ಪ್ರತಿಯೊಬ್ಬರ ಜೀವನದಲ್ಲೂ ಬಹಳಷ್ಟು ಆಸೆಗಳು ಇರುತ್ತವೆ. ಹಾಗೆ ಅವರ ಮುಂದಿನ ಜೀವನದಲ್ಲಿ ಅವರು ಹೇಗೆ ಇರುತ್ತಾರೆ? ಅವರ ಭವಿಷ್ಯ ಹೇಗೆ ಇರುತ್ತದೆ? ಅವಾರ ಸ್ವಭಾವ ಹೇಗೆ ಅನ್ನೋದರ ಬಗ್ಗೆ ಅವರವರ ಹೆಸರುಗಳ ಮೂಲಕ ಸಹ ತಿಳಿದುಕೊಳ್ಳಬಹುದು. ತಮ್ಮ ಹೆಸರು ಯಾವ ಯಾವ ಅಕ್ಷರದಿಂದ ಆರಂಭ ಆಗುತ್ತದೆ ಅನ್ನುವುದು ಮುಖ್ಯವಾದದ್ದು. ಯಾವ ಅಕ್ಷರದಿಂದ ನಮ್ಮ ಹೆಸರು ಆರಂಭ ಆಗುತ್ತದೆಯೋ ಅದರ ಮೂಲಕ ನಮ್ಮ ಭವಿಷ್ಯವನ್ನು ತಿಳಿಯುವುದು ಅತೀ ಸುಲಭ. ಹಾಗಾಗಿ ಈ ಲೇಖನದಲ್ಲಿ ‘L’ ಅಕ್ಷರದಿಂದ ಹೆಸರು ಆರಂಭ ಆವ ವ್ಯಕ್ತಿಗಳ ಜೀವನ, ಭವಿಷ್ಯ, ವ್ಯಕ್ತಿತ್ವ ಹೇಗೆ ಇರುತ್ತದೆ ಅನ್ನೋದನ್ನ ನೋಡೋಣ.

L ಅಕ್ಷರದಿಂದ ಹೆಸರು ಆರಂಭ ಆಗುವ ವ್ಯಕ್ತಿಗಳು ಸಾಕಷ್ಟು ಪ್ರಸಿದ್ಧಿಯನ್ನು ಹೊಂದಿರುತ್ತಾರೆ. ನೋಡಲು ಬಹಳಷ್ಟು ಸುಂದರವಾದ ವ್ಯಕ್ತಿಗಳು ಆಗಿರುತ್ತಾರೆ ಹಾಗೂ ಇವರ ಸ್ನೇಹ ಕೂಡಾ ಅಷ್ಟೇ ಸುಂದರವಾಗಿ ಇರುತ್ತದೆ. ಈ ಹೆಸರಿನವರ ವ್ಯಕ್ತಿತ್ವ ಆಕರ್ಷಕವಾಗಿದ್ದು 100 ಜನರ ಮಧ್ಯೆಯೂ ಸಹ ಗುರುತಿಸಬಹುದು. ಈ ಹೆಸರಿನ ವ್ಯಕ್ತಿಗಳು ಬಹಳಷ್ಟು ಬುದ್ಧಿವಂತರಾಗಿದ್ದು ಪ್ರತಿಯೊಂದು ವಿಷಯದಲ್ಲಿ ಸಹ ಚೆನ್ನಾಗಿ ಯೋಚನೆ ಮಾಡಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

L ಅಕ್ಷರದಿಂದ ಆರಂಭ ಆಗುವ ಹೆಸರಿನ ವ್ಯಕ್ತಿಗಳು ಸದಾಕಾಲ ಸಂತೋಷದಿಂದ ಬಾಳುತ್ತಾ ಎಲ್ಲರಿಗೂ ಪ್ರೀತಿಯನ್ನು ಹಂಚುತ್ತಾರೆ. ಯಾವುದೇ ಕಾರಣಕ್ಕೂ ಸಹ ತಮ್ಮಲ್ಲಿರುವ ದುಃಖವನ್ನು ಇನ್ನೊಬ್ಬರಿಗೆ ಹೇಳಿಕೊಳ್ಳುವ ಗುಣ ಇವರಲ್ಲಿ ಇರುವುದಿಲ್ಲ. ಈ ಮೂಲಕ ಇನ್ನೊಬ್ಬರಿಗೆ ಕಷ್ಟ ನೀಡುವ ಗುಣ ಇರುವುದಿಲ್ಲ ಇವರಲ್ಲಿ. ಯಾವುದೇ ಸಂದರ್ಭ, ಎಷ್ಟೇ ಕಷ್ಟದ ಪರಿಸ್ಥಿತಿ ಬಂದರೂ ಸಹ ಧೈರ್ಯದಿಂದ ಎದುರಿಸುವ ಛಲ ಇವರಲ್ಲಿ ಇರುತ್ತದೆ. ಯಾವುದೇ ಕಾರಣಕ್ಕೂ ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯುವ ಗುಣ ಇವರದ್ದಲ್ಲ. ಬಹಳಷ್ಟು ಕಷ್ಟ ಪಟ್ಟು ಕೆಲಸದಲ್ಲೂ ಉನ್ನತ ಹುದ್ದೆಯಾನ್ನು ಅಲಂಕರಿಸುತ್ತಾರೆ. ಎಲ್ಲರ ಬಾಯಿಯಿಂದಲೂ ಪ್ರಶಂಶೆ ಪಡೆದು ಮೆಚ್ಚಿನ ಉದ್ಯೋಗಿ ಆಗಿರುತ್ತಾರೆ. ಇನ್ನು ಇವರ ಸಾಂಸಾರಿಕ ವಿಷಯಕ್ಕೆ ಬಂದರೆ, ಪ್ರೀತಿಸಿದ ಹುಡುಗ ಅಥವಾ ಹುಡುಗಿಯನ್ನೇ ವಿವಾಹ ಆಗುತ್ತಾರೆ. ಎಷ್ಟೇ ಕಷ್ಟ ಬಂದರು ಸಹ ಧೈರ್ಯದಿಂದ ಎದುರಿಸಿ ಜೀವನ ನಡೆಸುತ್ತಾರೆ. ಕುಟುಂಬದ ಜನರಲ್ಲಿ ಸಹಾ ಸದಾಕಾಲ ಸಂತೋಷದಿಂದ ಇರುವಂತೆ ನೋಡಿಕೊಳ್ಳುತ್ತಾರೆ. ಇವಿಷ್ಟು L ಅಕ್ಷರದಿಂದ ಹೆಸರು ಆರಂಭ ಆಗುವ ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯಗಳಾಗಿವೆ.

By

Leave a Reply

Your email address will not be published. Required fields are marked *