ಸಾಮಾನ್ಯವಾಗಿ ಬಹಳ ಹಿಂದಿನ ಕಾಲದಿಂದಲೂ ಮಹಿಳೆಯರು ತಮ್ಮ ತಮ್ಮ ಮನೆಯಲ್ಲಿ ಅವರ ಆಚಾರ ವಿಚಾರ ಸಂಸ್ಕೃತಿಗಳನ್ನು ಪಾಲಿಸುವುದು ನಮ್ಮ ಧರ್ಮವನ್ನು ಪಾಲಿಸುವುದು ಬೆಳಿಗ್ಗೆ ಬೇಗನೇ ಎದ್ದು ಮನೆಯನ್ನು ಸ್ವಚ್ಚಗೊಳಿಸುವುದು ಸೂರ್ಯೋದಯ ಕಾಲದಲ್ಲಿಯೇ ದೇವರ ಪೂಜೆ ಮಾಡುವುದು, ಹೀಗೆ ಎಲ್ಲ ಧಾರ್ಮಿಕ ಕಾರ್ಯಗಳನ್ನೂ ಅವರು ಪಾಲಿಸುತ್ತಾ ಬರುತ್ತಿದರು ಅದರಿಂದಾಗಿಯೇ ಎಲ್ಲರ ಮನೆಗಳಲ್ಲಿ ಸುಖ ಶಾಂತಿ ಸಮೃದ್ಧಿ ನೆಮ್ಮದಿ ಸಹಬಾಳ್ವೆ ಎಲ್ಲವೂ ಸರಾಗವಾಗಿ ನಡೆಯುತ್ತಿದ್ದವು. ಆದರೆ ಇಂದು ಕಾಲ ಬದಲಾಗಿದೆ ಪುರುಷರ ಸಮಾನವಾಗಿ ಮಹಿಳೆಯರೂ ಸಹ ಎಲ್ಲಾ ಕಾರ್ಯ ಕ್ಷೇತ್ರಗಳಲ್ಲಿಯೂ ಸಹ ತಮ್ಮದೇ ಆದ ಛಾಪು ಮುಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಆದರೇ ಆಧುನಿಕತೆಗೆ ಒಗ್ಗಿಕೊಳ್ಳುತ್ತಿರುವ ಸ್ತ್ರೀಯರು ನಮ್ಮ ಧಾರ್ಮಿಕತೆಯನ್ನು ಮರೆಯುತ್ತಿದ್ದಾರೆ, ಪುರುಷರಂತೆಯೇ ತಾವೂ ಅವರಿಗೆ ಸಮಾನರು ಎಂದು ಭಾವಿಸಿ ದೇವರ ಪೂಜೆ ಮನೆಯ ಸ್ವಚ್ಛತೆ ಇತ್ಯಾದಿಗಳನ್ನು ಮರೆತಿದ್ದಾರೆ ಹಾಗಾಗಿಯೇ ಇಂದು ಮನೆಗಳಲ್ಲಿ ಆರ್ಥಿಕ ಸಮಸ್ಯೆ ಸಾಮರಸ್ಯದ ಜೀವನ ಸಹಬಾಳ್ವೆ ಸುಖ ಶಾಂತಿ ಸಮೃದ್ಧಿ ಕಡಿಮೆಯಾಗಿದೆ ಆದರೆ ಮಹಿಳೆಯರು ನಾವು ಈ ಕೆಳಗೆ ಹೇಳುವ ಕಾರ್ಯಗಳನ್ನು ಪ್ರತಿನಿತ್ಯ ಪಾಲಿಸುತ್ತಾ ಬಂದಲ್ಲಿ ಅವರ ಮನೆಯ ಸುಖ ಶಾಂತಿ ಸಮೃದ್ಧಿ ಹೆಚ್ಚಾಗುತ್ತದೆ ಹಾಗಾದ್ರೆ ಆ ಮಹಿಳೆಯರು ಮಾಡಬೇಕಾದ ಆ ಕೆಲಸಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ತಾವು ವಾಸವಾಗಿರುವ ಮನೆಯು ಯಾವಾಗಲೂ ಸುಂದರವಾಗಿರಬೇಕು ಹಾಗೂ ಸ್ವಚ್ಛವಾಗಿರಬೇಕು ಹೀಗೆ ಮನೆಯನು ಸುಂದರವಾಗಿಡುವ ಸ್ವಚ್ಛವಾಗಿಡುವ ಕೆಲಸವನ್ನು ಮಹಿಳೆಯರು ಆದಷ್ಟು ಬೆಳಿಗ್ಗೆ ಎದ್ದ ತಕ್ಷಣದಲ್ಲಿ ಮಾಡಬೇಕು ಮತ್ತು ಮನೆಯ ಮುಖ್ಯ ದ್ವಾರ ಯಾವುದೇ ವಾಸ್ತು ದೋಷಗಳಿಲ್ಲದೆ ವಾಸ್ತು ದೋಷಗಳಿಂದ ಮುಕ್ತವಾಗಿರಬೇಕು, ಮನೆಯ ಮುಖ್ಯ ದ್ವಾರ ವಾಸ್ತು ದೋಷದಿಂದ ಮುಕ್ತವಾಗಿರಬೇಕು ಎಂದರೆ ಮನೆಯ ಮುಖ್ಯ ದ್ವಾರ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶ ಸ್ವಚ್ಚವಾಗಿರಬೇಕು ಆದ್ದರಿಂದ ಮನೆಯ ಹೆಂಗಸರು ಬೆಳ್ಳಿಗೆ ಎದ್ದೊಡನೆಯೇ ಮನೆಯ ಮುಖ್ಯ ದ್ವಾರವನ್ನು ಸ್ವಚ್ಛಗೊಳಿಸಬೇಕು.

ಅಷ್ಟೇ ಅಲ್ಲದೇ ಸೌಭಾಗ್ಯಕ್ಕಾಗಿ ಸ್ವಚ್ಛಗೊಳಿಸಿದ ಮನೆಯ ಮುಖ್ಯ ದ್ವಾರದ ಮುಂದೆ ರಂಗೋಲಿಯನ್ನು ಹಾಕಬೇಕು ಮತ್ತು ಹೂವು ಹಾಗೂ ಘಂಟೆಗಳಿಂದ ಮನೆಯ ಮುಖ್ಯ ದ್ವಾರವನ್ನು ಅಲಂಕರಿಸಬೇಕು ಮತ್ತು ಮುಖ್ಯ ದ್ವಾರದ ಹೊಸ್ತಿಲಿಗೆ ಅರಿಶಿನ ಕುಂಕುಮ ಇತ್ಯಾದಿಗಳನ್ನು ಹಚ್ಚಿ ಪೂಜಿಸಬೇಕು, ಹೀಗೆ ಮನೆಯ ಮುಖ್ಯ ದ್ವಾರವನ್ನು ಸ್ವಚ್ಛವಾಗಿ ಇಟ್ಟುಕೊಂಡು ಅಲಂಕರಿಸಿ ಪೂಜಿಸುವುದರಿಂದ ಲಕ್ಷ್ಮೀ ದೇವಿಯು ಮನೆಯ ಒಳಗೆ ನಿಸ್ಸಂಕೋಚವಾಗಿ ಪ್ರವೇಶ ಮಾಡುತ್ತಾಳೆ ಅಲ್ಲದೇ ಇಂತಹ ಉತ್ತಮ ಅಭ್ಯಾಸಗಳು ನಿಮ್ಮ ಮನೆಯಲ್ಲಿ ನಿಮ್ಮ ಮನಸ್ಸಿನಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಲು ಸಹಾಯಕವಾಗುತ್ತವೆ ನಿಮ್ಮ ಮನೆಯಲ್ಲಿ ಸದಾ ಸಂತೋಷವು ನೆಲೆಸುವಂತೆ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!