ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ ಮಾಡುತ್ತಿರುವ ಕಾರಣ ಪೊಲೀಸ್ ಇಲಾಖೆ ಕೆಲವು ನಿಯಮಗಳನ್ನು ಜಾರಿ ಮಾಡಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರು ಮತ್ತು ಸಿಬ್ಬಂದಿಗಳು ಸ್ಥಿರ ಅಥವಾ ಚರಾಸ್ತಿಯನ್ನು ಖರೀದಿ ಇಲ್ಲವೇ ಮಾರಾಟ ಮಾಡಲು ಅನುಮತಿ ಕೋರಿ ಸಲ್ಲಿಕೆ ಮಾಡಬೇಕಿರುವ ಡಾಕ್ಯುಮೆಂಟ್ಸ್ ಕುರಿತು, ಪೊಲೀಸ್‌ ಇಲಾಖೆ ಮಹತ್ವದ ಆದೇಶವನ್ನು ಹೊರ ಹಾಕಿದೆ.

ಆದೇಶದಲ್ಲಿ ಹೇಳಿರುವಂತೆ ಮಾಡಬೇಕು ಎಂದು ಪೊಲೀಸ್ ಪ್ರಧಾನ ಕಛೇರಿಯ ಸುತ್ತೋಲೆ ಪ್ರತಿಯನ್ನು ಇದರ ಜೊತೆಗೆ ಲಗತ್ತಿಸಿ ಕಳುಹಿಸಿ ಕೊಡಲಾಗಿದೆ. ಸದರಿ ಸುತ್ತೋಲೆಯಲ್ಲಿ ಇಲಾಖೆಯ ನೌಕರರು ಮತ್ತು ಸಿಬ್ಬಂದಿಗಳು ಸ್ಥಿರ ಅಥವಾ ಚರಾಸ್ತಿಯನ್ನು ಖರೀದಿಸಲು ಇಲ್ಲವೇ ಮಾರಾಟ ಮಾಡಲು ಅನುಮತಿ ಕೋರಿ ಸಲ್ಲಿಸಬೇಕಾದ ಡಾಕ್ಯುಮೆಂಟ್ಸ್ ಕುರಿತು ವಿವರವಾಗಿ ಹೇಳಲಾಗಿದೆ.

ಸದರಿ ಸುತ್ತೋಲೆಯ ಪ್ರತಿಯನ್ನು ಠಾಣೆಯ ಅಥವಾ ಕಛೇರಿಯ ನಾಮಫಲಕದಲ್ಲಿ ಆಳವಡಿಸಿ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ‘ಎ’ ಮತ್ತು ‘ಬಿ’ ದರ್ಜೆ ಅಧಿಕಾರಿಗಳು ( ಐ.ಪಿ.ಎಸ್ ಅಧಿಕಾರಿಗಳನ್ನು ಹೊರತುಪಡಿಸಿ ) ಸ್ಥಿರಾಸ್ತಿ ಹಾಗೂ ಚರಾಸ್ತಿಯನ್ನು ಖರೀದಿಸಲು ಇಲ್ಲವೇ ಮಾರಲು ಮತ್ತು ಉಡುಗೊರೆಯಾಗಿ ಪಡೆಯಲು, ಗೃಹ ನಿರ್ಮಾಣ ಮಾಡಲು ಅನುಮತಿ ಕೋರಿ ಮನವಿಗಳನ್ನು ಪೊಲೀಸ್‌ ಪ್ರಧಾನ ಕಛೇರಿಗೆ ಸಲ್ಲಿಸಬೇಕು.

ಸದರಿಯಲ್ಲಿ ಇರುವುದನ್ನು ಸಲ್ಲಿಕೆ ಮಾಡುವ ಕೋರಿಕೆ ಅಥವಾ ಪ್ರಸ್ತಾವನೆಗಳನ್ನು ಪರೀಕ್ಷೆ ಮಾಡಿ. ಸಲ್ಲಿಸುತ್ತಿರುವ ಕೋರಿಕೆಗಳು ಅಪೂರ್ಣವಾಗಿ ಇದ್ದರೆ, ಸಂಬಂಧಪಟ್ಟ ಡಾಕ್ಯುಮೆಂಟ್ಸ್’ಗಳನ್ನು ಕೋರಿಕೆ ಜೊತೆಗೆ ಸಲ್ಲಿಸದೆ ಇರುವುದು ಕಂಡುಬಂದರೆ. ಇದರಿಂದ ಅನಗತ್ಯ ವಿಳಂಬ ಎದುರಿಸಬೇಕಾಗುತ್ತದೆ. ಕರ್ನಾಟಕ ರಾಜ್ಯ ನಾಗರಿಕ ಸೇವಾ ( ನಡತೆ ) ನಿಯಮಗಳು 2021, ತಾರೀಖು : 07/01/2021ರ ಸೆಕ್ಷನ್ 24ರಂತೆ ಚರ ಹಾಗೂ ಸ್ಥಿರ ಮತ್ತು ಬೆಲೆಬಾಳುವ ಸ್ವತ್ತು ಎನ್ನುವುದರ ಕೆಳಗೆ ಸಬ್ ಸೆಕ್ಷನ್ ( 3 ) ಇದರ ಅಡಿಯಲ್ಲಿ.

ಯಾವುದೆ ವ್ಯಕ್ತಿ ಸರ್ಕಾರಿ ನೌಕರ ಮತ್ತು ಅವನ ಕುಟುಂಬದ ಯಾವುದೇ ಸದಸ್ಯ ಪ್ರಾಧಿಕಾರದಲ್ಲಿ ತಿಳಿಸಿರುವ ಹೊರತು, ಅವರ ಸ್ವಂತ ಹೆಸರಿನಲ್ಲಿ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಗುತ್ತಿಗೆ, ಅಡಮಾನ, ಖರೀದಿ, ಮಾರಾಟ, ಉಡುಗೊರೆ ಮೂಲಕ ಅಥವಾ ಅನ್ಯಥಾ ಯಾವುದೇ ಸ್ಥಿರ ಸ್ವತ್ತನ್ನು ಅರ್ಜಿಸಬಾರದು ಇಲ್ಲವೇ ವಿಲೇ ಮಾಡಬಾರದು.

ಪರಂತು ಒಬ್ಬ ಸರ್ಕಾರಿ ನೌಕರ ಸಮರ್ಥನೀಯ ಕಾರಣಗಳಿಂದಾಗಿ ನಿಯಮಿತ ಪ್ರಾಧಿಕಾರಿಗೆ ಹೇಳದೆ ಯಾವುದೇ ರೀತಿಯ ಸ್ಥಿರ ಸ್ವತ್ತನ್ನು ಅರ್ಜಿಸಿದರೆ ಅಥವಾ ವಿಲೇ ಮಾಡಿದರೆ. ಆ ವ್ಯಕ್ತಿ, ಆ ರೀತಿಯ ವ್ಯವಹಾರ ಮಾಡಿದ 2 ಮಾಸಗಳ ಒಳಗೆ ವಿವರಗಳು ಮತ್ತು ಅದಕ್ಕೆ ಪೂರಕವಾದ ಡಾಕ್ಯುಮೆಂಟ್ಸ್’ಗಳನ್ನು ಮತ್ತು ಸಮರ್ಥನೀಯ ಕಾರಣಗಳ ಜೊತೆಗೆ ನಿಯಮಿತ ಪ್ರಾಧಿಕಾರಿಗೆ ವರದಿ ಮಾಡಬೇಕು.

ನಿಯಮಿತ ಪ್ರಾಧಿಕಾರಿ ಸರ್ಕಾರಿ ನೌಕರ ನೀಡಿದ ಕಾರಣಗಳು ಸೂಕ್ತವಾಗಿದೆ ಎಂದು ತೃಪ್ತಿಪಟ್ಟರೆ ಸರ್ಕಾರಿ ಉದ್ಯೋಗಿ ಸಲ್ಲಿಸಿದ ಡಾಕ್ಯುಮೆಂಟ್ಸ್’ಗಳು ಹಾಗೂ ವಿವರಗಳನ್ನು ಪರೀಕ್ಷೆ ಮಾಡಿ. ಆ ವಿವರಣೆಯನ್ನು ಘಟನೋತ್ತರವಾಗಿ ಟಿಪ್ಪಣಿ ಮಾಡಿಕೊಳ್ಳಬಹುದು ಎಂದು ನಮೂದಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವಾ ( ನಡತೆ ) ನಿಯಮಗಳು 2021ರಲ್ಲಿ ವಿವರಿಸಿರುವಂತೆ ಸರ್ಕಾರಿ ಉದ್ಯೋಗಿ ಅಥವಾ ಅವನ ಕುಟುಂಬದ ಯಾವ ಸದಸ್ಯರೇ ಆದರು ನಿಯಮಿಸಲಾದ ಪ್ರಾಧಿಕಾರಕ್ಕೆ ಮೊದಲೇ ಹೇಳದ ಹೊರತು ಅಥವಾ ಸಮರ್ಥನೀಯ ಕಾರಣಗಳಿಂದಾಗಿ ನಿಯಮಿತ ಪ್ರಾಧಿಕಾರಿಗೆ ಮೊದಲೇ ತಿಳಿಸದೇ ಯಾವುದೇ ಸ್ಥಿರ ಸ್ವತ್ತನ್ನು ಅರ್ಜಿಸಿದರೆ ಅಥವಾ ವಿಲೇ ಮಾಡಿದರೆ.

ಆ ವ್ಯಕ್ತಿ ವ್ಯವಹಾರ ಮಾಡಿದ 2 ತಿಂಗಳ ಒಳಗೆ ವಿವರಗಳು ಹಾಗೂ ಅದಕ್ಕೆ ಪೂರಕ ಡಾಕ್ಯುಮೆಂಟ್ಸ್’ಗಳನ್ನು ಮತ್ತು ಸಮರ್ಥನೀಯ ಕಾರಣಗಳ ಜೊತೆಗೆ ನಿಯಮಿಸಿದ ಪ್ರಾಧಿಕಾರಿಗೆ ವರದಿ ಮಾಡದೇ, ಹಾಗೆ ದಾಖಲೆಗಳನ್ನು ಸಲ್ಲಿಸುವ ಅಧಿಕಾರಿಗಳ ವಿರುದ್ಧ ಕೆ.ಎಸ್‌.ಪಿ ( ನಡತೆ ) ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದ ಕೆಳಗೆ ಇಲಾಖಾ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ತಿಳಿಸಿರುವರು.

ಆದ್ದರಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ‘ಎ’ ‘ಬಿ’ ಮತ್ತು ‘ಸಿ’ ವರ್ಗದ ಅಧಿಕಾರಿಗಳು ( ಐ.ಪಿ.ಎಸ್ ಅಧಿಕಾರಿಗಳನ್ನು ಹೊರತುಪಡಿಸಿ ) ಸ್ಥಿರಾಸ್ತಿ ಹಾಗೂ ಚರಾಸ್ತಿಯನ್ನು ಖರೀದಿ ಮಾಡಲು ಇಲ್ಲವೇ ಮಾರಾಟ ಮಾಡಲು, ಗೃಹ ನಿರ್ಮಾಣ ಮಾಡಲು ಸಲ್ಲಿಸುವ ಕೋರಿಕೆಗಳನ್ನು ಪರೀಕ್ಷೆ ಮಾಡಿ ಟಿಪ್ಪಣಿ ಮಾಡಿಕೊಳ್ಳಬೇಕಾದ ಕಾರಣ.

ಈ ಕಛೇರಿಗೆ ಅಥವಾ ನಿಯಮಿಸಿದ ಪ್ರಾಧಿಕಾರಿಗಳಿಗೆ ಸಲ್ಲಿಸುವ ಕೋರಿಕೆಯ ಜೊತೆಗೆ ಈ ಸುತ್ತೋಲೆ ಸಂದೇಶವನ್ನು ಲಗತ್ತಿಸುವ ಅನುಬಂಧದ (ಎ.ಬಿ.ಸಿ) ಅನ್ವಯ (Annexure A.B.C) ಪರಿಶೀಲನಾ ಪಟ್ಟಿ ( Check list ) ಯಲ್ಲಿ ಇರುವ ವಿಷಯ ಹಾಗೂ ಅಂಶಗಳ ಅನ್ವಯ ಅದನ್ನು ಪರೀಕ್ಷೆ ಮತ್ತು ಭರ್ತಿ ಮಾಡಿ ಸಂಬಂಧಪಟ್ಟ ಎಲ್ಲಾ ಪೂರಕ ಡಾಕ್ಯುಮೆಂಟ್ಸ್’ಗಳ ಜೊತೆಗೆ ನಿಯಮಿಸಿದ ಪ್ರಾಧಿಕಾರಿಗಳಿಗೆ ಸಲ್ಲಿಸುವಂತೆ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಹೇಳಲಾಗಿದೆ. ಅವಶ್ಯಕತೆ ಇದ್ದರೆ ನಿಯಮಿಸಿದ ಪ್ರಾಧಿಕಾರಿಗಳು ಹೆಚ್ಚಿನ ವಿವರ ಮತ್ತು ಡಾಕ್ಯುಮೆಂಟ್ಸ್’ಗಳನ್ನು ಪಡೆದು ಪರಿಶೀಲನೆ ಮಾಡುವ ಷರತ್ತುಗಳನ್ನು ಒಳಪಟ್ಟಿರುತ್ತದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *