ಮಂಗಳವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರಲಿದೆ ಗೊತ್ತೇ ..

0 11

ನಮ್ಮ ಜೀವನದ ಏರುಪೇರುಗಳು ಹಾಗೂ ನಮ್ಮ ಜೀವನದಲ್ಲಿ ಆಗುವಂತಹ ಬದಲಾವಣೆಗಳು ನಾವು ಹುಟ್ಟಿರುವ ದಿನ, ಘಳಿಗೆ ಹಾಗೂ ಸಮಯದ ಮೇಲೆ ಬಹಳಷ್ಟು ಅವಲಂಭಿತವಾಗಿ ಇರುತ್ತವೇ. ನಾವು ಹುಟ್ಟಿದ ದಿನ ನಮ್ಮ ಏಳಿಗೆಯನ್ನು ಬಹಳ ಮುಖ್ಯವಾಗಿ ಪ್ರತಿನಿಧಿಸುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ಅವನವನ ಹುಟ್ಟಿದ ದಿನ ಶ್ರೇಷ್ಠವಾದದ್ದೇ ಆಗಿರುತ್ತದೆ. ನಾವು ಹುಟ್ಟಿದ ಯಾವ ದಿನ ಯಾವ ಯಾವ ವಿಶೇಷತೆ ಇರುತ್ತದೆ ಅದರಿಂದ ನಮ್ಮ ಮುಂದಿನ ಜೀವನ ಹೇಗೆಲ್ಲ ಇರುತ್ತದೆ ಎಂದು ತಿಳಿದುಕೊಳ್ಳುವುದು ಬಹಳ ಸುಲಭ. ಹಾಗಾಗಿ ನಾವು ಈ ಲೇಖನದ ಮೂಲಕ ಮಂಗಳವಾರ ಹುಟ್ಟಿದವರ ದಿನ ಹೇಗಿರತ್ತೆ ಅವರ ಜೀವನ ಹೇಗೆಲ್ಲ ಇರತ್ತೆ ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.

ಮಂಗಳವಾರ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಸುಂದರವಾಗಿ ಇರುತ್ತಾರೆ. ಸೊಂಪಾದ ಕೂದಲು ಹೊಂದಿರುತ್ತಾರೆ ಹಾಗೂ ಇವರ ಧ್ವನಿ ಕೂಡಾ ಕೇಳೋಕೆ ಬಹಳ ಸುಮಧುರವಾಗಿ ಇರುತ್ತೆ. ಮಾತು ಅತೀ ಸ್ನೇಹದಿಂದ ಕೂಡಿರುತ್ತದೆ. ಮುಖದಲ್ಲಿ ಸದಾ ಹೊಳಪು ಇರುತ್ತದೆ. ಮಂಗಳವಾರ ಜನಿಸಿದ ವ್ಯಕ್ತಿಗಳು ಬಹಳ ಬೇಗ ಕೋಪ ಮಾಡಿಕೊಳ್ಳುತ್ತಾರೆ ಆದರೂ ಸಹ ಅಷ್ಟೇ ಬೇಗ ಕೋಪವನ್ನು ಕಡಿಮೆ ಮಾಡಿಕೊಳ್ಳುತ್ತಾರೆ ಹಾಗೆ ಎಲ್ಲರ ಜೊತೆಗೂ ಸಮಾಧಾನದಲ್ಲಿ ಬೆರೆಯುತ್ತಾರೆ. ಬೇರೆ ವ್ಯಕ್ತಿಗಳಿಗೆ ತಮ್ಮನ್ನು ಮುಖಭಂಗ ಮಾಡುವ ಪರಿಸ್ಥಿತಿ ಬರದ ಹಾಗೆ ನೋಡಿಕೊಳ್ಳುತ್ತಾರೆ ಅದರಂತೆಯೇ ಬೇರೆ ಯಾರಿಂದಲೂ ಸುಮ್ನೆ ಇನ್ನೊಬ್ಬ ವ್ಯಕ್ತಿಗೆ ತನ್ನೆದುರು ಅವಮಾನ ಆಗುತ್ತಾ ಇದ್ದರೂ ಅದನ್ನೂ ಸಹ ಸಹಿಸಲ್ಲ.

ವ್ಯಕ್ತಿಯ ವ್ಯಕ್ತಿತ್ವ ಬಹಳಷ್ಟು ಮುಖ್ಯವಾಗಿ ಇರುತ್ತದೆ. ಮಂಗಳವಾರ ಜನಿಸಿದ ಜನರಲ್ಲಿ ಇನ್ನೊಬ್ಬ ವ್ಯಕ್ತಿಗಳ ಬಗ್ಗೆ ಅಗಾಧ ಪ್ರೀತಿ ಇರತ್ತೆ. ಬಹಳಷ್ಟು ವಿಲಾಸಿ ಜೀವನವನ್ನು ಕಳೆಯುವ ಆಸೆ ಇದ್ದು ಅದರಂತೆಯೇ ವಿಲಾಸಿ ಜೀವನವನ್ನೇ ನಡೆಸುತ್ತಾರೆ. ಉತ್ತಮ ಬಟ್ಟೆಗಳು, ವಾಹನಗಳು ಹಾಗೂ ಗೆಳೆಯರೂ ಸಹ ಇರುತ್ತಾರೆ. ಬಹಳ ಪ್ರಾಮಾಣಿಕ ವ್ಯಕ್ತಿಗಳು ಆಗಿರುತ್ತಾರೆ. ತಮ್ಮ ಜೀವನದ ವಿಷಯಕ್ಕೆ ಬಂದರೆ ನಿರ್ಧಿಷ್ಟವಾದ ಗುರಿಯನ್ನು ಇಟ್ಟುಕೊಂಡು ಅದನ್ನ ಸಾಧಿಸಿಯೇ ಸಾಧಿಸುತ್ತಾರೆ.

ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಗುಣಗಳೂ ಇರುತ್ತವೆ. ನಾಯಕತ್ವದ ಗುಣ ಅನ್ನೋದು ಹುಟ್ಟಿನಿಂದಲೇ ಬಂದಿರುತ್ತದೆ ಹಾಗಾಗಿ ಯಾವುದೇ ಕೆಲಸವನ್ನು ಕೈಗೊಂಡರು ಸಹ ಅದನ್ನು ತಾವೇ ಮುಂದೆ ನಿಂತು ಚಲ ಬಿಡದೆ ಸಾಧಿಸುತ್ತಾರೆ. ಯಾವುದೇ ವಿಷಯವನ್ನು ಬೇಗ ಕಲಿಯುತ್ತಾರೆ. ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ತಮ್ಮ ಬಳಿ ಹಣ ಇದೆ ಎಂದು ವ್ಯರ್ಥ ಖರ್ಚು ಮಾಡುವುದಿಲ್ಲ, ಹಣದ ಮಹತ್ವವನ್ನು ತಿಳಿದಿರುತ್ತಾರೆ.

ಸ್ನೇಹಿತರು, ಪ್ರೀತಿ ಪ್ರೇಮ, ಕುಟುಂಬದ ವಿಷಯಕ್ಕೆ ಬಂದರೆ, ಸ್ನೇಹಿತರು ಜಾಸ್ತಿ ಇರುತ್ತಾರೆ, ಜೀವನ ಸಂಗಾತಿ ಕೂಡಾ ಒಳ್ಳೆಯ ಗುಣಗಳನ್ನು ಹೊಂದಿರುತ್ತಾರೆ. ಆರೋಗ್ಯದ ವಿಚಾರಕ್ಕೆ ವಂದರೆ ವಯಸ್ಸಾದ ಮೇಲೆ ಬರುವ ಸಹಜ ಕಾಯಿಲೆಗಳನ್ನು ಬಿಟ್ಟು ಬೇರೆ ಯಾವ ಕಾಯಿಲೆಗಳೂ ಬರುವುದಿಲ್ಲ. ವಯಸ್ಸಾದ ಮೇಲೆ ಕೂಡಾ ಕಾಯಿಲೆಗಳೂ ಬರದಂತೆ ನೋಡಿಕೊಳ್ಳಬಹುದು.

Leave A Reply

Your email address will not be published.