ಬೇವಿನ ಎಲೆ ಕಹಿ ಅನಿಸಿದ್ರು ಇದರಿಂದ ಎಷ್ಟೊಂದು ಉಪಯೋಗವಿದೆ ನೋಡಿ

0 4

ಬೇವಿನ ಸೊಪ್ಪು ಒಂದು ಅದ್ಭುತ ವಿಶೇಷ ಔಷಧ ಗುಣವನ್ನು ಹೊಂದಿದೆ. ಇದನ್ನು ಅನೇಕ ಅಡುಗೆಗಳಿಗೆ ಬಳಸುತ್ತಾರೆ. ಇದು ಅಡುಗೆಯಲ್ಲಿ ವಿಶೇಷ ರುಚಿಯನ್ನು ಮತ್ತು ಆರೋಗ್ಯಕರ ಅಂಶವನ್ನೂ ನೀಡುತ್ತದೆ. ಆದ್ದರಿಂದ ನಾವು ಇಲ್ಲಿ  ಬೇವಿನಸೊಪ್ಪಿನ ಹೆಚ್ಚಿನ ಉಪಯೋಗಗಳ ಬಗ್ಗೆ ಮಾಹಿತಿಯನ್ನು  ತಿಳಿಯೋಣ.

ಬೇವಿನ ಮರ ಮನೆಯ ಬಳಿ ಇದ್ದರೆ ಬೇರೆ ಸೌಂದರ್ಯಸಾಧನಗಳಿಗೆ ಅವಕಾಶವಿರುವುದಿಲ್ಲ. ಇದರ ಎಣ್ಣೆ ಔಷಧಿಯ ರೂಪದಲ್ಲಿ ಮತ್ತು ಸೌಂದರ್ಯವರ್ಧನೆ ವಸ್ತುವಾಗಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಿಂದ ಅನೇಕ ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಮುಖದ ಮೇಲಿನ ಕಪ್ಪು ಕಲೆ ಮೊಡವೆಗಳಿಗೆ ಬೇವಿನ ಸೊಪ್ಪಿನಿಂದ ಪರಿಹಾರ ಸಿಗುತ್ತದೆ. ಒಂದು ಹಿಡಿ ಬೇವಿನಸೊಪ್ಪನ್ನುಅರ್ಧ ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಆರಿದ ಮೇಲೆ, ಸೋಸಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಹತ್ತಿಯಿಂದ ಆ ರಸವನ್ನು ಅದ್ದಿ ಮುಖಕ್ಕೆ ಹಚ್ಚಿದರೆ ಮೊಡವೆ ಮತ್ತು ಕರಿ ಮಚ್ಚೆ ಮಾಯವಾಗುತ್ತದೆ.

ಚರ್ಮ ಶುಷ್ಕಗೊಂಡು  ನವೆಯಾದರೆ ಬೇವಿನ ಕಷಾಯವನ್ನು ಸ್ನಾನದ ನೀರಿನಲ್ಲಿ ಸೇರಿಸಿ, ಸ್ನಾನ ಮಾಡಿದರೆ ಒಳ್ಳೆಯದು.  ಬಿಸಿಲಿಗೆ ಮುಖ ಕಳೆಗುಂದಿದರೆ ಬೇವಿನ ಎಲೆ ಮತ್ತು ಗುಲಾಬಿ ದಳವನ್ನು ಒಣಗಿಸಿ, ಪುಡಿಮಾಡಿ, ಎರಡು ಚಮಚ ಪುಡಿಗೆ ಒಂದು ಚಮಚ ಮೊಸರು ಬೆರೆಸಿ ಮಿಕ್ಸ್ ಮಾಡಿ ಜೊತೆಗೆ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆ ನಂತರ ಮುಖವನ್ನು ತಣ್ಣೀರಿನಲ್ಲಿ ತೊಳೆಯಬೇಕು.  ಮುಖದಲ್ಲಿ ಜಿಡ್ಡಿದ್ದರೆ ಬೇವಿನ ಎಲೆಗಳ ಪುಡಿಯನ್ನು ಮಾಡಿಕೊಳ್ಳಬೇಕು.

ನಂತರ ಗಂಧದ ಪುಡಿ ಮತ್ತು ಗುಲಾಬಿ ದಳಗಳ ಪುಡಿಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸ್ ಮಾಡಿ ಒಂದು ಚಮಚ ಪುಡಿಗೆ 4 ಚಮಚ ಬೇವಿನ ಎಣ್ಣೆ,ಸ್ವಲ್ಪ ಜೇನು, ನಿಂಬೆರಸ ಹಾಕಿ ಕಲಸಿ ಮುಖಕ್ಕೆ ಹಚ್ಚಬೇಕು. ಇದು ಒಣಗಿದ ಮೇಲೆ ಬೆಚ್ಚನೆಯ ನೀರಿನಿಂದ ಮುಖ ತೊಳೆಯಬೇಕು. ಹೀಗೆ ಅನೇಕ ಉಪಯೋಗಗಳು ಇದರಲ್ಲಿ ಇವೆ. ಹಾಗೆಯೇ ಆರೋಗ್ಯಕರ ಗುಣಗಳು ಬೇವಿನ ಸೊಪ್ಪಿನಲ್ಲಿ ದೊರಕುತ್ತದೆ. ಇದನ್ನು ಹೆಚ್ಚಾಗಿ ಬಳಸುವುದು ಅತ್ಯುತ್ತಮ. ಇದರ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಳ್ಳಬೇಕು.

Leave A Reply

Your email address will not be published.