ಹೆಣ್ಣನ್ನು ದೇವಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಒಂದು ಹೆಣ್ಣು ತಾನು ಹೆತ್ತ ಮನೆಯನ್ನು ಉದ್ಧಾರ ಮಾಡುವುದಲ್ಲದೆ ತನ್ನ ಗಂಡನ ಮನೆಯನ್ನು ಸಹ ಉದ್ಧಾರ ಮಾಡುತ್ತಾಳೆ. ಏಕೆಂದರೆ ಅವಳಿಗೆ ತನ್ನ ಮನೆ ಎಂದು ಅಪಾರವಾದ ಅಭಿಮಾನ ಇರುತ್ತದೆ. ಮನೆ ಎಂದ ಮೇಲೆ ಒಂದೊಂದು ಸಮಯಕ್ಕೆ ಒಂದೊಂದು ಕೆಲಸವನ್ನು ಮಾಡಬೇಕಾಗುತ್ತದೆ. ಆದ್ದರಿಂದ ನಾವು ಇಲ್ಲಿ ಹೆಣ್ಣುಮಕ್ಕಳು ಬೆಳಗ್ಗೆ ಮುಖ್ಯವಾಗಿ ಮಾಡುವ ಕೆಲಸದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೊದಲನೆಯದಾಗಿ ಮನೆಯನ್ನು ಬೆಳಿಗ್ಗೆ ಬೇಗ ಎದ್ದು ತಕ್ಷಣ ಚೆನ್ನಾಗಿ ಗುಡಿಸಿ ಕಸವನ್ನು ತೆಗೆದು ಉದ್ದಬೇಕು. ನಂತರದಲ್ಲಿ ಮನೆಯಂಗಳದಲ್ಲಿ ರಂಗೋಲಿಯನ್ನು ಹಾಕಬೇಕು. ಏಕೆಂದರೆ ಮನೆ ಎಲ್ಲಿ ಸ್ವಚ್ಛವಾಗಿರುತ್ತದೆ ಅಲ್ಲಿ ತಾಯಿ ಲಕ್ಷ್ಮೀದೇವಿಯು ನೆಲೆಸಿರುತ್ತಾಳೆ. ಹಾಗೆಯೇ ಮನೆಯ ಸ್ವಚ್ಛವಾಗಿದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ. ಇಂತಹ ಕಾರಣಗಳಿಂದಲೇ ನಮ್ಮ ಪೂರ್ವಜರು ಮನೆಯನ್ನು ಸ್ವಚ್ಛವಾಗಿಡುವ ಹವ್ಯಾಸವನ್ನು ಕೈಗೊಂಡಿದ್ದಾರೆ. ಎರಡನೆಯದಾಗಿ ಪ್ರತಿಯೊಂದು ಮನೆಯಲ್ಲೂ ಮುಖ್ಯ ದ್ವಾರ ಎಂಬುದು ಇರುತ್ತದೆ. ಅದನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಬೇಕು. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
ವಾರಕ್ಕೆ ಒಂದು ಬಾರಿಯಾದರೂ ಹತ್ತಿ ಹಾಲು ಅಥವಾ ಗಂಗಾಜಲದಿಂದ ಮನೆಯ ಬಾಗಿಲನ್ನು ತೊಳೆಯಬೇಕು. ಹಾಗೆಯೇ ಹೊಸ ಮನೆಯನ್ನು ಕಟ್ಟಿಸುವಾಗ ವಸ್ತಿಲು ಬಾಗಿಲನ್ನು ತುಂಬಾ ಸುಂದರವಾಗಿ ಕಟ್ಟಿಸಿಕೊಳ್ಳಬೇಕು. ಏಕೆಂದರೆ ಇದಕ್ಕೆ ದಿನಾಲೂ ಪೂಜೆ ಮಾಡುತ್ತಾರೆ. ಹಾಗೆಯೇ ಮೂರನೆಯದಾಗಿ ಮಹಿಳೆಯರು ಸಾಮಾನ್ಯವಾಗಿ ಸ್ನಾನ ಮಾಡಿಕೊಂಡು ಮನೆಯನ್ನು ಸ್ವಚ್ಛ ಮಾಡುತ್ತಾರೆ. ಆದರೆ ಇದು ಒಳ್ಳೆಯ ಬೆಳವಣಿಗೆಯಲ್ಲ. ಮನೆಯನ್ನು ಚೆನ್ನಾಗಿ ಸ್ವಚ್ಚ ಮಾಡಿಕೊಂಡು ಸ್ನಾನವನ್ನು ಮಾಡಬೇಕು. ಇದರಿಂದ ಮನಸ್ಸು ದೇಹ ಹಗುರವಾಗುತ್ತದೆ. ಯಾವುದೇ ರೀತಿಯ ಆಲಸ್ಯ ದೇಹಕ್ಕೆ ಇದ್ದರೂ ಬಿಟ್ಟು ಹೋಗುತ್ತದೆ. ಇದರಿಂದ ಕೆಲಸಗಳನ್ನು ಮಾಡಬೇಕೆಂಬ ಸಕಾರಾತ್ಮಕ ಶಕ್ತಿ ನಮ್ಮ ದೇಹದ ಒಳಗೆ ಹೋಗುತ್ತದೆ. ಹಾಗೆಯೇ ಸೂರ್ಯಾಸ್ತವಾದ ನಂತರ ಹೆಣ್ಣುಮಕ್ಕಳು ತಲೆ ಕೂದಲನ್ನು ಬಾಚಬಾರದು.
ಇದರಿಂದ ಲಕ್ಷ್ಮೀದೇವಿಗೆ ಬಹಳ ಕೋಪ ಬರುತ್ತದೆ ಎಂದು ಹೇಳುತ್ತಾರೆ. ಹಾಗೆಯೇ ರಾತ್ರಿ ಕೂದಲನ್ನು ಕಟ್ಟಿಕೊಂಡು ಇರಬೇಕು. ಬಿಚ್ಚಿಕೊಂಡು ಇದ್ದರೆ ಉಳಿದವರಿಗೆ ಸಫಲತೆ ಸಿಗುತ್ತದೆ ಎಂದು ಹೇಳುತ್ತಾರೆ. ನಾಲ್ಕನೆಯದಾಗಿ ಅಡುಗೆ ಮಾಡುವ ಮುನ್ನ ಸ್ನಾನವನ್ನು ಮಾಡಬೇಕು. ಸ್ನಾನ ಮಾಡಿಕೊಂಡು ಅಡುಗೆ ಮಾಡುವುದರಿಂದ ಸಕಾರಾತ್ಮಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಮನಸ್ಸಿಗೆ ಸಹ ನೆಮ್ಮದಿ ಸಿಗುತ್ತದೆ. ಐದನೆಯದಾಗಿ ಮನೆಗೆ ಮುಂದೆ ತುಳಸಿಗಿಡ ಇದ್ದರೆ ಅದಕ್ಕೆ ದಿನ ನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆಯನ್ನು ಮಾಡಬೇಕು. ಇದರಿಂದ ತಾಯಿ ಲಕ್ಷ್ಮೀದೇವಿಯು ಮನೆಯಲ್ಲಿ ನೆಲೆಸುತ್ತಾಳೆ. ಹಾಗೆಯೇ ತುಳಸಿ ಗಿಡವನ್ನು ಸುತ್ತುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು.