ತೊಡೆಗಳ ಸಂಧಿಯ ಗಜಕರ್ಣ ಸಮಸ್ಯೆಗೆ ಇಲ್ಲಿದೆ ಮನೆಯದ್ದು

0 37

ಸಾಮಾನ್ಯವಾಗಿ ದೇಹದ ಉಷ್ಣತೆ ಹೆಚ್ಚಾಗಿ ತೊಡೆಗಳ ಸಂಧಿಯಲ್ಲಿ ಗಜ ಕರ್ಣಗಳಾಗುತ್ತವೆ. ಬೇವರು ಯಾವಾಗಲೂ ನಿಲ್ಲುವಂತ ಜಾಗ ಸ್ವಚ್ಛ ತೆಯ ಕೊರತೆ, ಗಾಳಿಯೇ ಆಡದಂತಹ ಒಳ ಉಡುಪುಗಳನ್ನು ಧರಿಸುವುದು. ಹೆಚ್ಚುಕಾಲ ಕುಳಿತಲ್ಲಿಯೇ ಕೆಲಸ ಮಾಡುವಂತದ್ದು ಗಜಕರ್ಣಕ್ಕೆ ಮುಖ್ಯ ಕಾರಣವಾಗಿರುತ್ತದೆ.ಎಲ್ಲಿ ಹೆಚ್ಚು ಬೆವರು ಇರುತ್ತದೆ ಅಲ್ಲಿ ಫಂಗಸ್ ಗಳಾಗುತ್ತದೆ.ಅಲ್ಲದೆ ಬ್ಯಾಕ್ಟೀರಿಯಾಗಳು ಉಂಟಾಗುತ್ತವೆ.

ಇನ್ನು ಈ ಗಜಕರ್ಣದ ಲಕ್ಷಣಗಳನ್ನ ನೋಡುವುದಾದರೆ ವಿಪರೀತ ಕಡಿತ, ನೆವೆ, ಉರಿಯುವ ಅನುಭವವಾಗುತ್ತದೆ.ಇದರಿಂದ ಸಾಕಷ್ಟು ಸಮಸ್ಯೆಗಳನ್ನ ಅನುಭವಿಸಿದಲ್ಲಿ ಈ ಮನೆಮದ್ದು ಬಳಸಿ.
ಗಜಕರ್ಣಕ್ಕೆ ಬೇವಿನ ಸೊಪ್ಪಿನ ಸ್ವರಸವನ್ನು ಬೆಳಗ್ಗೆ ಮತ್ತು ಸಂಜೆ ಆಜಾಗಕ್ಕೆ ಹಚ್ಚುವುದರಿಂದ ಗಜಕರ್ಣ ಮಾಯವಾಗುತ್ತದೆ. ಹಾಗಿದ್ರೆ ಈ ಬೇವಿನ ಸ್ವರಸವನ್ನು ಮಾಡುವುದಾದರೂ ಹೇಗೆ ಅಂತೀರಾ ಇಲ್ಲಿದೆ ಮಾಡುವ ವಿಧಾನ.

ಒಂದು ಮುಷ್ಟಿ ಬೇವಿನ ಸೊಪ್ಪನ್ನು ಕುಟ್ಟಣಿಯಲ್ಲಿ ಕುಟ್ಟಿ ಅದರ ರಸವನ್ನು ಗಜಕರ್ಣದ ಜಾಗಕ್ಕೆ ಹಚ್ಚಿ, ಇದಲ್ಲದೆ ಒಂದು ಲೋಟ ನೀರಿಗೆ ಎರಡು ಚಮಚ ಹರಿಶಿಣ ಪುಡಿ ಹಾಕಿ ಕುದಿಸಿ ಇದಕ್ಕೆ ಹಾಲು ಬೆರಸಿ. ಈ ಕಶಾಯದಲ್ಲಿ ಕಾಟನ್ ಬಟ್ಟೆ ಎದ್ದಿ ಗಜಕರ್ಣದ ಜಾಗಕ್ಕೆ ಹಚ್ಚಿ ತೊಳೆದುಕೊಳ್ಳಬೇಕು.ಇವೆರಡು ಮನೆ ಮದ್ದನ್ನು ಮಾಡಲಾಗದಿದ್ದಲ್ಲಿ ಆರ್ಯುವೇದಿಕ್ ವೈದ್ಯರನ್ನ ಸಂಪರ್ಕಿಸಿ

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಗಂಡ ,ಹೆಂಡತಿಯರಲ್ಲಿ ಈ ಗಜಕರ್ಣ ಸಮಸ್ಯೆ ಇದ್ದರೆ ಬೇಗನೆ ವಾಸಿ ಮಾಡಿಕೊಳ್ಳಬೇಕು ಇಲ್ಲವಾದರೆ ನಿಮ್ಮ ಮಕ್ಕಳಿಗೂ ಹರಡುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗೆ ಆರ್ಯುವೇದದಲ್ಲಿ ಉತ್ತಮ ಚಿಕಿತ್ಸೆ ಲಭ್ಯವಿದೆ.

Leave A Reply

Your email address will not be published.