಸರಿಯಲ್ಲ ನಾಲ್ಕು ಇಂಚಿನ ಇಟ್ಟಿಗೆಗಳು ಮೊದಲೇ ದುರ್ಬಲವಾಗಿರುತ್ತವೆ ಹಾಗಾಗಿ ಮಧ್ಯ ಮಧ್ಯೆ ತುಂಡಾಗಿರುವ ಇಟ್ಟಿಗೆಗಳನ್ನು ಬಳಸುವುದು ಒಳ್ಳೆಯದಲ್ಲ. ಒಂದು ವೇಳೆ ಸಿಮೆಂಟಿನ ಇಟ್ಟಿಗೆಗಳಲ್ಲಿ ಬಳಸಬಹುದು ಆದರೆ ಮಣ್ಣಿನ ಇಟ್ಟಿಗೆಗಳಲ್ಲಿ ಅವುಗಳನ್ನು ಬಳಸಬಾರದು. ಇದರಿಂದ ಗೋಡೆ ದುರ್ಬಲವಾಗುತ್ತದೆ. ಮುಂದಿನ ದಾಗಿ ಮಣ್ಣಿನ ಇಟ್ಟಿಗೆಗಳನ್ನು ಬಳಸುವ ಸಮಯದಲ್ಲಿ ಸಿಮೆಂಟ್ ಮಿಶ್ರಣವನ್ನು ಒಂದು ಇಂಟು ನಾಲ್ಕರ ರೇಶಿಯೋದಲ್ಲಿ ಅಥವಾ ಒಂದು ಇಂಟು ಮೂರರ ಅನುಪಾತದಲ್ಲಿ ಸಿಮೆಂಟ್ ಮತ್ತು ಮರಳನ್ನು ತೆಗೆದುಕೊಳ್ಳಬೇಕು. ಇದರಿಂದ ಉತ್ತಮವಾದ ಗೋಡೆಯಿಂದ ನಿರ್ಮಿಸಬಹುದು.

ನಾಲ್ಕು ಇಂಚಿನ ಇಟ್ಟಿಗೆಯನ್ನ ಬಳಸಿಕೊಂಡು ಗೋಡೆಯನ್ನು ನಿರ್ಮಿಸುವ ಸಮಯದಲ್ಲಿ ತಯಾರಿಸಿಕೊಳ್ಳುವ ಸಿಮೆಂಟ್ ಮಿಶ್ರಣವನ್ನು ಅರ್ಧಗಂಟೆಯೊಳಗೆ ಕಾಲಿ ಮಾಡಬೇಕು ಯಾಕೆಂದರೆ ಸಿಮೆಂಟ್ ಗಟ್ಟಿಯಾಗುತ್ತದೆ ಹಾಗಾಗಿ ನೀವು ಮನೆ ಕಟ್ಟುವ ಸಮಯದಲ್ಲಿ ನಿಮ್ಮ ಮೇಸ್ತ್ರಿ ಅವರಿಗೆ ಅರ್ಧ ತಾಸಿಗೆ ಎಷ್ಟು ಬೇಕು ಅಷ್ಟು ಸಿಮೆಂಟನ್ನು ಮಿಶ್ರಣ ಮಾಡಿಕೊಳ್ಳುವಂತೆ ತಿಳಿಸಬೇಕು. ನಾಲ್ಕು ಇಂಚಿನ ಇಟ್ಟಂಗಿಯನ್ನು ಸರಿಯಾಗಿ ಜಿಗ್ ಜಾಗ್ ಮಾದರಿಯಲ್ಲಿ ಕಟ್ಟಬೇಕು. ನಾಲ್ಕು ಇಂಚಿನ ಇಟ್ಟಿಗೆಗಳ ಮೇಲೆ ಮಾರ್ಕಿಂಗ್ ಇರುತ್ತದೆ ಇಟ್ಟಿಗೆಯನ್ನು ಕಟ್ಟುವ ಸಮಯದಲ್ಲಿ ಮಾರ್ಕಿಂಗ್ ಮೇಲುಗಡೆ ಬರುವಂತೆ ನೋಡಿಕೊಳ್ಳಬೇಕು ಇದರಿಂದಾಗಿ ಬೊಂಡಿಂಗ್ ಸರಿಯಾಗಿ ಬರುತ್ತದೆ. ಹಾಗೂ ಗೋಡೆ ಕೂಡ ಸದೃಢವಾಗಿರುತ್ತದೆ.

ನಾಲ್ಕು ಇಂಚಿನ ಇಟ್ಟಿಗೆಗಳಿಂದ ಗೋಡೆಯನ್ನು ನಿರ್ಮಿಸುವಾಗ ಬಹಳ ಮುಖ್ಯವಾಗಿ ಒಂದು ದಿನಕ್ಕೆ ಮೂರು ಅಡಿ ಒಂದು ಮೀಟರ್ ನವರೆಗೆ ಮಾತ್ರ ಕಟ್ಟಬೇಕು. ಅದರಮೇಲೆ ಒಂದು ಲೇಯರ್ ಕಾಂಕ್ರೀಟನ್ನು ಹಾಕಲೇಬೇಕು ನಂತರ ಮರುದಿನ ಕೆಲಸವನ್ನು ಮುಂದುವರಿಸಬೇಕು ಈ ರೀತಿಯಾಗಿ ನಿರ್ಮಿಸುವುದರಿಂದ ನಾಲ್ಕು ಇಂಚಿನ ಇಟ್ಟಿಗೆಗಳಿಂದ ಸುಂದರವಾದ ಗೋಡೆಯನ್ನು ನಿರ್ಮಿಸಿಕೊಳ್ಳಬಹುದು. ಜೊತೆಗೆ ನಾಲ್ಕು ಇಂಚಿನ ಇಟ್ಟಿಗೆ ಬಳಸಿ ಕಟ್ಟುವ ಗೋಡೆಗಳಿಗೆ ಏಳರಿಂದ ಹತ್ತು ದಿನಗಳವರೆಗೆ ಕ್ಯೂರಿಂಗ್ ಮಾಡಲೇಬೇಕು ಬಿಸಿಲು ಹೆಚ್ಚಿದ್ದಾಗ ದಿನದಲ್ಲಿ ಎರಡರಿಂದ ಮೂರು ಸಾರಿ ಕ್ಯೂರಿಂಗ್ ಮಾಡಲೇಬೇಕು.

ಬಾಗಿಲು ಮತ್ತು ಕಿಟಕಿಗಳನ್ನು ಇಟ್ಟಿಗೆಯನ್ನು ಕಟ್ಟುವ ಸಮಯದಲ್ಲಿಯೇ ನಿಲ್ಲಿಸುವುದು ಒಳ್ಳೆಯದು. ಜೊತೆಗೆ ಎರಡು ಗೋಡೆಗಳನ್ನು ಸೇರಿಸುವ ಸಮಯದಲ್ಲಿ ಟುತಿಂಗ್ ಅಂದರೆ ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳುವ ಹಾಗೆ ಮಾಡುವುದನ್ನು ಮರೆಯಬಾರದು. ಈ ರೀತಿಯಾಗಿ ಮನೆಯನ್ನು ನಿರ್ಮಿಸುವುದರಿಂದ ನೀವು ನಾಲ್ಕು ಇಂಚಿನ ಇಟ್ಟಿಗೆಗಳನ್ನು ಬಳಸಿಕೊಂಡು ಸದೃಢವಾದ ಗೋಡೆಯನ್ನು ನಿರ್ಮಿಸಿ ಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.