ನಮ್ಮ ದೇಹದ ಆರೋಗ್ಯಕ್ಕೆ ಹಲವಾರು ಲಾಭಗಳನ್ನು ತಂದುಕೊಡುವಂತಹ ಕಹಿಬೇವಿನ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಎಲ್ಲಾ ಕಡೆ ಸಿಗುವಂತಹ ಕಹಿಬೇವು ನಾವು ಇದರಿಂದ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು. ಮೊದಲಿಗೆ ಕಹಿಬೇವಿನಲ್ಲಿ ಇರುವಂತಹ ಒಂದೇ ಒಂದು ಮೈನಸ್ ಪಾಯಿಂಟ್ ಏನಪ್ಪಾ ಅಂದರೆ ಇದನ್ನು ಅತಿಯಾಗಿ ಉಪಯೋಗ ಮಾಡುವುದರಿಂದ ಗಂಡಸರಲ್ಲಿ ವೀರ್ಯಾಣುವನ್ನು ನಾಶಮಾಡುತ್ತದೆ. ಹಾಗಾಗಿ ಇನ್ನು ಮಕ್ಕಳು ಆಗದೇ ಇರುವಂತಹ ಪುರುಷರು ಕಹಿಬೇವುನ್ನು ಜಾಸ್ತಿ ಸೇವಿಸಬಾರದು. ಆದರೆ ದೇಹದ ಯಾವುದೇ ಭಾಗಕ್ಕೂ ಕಹಿ ಬೇವನ್ನು ಲೇಪಿಸುವುದು ತೊಂದರೆ ಇಲ್ಲ. ಯಾವುದೇ ರೀತಿಯ ಚರ್ಮರೋಗಕ್ಕೆ ಕೈ ಬೇವಿನ ಎಣ್ಣೆಯನ್ನು ಮೈಯಿಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ತುರಿಕೆ ಮುಂತಾದ ಚರ್ಮ ರೋಗಗಳು ಕಡಿಮೆಯಾಗುತ್ತದೆ. ಆಂಟಿ ವೈರಲ್ ಗುಣ ಹೊಂದಿರುವಂತಹ ಕಹಿಬೇವು ವೈರಸ್ಗಳ ವಿರುದ್ಧ ಹೋರಾಡಲು ಸಹ ಸಹಾಯಕಾರಿಯಾಗಿದೆ. ಪ್ರತಿದಿನ ಅರ್ಧ ಚಮಚ ಕಹಿಬೇವಿನ ರಸವನ್ನು ಕುಡಿಯುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ವೈಜ್ಞಾನಿಕವಾಗಿ ಕಹಿಬೇವಿನ ಬಗ್ಗೆ ಯಾವ ರೀತಿಯ ಉಲ್ಲೇಖವಿದೆ ಎಂಬುವುದರ ಬಗ್ಗೆ ನೋಡೋಣ. In Vivo ಎಂಬ ವೈಜ್ಞಾನಿಕ ಬರಹದ ಪ್ರಕಾರ, enhancement of immune response to neem leaf extract ಇದರಲ್ಲಿ ಬೇವಿನ ಎಲೆ ಉಪಯೋಗಗಳ ಬಗ್ಗೆ ಒಂದೊಂದಾಗಿ ಪಟ್ಟಿಮಾಡುತ್ತ ವಿವರಿಸಲಾಗಿದೆ ಅದನ್ನು ನಾವು ನೋಡೋಣ. ಆಂಟಿ ಕ್ಯಾನ್ಸರ್, ವೀರ್ಯಾಣುವನ್ನು ನಾಶಮಾಡಿ ಮಕ್ಕಳು ಆಗದಂತೆ ತಡೆಯುತ್ತದೆ. ಕಣ್ಣಿಗೆ ಕಾಣಿಸದ ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳನ್ನು ನಾಶ ಮಾಡುತ್ತದೆ. ನೋವುನಿವಾರಕ ಜ್ವರವನ್ನು ಕಡಿಮೆ ಮಾಡುತ್ತದೆ. ರೈತರಿಗೆ ಕೂಡ ಇದು ಸಹಾಯಕಾರಿಯಾಗಿದೆ ಬೇವಿನ ಎಣ್ಣೆಯನ್ನು ಗಿಡಗಳಿಗೆ ಸಿಂಪಡಿಸುವ ಮೂಲಕ ನಾವು ಆರ್ಗೆನಿಕ್ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಇಷ್ಟೆಲ್ಲಾ ಗುಣಗಳನ್ನು ಕಹಿ ಬೇವು ಹೊಂದಿರುತ್ತದೆ ಹಾಗಾಗಿ ನಾವು ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಸರಿಯಾದ ಪ್ರಮಾಣದಲ್ಲಿ ಸರಿಯಾದ ಕ್ರಮದಲ್ಲಿ ಕಹಿಬೇವಿನ ಸೊಪ್ಪನ್ನು ಬಳಕೆ ಮಾಡಿಕೊಳ್ಳಬೇಕು. ವೈರಸ್ ವಿರುದ್ಧ ಹೋರಾಡಲು ಏಳರಿಂದ ಎಂಟು ಕಹಿಬೇವಿನ ಎಲೆ ಸ್ವಲ್ಪ ಅರಿಶಿಣ, ಬೆಳ್ಳುಳ್ಳಿ, 23 ಕಾಳುಮೆಣಸು ಹಾಗೂ ಶುದ್ಧ ತೆಂಗಿನ ಎಣ್ಣೆ ಇವೆಲ್ಲವನ್ನು ಸೇರಿಸಿ ಜಜ್ಜಿ ಸಣ್ಣ ಉಂಡೆಯನ್ನು ಮಾಡಿಕೊಂಡು ಬೆಳಗ್ಗೆ ಕಾಳಿ ಹೊಟ್ಟೆಯಲ್ಲಿ ಸೇವಿಸಿದರೆ ಯಾವುದೇ ರೀತಿ ಚರ್ಮರೋಗ ನಿವಾರಣೆಯಾಗುತ್ತದೆ. ಹೀಗೆ ಮಾಡುವುದರಿಂದ ಆಸ್ತಮಾ ಕಡಿಮೆಯಾಗುವುದಲ್ಲದೆ ವೈರಸ್ ವಿರುದ್ಧ ನಮ್ಮ ದೇಹವನ್ನು ಗಟ್ಟಿಯಾಗಿ ಮಾಡುತ್ತದೆ. ಕಹಿಬೇವಿನ ನಿಂದ ಎಲ್ಲಾ ಪ್ರಯೋಜನಗಳನ್ನು ನಾವು ಪಡೆದುಕೊಂಡು ಎಲ್ಲಾ ರೀತಿಯ ವಸ್ತುಗಳ ವಿರುದ್ಧ ನಾವು ಹೋರಾಡುವಂತೆ ಶಕ್ತಿಶಾಲಿಯಾಗಿ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!