ಮಿಲ್ಕ್ ಏಟಿಎಂ ಮಶಿನ್ ಮಾಡುವುದರಿಂದ ಹೆಚ್ಚು ಲಾಭ ಹೇಗೆ ಗಳಿಸಬಹುದು?

0 0

ಮನುಷ್ಯನಿಗೆ ಬದುಕಬೇಕು ಎಂದರೆ ಒಂದಲ್ಲಾ ಒಂದು ಉದ್ಯೋಗ ಬೇಕು. ಮಹಿಳೆಯರಿಗೆ ಉದ್ಯೋಗ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಪುರುಷರಿಗೆ ಉದ್ಯೋಗ ಅವಶ್ಯಕವಾಗಿದೆ. ಮನುಷ್ಯನಿಗೆ ಹಣ ಗಳಿಸಬೇಕು ಎಂದಾದರೆ ಹಲವಾರು ಉದ್ಯೋಗಗಳಿವೆ. ಉದ್ಯೋಗಗಳಲ್ಲಿ ಬಿಸನೆಸ್ ಕೂಡ ಒಂದು. ನಾವು ಇಲ್ಲಿ ಒಂದು ಬಿಸನೆಸ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈ ಬಿಸನೆಸ್ ನ ಹೆಸರು ಮಿಲ್ಕ್ ಏಟಿಎಂ ಬಿಸನೆಸ್. ಹಾಲು ಪ್ರತಿಯೊಂದು ಕುಟುಂಬಕ್ಕೂ ದಿನಾಲೂ ಬೇಕೇ ಬೇಕು. ಆದ್ದರಿಂದ ಇದರಿಂದ ಒಳ್ಳೆಯ ಪ್ರಯೋಜನ ಪಡೆಯಬಹುದು. ಈ ಬಿಸನೆಸ್ ಮಾಡಲು ಒಂದು ಮಶಿನ್ ಬೇಕು. ಆ ಮಶಿನ್ ನ್ನು ಮೊದಲು ಖರೀದಿ ಮಾಡಬೇಕು. ಈ ಮಶಿನ್ ನ ಬೆಲೆ ಒಂದೂವರೆ ಲಕ್ಷ ಇರುತ್ತದೆ. ಈ ಮಶಿನ್ ನ ಹಾಲಿನ ಸಾಮರ್ಥ್ಯ 300 ಲೀಟರ್ ಆಗಿರುತ್ತದೆ. ತೆರಿಗೆಗಳೆಲ್ಲ ಸೇರಿ 2 ಲಕ್ಷ ಆಗುತ್ತದೆ. ಈ ಮಶಿನ್ ಗೆ ನಾಣ್ಯಗಳನ್ನು ಹಾಕಬೇಕು. 5ರೂಪಾಯಿ ಅಥವಾ 10ರೂಪಾಯಿಯ ನಾಣ್ಯ ಹಾಕಬೇಕಾಗುತ್ತದೆ. ನಾಣ್ಯ ಹಾಕಿದಾಗ ಆ ಮಶಿನ್ ನಿಂದ ಹಾಲು ಬರುತ್ತದೆ. ಇಷ್ಟು ಹಣಕ್ಕೆ ಇಷ್ಟು ಹಾಲು ಬರಬೇಕು ಎಂದು ಸೆಟ್ ಮಾಡಿಕೊಂಡಿರಬೇಕಾಗುತ್ತದೆ. ಆಗ ಹಣಕ್ಕೆ ತಕ್ಕಂತೆ ಹಾಲು ಮಶಿನ್ ನಿಂದ ಬರುತ್ತದೆ.

ಹಾಗೆಯೇ ಇದಕ್ಕೆ ಸ್ಮಾರ್ಟ್ ಕಾರ್ಡ್ ಗಳನ್ನು ಕೂಡ ಬಳಸಬಹುದು. ಸ್ಮಾರ್ಟ್ ಕಾರ್ಡ್ ಗಳನ್ನು ಮಶಿನ್ ನಲ್ಲಿ ಸೆಟ್ ಮಾಡಿರುವ ಸ್ಕಾನರ್ ಮುಂದೆ ಇಡಬೇಕು. ಆಗ ಅದು ಸ್ಕಾನ್ ಮಾಡಿ ಬೇಕಾದಷ್ಟು ಹಣವನ್ನು ಕಟ್ ಮಾಡುತ್ತದೆ. ಆದರೆ ಕಾರ್ಡ್ ನಲ್ಲಿ ಹಣವಿರಬೇಕು. ಹಾಗೆಯೇ ಮಶಿನ್ ಗೆ ಸಂಬಂಧಪಟ್ಟ ಜ್ಞಾನ ಇರಬೇಕಾಗುತ್ತದೆ. ಇದು ಯಾವಾಗ ಬೇಕಾದರೂ ಸಿಗುತ್ತದೆ. ಏಕೆಂದರೆ ಯಾವಾಗ ಬೇಕಾದರೂ ಹೋಗಿ ಹಣ ಹಾಕಿ ಹಾಲು ಪಡೆಯಬಹುದು. ಅಂಗಡಿಗಳಲ್ಲಿ ಹಾಲಿನ ಪ್ಯಾಕೇಟ್ ಸಿಗುತ್ತದೆ. ಆದರೆ ಇದರಲ್ಲಿ ಫ್ಯಾಟ್ ಮತ್ತು ವಿಟಮಿನ್ ನೂರರಷ್ಟು ಇರುವುದಿಲ್ಲ.

ಆದರೆ ಈ ಮಶಿನ್ ಗೆ ಡೇರಿಯಲ್ಲಿ ಹಾಲು ಖರೀದಿ ಮಾಡಿ ಹಾಕಬೇಕು. ಇದರಿಂದ ಹಾಲಿನಲ್ಲಿ ಇರುವ ಎಲ್ಲಾ ಸತ್ವಗಳು ಸಿಗುತ್ತವೆ. ಆದ್ದರಿಂದ ಆರೋಗ್ಯ ಮುಖ್ಯ ಎನ್ನುವವರು ಈ ಹಾಲನ್ನು ಬಳಸಬಹುದು. ಕೆಲವರಿಗೆ ಕೆಲಸದ ಅಭಾವದಿಂದ ಸಮಯ ಇರುವುದಿಲ್ಲ. ಅಂತಹವರಿಗೆ ಖಾಲಿ ಬಾಟಲಿಗಳನ್ನು ತಂದು ಮಶಿನ್ ನ ಹಾಲನ್ನು ತುಂಬಿಡಬಹುದು. ಕೆಲವರು ಹಾಲನ್ನು ತೆಗೆದುಕೊಂಡು ಹೋಗಲು ಏನೂ ತಂದಿರುವುದಿಲ್ಲ. ಅಂತಹವರಿಗೂ ಸಹ ಇದು ಸಹಾಯವಾಗುತ್ತದೆ ಎಂದು ಹೇಳಬಹುದು. ಲಾಭದ ಬಗ್ಗೆ ಹೇಳುವುದಾದರೆ ದಿನಕ್ಕೆ ಒಂದು ಲೀಟರ್ ಹಾಲಿಗೆ 5ರೂಪಾಯಿ ಲಾಭ ಸಿಕ್ಕರೆ 300ಲೀಟರ್ ಗೆ 1500ರೂಪಾಯಿ ಲಾಭವಾಗುತ್ತದೆ. ಹಾಗೆಯೇ ತಿಂಗಳಿಗೆ 5000ರೂಪಾಯಿ ಖರ್ಚು ಹಿಡಿದರೂ ಕೂಡ 40,000ರೂಪಾಯಿ ಲಾಭ ಪಡೆಯಬಹುದು. ಆದ್ದರಿಂದ ಇದು ಯಾವುದೇ ರೀತಿಯ ಕಷ್ಟವಿಲ್ಲದೆ ಒಳ್ಳೆಯ ಲಾಭವನ್ನು ಪಡೆಯುವ ಬಿಸನೆಸ್ ಎಂದು ಹೇಳಬಹುದು.

Leave A Reply

Your email address will not be published.