ಹುಟ್ಟಿದ ತಕ್ಷಣವೇ ಮಗುವಿನ ಜನ್ಮ ಘಳಿಗೆ ಹಿಡಿದು ಜಾತಕ ಮಾಡುತ್ತಾರೆ. ಅದರ ಮೇಲೆ ಅವರ ಭವಿಷ್ಯ ಇದೆಯೆಂದು ನಂಬುತ್ತಾರೆ. ಅದರಲ್ಲಿ ಮುಖ್ಯವಾಗಿ ರಾಶಿಗಳ ಮೇಲೆ ಒತ್ತು ಕೊಡುತ್ತಾರೆ. ಹನ್ನೆರಡು ರಾಶಿಗಳಲ್ಲಿ ಮೇಷ ರಾಶಿ ಮೊದಲನೆಯದು. ಮೇಷ ರಾಶಿಯವರು ಹೇಗಿರುತ್ತಾರೆ. ಅವರ ಅದೃಷ್ಟ ಸಂಖ್ಯೆ ಯಾವುದು. ಯಾವ ಬಣ್ಣಗಳು ಇವರಿಗೆ ಶುಭ. ಯಾವ ವೃತ್ತಿ ಮೇಷ ರಾಶಿಯವರಿಗೆ ಹೊಂದಿಕೆಯಾಗುತ್ತದೆ ತಿಳಿದುಕೊಳ್ಳುವ. ಮೇಷ ರಾಶಿಯವರು ತಮ್ಮನ್ನು ಮೊದಲನೆ ಸ್ಥಾನದಲ್ಲಿ ಇಟ್ಟಿರುತ್ತಾರೆ. ಮೇಷ ರಾಶಿಯವರಿಗೆ ನಾಯಕತ್ವದ ಗುಣ, ಧೈರ್ಯ, ಸಾದಿಸುವ ಛಲ, ಹಠ, ಯಾವುದೇ ಕೆಲಸ ತೆಗೆದುಕೊಂಡರು ಸರಿಯಾಗಿ ಮುಗಿಸುವ ಗುಣ ಹೊಂದಿರುತ್ತಾರೆ.ಯಾವುದೇ ಮಾತನ್ನು ನೇರವಾಗಿ, ಎದುರಿಗಿರುವವರ ಮುಖದ ಮೇಲೆ ಹೊಡೆದಂತೆ ಹೇಳುತ್ತಾರೆ.ಯಾವುದನ್ನೆಯಾದರೂ ಪ್ರಾಕ್ಟಿಕಲ್ ಆಗಿ ತೆಗೆದುಕೊಂಡು ಯೋಚಿಸುತ್ತಾರೆ.ನಾನು ಹೇಳುವದೆ ನಡೆಯಬೇಕೆಂಬ ಹಠ ತುಂಬಾ ಇರುತ್ತದೆ. ಇಗೋ ಇರುತ್ತದೆ. ತಮ್ಮ ಬಗ್ಗೆ ಗರ್ವವನ್ನು ಹೊಂದಿರಯತ್ತಾರೆ. ಹಠ ಛಲವನ್ನು ಸಂಬಂಧಗಳ ಮದ್ಯೆ ತೋರಿಸದೆ ಬೇಕಾದ ಕಡೆಯಲ್ಲಿ ಉಪಯೋಗಿಸುವ ಜಾಣ್ಮೆ ಕಲಿಯಬೇಕಾಗಿರುತ್ತದೆ. ಮೇಷ ರಾಶಿಯವರಿಗೆ ಮೇಷ ರಾಶಿಯ ಚಿಹ್ನೆಯಾದ ಟಗರಿನಂತೆಯೆ ಗುದ್ದುವ ಗುಣ, ಕೋಪ ಹುಟ್ಟಿನಿಂದಲೆ ಬಂದಿರುತ್ತದೆ. ಇವರ ಬಲವೇ ಧೈರ್ಯವಾಗಿರುತ್ತದೆ. ಬಲಹೀನತೆ ಎಂದರೆ ಅಹಂ, ಸ್ವಾರ್ಥ. ಇವರಿಗೆ ಯಾರ ಮಾತನ್ನು ಕೇಳುವ ತಾಳ್ಮೆ ಕಡಿಮೆ.

ಇನ್ನು ಮೇಷ ರಾಶಿಯವರ ಆರೋಗ್ಯದ ವಿಷಯದಲ್ಲಿ ಬಂದರೆ ಇವರಿಗೆ ಉಸಿರಾಟಕ್ಕೆ ತೊಂದರೆ ಇರುತ್ತದೆ. ಬಿ.ಪಿ ಇರುವುದು ಸಾಮಾನ್ಯ ಯಾಕೆಂದರೆ ಕೋಪ ಜಾಸ್ತಿ ಇರುತ್ತದೆ. ಪೈಲ್ಸ್ ಸಮಸ್ಯೆ ಇರುತ್ತದೆ ಯಾಕೆಂದರೆ ಇವರು ಕಾರವಾಗಿ ಮಾತಾಡುವಂತೆ ಕಾರವನ್ನು ಬಹಳ ತಿನ್ನುವರು. ಕಿಡ್ನಿ ಸ್ಟೋನ್ ಆಗುವ ಸಂಭವನೀಯತೆ ಇರುತ್ತದೆ. ಮಂಡಿ ನೋವಿನ ಸಮಸ್ಯೆ, ಜೊಮು ಹಿಡಿಯುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಇವಿಷ್ಟು ಆರೋಗ್ಯದ ಬಗ್ಗೆ ಆದರೆ ಮೇಷ ರಾಶಿಯವರಿಗೆ ಹೊಂದಿಕೆಯಾಗುವ ಮೆಟಲ್ ಅಂದರೆ ಅದು ಕೊಪರ್. ಊಟದ ತಟ್ಟೆಯಿಂದ ಹಿಡಿದು ನೀರು ಕುಡಿಯುವ ಗ್ಲಾಸ್, ಕೈಗೆ ತೊಡುವ ಕಡಗವನ್ನು ಕೊಪರ್ ನದ್ದೆ ಬಳಸಿದರೆ ಉತ್ತಮ. ಏಕೆಂದರೆ ಮೈಯ್ಯಲ್ಲಿರುವ ಉಷ್ಣ ತೆಗೆದು ತಂಪು ಮಾಡುವ ಗುಣ ಕೊಪರ್ ಗೆ ಇದೆ. ಮೇಷ ರಾಶಿಯವರ ಓದಿನ ವಿಷಯವಾಗಿ ಬಂದರೆ ಇವರಿಗೆ ಮೆಡಿಕಲ್, ಮೆಕಾನಿಕಲ್ ಅಥವಾ ಮಶಿನ್ ಗೆ ಸಂಬಂಧ ಯಾವುದಾದರೂ ಒಪ್ಪುತ್ತದೆ.ಸ್ಪೋರ್ಟ್ಸ್ ನಲ್ಲಿ ಮುಂದುವರೆಯಬೇಕು ಅಂದು ಕೊಂಡಿರುವವರಿಗೂ ಒಳ್ಳೆಯದು. ಸರಕಾರಿ ಕೆಲಸದಲ್ಲಿ ಸ್ಪೋರ್ಟ್ಸ್ ಕೊಟಾದ ಮೇಲೆ ಕೆಲಸ ಸಿಗಬಹುದು. ರಿಯಲ್ ಎಸ್ಟೇಟ್, ಪೈರ್ ಸ್ಟೇಷನ್, ಬ್ರಿಕ್ಸ್ ಇದಕ್ಕೆ ಸಂಬಂಧಿಸಿದ ಓದುಗಳು ಹಾಗೂ ಕೆಲಸಗಳು ಇವರಿಗೆ ಚೆನ್ನಾಗಿ ಆಗಿಬರುತ್ತದೆ.

ಮೇಷ ರಾಶಿಯವರ ಅದೃಷ್ಟ ಸಂಖ್ಯೆ ಒಂದು, ಮೂರು, ಐದು, ಆರು, ಒಂಬತ್ತು. ಕೈಯಲ್ಲಿ ಬರೆದು ಕೊಳ್ಳುವ ಸಂಖ್ಯೆ ಎಂದರೆ ಬಲ ಕೈ ತೋರುಬೆರಳ ಕೆಳಗೆ ಉಬ್ಬು ಇರುವ ಪರ್ವದ ಮೇಲೆ ಪ್ರತಿ ದಿನ ಮೂರು ಎಂದು ಕೇಸರಿ ಬಣ್ಣದಲ್ಲಿ ಬರೆದುಕೊಳ್ಳುವುದು ಯೋಗ ತರುತ್ತದೆ. ಆದಷ್ಟು ಮೂರನ್ನು ಅದೃಷ್ಟ ಸಂಖ್ಯೆಯಾಗಿ ಬಳಸುವುದು ಉತ್ತಮ. ಒಂಬತ್ತು ಎಂದರೆ ಕೆಂಪು , ಮೂರು ಎಂದರೆ ಅರಿಶಿನ ಸೂಚಿಸುತ್ತದೆ. ಮೇಷ ರಾಶಿಯವರು ಅರಿಶಿನ ಬಣ್ಣ, ಹಸಿರು ಬಣ್ಣ, ಕೇಸರಿ ಬಣ್ಣ ಜಾಸ್ತಿ ಬಳಸುವುದು ಉತ್ತಮ. ಬಿಳಿ, ಗ್ರೇಯ್, ಕ್ರೀಂ ಬಣ್ಣಗಳನ್ನು ಬಳಸಬಹುದು. ಆದರೆ ಯಾವುದೆ ಕಾರಣಕ್ಕೂ ಕೆಂಪು ಹಾಗೂ ಕಪ್ಪು ಬಣ್ಣ ಬಳಸ ಬೇಡಿ. ಮೇಷ ರಾಶಿಯವರಿಗೆ ಹೊಂದಿಕೆಯಾಗುವ ರಾಶಿಗಳಲ್ಲಿ ಮೊದಲು ಸಿಂಹ ರಾಶಿ ಒಳ್ಳೆ ಫಲ ಕೊಡುತ್ತದೆ. ಧನು, ಮಿಥುನ, ಕುಂಭ ರಾಶಿ ಹೊಂದಿಕೆಯಾಗತ್ತೆ. ಆದಷ್ಟು ಈ ರಾಶಿಯವರನ್ನೇ ಸಂಗಾತಿಗಳಾಗಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇವಿಷ್ಟು ಮೇಷ ರಾಶಿಯವರ ಬಗೆಗಿನ ವಿವರಗಳು

Leave a Reply

Your email address will not be published. Required fields are marked *