ಕರ್ನಾಟಕದಾದ್ಯಂತ ಅದೆಷ್ಟೋ ಪ್ರಸಿದ್ಧ ದೇವಾಲಯಗಳನ್ನು ನಾವು ನೋಡಿದ್ದೇವೆ ಕೇಳಿದ್ದೇವೆ ಕರ್ನಾಟಕದ ಧಕ್ಷಿಣ ಭಾಗ ಉತರ ಭಾಗ ಪೊರ್ವ ಪಶ್ಚಿಮ ಹೀಗೆ ಎಲ್ಲ ಭಾಗಗಳಲ್ಲಿಯೂ ಒಂದೊಂದು ಅಥವಾ ಇನ್ನೂ ಹಲವಾರು ಪ್ರಸಿದ್ಧ ಮತ್ತು ಶಕ್ತಿ ದೇವಾಲಯಗಳನ್ನು ನಾವು ನೋಡಿದ್ದೇವೆ, ಆದರೆ ಧಕ್ಷಿಣ ಕರ್ನಾಟಕಕ್ಕೆ ಸೇರಿದವರು ನೋಡಿರಲೇಬೇಕಾದ ಒಂದು ದೇವಸ್ಥಾನ ಎಂದರೇ ಅದೇ ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿರುವಂತಹ ಶ್ರೀ ಮಂಜುನಾಥೆಶ್ವರ ಸ್ವಾಮಿಯ ದೇವಾಲಯ ವರ್ಷಕ್ಕೆ ಒಂದು ಬಾರಿಯಾದರೂ ನಾವು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕಾಗಿ ಪ್ರಸಿದ್ಧ ಸ್ಥಳಕ್ಕೆ ಬಂದೇ ಬರುತ್ತೇವೆ, ಆದರೆ ಧರ್ಮಸ್ಥಳಕ್ಕೆ ಬಂದವರೆಂದಿಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗದೇ ಇರಲಾರರು ಸುಬ್ರಹ್ಮಣ್ಯ ಸ್ವಾಮಿಯ ದರ್ಶನವನ್ನು ಪಡೆಯದೇ ಇರಲಾರರು ಹೌದು ಸಾಮಾನ್ಯವಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ಬಂದವರು ಕುಕ್ಕೆ ಕ್ಷೇತ್ರಕ್ಕೆ ಬಂದೇ ಬರುತ್ತಾರೆ ಯಾಕಂದ್ರೆ ಇವೆರಡೂ ಮಲೆನಾಡಿನ ಮಡಿಲಲ್ಲಿ ಇರುವಂತಹ ಪ್ರಸಿದ್ಧ ಪರಮ ಪುಣ್ಯ ಕ್ಷೇತ್ರಗಳು.

ಆದರೆ ಈ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದವರು ತರಾತುರಿಯಲ್ಲಿ ದೇವರ ದರ್ಶನ ಮುಗಿಸಿ ಹೊರಡುತ್ತಿರುತ್ತಾರೆ, ಆದರೆ ಹಾಗೆ ಮಾಡುವುದು ಸರಿಯಲ್ಲ ದೇವಾಲಯಕ್ಕೆ ಬಂದೆವಾದರೆ ದೇವರ ದರ್ಶನವನ್ನು ಬಹಳ ಅಚ್ಚುಕಟ್ಟಾಗಿ ಮಾಡಬೇಕು ಅಲ್ಲದೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬಂದವರು ಈ ಒಂದು ಕೆಲಸವನ್ನು ಮಾಡುವುದರಿದ ನಿಮ್ಮ ಪಾಪಗಳೆಲ್ಲವೂ ಕಳೆದುಹೋಗುತ್ತವೆ ಸರ್ಪ ದೋಷವಿದ್ದರೆ ಪರಿಹಾರವಾಗುತ್ತದೆ ಮತ್ತು ನಿಮ್ಮ ಮುಂದಿನ ಜೀವನ ಬಹಳಷ್ಟು ಆನಂದದಿಂದ ಸಕಲ ಸಮೃದ್ಧಿಯಿಂದ ಕೂಡಿರುತ್ತದೆ ಹಾಗಾದ್ರೆ ನೀವು ಮುಂದಿನ ಬಾರಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋದಾಗ ತಪ್ಪದೆ ಈ ಕೆಲಸವನ್ನು ಮಾಡಿ ನಿಮ್ಮ ಒಳಿತನ್ನು ಕಂಡುಕೊಳ್ಳಿ ಹಾಗಾದ್ರೆ ಆ ಒಂದು ಕೆಲಸ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.

ಮಲೆನಾಡಿನ ಪ್ರಕೃತಿಯ ಮಡಿಲಲ್ಲಿ ಧರ್ಮಸ್ಥಳಕ್ಕೆ ಹತ್ತಿರದಲ್ಲೇ ಇರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಕ್ಕೆ ಬರುವ ಭಕ್ತಾದಿಗಳು ತಪ್ಪದೇ ಕುಮಾರಾಧಾರ ನದಿಯಲ್ಲಿ ಮಿಂದು ಬರಬೇಕು ಅಲ್ಲಿರುವ ಕುಮಾರಾಧಾರ ನದಿಯಲ್ಲಿ ನೀವು ಸ್ನಾನ ಮಾಡುವುದರಿಂದ ನಿಮ್ಮ ಪಾಪ ಕರ್ಮಗಳು ದೂರವಾಗುತ್ತವೆ, ಅಲ್ಲದೆ ನಿಮಗೆ ಇರುವಂತಹ ಚರ್ಮಕ್ಕೆ ಸಂಬಂದಪಟ್ಟಂತಹ ಕಾಯಿಲೆಗಳು ವಾಸಿಯಾಗುತ್ತವೆ ಮತ್ತು ಸರ್ಪ ದೋಷವಿದ್ದರೆ ನಿವಾರಣೆಯಾಗುತ್ತದೆ ಕುಮಾರಾಧಾರ ನದಿಯು ಮಲೆನಾಡಿನ ಘಟ್ಟಗಳಲ್ಲಿ ಹರಿಯುವಂತಹ ಒಂದು ಪರಮ ಪುಣ್ಯ ಪವಿತ್ರ ನದಿಯಾಗಿದೆ ಮತ್ತು ಇದರಲ್ಲಿ ನಿಮ್ಮ ಚರ್ಮ ರೋಗ ಪಾಪ ಕರ್ಮ ಸರ್ಪ ದೋಷಗಳನ್ನು ಕಳೆಯುವಂತಹ ಅಧ್ಬುತ ಗುಣಗಳನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯು ನದಿ ನೀರಿಗೆ ಕರುಣಿಸಿದ್ದಾನೆ ಆದ್ದರಿಂದ ನೀವು ದೇವಸ್ಥಾನಕ್ಕೆ ತೆರಳುವ ಮೊದಲು ಕುಮಾರಾಧಾರ ನದಿಯಲ್ಲಿ ಮೀಯುವುದರಿಂದ ನಿಮ್ಮ ಪಾಪ ಕರ್ಮಗಳು ಕಳೆದು ಪುಣ್ಯದ ಫಲಗಳು ನಿಮಗೆ ಪ್ರಾಪ್ತಿಯಾಗುತ್ತವೆ.

ಕುಮಾರಾಧಾರ ನದಿಯಲ್ಲಿ ಮಿಂದ ನಂತರ ನೀವು ಸ್ವಾಮಿಯ ದೇವಸ್ಥಾಂದ ಬಳಿ ಇರುವ ಗರುಡಗಂಬದ ಗರುಡ ದ್ವಜಕ್ಕೆ ನಮಸ್ಕರಿಸಿ ನಿಮ್ಮ ಸಂಕಲ್ಪವನ್ನು ನಾಗ ದೇವತೆಗಳ ಮುಂದಿಟ್ಟು ಸರ್ಪದೋಷಗಳು ಮತ್ತು ಪಾಪ ಕರ್ಮಗಳು ಪರಿಹಾರವಾಗಲೆಂದು ಸುಬ್ರಹ್ಮಣ್ಯ ಸ್ವಾಮಿಯನ್ನು ಮನಸಾ ಸ್ಮರಿಸಿ ನಂತರವಷ್ಟೇ ದೇವಸ್ಥಾನದ ಒಳಗೆ ತೆರಳಿ ದೇವರ ದರ್ಶನ ಪಡೆಯಬೇಕು, ಹೀಗೆ ಮಾಡುವುದರಿಂದ ನಿಮ್ಮಲ್ಲಿ ನಿಮ್ಮ ಮನೆಯಲ್ಲಿ ಹಲವಾರು ಬದಲಾವಣೆಗಳನ್ನು ನೀವು ನಿರೀಕ್ಷಿಸಬಹುದು ಮತ್ತು ನಿಮ್ಮ ಪಾಪ ಕರ್ಮಗಳನ್ನು ಕಳೆದುಕೊಂಡು ಪುಣ್ಯದ ಫಲಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

Leave a Reply

Your email address will not be published. Required fields are marked *

error: Content is protected !!