ಬಿಗ್ ಬಾಸ್ ಸ್ಪರ್ಧಿ ದಿವ್ಯ ಸುರೇಶ್ ಅವರ ನಿಜ ಜೀವನ ಹೇಗಿದೆ ನೋಡಿ

0 1

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋ ಅತ್ಯುತ್ತಮವಾದ ಪ್ರೇಕ್ಷಕರನ್ನು ಹೊಂದಿದೆ. ಈ ರಿಯಾಲಿಟಿ ಶೋದ ನಿರೂಪಣೆಯನ್ನು ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಾರೆ. ಬಿಗ್ ಬಾಸ್ ಈಗ ಎಂಟನೇ ಸೀಸನ್ ಅನ್ನು ಆರಂಭಿಸಿದೆ. ಈ ಸೀಸನ್ ನಲ್ಲಿ ಕೂಡ ಅತ್ಯುತ್ತಮ ಆಟವಾಡುವ ಸೆಲೆಬ್ರಿಟಿಗಳನ್ನು ಆಯ್ಕೆ ಮಾಡಿದ್ದಾರೆ. ಧನುಶ್ರೀ ಶುಭಪೂಂಜಾ, ಶಂಕರ್ ಅಶ್ವಥ್, ವೈಷ್ಣವಿ ಗೌಡ, ವಿಶ್ವನಾಥ್ ಹಾವೇರಿ, ಅರವಿಂದ ಕೆಪಿ, ನಿಧಿ ಸುಬ್ಬಯ್ಯ, ಶಮಂತ ಗೌಡ, ಗೀತಾ ಭಟ್, ಮಂಜು ಪಾವಗಡ, ದಿವ್ಯ ಸುರೇಶ್, ಚಂದ್ರಕಲಾ ಮೋಹನ್, ರಾಘು ಗೌಡ, ಪ್ರಶಾಂತ್ ಸಂಬರ್ಗಿ, ದಿವ್ಯ ಉರುಡುಗ, ರಾಜೀವ್, ನಿರ್ಮಲ ಹೀಗೆ 16 ಸೆಲೆಬ್ರಿಟಿಗಳು ಆಯ್ಕೆಯಾಗಿದ್ದರು. ಆದ್ದರಿಂದ ದಿವ್ಯಾ ಸುರೇಶ್ ಅವರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬಿಗ್ ಬಾಸ್ ಸೀಸನ್ 8 ಆರಂಭವಾಗಿದ್ದು ಇದರಲ್ಲಿ ದಿವ್ಯಾ ಸುರೇಶ್ ಅವರು ಒಬ್ಬ ಕಠಿಣ ಸ್ಪರ್ಧಿಯಾಗಿದ್ದಾರೆ. ಸೆಲೆಬ್ರಿಟಿ ದಿವ್ಯಾ ಸುರೇಶ್ ಅವರು ಬಹಳ ಸುಂದರವಾಗಿ ಇದ್ದಾರೆ. ಹಾಗೆಯೇ ಇವರಿಗೆ 23ವರ್ಷ ವಯಸ್ಸಾಗಿದೆ. ಇವರು ಕ್ರೀಡಾ ಕ್ಷೇತ್ರದಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೆಲವರಿಗೆ ಕೆಲವು ಆಟಗಳು ಇಷ್ಟ ಆಗುತ್ತವೆ. ಹಾಗೆಯೇ ಇವರಿಗೆ ಕಬಡ್ಡಿ ಬಹಳ ಇಷ್ಟವಾಗಿದ್ದು ಇವರು ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿ ಆಗಿದ್ದಾರೆ. ಹಾಗೆಯೇ ಇವರಿಗೆ ನಟನೆಯಲ್ಲಿ ಬಹಳ ಆಸಕ್ತಿ ಇದೆ.

ಇವರು ಸಿನೆಮಾ ಮತ್ತು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ಡಿಗ್ರಿ ಕಾಲೇಜು ಎಂಬ ಸಿನೆಮಾವನ್ನು ಮಾಡಿದ್ದಾರೆ. ಡಿಗ್ರಿ ಕಾಲೇಜು ಎಂಬ ಸಿನೆಮಾ ತೆಲುಗು ಭಾಷೆಯಲ್ಲಿ ಇದೆ. ಹಾಗೆಯೇ ನನ್ನ ಹೆಂಡತಿ ಎಂ.ಬಿ.ಬಿ.ಎಸ್. ಎಂಬ ಸೀರಿಯಲ್ ನ್ನು ಮಾಡಿದ್ದಾರೆ. ಜೋಶ್ ಸಿನೆಮಾ ನಟ ರಾಕೇಶ್ ಅಡಿಗ ಅವರು ಮತ್ತು ದಿವ್ಯ ಸುರೇಶ್ ಬಹಳ ಹತ್ತಿರದ ಸ್ನೇಹಿತ ಆಗಿದ್ದಾರೆ. ಪ್ರತಿಯೊಬ್ಬ ಮಕ್ಕಳಿಗೂ ತನ್ನ ತಂದೆ ಜೊತೆಗೆ ಇರಬೇಕು ಎಂಬ ಆಸೆ ಇರುತ್ತದೆ.

ಆದರೆ ದಿವ್ಯ ಸುರೇಶ್ ಅವರ ತಂದೆ ಇವರ ಜೊತೆ ಜೀವನ ಮಾಡುತ್ತಿಲ್ಲ. ಆದ್ದರಿಂದ ಇವರಿಗೆ ಅವರ ತಂದೆ ಮೇಲೆ ತುಂಬಾ ಕೋಪ ಇದೆ. ಆದ್ದರಿಂದ ತಂದೆ ಮತ್ತು ತಾಯಿ ಎರಡೂ ಸ್ಥಾನವನ್ನು ತನ್ನ ತಾಯಿಗೆ ನೀಡಿದ್ದಾರೆ. ಹಾಗೆಯೇ ಇವರಿಗೆ ಸುದೀಪ್ ಅವರ ಹೆಬ್ಬುಲಿ ಸಿನೆಮಾದಲ್ಲಿ ತಂಗಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಅವರು ತಂಗಿ ಪಾತ್ರ ಸಿಕ್ಕಿದೆ ಎಂದು ಹೆಬ್ಬುಲಿ ಸಿನೆಮಾದಲ್ಲಿ ನಟನೆ ಮಾಡಲಿಲ್ಲ. ಬಿಗ್ ಬಾಸ್ ಸೀಸನ್ ಎಂಟರಲ್ಲಿ ಇವರು ಅದ್ಭುತವಾದ ಪೈಪೋಟಿಯನ್ನು ನೀಡುತ್ತಿದ್ದಾರೆ ಎಂದು ಹೇಳಬಹುದು.

Leave A Reply

Your email address will not be published.