ಮನೆಯಲ್ಲೇ ನಿಮ್ ಸೋಪ್ ಮಾಡಿ ಅತಿ ಸುಲಭ ಹಾಗೂ ಆರೋಗ್ಯಕರ

0 10

ಇತ್ತೀಚೆಗೆ ತರುವ ಎಲ್ಲಾ ಸೋಪ್ ಗಳಲ್ಲಿ ಕೆಮಿಕಲ್ ಇರುವುದು ಹೆಚ್ಚಾಗಿದೆ ಅದರ ಜೊತೆಗೆ ಬೆಲೆಯು ಕೂಡ ಹೆಚ್ಚಾಗಿದೆ. ಈಗಂತೂ ಕರೋನಾ ವೈರಸ್ ಕಾರಣದಿಂದ ದಿನಕ್ಕೆ ತುಂಬಾ ಸಲ ಕೈ ತೊಳೆಯುವುದು ಅನಿವಾರ್ಯವಾಗಿದೆ. ಹಾಗೆಯೇ ಸೋಪುಗಳಿಂದ ಆರೋಗ್ಯ ಸಮಸ್ಯೆಗೆ ಗುರಿಯಾಗುವುದು ಇದೆ. ಹಾಗಾಗಿ ಯಾವುದೇ ಅಡ್ಡ ಪರಿಣಾಮ ಇಲ್ಲದೆಯೇ ಮನೆಯಲ್ಲಿಯೆ ನೀಮ್ ಸೋಪು ತಯಾರಿಸುವ ವಿಧಾನವನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಒಂದು ಸೋಪನ್ನು ನಾವು ಮುಖ ಹಾಗೂ ಕೈ ತೊಳೆಯುವಾಗ ಮತ್ತು ಸ್ನಾನಕ್ಕೆ ಎಲ್ಲಾ ಸಮಯದಲ್ಲೂ ಬಳಸಬಹುದು. ಈ ಸೋಪ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಎನು ಅಂತಾ ನೋಡುವುದಾದರೆ ಒಂದು ಕಟ್ಟು ಬೇವಿನ ಸೊಪ್ಪು, ವಿಟಮಿನ್ ಇ ಮಾತ್ರೆಗಳು, ಅರಿಶಿನ ಒಂದು ಚಮಚ, ಗ್ಲೀಸರಿನ್ ಅಂಶ ಹೊಂದಿರುವ ಯಾವುದಾದರೂ ಒಂದು ಸೋಪ್ ಇವಿಷ್ಟು ಬೇಕಾಗಿರುವ ಸಾಮಗ್ರಿಗಳು. ಇನ್ನು ಈ ನೀಮ್ ಸೋಪ್ ಮಾಡುವ ವಿಧಾನ ಹೇಗೆ ಅಂತಾ ನೋಡೋಣ. ಒಂದು ಮಿಕ್ಸಿ ಜಾರಿಗೆ ಒಂದು ಕಟ್ಟು ಆಗುವಷ್ಟು ಬೇವಿನ ಸೊಪ್ಪನ್ನು ಹಾಕಿ, ನೀರು ಹಾಕಿ ರುಬ್ಬಿಕೊಳ್ಳಬೇಕು. ಒಣಗಿದ ಎಲೆಯ ಪುಡಿಮಾಡಿಯು ಬಳಸಬಹುದು ಆದರೆ ಹಸಿಯಾದ ಸೊಪ್ಪನ್ನು ಬಳಸುವುದರಿಂದ ಉತ್ತಮ ಉಪಯೋಗ ದೊರಕುತ್ತದೆ. ರುಬ್ಬಿದ ಬೇವಿನ ಎಲೆಯನ್ನು ಸೋಸಿಕೊಳ್ಳಬೇಕು ಹಾಗೆಯೆ ಅದಕ್ಕೆ ಒಂದು ಚಮಚ ಅರಿಶಿನ ಹಾಕಬೇಕು. ಅರಿಶಿನವೂ ಮುಖದ ಕಾಂತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಬೆವರಿನಿಂದ ಉಂಟಾದ ಕೀಟಾಣುಗಳ ನಾಶ ಮಾಡುವಲ್ಲಿ ಅರಿಶಿನ ಸಹಾಯ ಮಾಡುತ್ತದೆ. ವಿಟಮಿನ್ ಇ ಮಾತ್ರೆಯು ಮುಖವನ್ನು ನುಣುಪಾಗಿ ಇರಲು, ಕಾಂತಿಯುತವಾಗಿರಲು ಸಹಯ ಮಾಡುತ್ತದೆ. ನಂತರದಲ್ಲಿ ಗ್ಲಿಸರಿನ್ ಪ್ರಮಾಣ ಹೆಚ್ಚಾಗಿ ಇರುವ ಯಾವ ಸೋಪನ್ನೂ ಬಳಸಬಹುದು. ಇಲ್ಲ ಸೋಪ್ ಬೆಸ್ ಗಳನ್ನು ಬಳಸಬಹುದು. ಉದಾಹರಣೆಗೆ ಪಿಯರ್ಸ್ ಸೋಪ್ ನೂರು ಗ್ರಾಂ ಪಿಯರ್ಸ್ ಸೋಪ್ ಬಳಸಿದರೆ ನೂರು ಗ್ರಾಂ ಸೋಪ್ ಬೇಸ್ ಬಳಸಬಹುದು.

ನಂತರ ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು, ಅದು ಕುದಿಯುವಾಗ ಆ ನೀರಿನಲ್ಲಿ ಮತ್ತೊಂದು ಪಾತ್ರೆಯಿಟ್ಟು ಅದರಲ್ಲಿ ಸಣ್ಣಗೆ ಕತ್ತರಿಸಿದ ಸೋಪ್ ಪೀಸ್ ಹಾಕಬೇಕು. ಸೋಪ್ ಅನ್ನು ಸಣ್ಣ ಪೀಸ್ ಮಾಡಿಕೊಳ್ಳಬೇಕು ಇಲ್ಲವೇ ತುರಿದುಕೊಳ್ಳಬೇಕು. ಪಾತ್ರೆಯೊಳಗಿನ ಸೋಪ್ ಚೆನ್ನಾಗಿ ನೀರಾದ ಮೇಲೆ ರುಬ್ಬಿ ಇಟ್ಟಿದ್ದ ಬೇವಿನ ಎಲೆ ಮಿಶ್ರಣವನ್ನು ಅದರಲ್ಲಿ ಹಾಕಿ, ಒಂದು ನಿಮಿಷಗಳ ಕಾಲ ಕುದಿಸಬೇಕು. ಇಷ್ಟಾದ ಮೇಲೆ ಸೋಪ್ ಮಾಡಲು ಯಾವುದೆ ತರಹದ ಪ್ಲಾಸ್ಟಿಕ್ ಇಲ್ಲವೇ ಸ್ಟೀಲ್ ಮುಚ್ಚಳ, ಕರಡಿಗೆ, ಕಪ್ ಯಾವೂದಾರೂ ತೆಗೆದುಕೊಳ್ಳಬಹುದು. ನಂತರ ತೆಗೆದುಕೊಂಡ ಕಪ್ ನಲ್ಲಿ ಕೊಬ್ಬರಿ ಎಣ್ಣೆ ಅಥವಾ ಯಾವುದೇ ಎಣ್ಣೆಯನ್ನೂ ಸವರಬೇಕು. ಹೀಗೆ ಮಾಡುವುದುದರಿಂದ ಸೋಪ್ ಪಾತ್ರೆಗಳಿಗೆ ಅಂಟುವುದಿಲ್ಲ. ನಂತರ ಇದನ್ನು ಪ್ರಿಡ್ಜ್ ನಲ್ಲಿ ಅರ್ಧ ಗಂಟೆ ಇಡಬೇಕು. ಆಗ ಇದು ಸೋಪಿನ ಆಕಾರ ಸರಿಯಾಗಿ ತೆಗೆದುಕೊಳ್ಳುತ್ತದೆ. ಪ್ರಿಡ್ಜ್ ಇಲ್ಲದೆ ಹೋದಲ್ಲಿ ಒಂದು ದಿನ ತೆಗೆದುಕೊಳ್ಳುತ್ತದೆ. ನಂತರ ಚಾಕುವಿನಿಂದ ಅಂಚಿನಲ್ಲಿ ಬಿಡಿಸಿದರೆ ಸೋಪ್ ತಾನಾಗಿಯೆ ಬೇಗ ಬಿಡಿಸಿಕೊಳ್ಳುತ್ತದೆ. ಈ ಸೋಪ್ ಗಳನ್ನು ಒಂದು ವರ್ಷದ ಮೇಲಿನ ಮಕ್ಕಳಿಗೂ ಬಳಸಬಹುದು. ಇದನ್ನು ಬಳಕೆ ಮಾಡುವುದರಿಂದಾಗ್ ನೈಸರ್ಗಿಕವಾಗಿ ದೇಹಕ್ಕೆ ಸತ್ವ ನೀಡುತ್ತದೇ ಹಾಗೂ ಇದರಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ‌.

Leave A Reply

Your email address will not be published.