ಚಿತ್ರರಂಗದಲ್ಲಿ ಅನೇಕರು ನಟಿಸಿ ತಮ್ಮದೆ ಆದ ಛಾಪು ಮೂಡಿಸುತ್ತಾರೆ ಅವರಲ್ಲಿ ನಟಿ ಶ್ರುತಿ ಸುಧಾರಾಣಿ ಹಾಗೂ ಮಾಳವಿಕಾ ಅವರು ಪ್ರಮುಖರು. ಅವರು ನಟಿಸುತ್ತಾ ಚಿತ್ರರಂಗದ ಮೂಲಕ ಪರಿಚಯವಾಗಿ ಇಂದು ಉತ್ತಮ ಸ್ನೇಹಿತರಾಗಿದ್ದಾರೆ. ಅವರು ಬರ್ತಡೆಯನ್ನು ಒಟ್ಟಾಗಿ ಆಚರಿಸುತ್ತಾರೆ. ಮಾಳವಿಕಾ ಅವರ ಬರ್ತಡೆಗೆ ಸುಧಾರಾಣಿ ಹಾಗೂ ಶ್ರುತಿ ಅವರು ಸರ್ಪ್ರೈಸ್ ಭೇಟಿ ಕೊಟ್ಟು ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಚಿತ್ರರಂಗದಲ್ಲಿ ನಟನೆಯ ಮೂಲಕ ಮನೆ ಮಾತಾಗಿರುವ ನಟಿ ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್ ಅವರು ಆಪ್ತಸ್ನೇಹಿತರು. ನಟಿ ಸುಧಾರಾಣಿ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಜನ ಮನ ಗೆದ್ದಿದ್ದಾರೆ. ನಟಿ ಶ್ರುತಿ ಅವರು ಹೆಣ್ಣು ಎಂದರೆ ಹೀಗಿರಬೇಕು ಎಂದು ಹೇಳುವ ಮಟ್ಟಿಗೆ ಜನರ ಮನಸಲ್ಲಿ ಅವರ ಅಭಿನಯ ಮನೆ ಮಾಡಿದೆ. ಇನ್ನು ಮಾಳವಿಕಾ ಅವಿನಾಶ್ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದ್ದೂರಿಯಾಗಿ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಕೆಜಿಎಫ್ ಸಿನಿಮಾದಲ್ಲೂ ಸಹ ಮಾಳವಿಕಾ ಅವರು ನಟಿಸಿದ್ದಾರೆ.

ನಟಿ ಶ್ರುತಿ, ಸುಧಾರಾಣಿ, ಮಾಳವಿಕಾ ಅವರು ಮೂವರು ಒಳ್ಳೆಯ ಸ್ನೇಹಿತರು. ಮೂವರು ಒಬ್ಬರಿಗೊಬ್ಬರು ಸರ್ಪ್ರೈಸ್ ಭೇಟಿ ಕೊಡುತ್ತಾರೆ. ಹೀಗೆ ಒಮ್ಮೆ ಮಾಳವಿಕಾ, ಸುಧಾರಾಣಿ ಅವರು ನಟಿ ಶ್ರುತಿ ಮನೆಗೆ ಹೋಗಿ ಶ್ರುತಿ ಅವರ ಕೈಯಾರೆ ಮಾಡಿದ ರಾಗಿಮುದ್ದೆಯನ್ನು ಸವಿದಿದ್ದಾರೆ. ಅವರು ಮೂವರು ತಾವು ಮಾಡಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅವರು ಮೂವರು ಬರ್ತಡೆಯನ್ನು ಸರ್ಪ್ರೈಸ್ ಆಗಿ ಆಚರಿಸುತ್ತಾರೆ. ಸದ್ಯದಲ್ಲಿ ಸುಧಾರಾಣಿ ಅವರ ಹುಟ್ಟುಹಬ್ಬದಂದು ನಟಿ ಮಾಳವಿಕಾ ಹಾಗೂ ಶೃತಿ ಸುಧಾರಾಣಿ ಅವರಿಗೆ ಗೊತ್ತಿಲ್ಲದಂತೆ ಅವರ ಮನೆಗೆ ತೆರಳಿ ಕೇಕ್ ಅರೇಂಜ್ ಮಾಡಿ ಹುಟ್ಟುಹಬ್ಬವನ್ನು ಆಚರಿಸಿದರು.

ಇತ್ತಿಚೆಗೆ ಮಾಳವಿಕಾ ಅವರ ಹುಟ್ಟುಹಬ್ಬದ ದಿನದಂದು ನಟಿ ಶ್ರುತಿ ಹಾಗೂ ಸುಧಾರಾಣಿ ಅವರು ಮಾಳವಿಕಾ ಅವಿನಾಶ್ ಅವರ ಮನೆಗೆ ಹೋಗಿ ಮಾಳವಿಕಾ ಅವರಿಗೆ ಗೊತ್ತಿಲ್ಲದ ಹಾಗೆ ಮನೆಯ ಒಳಗೆ ಬರ್ತಡೆ ಕೇಕ್ ಸೆಟ್ ಮಾಡಿದ್ದರು. ನಂತರ ಒಬ್ಬರನ್ನೊಬ್ಬರು ನೋಡಿದಾಗ ಒಬ್ಬರನ್ನೊಬ್ಬರು ಪರಸ್ಪರ ಅಪ್ಪಿಕೊಂಡು ಮಾಳವಿಕಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ಮಾಳವಿಕಾ ಅವರ ಮನೆಯಲ್ಲಿ ಸರಳವಾಗಿ, ಅಚ್ಚುಕಟ್ಟಾಗಿ ಹುಟ್ಟುಹಬ್ಬವನ್ನು ಆಚರಿಸಿ ತೆಗೆಸಿಕೊಂಡ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರಲ್ಲಿರುವ ಸ್ನೇಹ ಸದಾ ಹೀಗೆಯೆ ಇರಲಿ ಎಂದು ಆಶಿಸೋಣ. Video Credit For Kannada TV

Leave a Reply

Your email address will not be published. Required fields are marked *