PUC ಪಾಸ್ ಆಗಿದ್ದರೆ ಸಾಕು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿದೆ ಉದ್ಯೋಗವಕಾಶ

0 2

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ನಾವಿಂದು ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ತಿಳಿಸಲಾಗಿದ್ದು ಆ ಕುರಿತು ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ ವೇತನಶ್ರೇಣಿ ವಯೋಮಿತಿ ಅರ್ಜಿ ಶುಲ್ಕ ಹುದ್ದೆಗಳ ವಿವರ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹನ್ನೆರಡನೇ ತರಗತಿ ಪಾಸಾಗಿರಬೇಕು. ಒಟ್ಟು ಹದಿನಾರು ಪ್ಯೂನ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಆಫ್ಲೈನ್ ಮೂಲಕ ಸಲ್ಲಿಸಬೇಕು ಅಭ್ಯರ್ಥಿಗಳಿಗೆ ಭಾರತದಾದ್ಯಂತ ಉದ್ಯೋಗ ಸ್ಥಳ ಇರುತ್ತದೆ. ಪ್ಯೂನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು ನೋಡುವುದಾದರೆ ಹದಿನೆಂಟು ವರ್ಷದಿಂದ ಇಪ್ಪತ್ನಾಲ್ಕು ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನವನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಯಾವ ರೀತಿಯಾಗಿ ಆಯ್ಕೆಮಾಡಿಕೊಳ್ಳಲಾಗುತ್ತದೆ ಎಂದರೆ ದಾಖಲೆಗಳ ಪರಿಶೀಲನೆ ಮತ್ತು ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಗಳಲ್ಲಿ ನಿಮ್ಮನ್ನು ಕರೆದು ಅಲ್ಲಿ ನಿಮಗೆ ನೇರ ಸಂದರ್ಶನವನ್ನು ಮಾಡಿ ಆ ಮೂಲಕ ಆಯ್ಕೆಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವಂತಹ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಡೆಪ್ಯೂಟಿ ಸರ್ಕಲ್ ಹೆಡ್, ಪಂಜಾಬ್ ನ್ಯಾಷನಲ್ ಬ್ಯಾಂಕ್. ವೃತ್ತ ಕಚೇರಿ-ಚೆನ್ನೈ ದಕ್ಷಿಣ, ಪಿ ಎನ್ ಬಿ. ಟವರ್ಸ್ ಎರಡನೇ ಮಹಡಿ ಸಂಖ್ಯೆ 46-69 ರಾಯಪೆಟ್ಟಾ ಹೈ ರೋಡ್ ರಾಯಪೆಟ್ಟಾ, ಚೆನ್ನೈ 600014. ಈ ವಿಳಾಸಕ್ಕೆ ನಿಮ್ಮ ರೆಸ್ಯುಮ್ ಕಳಿಸಬೇಕಾಗುತ್ತದೆ. ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು 5 ಫೆಬ್ರುವರಿ 2022ರ ವರೆಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೀವು ಕೂಡ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದರೆ ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆಯಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗು ಈ ಮಾಹಿತಿಯನ್ನು ತಿಳಿಸಿರಿ.

Leave A Reply

Your email address will not be published.