ಸಾಮಾನ್ಯವಾಗಿ ರೈತರು ಬೆಳೆಗಳನ್ನು ಬೆಳೆಯುವುದಕ್ಕೆ ಎದುರಿಸುವ ಸಮಸ್ಯೆಗಳಲ್ಲಿ ನೀರಿನ ಸಮಸ್ಯೆ ಬಹಳ ಮುಖ್ಯವಾದುದು. ಅನೇಕ ಜನ ರೈತರು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಅನೇಕ ಜನರ ಬೋರ್ ವೆಲ್ ಗಳನ್ನು ತೆಗೆದಿರುತ್ತಾರೆ ಆದರೆ ಅವುಗಳು ಯಶಸ್ವಿಯಾಗುವುದಿಲ್ಲ ಆಗ ನಷ್ಟವನ್ನು ಅನುಭವಿಸಿರುತ್ತಾರೆ. ಹಾಗಾಗಿ ನಾವಿಂದು ನಿಮಗೆ ಗುಲ್ಬರ್ಗದ ಮೆಹತಾಬ್ ಪುದುಚೇರಿ ಎನ್ನುವವರು ಜರ್ಮನಿ ತಂತ್ರಜ್ಞಾನವನ್ನು ಬಳಸಿಕೊಂಡು ಜಮೀನಿನಲ್ಲಿ ನೀರು ಎಲ್ಲಿದೆ ಎಂಬುದನ್ನು ಹೇಗೆ ಗುರುತಿಸಿಕೊಡುತ್ತಾರೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ರೈತರು ಹೊಲಗದ್ದೆಗಳಿಗೆ ನೀರಿನ ಸೌಲಭ್ಯವನ್ನು ಒದಗಿಸುವ ಸಲುವಾಗಿ ತಮ್ಮ ಜಮೀನಿನಲ್ಲಿ ಬೋರ್ ವೆಲ್ ಗಳನ್ನು ತೆಗೆಯುತ್ತಾರೆ ಆದರೆ ಕೆಲವೊಮ್ಮೆ ಅವುಗಳಲ್ಲಿ ನೀರು ಬರುವುದಿಲ್ಲ ಐವತ್ತರಿಂದ ಅರವತ್ತು ಸಾವಿರ ನಷ್ಟ ಉಂಟಾಗುತ್ತದೆ. ಯಾವುದೇ ಕೃಷಿಯನ್ನು ಮಾಡಬೇಕು ಎಂದರೆ ಅಲ್ಲಿ ನೀರು ಬಹಳ ಮುಖ್ಯವಾಗಿ ಬೇಕೇ ಬೇಕು. ಹಾಗಾಗಿ ಸರಿಯಾಗಿ ನೀರು ಯಾವ ಸ್ಥಳದಲ್ಲಿ ಬರುತ್ತದೆ ಎಂಬುದನ್ನು ತಿಳಿದುಕೊಳ್ಳುದಕ್ಕೆ ಜರ್ಮನಿಯ ತಂತ್ರಜ್ಞಾನ ಪೂರಕವಾಗಿದೆ.

ಮೇಹತಾಬ್ ಅವರು ಈ ಯಂತ್ರವನ್ನು ಬಳಸಿಕೊಂಡು ಅನೇಕ ಜನರಿಗೆ ನೀರಿನ ಇರುವಿಕೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಇವರು ಕಳೆದ ನಾಲ್ಕು ವರ್ಷಗಳಿಂದ ನೀರಿನ ಇರುವಿಕೆಯನ್ನು ಜನರಿಗೆ ತೋರಿಸಿಕೊಡುತ್ತಾ ಬಂದಿದ್ದಾರೆ. ಅನೇಕ ಜನರು ಇವರ ಮಾರ್ಗದರ್ಶನದ ಮೇರೆಗೆ ನೀರಿನ ಇರುವಿಕೆಯನ್ನು ಖಚಿತಪಡಿಸಿಕೊಂಡು ಬೋರ್ವೆಲ್ ಗಳನ್ನ ತೆಗೆದುಕೊಂಡಿದ್ದಾರೆ.

ಇವರು ನಿಮ್ಮ ಜಮೀನಿನಲ್ಲಿ ಎಲ್ಲಿಯೇ ನೀರಿನ ಪಾಯಿಂಟ್ ಇದ್ದರೂ ಅದನ್ನು ಯಂತ್ರದ ಮೂಲಕ ಗುರುತಿಸಿ ಕೊಡುತ್ತಾರೆ. ಕೆಲವರು ತೆಂಗಿನಕಾಯಿಯನ್ನು ತೆಗೆದುಕೊಂಡು ನೀರಿರುವ ಮೂಲವನ್ನು ಹುಡುಕುತ್ತಾರೆ ಕೆಲವೊಮ್ಮೆ ಅದು ಯಶಸ್ವಿಯಾಗುವುದಿಲ್ಲ. ಇವರು ತಮ್ಮ ಯಂತ್ರದ ಜೊತೆಗೆ ಪೆಂಡಲಮ್ ತೆಂಗಿನಕಾಯಿ ಮುಂತಾದ ಕ್ರಮಗಳನ್ನು ಬಳಸಿ ನೀರಿನ ಇರುವಿಕೆಯನ್ನು ಪತ್ತೆ ಹಚ್ಚುತ್ತಾರೆ. ಕೇವಲ ಯಂತ್ರದಿಂದ ಮಾತ್ರವಲ್ಲದೆ ಅದರ ಜೊತೆಗೆ ಐದಾರು ವಿಧಾನಗಳ ಮೂಲಕ ನೀರು ಇರುವಿಕೆಯನ್ನು ಪತ್ತೆ ಹಚ್ಚುತ್ತಾರೆ. ಯಂತ್ರದಲ್ಲಿ ನೀರು ಯಾವ ಪ್ರದೇಶದಲ್ಲಿ ಇದೆ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಮೊದಲಿಗೆ ಯಂತ್ರವು ನೀರು ಯಾವ ಸ್ಥಳದಲ್ಲಿದೆ ಎಂಬುದರ ಮಾರ್ಗದರ್ಶನವನ್ನು ನೀಡುತ್ತದೆ ನಂತರ ನೀರು ಇರುವ ಸ್ಥಳದಲ್ಲಿ ಯಂತ್ರ ತಿರುಗುತ್ತದೆ.

ಯಂತ್ರ ತಿರುಗಿದ ಪಾಯಿಂಟ್ನಲ್ಲಿ ಇವರು ಎಲ್ ರಾಡ್ ತೆಂಗಿನಕಾಯಿ ಮತ್ತು ಪೆಂಡುಲಂ ಗಳನ್ನ ಬಳಸಿ ನೀರು ಇರುವಿಕೆಯನ್ನು ಖಚಿತಪಡಿಸಿಕೊಳ್ಳುತ್ತಾರೆ. ನಂತರ ಆ ಸ್ಥಳದಲ್ಲಿ ಬೋರ್ವೆಲ್ ಪಾಯಿಂಟ್ ಗಳನ್ನು ಮಾಡಿಕೊಡುತ್ತಾರೆ ಆ ಸ್ಥಳದಲ್ಲಿ ಬೋರ್ ವೆಲ್ ಗಳನ್ನು ತೆಗೆಸುವುದರಿಂದ ಯಶಸ್ವಿಯಾಗಿ ನೀರನ್ನ ಪಡೆಯಬಹುದು. ಈಗಾಗಲೇ ಅನೇಕ ಜನರು ಇವರನ್ನು ಕರೆಸಿಕೊಂಡು ಬೋರ್ವೆಲ್ ಪಾಯಿಂಟ್ ಗಳನ್ನು ಗುರುತಿಸಿಕೊಂಡು ಬೋರ್ ವೆಲ್ ಗಳನ್ನು ತೆಗೆಸಿ ನೀರನ್ನ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಇವರು ಕರ್ನಾಟಕದ ಯಾವುದೇ ಜಿಲ್ಲೆಯವರು ಕರೆ ಮಾಡಿ ಜಲ ಕಂಡುಹಿಡಿಯುವುದಕ್ಕೆ ಕೇಳಿಕೊಂಡರೆ ಅಲ್ಲಿಗೆ ಹೋಗಿ ನೀರು ಇರುವ ಸ್ಥಳವನ್ನು ಗುರುತಿಸಿ ಕೊಟ್ಟು ಬರುತ್ತಾರೆ ಅದಕ್ಕೆ ಅವರು ಚಾರ್ಜನ್ನು ಕೂಡ ತೆಗೆದುಕೊಳ್ಳುತ್ತಾರೆ. ನೀವು ಕೂಡ ನಿಮ್ಮ ಹೊಲ-ಗದ್ದೆಗಳಲ್ಲಿ ಬೋರ್ವೆಲ್ ಗಳನ್ನ ತೆಗೆಸುವುದಿದ್ದರೆ ಮೊದಲು ನೀರಿನ ಮೂಲವನ್ನು ಸರಿಯಾಗಿ ಗುರುತಿಸಿಕೊಂಡು ಬೋರ್ವೆಲ್ ಗಳನ್ನು ತೆಗೆಸುವುದು ಒಳ್ಳೆಯದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.

ರೈತರಿಗೆ ತಮ್ಮ ಜಮೀನಿನಲ್ಲಿ ಜರ್ಮನಿಯ ತಂತ್ರಜ್ಞಾನದ ಮೂಲಕ ಬೋರ್ವೆಲ್ ಪಾಯಿಂಟ್ ಕರ್ನಾಟಕದಲ್ಲಿ ಯಾವುದೇ ಜಿಲ್ಲೆಯಲ್ಲಿದ್ದರೂ ತೋರಿಸಲಾಗುವುದು ಸಂಪರ್ಕಿಸಿ
ಮೆಹತಾಬ್ 8217695988

Leave a Reply

Your email address will not be published. Required fields are marked *