ಮೊಬೈಲ್ ಫೋನ್ ನ್ನು ಎಲ್ಲರೂ ಬಳಸುತ್ತಾರೆ. ಮೊಬೈಲ್ ಮುಟ್ಟದೆ ಇದ್ದರೆ ಕೆಲವರಿಗೆ ದಿನವೇ ಕಳೆಯುವುದಿಲ್ಲ. ಏಕೆಂದರೆ ಮೊಬೈಲ್ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಒಂದು ಆಕರ್ಷಣೀಯ ವಸ್ತು ಆಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಲ್ಲಿ ಒಂದು ಬಾರಿಯಾದರೂ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಮುಂತಾದವುಗಳನ್ನು ನೋಡದೇ ಇದ್ದರೆ ಸಮಾಧಾನವೇ ಇರುವುದಿಲ್ಲ. ಆದ್ದರಿಂದ ನಾವು ಇಲ್ಲಿ ಶೌಚಾಲಯಗಳಲ್ಲಿ ಮೊಬೈಲ್ ಬಳಸುವ ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ದೊಡ್ಡವರಿಗಿಂತ ಸಣ್ಣವರಿಗೆ ಹೆಚ್ಚು ತಿಳಿದಿರುತ್ತದೆ. ಅದರಲ್ಲೂ ಈಗ ಕೊರೊನಾ ಬಂದ ಮೇಲೆ ಆನ್ಲೈನ್ ಕ್ಲಾಸ್ ಎನ್ನುವ ನೆಪದಿಂದ ಹೆಚ್ಚಾಗಿ ಎಲ್ಲಾ ಮಕ್ಕಳಿಗೂ ಮೊಬೈಲ್ ದೊರಕಿದೆ ಎಂದು ಹೇಳಬಹುದು. ಕೆಲವರಿಗೆ ಹೋದಲ್ಲೆಲ್ಲಾ ಮೊಬೈಲ್ ನ್ನು ಬಳಸುವ ಹವ್ಯಾಸವಿರುತ್ತದೆ. ಹೊರಗಡೆ ಹೋಗುವಾಗ ಮೊಬೈಲ್ ಬೇಕೇ ಬೇಕು. ಇದು ಅವಶ್ಯವೇ ಆಗಿದೆ. ಹಾಗೆಯೇ ನಗರಗಳಲ್ಲಿ ಊಟ ಮಾಡುವಾಗ ಸಹ ಮೊಬೈಲ್ ನೋಡುತ್ತಲೇ ಊಟ ಮಾಡುತ್ತಾರೆ.
ವೈದ್ಯರು ಮೊಬೈಲ್ ನೋಡುತ್ತಾ ಊಟ ಮತ್ತು ತಿಂಡಿಗಳನ್ನು ಮಾಡಬಾರದು ಎಂದು ಹೇಳುತ್ತಾರೆ. ಹಾಗೆಯೇ ಅತಿಯಾದ ಮೊಬೈಲ್ ವೀಕ್ಷಣೆಯಿಂದ ಕಣ್ಣಿಗೆ ಕೆಲವು ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಹಾಗೆಯೇ ಕೆಲವರಿಗೆ ಶೌಚಾಲಯಕ್ಕೆ ಹೋದಾಗ ಮೊಬೈಲ್ ಬಳಸುವ ರೂಢಿ ಇರುತ್ತದೆ. ಇದು ಒಳ್ಳೆಯ ಅಭ್ಯಾಸವಲ್ಲ. ಹಾಗೆಯೇ ಶೌಚಾಲಯದಲ್ಲಿ ಮೊಬೈಲ್ ಬಳಸುವಾಗ ಕೆಲವೊಮ್ಮೆ ಮೊಬೈಲ್ ನೀರಿನಲ್ಲಿ ಬಿದ್ದುಹೋಗುತ್ತದೆ. ಮೊಬೈಲ್ ಅಂಗಡಿಯಲ್ಲಿ ರಿಪೇರಿಗೆ ಬರುವ ಎಷ್ಟೋ ಮೊಬೈಲ್ ಗಳು ಇದೇ ಕಾರಣ ಹೊಂದಿರುತ್ತವೆ.
ಹಾಗೆಯೇ ಇದರಿಂದ ಎಷ್ಟೋ ಕ್ರಿಮಿ ಕೀಟಗಳು ದೇಹವನ್ನು ಸೇರುತ್ತವೆ. ಕೈಯನ್ನು ತೊಳೆದುಕೊಂಡರೂ ಮೊಬೈಲ್ ನ್ನು ತೊಳೆಯುವುದಿಲ್ಲ. ಹಾಗಾಗಿ ಮೊಬೈಲ್ ನಲ್ಲಿ ಇರುವ ಕ್ರಿಮಿಗಳು ದೇಹವನ್ನು ಸೇರುತ್ತವೆ. ಇವು ಮೂಗಿನ ಒಳಗೆ ಸೇರಿದರೆ ದೇಹದ ಒಳಗೆ ಹೊಕ್ಕಿ ರೋಗವನ್ನು ಉಂಟು ಮಾಡುತ್ತವೆ. ಹಾಗೆಯೇ ದೇಹದಲ್ಲಿ ಮುಮ್ಮುಖ ಚಲನೆ ಹಿಮ್ಮುಖ ಚಲನೆ ಆಗುತ್ತದೆ. ಇದು ಮೂತ್ರಕೋಶ ಮತ್ತು ಕಿಡ್ನಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮೊಬೈಲ್ ನ್ನು ಶೌಚಾಲಯದಲ್ಲಿ ಬಳಸಬಾರದು ಎಂದು ಸಂಶೋಧಕರು ಹೇಳುತ್ತಾರೆ.