ನವೋದಯ ವಿದ್ಯಾಲಯ ಸಮಿತಿ ಶಿಕ್ಷಣ ಇಲಾಖೆಯಿಂದ 1950 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇವತ್ತೇ ಅರ್ಜಿಹಾಕಿ

0 4

ನವೋದಯ ವಿದ್ಯಾಲಯ ಸಮಿತಿ ಕೇಂದ್ರ ಶಿಕ್ಷಣ ಇಲಾಖೆಯಿಂದ ಸಾವಿರದ ಒಂಬೈನೂರ ಇಪ್ಪತ್ತೈದು ವಿವಿಧ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ನವೋದಯ ವಿದ್ಯಾಲಯ ಸಮಿತಿ ಕೇಂದ್ರ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವಂತಹದ್ದು ದೇಶದ ವಿವಿಧ ಭಾಗಗಳಲ್ಲಿ ನವೋದಯ ವಿದ್ಯಾಲಯಗಳಿದ್ದು ಅವುಗಳಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹಾಗಾದರೆ ಈ ಒಂದು ವಿಭಾಗದಲ್ಲಿ ಯಾವ ಎಲ್ಲಾ ಹುದ್ದೆಗಳು ಮತ್ತು ಎಷ್ಟು ಹುದ್ದೆಗಳು ಖಾಲಿ ಇವೆ ಎನ್ನುವುದರ ಕುರಿತಾದ ಮಾಹಿತಿಯನ್ನು ತಿಳಿಯೋಣ. ಮೊದಲನೆಯದಾಗಿ ಅಸಿಸ್ಟೆಂಟ್ ಕಮಿಷನರ್ ಗ್ರೂಪ್ ಎ ಒಟ್ಟು ಐದು ಹುದ್ದೆ ಅಸಿಸ್ಟೆಂಟ್ ಕಮಿಷನರ್ ಅಡ್ಮಿನಿಸ್ತ್ರೇಶನ್ ವಿಭಾಗದಲ್ಲಿ ಹುಟ್ಟು ಎರಡು ಹುದ್ದೆಗಳು ಫೀಮೇಲ್ ಸ್ಟಾಪ್ ನರ್ಸ್ ಒಟ್ಟು ಎಂಬತ್ತರಡು ಹುದ್ದೆಗಳು ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಹತ್ತು ಹುದ್ದೆಗಳು ಅಡಿಟ್ ಅಸಿಸ್ಟೆಂಟ್ ಗ್ರೂಪ್-ಸಿ ಹನ್ನೊಂದು ಹುದ್ದೆಗಳು ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ ಗ್ರೂಪ್ ಬಿ ನಾಲ್ಕು ಹುದ್ದೆಗಳು ಜೂನಿಯರ್ ಇಂಜಿನಿಯರ್ ಸಿವಿಲ್ ವಿಭಾಗದಲ್ಲಿ ಒಂದು ಹುದ್ದೆ ಸ್ಟೆನೋಗ್ರಾಫರ್ ಗ್ರೂಪ್ ಸಿ ಈ ವಿಭಾಗದಲ್ಲಿ ಇಪ್ಪತ್ತೆರಡು ಹುದ್ದೆಗಳು ಕಂಪ್ಯೂಟರ್ ಆಪರೇಟರ್ ಗ್ರೂಪ್ ಸಿ ನಾಲ್ಕು ಹುದ್ದೆಗಳು ಕಾಲಿ ಇವೆ.

ಕ್ಯಾಟರಿಂಗ್ ಅಸಿಸ್ಟೆಂಟ್ ಗ್ರೂಪ್ ಸಿ ಹುದ್ದೆ ಇಲ್ಲಿ ಎಂಬತ್ತೇಳು ಹುದ್ದೆಗಳು ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ ಗ್ರೂಪ್ ಸಿ ಎಂಟು ಹುದ್ದೆಗಳು ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ ಗ್ರೂಪ್ ಸಿ ಜೆ ಎನ್ ವಿ ಕಾಡರ್ ವಿಭಾಗದಲ್ಲಿ ಆರು ನೂರಾ ಇಪ್ಪತ್ತೆರಡು ಹುದ್ದೆಗಳು ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್ ಗ್ರೂಪ್ ಸಿ ಎರಡುನೂರಾ ಎಪ್ಪತ್ಮೂರು ಹುದ್ದೆಗಳು ಲ್ಯಾಬ್ ಅಟೆಂಡೆಂಟ್ ಗ್ರೂಪ್ ಸಿ ವಿಭಾಗದಲ್ಲಿ ನೂರಾ ನಲವತ್ತೆರಡು ಹುದ್ದೆಗಳು ಮೆಸ್ ಹೆಲ್ಪರ್ ಆರು ನೂರಾ ಇಪ್ಪತೊಂಬತ್ತು ಹುದ್ದೆಗಳು ಮಲ್ಟಿಟಾಸ್ಕಿಂಗ್ ಸ್ಟಾಪ್ ಇಪ್ಪತ್ಮೂರು ಹುದ್ದೆಗಳು ಖಾಲಿ ಇವೆ. ಈ ಕಾಲಿಇರುವ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ಅರ್ಹತೆಯನ್ನು ಹೊಂದಿರಬೇಕು ಎಂಬುದರ ಕುರಿತು ನೋಡುವುದಾದರೆ ಅಸಿಸ್ಟೆಂಟ್ ಕಮಿಷನರ್ ಹುದ್ದೆಗೆ ಮಾಸ್ಟರ್ ಡಿಗ್ರಿ ಮುಗಿಸಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಫೀಮೇಲ್ ಸ್ಟಾಪ್ ನರ್ಸ್ ಹುದ್ದೆಗೆ ಡಿಪ್ಲೊಮಾ ನರ್ಸಿಂಗ್ ಅಥವಾ ಸರ್ಟಿಫಿಕೇಟ್ ನರ್ಸಿಂಗ್ ಆಗಿರಬೇಕು ಜೊತೆಗೆ ಎರಡು ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಈ ಹುದ್ದೆಗೆ ಯಾವುದೇ ಪದವಿಯನ್ನು ಪಡೆದ ಜೊತೆಗೆ ಕಂಪ್ಯೂಟರ್ ಜ್ಞಾನ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಆಡಿಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಕಾಂ ಪದವಿಯನ್ನು ಮುಗಿಸಿರಬೇಕು ಜೊತೆಗೆ ಮೂರು ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾಸ್ಟರ್ ಡಿಗ್ರಿಯನ್ನು ಮುಗಿಸಿರಬೇಕು. ಜೂನಿಯರ್ ಎಂಜಿನಿಯರಿಂಗ್ ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್ ಪದವಿ ಮುಗಿಸಿರಬೇಕು ಅಥವಾ ಮೂರು ವರ್ಷಗಳ ಡಿಪ್ಲೊಮಾ ಸಿವಿಲ್ ಇಂಜಿನಿಯರಿಂಗ್ ಆಗಿರಬೇಕು ಜೊತೆಗೆ ಮೂರು ವರ್ಷಗಳ ಅನುಭವ ಇರಬೇಕು.

ಸ್ಟೆನೋಗ್ರಾಫರ್ ಹುದ್ದೆಗೆ ಪಿಯುಸಿ ಮುಗಿಸಿರಬೇಕು ಮತ್ತು ಇಲ್ಲಿ ಟೈಪಿಂಗ್ ಸ್ಪೀಡ್ ಅನ್ನ ಗಮನಿಸಲಾಗುತ್ತದೆ. ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಯಾವುದೇ ಪದವಿ ಪಡೆದ ಜೊತೆಗೆ ಒಂದು ವರ್ಷದ ಕಂಪ್ಯೂಟರ್ ಡಿಪ್ಲೊಮಾ ಮಾಡಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಕ್ಯಾಟರಿಂಗ್ ಅಸಿಸ್ಟೆಂಟ್ ಹುದ್ದೆಗೆ ಹತ್ತನೇ ತರಗತಿ ಮುಗಿಸಿರುವ ಮತ್ತು ಮೂರು ವರ್ಷ ಕ್ಯಾಟರಿಂಗ್ ಡಿಪ್ಲೋಮಾ ಮಾಡಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ ಪಿಯುಸಿ ಮುಗಿಸಿರಬೇಕು ಮತ್ತು ಕಂಪ್ಯೂಟರ್ ಟೈಪಿಂಗ್ ಸ್ಪೀಡ್ ಅನ್ನ ಪರಿಗಣಿಸಲಾಗುತ್ತದೆ ಇಂಗ್ಲಿಷ್ ಅಥವಾ ಹಿಂದಿ ಯಾವುದಾದರೂ ಒಂದು ಭಾಷೆಯಲ್ಲಿ ಟೈಪಿಂಗ್ ಗೊತ್ತಿರಬೇಕು. ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್ ಹತ್ತನೇ ತರಗತಿ ಜೊತೆಗೆ ಐಟಿಐ ಮಾಡಿರಬೇಕು. ಲ್ಯಾಬ್ ಅಟೆಂಡೆಂಟ್ ಹುದ್ದೆಗೆ ಹತ್ತನೇ ತರಗತಿ ಅಥವಾ ಪಿಯುಸಿ ಮುಗಿಸಿರಬೇಕು.

ಮೆಸ್ ಹೆಲ್ಪರ್ ಹುದ್ದೆಗೆ ಹತ್ತನೇ ತರಗತಿ ಆಗಿರಬೇಕು ಮಲ್ಟಿಟಾಸ್ಕಿಂಗ್ ಸ್ಟಾಪ್ ಹುದ್ದೆಗೆ ಹತ್ತನೇ ತರಗತಿ ಮುಗಿಸಿರಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಆಯಾ ಹುದ್ದೆಗಳಿಗೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಈಗಾಗಲೇ ಜನವರಿ ಹನ್ನೆರಡು ಎರಡು ಸಾವಿರದ ಇಪ್ಪತ್ತೆರಡರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಫೆಬ್ರವರಿ ಹತ್ತರವರೆಗೆ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೀವು ಕೂಡ ಮೇಲೆ ತಿಳಿಸಿರುವ ವಿದ್ಯಾರ್ಹತೆಯನ್ನು ಹೊಂದಿದ್ದು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಈ ಕೂಡಲೇ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರ ಹಾಗೂ ಸ್ನೇಹಿತರಿಗೂ ತಿಳಿಸಿರಿ.

Leave A Reply

Your email address will not be published.