ಮೋದಿ ಸರ್ಕಾರ ಹೊಸದಾಗಿ ಜಾರಿಗೆ ಇ ರುಪಿ ಫ್ರೀ ಫೇಡ್ ಇ ವೋಚರ್ ಏನಿದರ ವಿಶೇಷತೆ

0 0

ಮುಂದುವರೆದ ಆರ್ಥಿಕ ಜಗತ್ತಿನಲ್ಲಿ ಕೆಲವು ಸುಧಾರಣೆಗಳನ್ನು ತರಲು ಸರ್ಕಾರಗಳು ನಿರಂತರವಾಗಿ ಹೊಸಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೇಂದ್ರ ಸರ್ಕಾರ ಇ ರುಪಿ ಫ್ರೀ ಫೇಡ್ ಇ ವೋಚರ್ ಅನ್ನು ಜಾರಿಗೆ ತಂದಿದೆ ಹಾಗಂದರೆ ಏನು ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳೋಣ.

ನೀವು ಶಾಲೆಗೆ ಹೋಗುವ ಸಂದರ್ಭದಲ್ಲಿ ನಿಮ್ಮ ತಂದೆ ತಾಯಿ ಈ ವಿಚಾರವನ್ನು ನಿಮ್ಮ ಗಮನಕ್ಕೆ ತಂದಿರಬಹುದು. ನೀವು ಯಾವುದೋ ಒಂದು ವಸ್ತುಗಳನ್ನು ತೆಗೆದುಕೊಳ್ಳಲು ಹಣವನ್ನು ಕೇಳಿರುತ್ತೀರಿ ಅವರು ನಿಮಗೆ ದುಡ್ಡುಕೊಡುವ ಬದಲು ಅವರೆ ಅದನ್ನು ಕೊಂಡು ಕೊಂಡು ಬಂದು ನಿಮಗೆ ಕೊಡುತ್ತಾರೆ ನೀವು ಏನನ್ನಾದರೂ ಕೇಳಿ ಪುಸ್ತಕವಾಗಿರಬಹುದು ತಿಂಡಿಗಳಿರಬಹುದುಏನೇ ಆಗಲಿ ದುಡ್ಡು ಕೊಟ್ಟರೆ ಎಲ್ಲಿ ನೀವು ಸುಮ್ನೆ ವೆಚ್ಚ ಮಾಡುತ್ತೀರೋ ಅನ್ನುವ ಕಾರಣಕ್ಕೆ ವಸ್ತುಗಳನ್ನು ತಂದು ಕೊಡುತ್ತಿದ್ದರು. ನಾನು ಯಾವ ಉದ್ದೇಶಕ್ಕೆ ದುಡ್ಡುಕೊಟ್ಟಿರುತ್ತೇನೋ ಆ ದುಡ್ಡು ಇನ್ಯಾವುದೋ ಕಾರಣಕ್ಕೆ ಖರ್ಚು ಆಗದೆ ಆ ವಸ್ತು ನಿಮ್ಮ ಕೈ ಸೇರಬೇಕು. ಇದನ್ನು ನಾವು ಇ ರೂಪೀ ಗೆ ಲಿಂಕ್ ಮಾಡಬಹುದು.

ಸರ್ಕಾರ ಅನೇಕ ಸಂದರ್ಭಗಳಲ್ಲಿ ಅಂದರೆ ರೈತರ ಖಾತೆಗೆ ದುಡ್ಡು ಹಾಕುತ್ತದೆ ಯಾವ ಕಾರಣಕ್ಕೆ? ಈಗ ಪಿ ಎಂ ಕಿಸಾನ್ ಸಮ್ಮಾನ ಯೋಜನೆ ಯಲ್ಲಿ ಆರು ಸಾವಿರ ರೂಪಾಯಿಯನ್ನು ರೈತರ ಖಾತೆಗೆ ಹಾಕುತ್ತಾರೆ ಅದರ ಉದ್ದೇಶ ರೈತ ಅದನ್ನು ಕೃಷಿ ಉದ್ದೇಶಕ್ಕೆ ಬಳಸಿಕೊಳ್ಳಲು ಎನ್ನುವುದು. ಆ ರೈತ ಅದನ್ನು ಕೃಷಿ ಕೆಲಸಕ್ಕೆ ಬಳಸಿಕೊಳ್ಳದೆ ಬೇರೆ ಕೆಲಸಕ್ಕೆ ಖರ್ಚು ಮಾಡಿದರೆ ಇಲ್ಲಿ ಸರ್ಕಾರದ ಉದ್ದೇಶ ಫಲಿಸುವುದಿಲ್ಲ. ಇದೇ ಕಾರಣಕ್ಕೆ ಈ ಫ್ರೀ ಫೇಡ್ ವೋಚರ್ ಅನ್ನು ಜಾರಿಗೆ ತಂದಿದ್ದಾರೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಸರ್ಕಾರ ಈಗ ಐದುನೂರು ಕೋಟಿ ರೂಪಾಯಿಂದ ಒಂದು ಹತ್ತುಲಕ್ಷ ಜನರಿಗೆ ಇಂತಿಷ್ಟು ರೂಪಾಯಿ ಹಣವನ್ನು ತಲುಪಿಸಬೇಕು ಅಂದುಕೊಂಡಿರುತ್ತದೆ. ಆದ್ದರಿಂದ ಆ ಐದುನೂರು ಕೋಟಿ ರೂಪಾಯಿಯನ್ನು ಬ್ಯಾಂಕಿಗೆ ಕೊಡುತ್ತದೆ ನನಗೆ ಈ ಐನೂರು ಕೋಟಿಗೆ ಒಂದೊಂದು ಯುನಿಟ್ ಗೆ ಇಷ್ಟಿಷ್ಟು ರೂಪಾಯಿ ಅಂತ ಫ್ರೀ ಫೇಡ್ ಇ ವೋಚರ್ ಬೇಕು ಅಂತ ಕೇಳುತ್ತದೆ ಆದ್ದರಿಂದ ಬ್ಯಾಂಕ ಫ್ರೀ ಫೇಡ್ ಇ ವೋಚರ್ ಸಕ್ರಿಯಗೊಳಿಸಿ ಆ ವೋಚರಗಳನ್ನ ಸರ್ಕಾರ ಕೊಡುವ ಮೊಬೈಲ್ ನಂಬರಗಳ ಲಿಸ್ಟ್ ಗೆ ಎಷ್ಟೆಷ್ಟು ವೋಚರ ಹೋಗಬೇಕೋ ಅದನ್ನು ಕಳಿಸುತ್ತದೆ.

ಒಂದು ಅರ್ಥದಲ್ಲಿ ಬ್ಯಾಂಕಿನ ಜವಾಬ್ದಾರಿ ಮುಗಿತು ಸರ್ಕಾರದ ಜವಾಬ್ದಾರಿಯು ಮುಗಿತು ಹಾಗಾದರೆ ಈಗ ನನ್ನ ಫೋನಿಗೆ ಸರ್ಕಾರದಿಂದ ಐನೂರು ರೂಪಾಯಿಯ ಇ ವೋಚರ್ ಬಂದಿದೆ ಇದನ್ನು ಕೀಟನಾಶಕಗಳ ಉದ್ದೇಶಕ್ಕೆ ನೀಡಿರಬಹುದು.ನಾನು ಈಗ ವ್ಯಾಪಾರಿಯ ಬಳಿಗೆ ಹೋಗಿ ಇ ವೋಚರ್ ತೋರಿಸುತ್ತೇನೆ ನನಗೆ ಐನೂರು ರೂಪಾಯಿ ಕೀಟನಾಶಕವನ್ನು ಕೊಡು ಅಂತ ಹೇಳುತ್ತೇನೆ ಆಗ ಆ ವ್ಯಾಪಾರಿ ಬಂದಿರುವ ಕ್ಯೂಆರ್ ಕೊಡನ್ನು ಅಥವಾ ಮಾಹಿತಿಯನ್ನು ಸ್ಕ್ಯಾನ್ ಮಾಡುತ್ತಾನೆ ಆಗ ನನ್ನ ಫೋನ್ ಗೆ ಒಂದು ಒ ಟಿ ಪೀ ಬರುತ್ತದೆ ಆ ಒ ಟಿ ಪಿ ಯನ್ನೂ ದಾಖಲಿಸಿದಾಗ ಆ ವೋಚರ್ ಮೌಲ್ಯದ ವಸ್ತು ನನಗೆ ಸಿಗುತ್ತದೆ ಮತ್ತು ಅದರಲ್ಲಿರುವ ಹಣ ವ್ಯಾಪಾರಿಗೆ ಸಿಗುತ್ತದೆ.

ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಈ ಇ ರುಪಿ ಯೋಜನೆ ಹೇಗೆ ಕೆಲಸ ಮಾಡುತ್ತದೆ ಅನ್ನುವುದಾದರೆ ಸರ್ಕಾರದ ವತಿಯಿಂದ ನಿಮಗೆ ವ್ಯಾಕ್ಸೀನ್ ಕೊಡುತ್ತಿದ್ದಾರೆ ಅದಕ್ಕೆ ಇಂತಿಷ್ಟು ಅಂತ ನೀವು ಕೊಡಬೇಕು ಅಂತ ಅಂದುಕೊಳ್ಳಿ ಆ ಹಣದ ಮೊತ್ತವನ್ನು ಸರ್ಕಾರವೇ ಕೊಡಲು ತಯಾರಿದೆ ಅದಕ್ಕೆ ಸರ್ಕಾರ ನಿಮಗೆ ಆ ವ್ಯಾಕ್ಸೀನ್ ನ ಒಂದು ಡೋಸ್ ಗೆ ಎಷ್ಟಾಗುತ್ತದೆಯೋ ಆ ವೋಚರ್ ತಯಾರಿಸಿ ಅದನ್ನು ನಿಮ್ಮ ನಂಬರ್ ಗೆ ಕಳಿಸುತ್ತದೆ

ನೀವು ಹೋಗಿ ಅದನ್ನು ವ್ಯಾಪಾರಿಗೆ ತೋರಿಸಿದಾಗ ಆತ ಅದನ್ನು ಸ್ಕ್ಯಾನ್ ಮಾಡುತ್ತಾನೆ ಆಗ ನಿಮಗೆ ಒ ಟಿ ಪಿ ಬರುತ್ತದೆ ನೀವು ಅದನ್ನು ಅವನಿಗೆ ಹೇಳುತ್ತೀರಿ ಅಲ್ಲಿಗೆ ವ್ಯವಹಾರ ಮುಗಿಯುತ್ತದೆ ವ್ಯವಹಾರ ಮುಗಿದ ತಕ್ಷಣ ಆ ವ್ಯಾಪಾರಿಗೆ ಹಣ ಬರುತ್ತದೆ ಇದನ್ನು ಮೊದಲೇ ಬ್ಯಾಂಕ್ ಫ್ರೀ ಫೇಡ್ ಮಾಡಿಟ್ಟಿರುತ್ತದೆ ಹಾಗಾಗಿ ಆತ ತಲೆ ಕೆಡಿಸಿಕೊಳ್ಳುವಂತದ್ದಿರುವುದಿಲ್ಲ.

ನಿಮಗೆ ಇ ವೋಚರ್ ಲಾಭ ಪಡೆಯುವುದಕ್ಕೆ ಬ್ಯಾಂಕ್ ಖಾತೆ ಅವಶ್ಯಕತೆ ಇಲ್ಲ. ಮುಂಚೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ ನಿಮಗೆ ಆರುಸಾವಿರ ಹಣ ಬರಬೇಕೆಂದರೆ ಆಧಾರ ಕಾರ್ಡ್ ಇರಬೇಕು ಅದು ಬ್ಯಾಂಕ್ ಗೆ ಲಿಂಕ್ ಆಗಿರಬೇಕು

ಇದೆ ಕಾರಣಕ್ಕೆ ಸರ್ಕಾರ ಜೀರೋ ಬ್ಯಾಲನ್ಸ್ ಖಾತೆಯನ್ನು ಸರ್ಕಾರ ಜಾರಿಗೆ ತಂದಿತು ಇವೆಲ್ಲವನ್ನೂ ಮಾಡಿದಾಗಲೂ ಕೆಲವೊಂದು ತಪ್ಪಿ ಹೋಗುತ್ತಿತ್ತು ಯಾರದ್ದೋ ಖಾತೆಯ ನಕಲಿ ಖಾತೆ ಇರುತ್ತಿತ್ತು ಆರು ಸಾವಿರ ರೈತರಿಗೆ ಹೋಗುವ ಬದಲು ಇನ್ಯಾರಿಗೋ ಹೋಗುತ್ತಿತ್ತು ಈ ಸಮಸ್ಯೆಯನ್ನು ದುರಮಾಡುವುದಕ್ಕೆ ಇ ರುಪಿ ಅನ್ನು ಜಾರಿಗೆ ತಂದಿದೆ

ಇ ರುಪಿಯಿಂದ ಮುಂದಿನ ದಿನಗಳಲ್ಲಿ ಆಗುವ ಲಾಭ ಏನು ಅನ್ನುವುದನ್ನು ನೋಡುವುದಾದರೆ ಪ್ರಸ್ತುತ ಒಟ್ಟು ಹನ್ನೊಂದು ಬ್ಯಾಂಕ್ ಗಳು ಇ ರೂಪೀಯ ಸೇವೆಯನ್ನು ಕೊಡುವುದಕ್ಕೆ ಈಗಾಗಲೆ ಕೈ ಜೋಡಿಸಿದೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚೆಚ್ಚು ಬ್ಯಾಂಕ ಗಳು ಇದರಡಿಯಲ್ಲಿ ಬರಬಹುದು. ಸರ್ಕಾರ ಮುಂದಿನ ದಿನಗಳಲ್ಲಿ ಇದೇ ವೇದಿಕೆಯ ಲಾಭವನ್ನು ಪಡೆದುಕೊಂಡು ನಿಮಗೆ ಕಿಸಾನ್ ಸಮ್ಮಾನ ನಿಧಿಯ ಹಣವನ್ನು ಇ ವೋಚರ್ ರೂಪದಲ್ಲಿ ಕಳಿಸಬಹುದು ಆದರೆ ಈ ಇ ವೋಚರ್ ಯಾವ ಉದ್ದೇಶಕ್ಕೆ ನಿಡಿರುತ್ತಾರೊ ಅದಕ್ಕೆ ಬಳಸಬೇಕು.

ವೋಚರ್ ಮಾಡುವುದಕ್ಕೆ ಮೊದಲೇ ಈ ವೋಚರ್ ಇದಕ್ಕೆ ಅಂತ ನಿರ್ಧಾರ ಮಾಡಿರಲಾಗುತ್ತದೆ ಮತ್ತು ಇದು ಒಂದು ಬಾರಿ ಮಾತ್ರ ಬಳಸುವುದಕ್ಕೆ ಅವಕಾಶ ಇರುತ್ತದೆ. ಇದರಿಂದ ಯಾವ ಉದ್ದೇಶಕ್ಕೆ ಎಷ್ಟು ಹಣ ಖರ್ಚಾಗಿದೆ ಎಂಬುದರ ನಿಖರ ಮಾಹಿತಿ ಸಿಗುತ್ತದೆ.

ಈ ಇ ರೂಪೀ ಯ ಮುಖ್ಯ ಲಾಭ ಭ್ರಷ್ಟಾಚಾರ ನಿರ್ಮೂಲನೆಗೆ ಸಹಕಾರಿಯಾಗಿದೆ. ಯಾಕೆ ಅಂದರೆ ಇದರಿಂದಾಗಿ ನಕಲಿ ಖಾತೆಯಲ್ಲಿ ಹಣ ತಿನ್ನುವುದಕ್ಕೆ ಆಗುವುದಿಲ್ಲ. ಯಾರದ್ದೋ ಹೆಸರಿನಲ್ಲಿ ಇನ್ಯಾರೋ ಲಾಭ ಪಡೆಯಲು ಆಗುವುದಿಲ್ಲ. ಸರ್ಕಾರ ಯಾವ ಉದ್ದೇಶಕ್ಕೆ ಹಣವನ್ನು ಬಿಡುಗಡೆ ಮಾಡುತ್ತದೆಯೊ ಅದೇ ಉದ್ದೇಶಕ್ಕೆ ಆ ಹಣ ಬಳಕೆ ಆಗುತ್ತದೆ. ಒಂದು ವೇಳೆ ನಿಮ್ಮ ವೋಚರ್ ಇರುವ ಫೋನ್ ಕಳೆದು ಹೋದರೆ ನೀವು ಬ್ಯಾಂಕ್ ನವರ ಬಳಿ ಇಂತ ಉದ್ದೇಶಕ್ಕೆ ವೋಚರ್ ಮಾಡಲಾಗಿತ್ತು ಅದನ್ನು ರದ್ದುಮಾಡಿ ಅಂತ ಹೇಳಿದರೆ ಬ್ಯಾಂಕ್ ನವರೂ ಆ ಇವೋಚರ್ ರದ್ದು ಮಾಡುತ್ತಾರೆ

ಸರ್ಕಾರದ ಅನೇಕ ಭವ್ಯ ಉದ್ದೇಶಗಳು ಭ್ರಷ್ಟರ ಪಾಲಾಗುವುದನ್ನು ತಡೆಯುವುದಕ್ಕೆ ಇದನ್ನು ಹೆಚ್ಚಾಗಿ ಬಳಸಿಕೊಳ್ಳಬಹುದು. ಇ ವೋಚರ್ ಮೂಲಕ ಹಣ ನೇರವಾಗಿ ವ್ಯಾಪಾರಿಗಳ ಕೈ ಸೇರುವುದರಿಂದ ಮಧ್ಯದಲ್ಲಿ ಯಾರು ಹಣವನ್ನು ಹೊಡೆಯುವುದಕ್ಕೆ ಆಗುವುದಿಲ್ಲ ಮುಂದಿನ ದಿನಗಳಲ್ಲಿ ಇ ರುಪಿ ಜಾರಿಯಾಗುವುದರಿಂದ ಇನ್ನು ಹೆಚ್ಚಿನ ರೀತಿಯಲ್ಲಿ ಇದರ ಸದುಪಯೋಗವನ್ನುಪಡೆದುಕೊಳ್ಳಬಹುದು.

Leave A Reply

Your email address will not be published.