Navaratri New Rules In Karnataka Govt: ಸರ್ಕಾರದಿಂದ ಹೊಸ ಆದೇಶ : ನವರಾತ್ರಿ ಹಬ್ಬದಲ್ಲಿ ನೀವು ಅರಿಶಿನ ಕುಂಕುಮವನ್ನು ಬಳಸದೆ ಪೂಜೆಯನ್ನು ಮಾಡಬೇಕು. ಇದೇನಿದು ಆಶ್ಚರ್ಯ ಅಂತ ನೋಡ್ತಾ ಇದ್ದೀರಾ ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇವೆ.
ಎಲ್ಲರಿಗೂ ಇದೇನಿದು ಅಚ್ಚರಿ ಅಂತ ಅನಿಸ್ತಾ ಇದೆಯಾ? ಅರಿಶಿನ ಕುಂಕುಮ ಇಲ್ಲದೆ ಪೂಜೆ ಮಾಡಲು ಸಾಧ್ಯನಾ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿರಬಹುದು. ಇನ್ನು ಗಣೇಶ ಹಬ್ಬದ ಲ್ಲಿ ಸಿದ್ದರಾಮಯ್ಯನವರು ಹಸಿರು ಪಟಾಕಿಯನ್ನ ಸುಡಬೇಕು ಇಲ್ಲದೆ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದರು. ಆದರೆ ಈಗ ಮತ್ತೊಂದು ಹೊಸ ರೂಲ್ಸ್ ಎದುರಾಗಿದೆ. ಅದೇನೆಂದರೆ ಅರಿಶಿನ ಕುಂಕುಮವನ್ನು ಬಳಸಬಾರದು ನವರಾತ್ರಿ ದುರ್ಗಾ ಪೂಜೆಯಲ್ಲಿ ಅರಿಶಿಣ ಕುಂಕುಮವನ್ನು ಬಳಸದೆ ಪೂಜೆಯನ್ನು ಮಾಡಬೇಕು ಎನ್ನುವುದು.
ಅದೇನೆಂದರೆ ವಿಧಾನಸೌಧದ ಒಳಗಡೆ ಪೂಜೆ ಮಾಡುವಾಗ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ವಸ್ತುವನ್ನು ತೆಗೆದುಕೊಂಡು ಬರಬಾರದು ಎಂದು ಹೊಸದಾಗಿ ಸರ್ಕಾರ ಆದೇಶವನ್ನು ಹೊರಡಿಸಿದೆ. ರಾಸಾಯನಿಕ ಯುಕ್ತ ಬಣ್ಣಗಳು ನೆಲಕ್ಕೆ ಅಂಟಿಕೊಂಡು ಹಾಗೆ ಉಳಿದುಬಿಡುತ್ತವೆ. ಎಷ್ಟು ಉಜ್ಜಿದರು ಕೂಡ ಅದು ಹೋಗುವುದಿಲ್ಲ. ಅದರಿಂದ ಕೆಲವೊಂದು ರೀತಿಯ ಅಲರ್ಜಿಗಳು ಉಂಟಾಗುತ್ತವೆ.
ಈ ಹಿಂದೆ ಹಲವು ಬಾರಿ ಹೇಳಿದ್ದಾದರೂ ಕೆಲವೊಂದು ಅಧಿಕಾರಿಗಳ ನಿರ್ಲಕ್ಷದಿಂದ ಮೊದಲಿನಂತೆಯೇ ನಡೆಸಿಕೊಂಡು ಬಂದಿದ್ದರು. ಆದರೆ ನೆಲದ ಸೌಂದರ್ಯ ಹಾಳಾಗುವುದರಿಂದ ಈ ವರ್ಷ ಸರ್ಕಾರ ಖಡಕ್ ಖಂಡಿತವಾಗಿ ಆದೇಶವನ್ನು ಹೊರಡಿಸಿದೆ. ದುರ್ಗಾ ಪೂಜೆಯ ದಿನ ಅರಿಶಿಣ ಕುಂಕುಮವನ್ನ ಬಳಸದೆ ಪೂಜೆ ಮಾಡಬೇಕು ವಿಧಾನಸೌಧ ಹಾಗೂ ವಿಕಾಸ ಸಹೋದರ ಕಟ್ಟಡದ ಒಳಗಡೆ ಅರಿಶಿಣ ಕುಂಕುಮವನ್ನು ತರುವ ಹಾಗಿಲ್ಲ ಎಂದು ಆದೇಶವನ್ನು ಹೊರಡಿಸಿದೆ.
ಅಷ್ಟೇ ಅಲ್ಲದೆ ಸುರಕ್ಷತೆಯ ದೃಷ್ಟಿಯಿಂದ ದೀಪವನ್ನು ಹಚ್ಚಿ ಇಡಬಾರದು, ವಿಧಾನಸೌಧದಿಂದ ಹೊರಡುವಾಗ ದೀಪವನ್ನ ಆರಿಸಿ ಹೊರಗಡೆ ಹೋಗಬೇಕು. ದೀಪವನ್ನು ಹಚ್ಚಿಟ್ಟು ಹೋದರೆ ಅದು ಎಂದಿಗೂ ಅಪಾಯಕಾರಿ ಎಂದು ಅದರ ಬಗ್ಗೆಯೂ ಕೂಡ ಸರಕಾರ ಹೊಸ ಆದೇಶವನ್ನು ಹೊರಡಿಸಿದೆ. ಈ ಆದೇಶವು ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಮಾತ್ರ ಸೀಮಿತವಾಗಿದ್ದು ಮನೆಯಲ್ಲಿ ನಮಗೆ ಹೇಗೆ ಬೇಕೋ ಹಾಗೆ ಪೂಜೆಯನ್ನು ಮಾಡಿಕೊಳ್ಳಬಹುದಾಗಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಇದನ್ನೂ ಓದಿ Libra Horoscope: ಈ ತಿಂಗಳ ಕೊನೆಯಲ್ಲಿ ತುಲಾ ರಾಶಿಯವರು ಕತ್ತಲಿನಿಂದ ಬೆಳಕಿನಡೆಗೆ ಬರುತ್ತಾರೆ ಯಾಕೆಂದರೆ..