ಸಾಮಾನ್ಯವಾಗಿ ನೆಲ್ಲಿಕಾಯಿ ಅಂದ್ರೆ ಎಲ್ಲರಿಗೂ ಕೂಡ ಗೊತ್ತಿರುವಂತದ್ದು, ಈ ನೆಲ್ಲಿಕಾಯಿ ಯಾವೆಲ್ಲ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತೆ ಅನ್ನೋದನ್ನ ಈ ಮೂಲಕ ತಿಳಿಯುವುದಾದರೆ, ತಲೆಸುತ್ತು ಸಮಸ್ಯೆಗೆ ನೆಲ್ಲಿಕಾಯಿ ಉಪಯೋಗಕಾರಿ, ಹೌದು ನಿಶ್ಯಕ್ತಿಯಿಂದ ಕೆಲವೊಮ್ಮೆ ತಲೆಸುತ್ತು ಬರುತ್ತಿರುತ್ತಿದ್ದರೆ ನೆಲ್ಲಿಕಾಯಿ ಹಾಗು ದನಿಯ ಪುಡಿಮಾಡಿ ಸಮ ಭಾಗದಲ್ಲಿ ಮಿಶ್ರಣಮಾಡಿ ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಚನ್ನಾಗಿ ಬೆರೆಸಿ ಶೋಧಿಸಿ ಸಕ್ಕರೆ ಸೇರಿಸಿ ಕುಡಿದರೆ ತಲೆ ಸುತ್ತು ನಿವಾರಣೆಯಾಗುತ್ತದೆ.
ಇನ್ನು ರಕ್ತಸ್ರಾವ ಸಮಸ್ಯೆಗೆ ಬಲಿತ ನೆಲ್ಲಿಕಾಯಿ ಚೂರ್ಣವನ್ನು ಬಿಸಿನೀರಿನಲ್ಲಿ ಚನ್ನಾಗಿ ಕಿವುಚಿ ಅದಕ್ಕೆ ಸಕ್ಕರೆ ಸೇರಿಸಿ ಶೋಧಿಸಿದ ನಂತರ ಸೇವಿಸಿದರೆ ಗುದದ್ವಾರದಿಂದ ರಕ್ತ ಹೊರ ಬರುವ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ. ಅಷ್ಟೇ ಅಲ್ದೆ ಸ್ತ್ರೀಯರಲ್ಲಿ ಅತಿಯಾಗಿ ರಕ್ತ ಸ್ರಾವವಾಗುತ್ತಿದ್ದರೆ ನೆಲ್ಲಿಕಾಯಿ ರಸ ಹಾಗು ಕಲ್ಲುಸಕ್ಕರೆ ಬೆರಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಶಮನವಾಗುತ್ತದೆ.
ಎದೆ ಉರಿ ಸಮಸ್ಯೆಗೆ ನೆಲ್ಲಿಕಾಯಿ: ನೆಲ್ಲಿಕಾಯಿಯ ರಸಕ್ಕೆ ಜೀರಿಗೆ ಪುಡಿ ಸೇರಿಸಿ ಕುಡಿದರೆ ಪರಿಣಾಮಕಾರಿ. ಮಧುಮೇಹಿಗಳಿಗೆ ನೆಲ್ಲಿಕಾಯಿ ಹೇಗೆ ಸಹಕಾರಿ ಅನ್ನೋದನ್ನ ನೋಡುವುದಾದರೆ ನೆಲ್ಲಿಕಾಯಿಯನ್ನು ಹೆಚ್ಚಾಗಿ ಉಪಯೋಗಿಸಿದರೆ ದೋಷ ನಿವಾರಣೆಯಾಗುವುದು. ನೆಲ್ಲಿಕಾಯಿ ರಸಕ್ಕೆ ತೆಂಗಿನ ಎಣ್ಣೆ ಬೆರಸಿ ಕೂದಲಿಗೆ ಹಚ್ಚಿಕೊಂಡರೆ ನೆರೆತ ಕಡಿಮೆಯಾಗುತ್ತದೆ.
ಹೆಚ್ಚಿನದಾಗಿ ಬೆವರು ಬರುವ ಸಮಸ್ಯೆ ಇದ್ರೆ ನೆಲ್ಲಿಕಾಯಿಯನ್ನು ಜಜ್ಜಿ ರಸ ತಗೆದು ಅದನ್ನು ದಿನ ನಿತ್ಯ ಅಮಗಳು ಅಂಗೈಗಳಿಗೆ ಲೇಪಿಸುವುದರಿಂದ ಬೆವರು ನಿಲ್ಲುತ್ತದೆ. ಇನ್ನು ಹೊಟ್ಟೆ ಹುಣ್ಣು ಸಮಸ್ಯೆಗೆ ನೆಲ್ಲಿಕಾಯಿ ಮದ್ದು ಹೌದು ಸಕ್ಕರೆಯೊಂದಿಗೆ ನೆಲ್ಲಿಕಾಯಿ ರಸವನ್ನು ಬೆರಸಿ ಕುಡಿಯುವುದರಿಂದ ಹೊಟ್ಟೆನೋವು ನಿವಾರಣೆಯಾಗುವುದು. ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ.