ಇಂಡಿಯನ್ ಆಯಿಲ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಇವತ್ತೆ ಅರ್ಜಿ ಹಾಕಿ

0 3

ಎರಡು ಸಾವಿರದ ಇಪ್ಪತ್ತೆರಡನೇ ಇಸವಿಗೆ ಸಂಬಂಧಿಸಿದಂತೆ ಭಾರತೀಯ ತೈಲ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆ ಕುರಿತು ಈ ಒಂದು ಹುದ್ದೆಗೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು ಯಾವ ಅರ್ಹತೆಯನ್ನು ಹೊಂದಿರಬೇಕು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಇಂಡಿಯನ್ ಆಯಿಲ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು ಈಗಾಗಲೇ ಜನವರಿ 24 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಆಸಕ್ತ ಅಭ್ಯರ್ಥಿಗಳು ಫೆಬ್ರುವರಿ ಹದಿನೆಂಟು ಎರಡು ಸಾವಿರದ ಇಪ್ಪತ್ತೆರಡರವರೆಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದೇ ರೀತಿ ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಲಾಗಿದ್ದು ಪರೀಕ್ಷಾ ಪ್ರವೇಶ ಪತ್ರ ಫೆಬ್ರುವರಿ ಹದಿನಾಲ್ಕರಿಂದ ಫೆಬ್ರುವರಿ ಇಪ್ಪತ್ತೇಳರವರೆಗೆ ಪರೀಕ್ಷೆ ಪ್ರವೇಶ ಪತ್ರ ದೊರೆಯುತ್ತದೆ.

ಇನ್ನು ಪರೀಕ್ಷೆ ಇಪ್ಪತ್ತೇಳು ಮಾರ್ಚ್ ಎರಡು ಸಾವಿರದ ಇಪ್ಪತ್ತೆರಡರಂದು ನಡೆಸಲಾಗುತ್ತದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬೇಕು ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಇಪ್ಪತ್ತೈದು ಸಾವಿರದಿಂದ ಒಂದು ಲಕ್ಷದ ಐದು ಸಾವಿರ ರೂಪಾಯಿಗಳವರೆಗೆ ವೇತನ ಇರುತ್ತದೆ. ಭಾರತದಾದ್ಯಂತ ಹುದ್ದೆಗಳು ದೊರೆಯುತ್ತವೆ. ಇನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು ನೋಡುವುದಾದರೆ ಹದಿನೆಂಟು ವರ್ಷ ಮೇಲ್ಪಟ್ಟವರು ಹಾಗೂ ಇಪ್ಪತ್ತಾರು ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಜೊತೆಗೆ ವಯೋಮಿತಿ ಸಡಿಲಿಕೆಯನ್ನು ಮಾಡಲಾಗಿದ್ದು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ಸಿಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಪಿಡಬ್ಲ್ಯೂ ಬಿಡಿ ಜನರಲ್ ಅಭ್ಯರ್ಥಿಗಳಿಗೆ ಹತ್ತು ವರ್ಷ ಪಿಡಬ್ಲ್ಯೂಬಿಡಿ ಒಬಿಸಿ ಅಭ್ಯರ್ಥಿಗಳಿಗೆ ಹದಿಮೂರು ವರ್ಷ ಮತ್ತು ಪಿಡಬ್ಲ್ಯೂಬಿಡಿ ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಹದಿನೈದು ವರ್ಷ ವಯೋಮಿತಿ ಸಡಿಲಿಕೆ ಇದೆ. ಅರ್ಜಿ ಶುಲ್ಕ ಯಾವ ರೀತಿಯಾಗಿ ಇರುತ್ತದೆ ಎನ್ನುವುದರ ಕುರಿತು ನೋಡುವುದಾದರೆ ಎಸ್ಸಿಎಸ್ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದಂತಹ ಅರ್ಜಿ ಶುಲ್ಕ ಇರುವುದಿಲ್ಲ. ಜನರಲ್ ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ನೂರು ರೂಪಾಯಿ ಅರ್ಜಿ ಶುಲ್ಕ ಇರುತ್ತದೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಅಭ್ಯರ್ಥಿಗಳನ್ನು ಯಾವ ರೀತಿಯಾಗಿ ಆಯ್ಕೆಮಾಡಿಕೊಳ್ಳಲಾಗುತ್ತದೆ ಎಂಬುದನ್ನು ನೋಡುವುದಾದರೆ ಲಿಖಿತ ಪರೀಕ್ಷೆ ಕೌಶಲ್ಯ ದೈಹಿಕ ಪರೀಕ್ಷೆ ನೇರ ಸಂದರ್ಶನ ಮಾಡುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬುದರ ಕುರಿತಾಗಿ ನೋಡುವುದಾದರೆ ಮೊದಲಿಗೆ ಇಂಜಿನಿಯರಿಂಗ್ ಅಸಿಸ್ಟೆಂಟ್ ಮೆಕ್ಯಾನಿಕಲ್ ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಡಿಪ್ಲೋಮಾ ಮೆಕ್ಯಾನಿಕಲ್ ಅಥವಾ ಆಟೋಮೊಬೈಲ್ ಇಂಜಿನಿಯರಿಂಗ್ ಮುಗಿಸಿರಬೇಕು.

ಇಂಜಿನಿಯರಿಂಗ್ ಅಸಿಸ್ಟೆಂಟ್ ಎಲೆಕ್ಟ್ರಿಕಲ್ ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಡಿಪ್ಲೋಮಾ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಮುಗಿಸಿರಬೇಕು. ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಅಥವಾ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಅಥವಾ ಎಲೆಕ್ಟ್ರಾನಿಕ್ ಅಂಡ್ ರೇಡಿಯೋ ಕಮ್ಯುನಿಕೇಶನ್ ಅಥವಾ ಇನ್ಷ್ಟ್ರುಮೆಂಟೇಶನ್ ಅಂಡ್ ಕಂಟ್ರೋಲ್ ಅಥವಾ ಇನ್ಷ್ಟ್ರುಮೆಂಟೇಶನ್ ಅಂಡ್ ಪ್ರೋಸೆಸ್ ಕಂಟ್ರೋಲ್ ಅಥವಾ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಮುಗಿಸಿರಬೇಕು. ಟೆಕ್ನಿಕಲ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತನೇ ತರಗತಿ ಅಥವಾ ಐಟಿಐ ಪಾಸಾಗಿರಬೇಕು.

ಇನ್ನು ಯಾವೆಲ್ಲ ಹುದ್ದೆಗಳು ಖಾಲಿ ಇವೆ ಎನ್ನುವುದನ್ನು ನೋಡುವುದಾದರೆ ಇಂಜಿನಿಯರಿಂಗ್ ಅಸಿಸ್ಟೆಂಟ್ ಮೆಕ್ಯಾನಿಕಲ್ ಹದಿಮೂರು ಹುದ್ದೆ ಇಂಜಿನಿಯರಿಂಗ್ ಅಸಿಸ್ಟೆಂಟ್ ಎಲೆಕ್ಟ್ರಿಕಲ್ ಹದಿಮೂರು ಹುದ್ದೆ ಇಂಜಿನಿಯರಿಂಗ್ ಅಸಿಸ್ಟೆಂಟ್ ಇಪ್ಪತ್ತೈದು ಹುದ್ದೆ ಇಂಜಿನಿಯರಿಂಗ್ ಅಸಿಸ್ಟೆಂಟ್ ಆಪರೇಷನ್ ಏಳು ಹುದ್ದೆ ಟೆಕ್ನಿಕಲ್ ಅಟೆಂಡೆಂಟ್ ಎಪ್ಪತೊಂಬತ್ತು ಹುದ್ದೆ ಈ ರೀತಿಯಾಗಿ ಒಟ್ಟು ನೂರಾ ಮೂವತ್ತೇಳು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದು ಭಾರತೀಯ ತೈಲ ಇಲಾಖೆಯಿಂದ ಹುದ್ದೆಗಳ ಭರ್ತಿಗಾಗಿ ಹೊರಡಿಸಿರುವ ಅಧಿಸೂಚನೆ ಕುರಿತಾದ ಮಾಹಿತಿಯಾಗಿದೆ. ನೀವು ಕೂಡ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮೂಲಕ ಹುದ್ದೆಯನ್ನು ಪಡೆಯಬಹುದಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.

Leave A Reply

Your email address will not be published.