ಎಷ್ಟೋ ಗಾದೆಮಾತುಗಳು ಮನುಷ್ಯನ ಜೀವನದಲ್ಲಿ ದಿನಗಳನ್ನು ಕಳೆಯುವುದರಲ್ಲಿ ಒಳ್ಳೆಯ ಸಂದೇಶಗಳನ್ನು ನೀಡುತ್ತವೆ. ಹಾಗೆಯೇ ಅವುಗಳಲ್ಲಿ ಮಾತು ಬೆಳ್ಳಿ ಮತ್ತು ಮೌನ ಬಂಗಾರ ಎಂಬ ಗಾದೆಮಾತು ಕೂಡ ಒಂದು. ಇದು ಬಹಳ ಒಳ್ಳೆಯ ಸಂದೇಶವನ್ನು ನೀಡುತ್ತದೆ. ಏಕೆಂದರೆ ಕೆಲವೊಮ್ಮೆ ಮಾತನಾಡಿದರೆ ಗೌರವ ಸಿಗುತ್ತದೆ. ಹಾಗೆಯೇ ಕೆಲವೊಮ್ಮೆ ಮಾತನಾಡದೇ ಇದ್ದರೆ ಗೌರವ ದೊರಕುತ್ತದೆ. ಆದ್ದರಿಂದ ನಾವು ಇಲ್ಲಿ ಮೌನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮಾತು ಎನ್ನುವುದು ಒಂದು ದೊಡ್ಡ ಶಕ್ತಿ ಎಂದು ಹೇಳಬಹುದು. ಮನಸ್ಸಿಗೆ ಅನಿಸುವ ಅನಿಸಿಕೆಯನ್ನು ವ್ಯಕ್ತ ಪಡಿಸುವ ಒಂದು ಸಾಧನದಂತೆ ಮಾತು ಎನ್ನಬಹುದು. ಏಕೆಂದರೆ ನೋವು ಆದಾಗ ಕೆಲವೊಬ್ಬರಿಗೆ ತಮ್ಮ ಇಷ್ಟದವರ ಜೊತೆ ಮಾತನಾಡಿದರೆ ಮಾತ್ರ ಮನಸ್ಸು ಹಗುರವಾಗುತ್ತದೆ. ಹಾಗೆಯೇ ಕೆಲವರಿಗೆ ಮೌನವಾಗಿದ್ದರೆ ಮಾತ್ರ ಅವರು ನೋವಿನಿಂದ ಹೊರ ಬರುತ್ತಾರೆ. ಹಾಗಾಗಿ ಮೌನಕ್ಕೂ ಕೂಡ ಅದರದ್ದೇ ಆದ ಶಕ್ತಿ ಇದೆ. ಅದು ಅದರದೇ ಆದ ರೀತಿಯಲ್ಲಿ ತೋರಿಸುತ್ತದೆ.

ಮೊದಲು ಮನುಷ್ಯನಾದವನು ಎಲ್ಲಿ ಮಾತನಾಡಬೇಕು ಎನ್ನುವುದನ್ನು ತಿಳಿದುಕೊಂಡಿರಬೇಕು. ಹಾಗೆಯೇ ಎಲ್ಲಿ ಮಾತನಾಡಬಾರದು ಮೌನವಾಗಿ ಇರಬೇಕು ಎನ್ನುವುದರ ಅರಿವನ್ನು ಕೂಡ ಹೊಂದಿರಬೇಕು. ಕೆಲವೊಮ್ಮೆ ಅತಿ ಕಡಿಮೆ ಮಾತನಾಡಿದರೆ ಮಾತ್ರ ವ್ಯಕ್ತಿಗೆ ಬೆಲೆ ಸಿಗುತ್ತದೆ. ಮಾತನಾಡುವ ಸ್ಥಳದಲ್ಲಿ ಮೌನವಾಗಿ ಇದ್ದರೆ ಅದು ಬಹಳ ಕಷ್ಟವಾಗುತ್ತದೆ. ಹಾಗೆಯೇ ಮೌನವಾಗಿ ಇರುವ ಜಾಗದಲ್ಲಿ ಮಾತನಾಡಿದರೆ ಅಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ.

ಮೌನಕ್ಕೂ ಅದರದ್ದೇ ಆದ ಭಾಷೆ ಇರುತ್ತದೆ. ಯಾರಾದರೂ ನೋವಿನಲ್ಲಿ ಮೌನವಾಗಿ ಇದ್ದರೆ ಅವರನ್ನು ಬಹಳ ಇಷ್ಟಪಡುವವರು ಮುಖವನ್ನು ನೋಡಿ ಕಾರಣವನ್ನು ಕೇಳುತ್ತಾರೆ. ಹಾಗಾಗಿ ಮೌನ ಮತ್ತು ಮಾತು ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಯಾವುದನ್ನೂ ತೆಗೆದು ಹಾಕಲು ಸಾಧ್ಯವಿಲ್ಲ. ಸಮಯಕ್ಕೆ ತಕ್ಕ ಹಾಗೆ ಮೌನ ಮತ್ತು ಮಾತನ್ನು ನಿರ್ಧಾರ ಮಾಡಬೇಕು. ಹೀಗಿದ್ದರೆ ಮಾತ್ರ ಎಲ್ಲಾ ಸಂಬಂಧಗಳನ್ನು ಕೊನೆಯವರೆಗೆ ಉಳಿಸಿಕೊಳ್ಳಬಹುದು.

Leave a Reply

Your email address will not be published. Required fields are marked *