ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಅದರಂತೆ ಬೆಂಗಳೂರಿನ ಪುಟ್ ಪಾತ್ ನಲ್ಲಿ ಇಡ್ಲಿ ಮಾರುತ್ತಿದ್ದ ಹುಡುಗ ರಾಜ್ಯದ ಮಂತ್ರಿಯಾದ ಮುನಿರತ್ನ ಅವರ ಕಥೆಯನ್ನು ಈ ಲೇಖನದಲ್ಲಿ ನೋಡೋಣ.

ಮುನಿರತ್ನ ಅವರು ಚಿಕ್ಕವರಿದ್ದಾಗ ಹಸಿವು ಮತ್ತು ಬಡತನ ಎಲ್ಲವನ್ನು ಕಲಿಸುತ್ತದೆ ಎಂಬ ಮಾತಿನಂತೆ 70ರ ದಶಕದಲ್ಲಿ ಇಡ್ಲಿ ಮಾರುತ್ತಿದ್ದರು. ಇಂದು ಮುನಿರತ್ನ ನಾಯ್ಡು ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕರು ಹಾಗೂ ರಾಜ್ಯದ ತೋಟಗಾರಿಕಾ ಮತ್ತು ಯೋಜನೆ ಸಾಂಖ್ಯಿಕ ಸಚಿವರಾಗಿದ್ದಾರೆ.

ಇಂದು ಕೋಟ್ಯಾಧೀಶ್ವರರಾಗಿರುವ ಮುನಿರತ್ನ ಅವರು ಜೀವನ ನಡೆಸಲು ಆಟೊ ಚಾಲಕರಾಗಿ, ಸೌದೆ ವ್ಯಾಪಾರ, ಇಡ್ಲಿ ವ್ಯಾಪಾರ, ಗೋಡೆಗೆ ಪೇಂಟ್ ಮಾಡುವ ಕೆಲಸ, ರಸ್ತೆಗೆ ಬಣ್ಣ ಬಳಿಯುವ ಕೆಲಸ, ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ, ಗೇಟ್ ಕೀಪರ್, ಎಲೆಕ್ಟ್ರೀಷಿಯನ್, ಫ್ರೂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದಾರೆ.

ಸಾಮಾನ್ಯವಾಗಿ ರಾಜಕಾರಣಿಗಳು ಉತ್ತಮ ಹಿನ್ನೆಲೆಯಿಂದ ಬಂದಿರುತ್ತಾರೆ. ಯಾವುದೆ ಉತ್ತಮ ಹಿನ್ನೆಲೆ ಇಲ್ಲದೆ ಬಂದಿರುವ ವಿರಳಾತಿ ವಿರಳ ರಾಜಕಾರಣಿಗಳಲ್ಲಿ ಮುನಿರತ್ನ ಅವರು ಕೂಡ ಒಬ್ಬರಾಗಿದ್ದಾರೆ. ಐದು ರೂಪಾಯಿಗೆ ಗೋಡೆಗೆ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದರು, ತಾಯಿಯೊಂದಿಗೆ ಇಡ್ಲಿ ಮಾರುತ್ತಾ ಶಿಕ್ಷಣ ಪಡೆದರು. ನಂತರ 17ನೇ ವಯಸ್ಸಿಗೆ ತಂದೆ ಸಾವಿಗೀಡಾದ ನಂತರ ಬದುಕು ಕಷ್ಟವಾಗಿ ಸಿಕ್ಕ ಸಿಕ್ಕ ಕೆಲಸ ಮಾಡುತ್ತಿದ್ದರು.

ಮುನಿರತ್ನ ಅವರ ತಂದೆ ಕಾರ್ಪೊರೇಷನ್ ಬಿಸಿನೆಸ್ ನಲ್ಲಿ ಸೋತು ಎರಡು ಮನೆ ಮಾರಿ ಸೋಲುತ್ತಾರೆ. ತಂದೆ ಸೋತಲ್ಲೆ ಗೆಲ್ಲಬೇಕೆಂಬ ಹಠದಿಂದ ಮುನಿರತ್ನ ಅವರು ಕಾರ್ಪೋರೇಷನ್ ಕಾಂಟ್ರಾಕ್ಟರ್ ಆಗುತ್ತಾರೆ ಮೊದಲಿಗೆ ಸಣ್ಣದಾಗಿ ಪ್ರಾರಂಭಿಸಿ ನಂತರದ ದಿನಗಳಲ್ಲಿ ಹಣ ಸಂಪಾದನೆ ಮಾಡುತ್ತಾರೆ. ಮುನಿರತ್ನ ಅವರಿಗೆ ಮಲ್ಲೇಶ್ವರಂ ಶಾಸಕರಾಗಿದ್ದ ನಟ ಅನಂತನಾಗ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಅವರು ಸಹಾಯ ಮಾಡುತ್ತಾರೆ.

ಇಡಿ ವರ್ಷಕ್ಕೆ ಹತ್ತು ಸಾವಿರ ರೂಪಾಯಿ ಸಂಪಾದಿಸಲು ಪರದಾಡುತ್ತಿದ್ದ ಕುಟುಂಬದಲ್ಲಿ ಇಂದು ಐಶ್ವರ್ಯ ಲಕ್ಷ್ಮೀ ವಾಸವಾಗಿದ್ದಾಳೆ ಇದಕ್ಕೆ ಕಾರಣ ಮುನಿರತ್ನ ಅವರ ಕಠಿಣ ಪರಿಶ್ರಮ. ಕಾಂಟ್ರಾಕ್ಟರ್ ಕೆಲಸ ಮಾಡುತ್ತಾ ಜನರಿಗೆ ಹತ್ತಿರವಾಗಿ ಜನರ ವಿಶ್ವಾಸವನ್ನು ಗಳಿಸಿದ್ದರು. ಈ ಸಮಯದಲ್ಲಿ ಮುನಿರತ್ನ ಅವರು ಸಿನಿಮಾ ನಿರ್ಮಾಪಕರಾಗಿ ಕೆಲಸ ಮಾಡಿದರು ಅದರಲ್ಲೂ ಯಶಸ್ಸು ಗಳಿಸಿದರು ನಂತರ ನಿರ್ಮಾಪಕರ ಸಂಘದ ಅಧ್ಯಕ್ಷರಾದರು. ನಂತರ ರಾಜಕೀಯಕ್ಕೆ ಇಳಿದರು. ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದು ಕಾರ್ಪೊರೇಟರ್ ಆದರು 2013ರಲ್ಲಿ ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡು ಬಾರಿ ಶಾಸಕರಾದರು.

ನಂತರ ಬಿಜೆಪಿ ಪಕ್ಷಕ್ಕೆ ಸೇರಿ ಎಲೆಕ್ಷನ್ ನಲ್ಲಿ ಗೆದ್ದು ಮಂತ್ರಿಯಾದರು. ಮುನಿರತ್ನ ಅವರು ಕಾರ್ಪೊರೇಷನ್ ಕಾಂಟ್ರಾಕ್ಟರ್ ಆಗಿದ್ದಾಗ ಕಾರ್ಪೊರೇಟರ್ ಆಗಬೇಕೆಂಬ ಕನಸನ್ನು ಹೊಂದಿದ್ದರು ಅವರ ಕನಸಿಗೆ ರೆಕ್ಕೆ ಹಚ್ಚಿ ಬೆಂಬಲವಾಗಿ ನಿಂತವರು ಬಿಕೆ ಹರಿಪ್ರಸಾದ್ ಅವರು. ಮುನಿರತ್ನ ಅವರು ಓದಿದ್ದು ಎಸ್ಎಸ್ಎಲ್ ಸಿ ಆದರೆ ಅವರ ಬದುಕು ಅವರಿಗೆ ಎಲ್ಲವನ್ನು ಕಲಿಸಿತು. ಅವರ ಪತ್ನಿ ಮಂಜುಳಾ ಅವರು ಮುನಿರತ್ನ ಅವರು ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ ಎಂದು ಹೇಳುತ್ತಾರೆ. ಅವರ ಮಕ್ಕಳು ತಮ್ಮ ತಂದೆಯ ಬಗ್ಗೆ ಹೆಮ್ಮೆ ಪಡುತ್ತಾರೆ. ಒಟ್ಟಿನಲ್ಲಿ ಮುನಿರತ್ನ ಅವರು ಇಡ್ಲಿ ಮಾರುತ್ತಾ ಬದುಕನ್ನು ಕಟ್ಟಿಕೊಂಡ ಕಥೆ ನಿಜಕ್ಕೂ ರೋಚಕವಾಗಿದೆ ಅಲ್ಲದೆ ಇಂದಿನ ಯುವಕರಿಗೆ, ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ

Leave a Reply

Your email address will not be published. Required fields are marked *