ಎಂಟಿಬಿ ನಾಗರಾಜ್ ಬೆಳೆದಿದ್ದು ಹೇಗೆ, ಸ್ವಂತ ದುಡಿಮೆಯಿಂದ ಕೋಟಿ ಆಸ್ತಿ ಮಾಡಿದ್ದು ಹೇಗೆ, ಇವರ ತಂದೆ ಮನೆಯಿಂದ ಹೊರಹಾಕಿದ್ದು ಯಾಕೆ ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ನಾಗರಾಜ್ ಅವರು 1951ರಲ್ಲಿ ಜನಿಸಿದರು. ತಂದೆ ನಾಗಪ್ಪ ತಾಯಿ ಮುನಿಯಮ್ಮ ಇವರದು ಶ್ರೀಮಂತ ಕುಟುಂಬವು ಅಲ್ಲ ಹೇಳುವಷ್ಟು ಬಡ ಕುಟುಂಬವು ಆಗಿರಲಿಲ್ಲ. ಇವರ ತಂದೆಯ ಹೆಸರಿನಲ್ಲಿ 10 ಎಕರೆ ಜಮೀನು ಇತ್ತು ಮೂವರು ಮಕ್ಕಳಲ್ಲಿ ಎಂಟಿಬಿ ನಾಗರಾಜ್ ಎರಡನೆಯವರು. ಇವರಿಗೆ ಓದಿನ ಮೇಲೆ ಆಸಕ್ತಿ ಇರಲಿಲ್ಲ ಹತ್ತನೆ ಕ್ಲಾಸಿಗೆ ನಾಗರಾಜ ಅವರು ಶಾಲೆ ಬಿಟ್ಟರು ಈ ವಿಷಯ ಅವರ ತಂದೆ ತಾಯಿಗೆ ಅರಗಿಸಿಕೊಳ್ಳಲು ಆಗಲಿಲ್ಲ ಆದರೆ ನಾಗರಾಜ್ ಅವರು ತಮ್ಮ ಹಠ ಬಿಡಲಿಲ್ಲ ಆಗ ಅವರ ತಂದೆ ನಾಗರಾಜ್ ಅವರನ್ನು ಮನೆಯಿಂದ ಹೊರ ಹಾಕಿದರು ಆಗ ನಾಗರಾಜ ಅವರಿಗೆ ಆಸರೆ ಆಗಿದ್ದು ಪಕ್ಕದ ಮನೆಯವರು ಅವರ ಮನೆಯಲ್ಲಿ ಸ್ವಲ್ಪ ದಿನಗಳ ಕಾಲ ಇದ್ದರು ನಾಗರಾಜ್ ಅವರ ತಾಯಿ ಮುನಿಯಮ್ಮ ನಾಗರಾಜ ಅವರನ್ನು ಮನೆಗೆ ಕರೆದರು.
ಮನೆಯಲ್ಲಿ ತಂದೆ ಶಾಲೆಗೆ ಹೋಗದೆ ಏನು ಮಾಡುವೆ ಎಂದು ಕೇಳಿದರು ಆಗ ನಾಗರಾಜ್ ವ್ಯವಸಾಯ ಮಾಡುತ್ತೇನೆ ಎಂದರು ಅವರ ತಂದೆ ಕೂಲಿ ಕೆಲಸಕ್ಕೆ ಹೋಗುವವರ ಜೊತೆ ನಾಗರಾಜ್ ಅವರನ್ನು ಕಳುಹಿಸಿದರು ಹಲವು ದಿನಗಳು ಕೆಲಸ ಮಾಡಿ ಸಾಕಾಗಿ ಅದನ್ನು ಬಿಟ್ಟು ನಾಗರಾಜ್ ಅವರು 35 ರೂಪಾಯಿಗೆ ಫ್ಯಾಕ್ಟರಿ ಕೆಲಸಕ್ಕೆ ಹೋದರು ಎರಡು ವರ್ಷ ಕೆಲಸ ಮಾಡಿ ಅದನ್ನು ಬಿಟ್ಟರು.
ನಂತರ ಇವರ ತಂದೆಗೆ ಮೂವರು ಹೆಂಡತಿಯರು ಮೊದಲ ಪತ್ನಿಯ ಮಗ ಅಂದರೆ ಅಣ್ಣನ ಜೊತೆ ನಾಗರಾಜ್ ಅವರು ಬಿಲ್ಡಿಂಗ್ ಕೆಲಸಕ್ಕೆ ಹೋಗುತ್ತಿದ್ದರು ಬಂದ ಲಾಭದಲ್ಲಿ ಎಂಟಿಬಿ ಅವರಿಗೆ ಶೇರ್ ಇತ್ತು ಆದರೆ ಅವರಿಗೆ ಇದು ಸಾಕಾಗದೆ ತಂದೆಯ ಬಳಿ ಮಾತನಾಡಿ ತಾವೆ ಒಂದು ಲಾರಿಯನ್ನು ಇಟ್ಟುಕೊಂಡು ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಿಲ್ಡಿಂಗ್ ಕಟ್ಟುತ್ತಿದ್ದರು ಅವರಿಗೆ ಬೇಕಾದ ವಸ್ತುಗಳನ್ನು ಸಪ್ಲೈ ಮಾಡುವುದು ಅವರ ಪ್ಲಾನ್ ಆಗಿತ್ತು ಮೂರು ವರ್ಷ ಅಣ್ಣನ ಜೊತೆ ಸೇರಿ ಕೆಲಸ ಮಾಡಿ ದೊಡ್ಡ ಮಟ್ಟದಲ್ಲಿ ಲಾಭ ಪಡೆದರು ನಂತರ ಎಂಟಿಬಿ ಅವರು ಲಾರಿಯನ್ನು ಅಣ್ಣನಿಗೆ ಬಿಟ್ಟು ತಾವೆ ಸ್ವಂತ ಇಟ್ಟಿಗೆ ಬಿಸಿನೆಸ್ ಪ್ರಾರಂಭಿಸಿದರು 20 ಜನರನ್ನು ಇಟ್ಟುಕೊಂಡು ನಾಟಿ ಇಟ್ಟಿಗೆ ಬಿಸಿನೆಸ್ ಪ್ರಾರಂಭಿಸಿದರು ನೋಡ ನೋಡುತ್ತಿದ್ದಂತೆ ಅಭಿವೃದ್ಧಿಯಾಗುತ್ತಾ ಹೋದರು. ಸಂಬಂಧಿಕರಲ್ಲಿ ಶಾಂತಮ್ಮ ಎನ್ನುವವರೊಂದಿಗೆ ವಿವಾಹವಾದರು. ಇಟ್ಟಿಗೆ ಬಿಸಿನೆಸ್ ಅವರ ಒಂದುವರೆ ಕೋಟಿ ಸಾಮ್ರಾಜ್ಯದ ಬುನಾದಿಯಾಗಿದೆ.
ಎಂಟಿಬಿ ಎನ್ನುವುದು ಅವರ ಇಟ್ಟಿಗೆಯ ಬ್ರ್ಯಾಂಡ್ ನ ಹೆಸರಾಗಿದೆ ಮಂಜುನಾಥ ಟೇಬಲ್ ಬ್ರಿಕ್ಸ್ ಎಂದರ್ಥ. ನೋಡು ನೋಡುತ್ತಲೆ ಇಟ್ಟಿಗೆ ನಂಬರ್ ಒನ್ ಬ್ರ್ಯಾಂಡ್ ಆಯಿತು ಇಟ್ಟಿಗೆ ಮಾಡಲು ಮಣ್ಣಿಗಾಗಿ ಎಕರೆಗಟ್ಟಲೆ ಜಮೀನನ್ನು ಖರೀದಿಸಿದರು. ಇವರು ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಸತತ ಪರಿಶ್ರಮದ ಫಲವಾಗಿ 1985 ರಲ್ಲಿ ಒಂದು ಹಂತಕ್ಕೆ ಬಂದು ನಿಂತರು ಇಂಡಸ್ಟ್ರಿಯಲ್ ಷೆಡ್ ಗಳನ್ನು ಮಾಡಿ ಬಾಡಿಗೆಗೆ ಕೊಟ್ಟರು, ಶೈಕ್ಷಣಿಕ ಸಂಸ್ಥೆಗಳನ್ನು ಹುಟ್ಟುಹಾಕಿದರು ಇದರ ಮಧ್ಯದಲ್ಲಿ ರಾಜಕೀಯ ಕಾಂಗ್ರೆಸ್ ನಾಯಕರು ಇವರನ್ನು ರಾಜಕೀಯಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದರು. ರಾಜಕೀಯಕ್ಕೆ ಸೇರದಿದ್ದರೂ ಕಾಂಗ್ರೆಸ್ ನಾಯಕರೊಂದಿಗೆ ಓಡಾಡುವುದು ಎಲೆಕ್ಷನ್ ಸಮಯದಲ್ಲಿ ದುಡ್ಡು ಕೊಡುತ್ತಿದ್ದರು. ನಂತರ ನಾಗರಾಜ್ ಅವರನ್ನು ಗ್ರಾಮಾಂತರ ಹಾಗೂ ರಾಮನಗರ ಒಂದೆ ಜಿಲ್ಲೆಯಾದಾಗ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮಾಡಲಾಯಿತು.
ನಂತರ 1993 ರಲ್ಲಿ ಕಾವೇರಿ ನಗರ ವಾರ್ಡ್ ನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಹೊಸಕೋಟೆ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಿತು ಆದರೆ ಹೊಸಕೋಟೆ ಕ್ಷೇತ್ರದಲ್ಲಿ ಚುನಾವಣೆ ಸಮಯದಲ್ಲಿ ಗಲಾಟೆ ನಡೆಯುತಿತ್ತು ಹೀಗಾಗಿ ಕುಟುಂಬದವರು ಬೇಡವೆಂದು ಹೇಳಿದರು ನಾಗರಾಜ್ ಅವರು ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ಕಣಕ್ಕಿಳಿದರು ಗಲಾಟೆ ನಡೆದು ನಾಗರಾಜ್ ಅವರ ಮೂರು ಕಾರುಗಳಿಗೆ ಬೆಂ’ಕಿ ಇಡಲಾಯಿತು ಕೆಲವೆ ಮತಗಳ ಅಂತರದಲ್ಲಿ ಎಂಟಿಬಿ ಸೋತರು. ನಂತರ ರಾ ಮಟೀರಿಯಲ್ ಕೊರತೆಯಿಂದ ಇಟ್ಟಿಗೆ ಫ್ಯಾಕ್ಟರಿಯನ್ನು ಮುಚ್ಚಲಾಯಿತು.
2008 ರಲ್ಲಿ ಸ್ಪರ್ಧಿಸಿ ಸೋತರು ಆದರೆ 2013 ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು, ಇವರು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕೆಲಸ ಮಾಡಿದರು. ನಂತರ ಬಿಜೆಪಿ ಪಕ್ಷಕ್ಕೆ ಸೇರಿದರು ಸ್ಪರ್ಧಿಸಿ ಸೋತರು ಆದರೆ ಇವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಿ ಅಬಕಾರಿ ಸಚಿವ ಸ್ಥಾನ ಕೊಟ್ಟರು. ನಾಗರಾಜ್ ಅವರು ಜನರನ್ನು ನೇರವಾಗಿ ಸಂಪರ್ಕ ಮಾಡಲು ಆಗದೆ ಇರುವ ಕಾರಣ ಈ ಖಾತೆಯನ್ನು ತಿರಸ್ಕರಿಸಿದರು. ನಂತರ ನಾಗರಾಜ್ ಅವರಿಗೆ ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ಖಾತೆಯ ಸಚಿವರನ್ನಾಗಿ ಮಾಡಿದರು. ಹೀಗೆ ಏನೂ ಇಲ್ಲದ ನಾಗರಾಜ್ ಅವರು ಬೆಳೆದ ದಾರಿ ಮಾದರಿಯಾಗಿದೆ.