Ultimate magazine theme for WordPress.

ಈ ಹಣ್ಣು ತಿಂದವನೇ ಬಲ್ಲ ಆರೋಗ್ಯದ ಲಾಭಗಳನ್ನ ನೋಡಿ

0 3

ಕ್ಯಾರಂಬೋಲಾ ಅಥಾವಾ ಸ್ಟಾರ್ ಫ್ರೂಟ್ ಎಂಬ ಹುಳಿಮಿಶ್ರಿತ ಸಿಹಿ ಹಣ್ಣು ಬಾದಾಮಿಯ ಆಕಾರದಲ್ಲಿರುವ ಅಡ್ಡಲಾಗಿ ಕತ್ತರಿಸಿದರೆ ಐದು ಬಾಹುಗಳ ಅಥವಾ ಆರು ಬಾಹುಗಳ ನಕ್ಷತ್ರದಂತೆ ಕಾಣುವ ಹಣ್ಣಾಗಿದೆ. ಈ ಕಾರಣಕ್ಕೇ ಇದನ್ನು ಸ್ಟಾರ್ ಫ್ರೂಟ್ ಎಂಬ ಅನ್ವರ್ಥನಾಮದಿಂದಲೇ ಗುರುತಿಸಲಾಗುತ್ತದೆ. ಕನ್ನಡದಲ್ಲಿ ಈ ಹಣ್ಣಿಗೆ ಕರಮದ್ದಲ ಹಣ್ಣು, ಕಂಬರ ಹಣ್ಣು ಅಥವಾ ಧಾರೆ ಹುಳಿ ಎಂದೂ ಕರೆಯಲಾಗುತ್ತದೆ. ಕ್ಯಾರಂಬೋಲಾ ಎಂಬ ಪದವು “food appetizer” (ಆಹಾರದ ಹಸಿವು ಹೆಚ್ಚಿಸುವ)ಎಂಬ ಅರ್ಥವಿರುವ ಕರ್ಮರಂಗ ಎಂಬ ಸಂಸ್ಕೃತ ಪದದಿಂದ ಬಂದಿದೆ.

ನಕ್ಷತ್ರದ ಹಣ್ಣನ್ನು ಮಲಯಾಳಂ ಭಾಷೆಯಲ್ಲಿ ಕ್ಯಾರಂಬೋಲಾ ಎಂದು ಕರೆಯಲಾಗುತ್ತಿತ್ತು ಮತ್ತು ಪೋರ್ಚುಗೀಸರು ಅದನ್ನು ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾಕ್ಕೆ ಕರೆದೊಯ್ಯುವಾಗ ಅವರು ಇದೇ ಮೂಲ ಹೆಸರನ್ನೇ ಮುಂದುವರೆಸಿಕೊಂಡು ಜಗತ್ತಿಗೆ ಪರಿಚಯಿಸಿದರು. ಮೂಲತಃ ಆಗ್ನೇಯ ಏಷ್ಯಾ ಮೂಲದ ಈ ಹುಳಿಮಿಶ್ರಿತ ಸಿಹಿ ಹಣ್ಣು ನಮ್ಮ ಭಾರತದ ದಕ್ಷಿಣ ಭಾಗದಲ್ಲಿಯೂ ಹೆಚ್ಚು ಬೆಳೆಯುತ್ತಿರುವ ಬೆಳೆಯಾಗಿದೆ. ಆದರೆ ಇತರ ವಾಣಿಜ್ಯ ಬೆಳೆಗಳಿಗೆ ಸಿಗದ ಬೆಲೆ ಅಥವಾ ಪ್ರೋತ್ಸಾಹದ ಕಾರಣ ಯಥೇಚ್ಛವಾಗಿ ಬೆಳೆಯುವ ಈ ಹಣ್ಣು ನಮಗೆ ಸುಲಭವಾಗಿ ಅಲಭ್ಯವಾಗಿದೆ. ಆದರೆ ಇದರ ಆರೋಗ್ಯಕರ ಪ್ರಯೋಜನಗಳನ್ನು ಕಂಡುಕೊಂಡ ಬಳಿಕವಾದರೂ ಇದಕ್ಕೆ ಮಾರುಕಟ್ಟೆ ದೊರಕೀತೇ ನೋಡಬೇಕು. ಸ್ಟಾರ್ ಫ್ರೂಟ್‌ನ ಅತ್ಯುತ್ತಮ ಆರೋಗ್ಯಕರ ಪ್ರಯೋಜನಗಳು ಹಾಗೂ ಮುಖ್ಯವಾಗಿ ಮಕ್ಕಳಲ್ಲಿ ಉಂಟಾಗುವ ಕಫದ ನಿವಾರಣೆ ಮಾಡುವಲ್ಲಿ ಇದು ಹೇಗೆ ಸಹಾಯಕಾರಿ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕಾಯಿಯಾಗಿದ್ದಾಗ ಅಚ್ಚ ಹಸಿರು ಬಣ್ಣದಲ್ಲಿರುವ ಈ ಹಣ್ಣು ಅತೀವ ಹುಳಿಯಾಗಿದ್ದರೂ ಹಣ್ಣಾದ ಬಳಿಕ ಹಳದಿ ಬಣ್ಣಕ್ಕೆ ತಿರುಗಿ ಹುಳಿಮಿಶ್ರಿತ ಸಿಹಿ ರುಚಿಯನ್ನು ಪಡೆಯುತ್ತದೆ. ಒಂದರ್ಥದಲ್ಲಿ ಸ್ಪಷ್ಟವಾಗಿ ಇದರ ರುಚಿಯ ಬಗ್ಗೆ ಹೇಳುವುದಾದರೆ, ಮಾವಿನ ಹಣ್ಣಿನ ತಿರುಳಿಗೆ ಕಿತ್ತಳೆ ರಸ ಬೆರೆಸಿದ ಸ್ವಾದ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಈ ಹಣ್ಣಿಗೆ ತಿನ್ನುವ ಹಣ್ಣಿಗಿಂತಲೂ ಉಪ್ಪಿನ ಕಾಯಿ ಅಥವಾ ತಂಬುಳಿ ಮಾಡಲಿಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಉಪ್ಪು ಹಾಕಿಟ್ಟ ಹಣ್ಣುಗಳನ್ನು ವರ್ಷವಿಡೀ ಜಾಡಿಯಲ್ಲಿ ಶೇಖರಿಸಿಡಬಹುದು.

ಕ್ಯಾರಾಂಬೋಲಾ ಹಣ್ಣು ಅತ್ಯಂತ ಕಡಿಮೆ ಕ್ಯಾಲೋರಿ ಇರುವ ಹಣ್ಣಾಗಿದ್ದು, ಇದರಲ್ಲಿ ಕರಗುವ ನಾರು, ವಿಟಮಿನ್ ಎ, ಬಿ ಮತ್ತು ಸಿ ಜೊತೆಗೆ ಖನಿಜಗಳ ಜೊತೆಗೆ ಸತು, ರಂಜಕ, ಮೆಗ್ನೀಸಿಯಮ್, ಸೋಡಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸೇರಿವೆ. ಇದಲ್ಲದೆ, ಇದು ಪಾಲಿಫೆನಾಲಿಕ್ ಸಂಯುಕ್ತಗಳು, ಕ್ವೆರ್ಸೆಟಿನ್, ಗ್ಯಾಲಿಕ್ ಆಮ್ಲ ಮತ್ತು ಎಪಿಕಾಟೆಚಿನ್ ನಂತಹ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟ್ ಗಳನ್ನೂ ಹೊಂದಿದೆ.

ಇದರ ರುಚಿ ಹೆಚ್ಚಿನವರಿಗೆ ಇಷ್ಟವಾಗದೇ ಇದ್ದರೂ ಇದರ ಪೋಷಕಾಂಶಗಳನ್ನು ಯಾರೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ​ಇದು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ಒಂದೇ ಸ್ಟಾರ್‌ಫ್ರೂಟ್ ನಿಮ್ಮ ದೈನಂದಿನ ವಿಟಮಿನ್ ಸಿ ಅಗತ್ಯದ 52% ಮತ್ತು ನಿಮ್ಮ ದೈನಂದಿನ ವಿಟಮಿನ್ ಬಿ ಅವಶ್ಯಕತೆಯ 4% ಅನ್ನು ನಿಮಗೆ ಒದಗಿಸುತ್ತದೆ. ವಿಟಮಿನ್ ಸಿ ನಮ್ಮ ಆರೋಗ್ಯದ ಮೇಲೆ ವ್ಯಾಪಕವಾದ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಜೀವ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು. ಆರೋಗ್ಯಕರ ಚರ್ಮ, ಕೂದಲು ಮತ್ತು ಉಗುರುಗಳ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವುದು ಹಾಗೂ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವುದು.

ಹಾನಿಗೊಳಗಾದರೆ ಇದನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಪಾಲಿಫಿನಾಲ್‌ಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವುದರ ಜೊತೆಗೆ ಹೃದ್ರೋಗಗಳು ಎದುರಾಗುವ ಅಪಾಯವನ್ನೂ ಕಡಿಮೆ ಮಾಡುವ ಮೂಲಕ ಟೈಪ್ -2 ಮಧುಮೇಹದ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ​ಅತಿಸಾರ ನಿಲ್ಲಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಾಗಿದ ಹಣ್ಣು ಮತ್ತು ಹಣ್ಣಿನ ರಸವು ಅತಿಸಾರ ನಿಲ್ಲಿಸುವ ಗುಣಗಳನ್ನು ಹೊಂದಿದೆ ಮತ್ತು ಇದು ಹಲವು ಬಗೆಗಳ ಹೊಟ್ಟೆಯ ಕಾಯಿಲೆಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ಸ್ಟಾರ್‌ಫ್ರೂಟ್ ಅನ್ನು ಆಯುರ್ವೇದೀಯ ಔಷಧಿಗಳಲ್ಲಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತದೆ. ಇದು ನಿಮ್ಮ ಹಸಿವನ್ನು ಉತ್ತೇಜಿಸುತ್ತದೆ. ಸ್ಟಾರ್‌ಫ್ರೂಟ್ 80% ನೀರು ಹೊಂದಿರುವ ಕಾರಣ ದೇಹಕ್ಕೆ ಅತಿ ಹೆಚ್ಚಿನ ಜಲಸಂಚಯನ ಒದಗಿಸುವ ಉತ್ತಮ ಮೂಲವಾಗಿದೆ.

ಇನ್ನೂ ಇದು ಚಿಕ್ಕ ಮಕ್ಕಳಲ್ಲಿ ಉಂಟಾಗುವ ಕಫವನ್ನು ಹೇಗೆ ನಿವಾರಣೆ ಮಾಡುತ್ತದೆ? ಮತ್ತು ಕಫ ನಿವಾರಣೆಗೆ ಇದನ್ನು ಬಳಸುವ ರೀತಿ ಹೇಗೆ? ಎಂದು ನೋಡುವುದಾದರೆ, ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಕಫ ಹೆಚ್ಚಾಗಿ ಉಂಟಾಗುತ್ತದೆ. ಇದರ ನಿವಾರಣೆಗಾಗಿ ಈ ಸ್ಟಾರ್ ಫ್ರೂಟ್ ಅಥವಾ ಕರಮದ್ದಲ ಹಣ್ಣಿನ ರಸವನ್ನು ತೆಗೆದುಕೊಳ್ಳಬೇಕು. ಈ ಹಣ್ಣಿನ ಕಾಲು ಚಮಚ ಅಥವಾ ಅರ್ಧ ಚಮಚ ಹಣ್ಣಿನ ರಸಕ್ಕೆ ಅಷ್ಟೇ ಪ್ರಮಾಣದ ಜೇನುತುಪ್ಪವನ್ನು ಮಿಶ್ರಣ ಮಾಡಿ ಚಿಕ್ಕ ಮಕ್ಕಳಿಗೆ ನೀಡಿದರೆ ಮಕ್ಕಳಲ್ಲಿ ಉಂಟಾಗುವ ಕಫದ ಸಮಸ್ಯೆ ನಿವಾರಣೆ ಆಗುತ್ತದೆ.

ಇನ್ನು ತೀರಾ ಚಿಕ್ಕ ಮಕ್ಕಳು ಅಂದರೆ ಒಂದು ವರ್ಷ ಅಥವಾ ಅದಕ್ಕಿಂತ ಚಿಕ್ಕ ಮಕ್ಕಳು ಇದ್ದರೆ ಒಂದು ಹನಿ ಜೇನುತುಪ್ಪ ಹಾಗೂ ಎರಡು ಹನಿಗಳಷ್ಟು ಈ ಹಣ್ಣಿನ ರಸವನ್ನು ಬೆರೆಸಿ ಕೊಡಬೇಕು. ಇದಲ್ಲದೆ ಇದ್ದರೆ ಇಡೀ ಹಣ್ಣನ್ನು ಬೆಲ್ಲದ ಜೊತೆ ಸೇರಿಸಿ ಹಣ್ಣಿನ ನೀರಿನ ಅಂಶ ಹೋಗುವವರೆಗೂ ಚೆನ್ನಾಗಿ ಕುದಿಸಿ ಪಾಕ ತರಿಸಿ ಶೇಖರಿಸಿ ಇಟ್ಟುಕೊಂಡರೆ ಕಫ ಆದಾಗ ಸೇವಿಸಬಹುದು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.