ಆರ್.ಟಿ.ಓ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

0 13

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ತನಗೆ ಅವಶ್ಯಕತೆ ಬಿದ್ದಾಗ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳುತ್ತದೆ. ಅದಕ್ಕೆ ತಕ್ಕ ವಿದ್ಯಾರ್ಹತೆ ಇದ್ದವರು ಅರ್ಜಿಯನ್ನು ಸಲ್ಲಿಸಬೇಕು. ರಾಜ್ಯ ಸರ್ಕಾರವು ಇನ್ನು ಸ್ವಲ್ಪ ದಿನಗಳ ನಂತರ ಆರ್ .ಟಿ.ಓ. ಆಫೀಸಿನಲ್ಲಿ ಒಂದಷ್ಟು ಹುದ್ದೆಗಳನ್ನು ಕರೆಯುತ್ತದೆ. ಅವಶ್ಯಕತೆ ಇದ್ದವರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಅದರ ಬಗ್ಗೆ ನಾವು ಹೆಚ್ಚಿನ ಮಾಹಿತಿಯನ್ನು ತಿಳಿಯೋಣ

ಆರ್.ಟಿ.ಓ. ಇದು ಮೋಟಾರ್ ವೇಕಲ್ ಡಿಪಾರ್ಟ್ಮೆಂಟ್ ಗೆ ಸೇರಿದ ಹುದ್ದೆಯಾಗಿದೆ. ಇದು ಮೋಟಾರ್ ವೇಕಲ್ಸ್ ಆಕ್ಟ್ 1988ರ ಅಡಿಯಲ್ಲಿ ಬರುತ್ತದೆ. ಇದು ಇಡೀ ದೇಶಕ್ಕೆ ಒಂದೊಂದು ರಾಜ್ಯಕ್ಕೆ ಒಂದೊಂದು ಕೋಡ್ ನ್ನು ಹೊಂದಿದೆ. ಟ್ರಾನ್ಸ್ಪೋರ್ಟ್ ಕಮಿಷನರ್ ಅಧೀನದಲ್ಲಿ ಬರುತ್ತದೆ. ಪ್ರತಿಯೊಂದು ರಾಜ್ಯಗಳು ಬೇರೆ ಬೇರೆ ಕೋಡ್ ನ್ನು ಹೊಂದಿರುತ್ತವೆ. ಆರ್.ಟಿ.ಓ. ಹುದ್ದೆಗೆ ಕರ್ನಾಟಕ ರಾಜ್ಯ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ. ಕೆಲವು ಹುದ್ದೆಗಳಿಗೆ ಎಲ್ಲರೂ ಹಾಕಲು ಸಾಧ್ಯವಿಲ್ಲ.

ಪ್ರಾದೇಶಿಕ ಸಾರಿಗೆ ಅಧಿಕಾರಿ ಹುದ್ದೆಗೆ ಹಾಕಬಹುದು. ಈ ಹುದ್ದೆಗೆ ಡಿಪ್ಲೋಮಾ ಮುಗಿದಿರಬೇಕು. ಹಾಗೆಯೇ ಇದಕ್ಕೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೂಡ ಮಾಡಿರಬಹುದು.
ನಂತರ ಮೋಟಾರ್ ವಾಹನ ನಿರೀಕ್ಷಕರು ಎಂಬ ಹುದ್ದೆ ಇದೆ. ಇದಕ್ಕೆ 430 ಹುದ್ದೆಗಳು ಖಾಲಿ ಇವೆ. ಇದಕ್ಕೆ ವಿದ್ಯಾರ್ಹತೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಅಥವಾ ಆಟೋಮೊಬೈಲ್ ಇಂಜಿನಿಯರಿಂಗ್ ಮಾಡಿರಬೇಕು. ಹಾಗೆಯೇ ಇದರ ಜೊತೆಗೆ ಡಿಎಲ್ ಇರಬೇಕು. ನಂತರದಲ್ಲಿ ಪ್ರಥಮ ದರ್ಜೆ ಸಹಾಯಕರ ಹುದ್ದೆ ಇದೆ. ಈ ಹುದ್ದೆಗೆ ಯಾವುದೇ ಪದವಿ ಮುಗಿದರೆ ಸಾಕು ಅರ್ಜಿಯನ್ನು ಸಲ್ಲಿಸಬಹುದು.

ಇದರ ಜೊತೆಗೆ ಶೀಘ್ರಲಿಪಿಗಾರರು ಎಂದು ಹುದ್ದೆ ಸಹಿತ ಇದೆ. ಹಾಗೆಯೇ ನಂತರದಲ್ಲಿ ದ್ವಿತೀಯ ದರ್ಜೆ ಸಹಾಯಕರು ಎಂಬ ಹುದ್ದೆ ಇದೆ. ಹಾಗೆಯೇ ಚಾಲಕರ ಹುದ್ದೆ ಇದೆ. ಇದಕ್ಕೆ 10ನೇ ತರಗತಿ ಪಾಸಾಗಿ 4ವರ್ಷ ಅನುಭವದ ಡಿಎಲ್ ಇರಬೇಕು. ಹಾಗೆಯೇ ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡಿನಲ್ಲಿ ಕನ್ನಡ ಇರಬೇಕು. ನಂತರ ಸೇವಕ ಎಂಬ ಹುದ್ದೆ ಇದೆ. ಇದಕ್ಕೆ 10ನೇ ತರಗತಿ ಪಾಸಾದರೆ ಸಾಕು ಇನ್ನು ಯಾವುದೇ ರೀತಿಯ ಮಾಹಿತಿ ಅವಶ್ಯಕತೆ ಇಲ್ಲ. ಇವೆಲ್ಲವುಗಳನ್ನು ರಾಜ್ಯ ಸರ್ಕಾರ ಇನ್ನು ಸ್ವಲ್ಪ ದಿನಗಳ ನಂತರ ಅನುಕೂಲಕ್ಕೆ ತಕ್ಕಂತೆ ಹುದ್ದೆಗಳ ಸಂಖ್ಯೆಯನ್ನು ಹೊರಡಿಸುತ್ತದೆ. ಇದು ಕೇವಲ ಸಣ್ಣ ಸೂಚನೆಯಾಗಿದೆ.

Leave A Reply

Your email address will not be published.