ಇತ್ತೀಚಿನ ದಿನಗಳಲ್ಲಿ ಈ ಒಂದು ಸಮಸ್ಯೆ ಕೂಡ ಕೆಲವರಲ್ಲಿ ಅನುಭವಕ್ಕೆ ಬಂದಿರುತ್ತದೆ, ಹೌದು ಬಹಳಷ್ಟು ಜನರು ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವವರಾಗಿದ್ದಾರೆ. ಕೆಲವರು ಕೆಲಸ ಮಾಡುವ ಅಥವಾ ಬಾತ್ರೂಮ್ ನಲ್ಲಿ ಅಥವಾ ಇನ್ನು ಯಾವುದೇ ನೀರಿನ ಸ್ಥಳಗಳಲ್ಲಿ ಮೊಬೈಲ್ ಫೋನ್ ಬೀಳಿಸಿಕೊಂಡರೆ ಅದು ಹಾಳಾಗುತ್ತದೆ. ಆದ್ರೆ ನಿಮ್ಮ ಮೊಬೈಲ್ ಫೋನ್ ನೀರಿನಲ್ಲಿ ಬಿದ್ದ ತಕ್ಷಣ ಈ ವಿಧಾನ ಮಾಡಿದ್ರೆ ಮೊಬೈಲ್ ಹಾಳಾಗೋದಿಲ್ಲ. ಅಷ್ಟಕ್ಕೂ ಅದು ಹೇಗೆ ಅನ್ನೋದನ್ನ ಸಂಪೂರ್ಣವಾಗಿ ತಿಳಿಯಲು ಮುಂದೆ ನೋಡಿ, ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.
ಮೊಬೈಲ್ ಫೋನ್ ಏನಾದ್ರು ನೀರಿನಲ್ಲಿ ಬಿದ್ರೆ ತಕ್ಷಣ ಅದನ್ನು ಮೇಲಕ್ಕೆ ಎತ್ತಿ ಸ್ವಿಚ್ ಆಫ್ ಮಾಡಿ ಹಾಗೂ ಅದರ ಬಿಡಿ ಬಾಗಗಳನ್ನ ಬೇರ್ಪಡಿಸ ಬೇಕು, ಅದರ ಹಿಂಬದಿಯ ಕ್ಯಾಪ್ ಹಾಗೂ ಬ್ಯಾಟರಿ ಇತ್ಯಾದಿಗಳನ್ನು ತಗೆದು ಒಂದು ಶುದ್ಧವಾದ ಒಣ ಬಟ್ಟೆಯಿಂದ ಅವುಗಳನ್ನು ಒರೆಸಬೇಕು. ಮುಖ್ಯವಾಗಿ ಹೆಡ್ ಫೋನ್ ರಂದ್ರ ಅಥವಾ ಚಾರ್ಜಿಂಗ್ ರಂಧ್ರದಲ್ಲಿ ನೀರು ಸೇರಿದ್ದರೆ ಅದನ್ನು ತಗೆಯಬೇಕಾಗುತ್ತದೆ.
ನೀರಿನಲ್ಲಿ ಬಿದ್ದ ಮೊಬೈಲ್ ಬಿಡಿ ಭಾಗಗಳನ್ನು ಒಣಬಟ್ಟೆಯಿಂದ ಒರೆಸಿದ ನಂತರ ಅವುಗಳನ್ನು ನಿಮ್ಮ ಮನೆಯ ಅಕ್ಕಿ ಚೀಲ ಅಥವಾ ಅಕ್ಕಿ ಡಬ್ಬದಲ್ಲಿ ಹಾಕಿ ಇಡಿ, ಯಾಕೆಂದರೆ ಅಕ್ಕಿಯಲ್ಲಿ ನೀರನ್ನು ಹೀರುವ ಗುಣವಿದ್ದು ನಿಮ್ಮ ಮೊಬೈಲ್ ಒಳಗೆ ಹೋದ ನೀರನ್ನ ಹಾಗೂ ಮದರ್ ಬೋರ್ಡ್ ತೇವವಾಗಿದ್ದರೆ ತಕ್ಷಣ ಅಕ್ಕಿ ನೀರು ಹೀರುತ್ತದೆ. ಇನ್ನು ಇದನ್ನು ಒಂದೆರಡು ದಿನ ಅಕ್ಕಿ ಡಬ್ಬ ಅಥವಾ ಅಕ್ಕಿ ಮೂಟೆಯಲ್ಲಿ ಇಟ್ಟ ನಂತರ ಅದನ್ನು ತಗೆದು ಬ್ಯಾಟರಿ ಹಾಕಿ ಆನ್ ಮಾಡಿ ಶೇಕಡಾ 90 ರಷ್ಟು ಮೊಬೈಲ್ ಗಳು ಹೀಗೆ ಮಾಡುವುದರಿಂದ ಆನ್ ಆಗುತ್ತದೆ. ನಿಮ್ಮ ಮೊಬೈಲ್ ಏನಾದ್ರು ನೀರಿನಲ್ಲಿ ಬಿದ್ರೆ ತಕ್ಷಣ ಹೀಗೆ ಮಾಡಿ ತೊಂದರೆಯಿಂದ ಪಾರಾಗಿ. ಈ ಉಪಯುಕ್ತ ವಿಚಾರವನ್ನು ಒಮ್ಮೆ ಟ್ರೈ ಮಾಡಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಶುಭವಾಗಲಿ.