ಉದ್ಯೋಗಖಾತರಿ ಯೋಜನೆಯಡಿ ನಿಮ್ಮ ಯಾವೆಲ್ಲ ಕೆಲಸ ಮಾಡಿಸಿಕೊಳ್ಳಬಹುದು ನೋಡಿ

0 20

ಉದ್ಯೋಗಖಾತರಿ ಯೋಜನೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ ಆದರೆ ಇದೀಗ ಉದ್ಯೋಗಖಾತರಿ ಯೋಜನೆಯಡಿ ಮನೆಯ ವಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳಬಹುದು. ಅವು ಯಾವ ಯಾವ ಕೆಲಸಗಳು ಹಾಗೂ ಸರ್ಕಾರದಿಂದ ಯಾವ ಕೆಲಸಕ್ಕೆ ಎಷ್ಟು ಅನುದಾನ ಬರುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಉದ್ಯೋಗಖಾತರಿ ಯೋಜನೆಯಡಿ ಮನೆಯ ವಯಕ್ತಿಕ ಕೆಲಸವನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು ಆ ಕೆಲಸಕ್ಕೆ ಸರ್ಕಾರ ಹಣ ಕೊಡುತ್ತದೆ. ಈ ಯೋಜನೆಯಡಿ ಕೆಲವು ವಯಕ್ತಿಕ ಕೆಲಸಗಳನ್ನು ಮಾಡಿಸಬಹುದು ಅವು ಯಾವುವು ಎಂದು ನೋಡುವುದಾದರೆ. ದನದ ಕೊಟ್ಟಿಗೆಯನ್ನು ಈ ಯೋಜನೆಯಡಿ ನಿರ್ಮಿಸಿಕೊಳ್ಳಬಹುದು ದನದ ಕೊಟ್ಟಿಗೆ ನಿರ್ಮಿಸಲು ಅಳತೆ ಬಹಳ ಮುಖ್ಯ, ಕೊಟ್ಟಿಗೆಯ ಉದ್ದ 7 ಮೀಟರ್, ಅಗಲ 3 ಮೀಟರ್ ಇರಬೇಕು. ದನದ ಕೊಟ್ಟಿಗೆ ನಿರ್ಮಿಸಲು ಸರ್ಕಾರದಿಂದ ಎಸ್ ಟಿ, ಎಸ್ ಸಿ ಜನಾಂಗದವರಿಗೆ 43,000 ರೂಪಾಯಿ ಹಾಗೂ ಒಬಿಸಿ ವರ್ಗದವರಿಗೆ 16,500 ರೂಪಾಯಿ ಸಹಾಯಧನ ಸಿಗುತ್ತದೆ.

ಕೋಳಿ ಸಾಕಾಣಿಕೆ ಮಾಡುವವರು ಈ ಯೋಜನೆಯಡಿ ಕೋಳಿ ಶೆಡ್ ನಿರ್ಮಾಣ ಮಾಡಿಕೊಳ್ಳಬಹುದು, ಶೆಡ್ ಉದ್ದ 12.30 ಮೀಟರ್, ಅಗಲ 0.45 ಮೀಟರ್ ಇರಬೇಕು. ಕೋಳಿ ಶೆಡ್ ನಿರ್ಮಿಸಿಕೊಳ್ಳಲು ಸರ್ಕಾರ 40,000 ರೂಪಾಯಿಯನ್ನು ಕೊಡುತ್ತದೆ. ಹಂದಿ ಸಾಕಾಣಿಕೆ ಮಾಡುವವರು ಈ ಯೋಜನೆಯಡಿ ಹಂದಿ ಶೆಡ್ ನಿರ್ಮಿಸಿಕೊಳ್ಳಬಹುದು, ಹಂದಿ ಶೆಡ್ ಉದ್ದ 5.8 ಮೀಟರ್, 3 ಮೀಟರ್ ಅಗಲ ಇರಬೇಕು. ಸರ್ಕಾರದಿಂದ ಹಂದಿ ಶೆಡ್ ನಿರ್ಮಿಸಿಕೊಳ್ಳಲು 88,000 ರೂಪಾಯಿ ಅನುದಾನ ಸಿಗುತ್ತದೆ. ಕೊಳವೆಬಾವಿ ಮರುಪೂರಣ ಘಟಕ ರೈತರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಮರುಪೂರಣ ಘಟಕ ನಿರ್ಮಿಸಿಕೊಳ್ಳಬಹುದು, ಉದ್ದ 2 ಮೀಟರ್, ಅಗಲ 2 ಮೀಟರ್ ಇರಬೇಕು. ಸರ್ಕಾರದಿಂದ ಕೊಳವೆಬಾವಿ ಮರುಪೂರಣ ಘಟಕ ನಿರ್ಮಿಸಲು 20,000 ರೂಪಾಯಿ ಅನುದಾನ ಸಿಗುತ್ತದೆ.

ಉದ್ಯೋಗ ಖಾತರಿ ಯೋಜನೆಯಡಿ ರೈತರು ತಮ್ಮ ಜಮೀನನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಅವಕಾಶವಿದೆ. ಜಮೀನನ್ನು ಅಭಿವೃದ್ಧಿ ಮಾಡಿಕೊಳ್ಳಲು ರೈತರಿಗೆ ಪ್ರತಿ ಎಕರೆಗೆ ಸರ್ಕಾರದಿಂದ 10,000 ರೂಪಾಯಿ ಸಿಗುತ್ತದೆ. ಈ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಕೃಷಿಹೊಂಡ ನಿರ್ಮಾಣ ಮಾಡಿಕೊಳ್ಳಬಹುದು. ಕೃಷಿಹೊಂಡದ ಉದ್ದ 7.5 ಮೀಟರ್, ಅಗಲ 7.5 ಮೀಟರ್ ಇರಬೇಕು. ಕೃಷಿ ಹೊಂಡ ನಿರ್ಮಿಸಲು ಸರ್ಕಾರದಿಂದ 20,000 ರೂಪಾಯಿ ಸಿಗುತ್ತದೆ, ಕೃಷಿ ಹೊಂಡ 10.5 ಮೀಟರ್ ಉದ್ದ, 10.5 ಮೀಟರ್ ಅಗಲ ಇದ್ದರೆ ಸರ್ಕಾರದಿಂದ 68,000 ರೂಪಾಯಿ ಅನುದಾನ ಸಿಗುತ್ತದೆ.

ಕೃಷಿ ಹೊಂಡ 13 ಮೀಟರ್ ಉದ್ದ, 13 ಮೀಟರ್ ಅಗಲ ಇದ್ದರೆ ಸರ್ಕಾರದಿಂದ 76,000 ರೂಪಾಯಿ ಸಿಗುತ್ತದೆ. ಈ ಯೋಜನೆಯಡಿ ಮೀನು ಸಾಕಾಣಿಕೆ ಮಾಡುವವರು ಮೀನು ಹೊಂಡ ನಿರ್ಮಿಸಿಕೊಳ್ಳಬಹುದು. ಮೀನು ಹೊಂಡದ ಉದ್ದ 21 ಮೀಟರ್, ಅಗಲ 16 ಮೀಟರ್ ಇರಬೇಕು. ಮೀನು ಹೊಂಡ ನಿರ್ಮಿಸಲು ಸರ್ಕಾರದಿಂದ 1,03,000 ರೂಪಾಯಿ ಅನುದಾನ ಸಿಗುತ್ತದೆ. ರೈತರು ತಮ್ಮ ಜಮೀನಿನ ಫಲವತ್ತತೆ ಹೆಚ್ಚಿಸಲು ಎರೆಹುಳು ಗೊಬ್ಬರದ ತೊಟ್ಟಿ ನಿರ್ಮಿಸಿಕೊಳ್ಳಬಹುದು. ಎರೆಹುಳು ಗೊಬ್ಬರ ತೊಟ್ಟಿಯ ಉದ್ದ 4.5 ಮೀಟರ್, ಅಗಲ 3 ಮೀಟರ್ ಇರಬೇಕು. ಸರ್ಕಾರದಿಂದ 23,000 ರೂಪಾಯಿ ಅನುದಾನ ಸಿಗುತ್ತದೆ.

ಉದ್ಯೋಗ ಖಾತರಿ ಯೋಜನೆಯಡಿ ಕುರಿ ಸಾಕಾಣಿಕೆ ಮಾಡುವವರು ಕುರಿ ಶೆಡ್ ನಿರ್ಮಿಸಿಕೊಳ್ಳಬಹುದು. ಕುರಿ ಶೆಡ್ 3 ಮೀಟರ್ ಉದ್ದ ಹಾಗೂ 3 ಮೀಟರ್ ಅಗಲ ಇರಬೇಕು. ಸರ್ಕಾರದಿಂದ 68,000 ರೂಪಾಯಿ ಅನುದಾನ ಸಿಗುತ್ತದೆ. ಈ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಳ್ಳಬಹುದು. ಬದುವಿನ ಉದ್ದ 5 ಮೀಟರ್, ಅಗಲ 1 ಮೀಟರ್ ಇರಬೇಕು. ಸರ್ಕಾರದಿಂದ ಬದು ನಿರ್ಮಾಣ ಮಾಡಿಕೊಳ್ಳಲು 15,000 ರೂಪಾಯಿ ಅನುದಾನ ಸಿಗುತ್ತದೆ. ಈ ಯೋಜನೆಯಡಿ ಜಮೀನಿನಲ್ಲಿ ಸಸಿ ನೆಟ್ಟರೆ ಅರಣ್ಯ ಇಲಾಖೆಯಿಂದ ಒಂದು ಹೆಕ್ಟೇರ್ ಗೆ 41,200 ರೂಪಾಯಿ ಅನುದಾನ ಸಿಗುತ್ತದೆ ಜೊತೆಗೆ ತೋಟಗಾರಿಕಾ ಇಲಾಖೆಯಿಂದ ಜಮೀನಿನಲ್ಲಿ ಸಸಿ ನೆಟ್ಟರೆ ಒಂದು ಎಕರೆಗೆ 53,000 ರೂಪಾಯಿ ಅನುದಾನ ಸಿಗುತ್ತದೆ.

ಶೌಚಾಲಯದ ಸುತ್ತ ಮುತ್ತ ಹಣ್ಣಿನ ಗಿಡಗಳನ್ನು ನೆಡಬಹುದು. ಒಂದು ಶೌಚಾಲಯಕ್ಕೆ ಸರ್ಕಾರದಿಂದ 1,250 ರೂಪಾಯಿ ಸಿಗುತ್ತದೆ. ಈ ಯೋಜನೆಯಡಿ ಈರುಳ್ಳಿ ಬೆಳೆಯ ಸುರಕ್ಷತೆಗೆ ಈರುಳ್ಳಿ ಶೇಖರಣಾ ಘಟಕ ನಿರ್ಮಿಸಿಕೊಳ್ಳಬಹುದು. ಈರುಳ್ಳಿ ಶೇಖರಣಾ ಘಟಕ 7.39 ಮೀಟರ್ ಉದ್ದ, 3.89 ಮೀಟರ್ ಅಗಲ ಇರಬೇಕು. ಸರ್ಕಾರದಿಂದ ಈ ಘಟಕ ನಿರ್ಮಿಸಲು 1,00,000 ರೂಪಾಯಿ ಅನುದಾನ ಸಿಗುತ್ತದೆ. ಈ ಯೋಜನೆಯಡಿ ಹಿಪ್ಪು ನೇರಳೆ ತೋಟ ನಿರ್ಮಿಸಲು ಸರ್ಕಾರದಿಂದ ಒಂದು ಎಕರೆಗೆ 70,870 ರೂಪಾಯಿ ಅನುದಾನ ಸಿಗುತ್ತದೆ. ಈಗಾಗಲೆ ಹಿಪ್ಪು ನೇರಳೆ ತೋಟವಿದ್ದರೆ ಅದರ ನಿರ್ವಹಣೆಗೆ ಒಂದು ಎಕರೆಗೆ 43,456 ರೂಪಾಯಿ ಅನುದಾನ ಸಿಗುತ್ತದೆ.

ಉದ್ಯೋಗ ಖಾತರಿ ಯೋಜನೆಯಡಿ ಸರ್ಕಾರದಿಂದ ಸಿಗುವ ಅನುದಾನ ಸರ್ಕಾರದ ಹಣಕಾಸಿನ ವ್ಯವಹಾರದ ಮೇಲೆ ನಿಂತಿದೆ ಆದ್ದರಿಂದ ಅನುದಾನ ಹೆಚ್ಚು ಕಡಿಮೆ ಆಗಬಹುದು. ಉದ್ಯೋಗ ಖಾತರಿ ಯೋಜನೆ ಹಾಗೂ ಸರ್ಕಾರದ ಅನುದಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತ್ ಪಿಡಿಓ ಅಥವಾ ಕಂಪ್ಯೂಟರ್ ಆಪರೇಟರ್ ಅವರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ರೈತರಿಗೆ ತಿಳಿಸಿ.

Leave A Reply

Your email address will not be published.