ಹುಟ್ಟಿದ ದಿನಾಂಕ ಮತ್ತು ಜನ್ಮ ಘಳಿಗೆಯ ಮೇಲೆ ಜನ್ಮ ನಕ್ಷತ್ರ ಹಾಗೂ ಜನ್ಮ ರಾಶಿಯನ್ನು ಕಂಡಿ ಹಿಡಿದು ಜಾತಕ ಮಾಡುತ್ತಾರೆ. ಆ ರಾಶಿಯ ಮೇಲೆ ಅವರ ಭವಿಷ್ಯ ಹೇಳುತ್ತಾರೆ. ದಿನ ಭವಿಷ್ಯ, ತಿಂಗಳ ಭವಿಷ್ಯ, ವರ್ಷದ ಭವಿಷ್ಯದ ಬಗ್ಗೆ ಈ ರಾಶಿಯ ಮೇಲೆ ಹೇಳಬಹುದು. ಸಪ್ಟೆಂಬರ್ ತಿಂಗಳಿನಲ್ಲಿ ಮೇಷ ರಾಶಿಯವರ ಭವಿಷ್ಯ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಈ ರಾಶಿ ಭವಿಷ್ಯವನ್ನು ಐದು ಘಟ್ಟಗಳಲ್ಲಿ ವಿಷ್ಲೇಷಿಸುತ್ತೆವೆ. ಹಣಕಾಸು, ವೃತ್ತಿ ಜೀವನ, ಆರೋಗ್ಯ, ಶಿಕ್ಷಣ, ಕುಟುಂಬ ಮತ್ತು ಸಂಬಂಧ ಎಂಬುದಾಗಿ. ರಾಶಿ ಚಕ್ರದ ಮೊದಲ ರಾಶಿ ಮೇಷ. ಅಶ್ವಿನಿ ನಕ್ಷತ್ರದ ನಾಲ್ಕು ಚರಣ, ಕೃತಿಕಾ ನಕ್ಷತ್ರದ ಒಂದನೇ ಚರಣ, ಭರಣಿ ನಕ್ಷತ್ರದ ನಾಲ್ಕು ಚರಣದಲ್ಲಿ ಜನಿಸಿದವರು ಮೇಷ ರಾಶಿಯ ಅಡಿಯಲ್ಲಿ ಬರುತ್ತಾರೆ. ಮೇಷ ರಾಶಿಯ ಅಧಿಪತಿ ಮಂಗಳನಾಗಿರುತ್ತಾನೆ. ಕುಟುಂಬ ಮತ್ತು ಸಂಬಂಧದಲ್ಲಿ. ಮೇಷ ರಾಶಿಯವರು ತಮ್ಮ ಸಂಗಾತಿಯೊಂದಿಗೆ ವಾದ ಮಾಡುವುದಕ್ಕೆ ಹೋಗಬಾರದು. ತಾಳ್ಮೆವಹಿಸಿದರೆ ಪ್ರೀತಿ ಜೀವನ ಸುಗಮವಾಗಿರುತ್ತದೆ. ಸಂಗಾತಿಗೆ ಸಮಯ ಕೊಡಬೇಕು. ಪರಸ್ಪರರ ಭಾವನೆಯನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಮಾಡಬೇಕು. ಯಾವುದೇ ಕುಟುಂಬದ ವ್ಯವಹಾರಗಳಿಗೆ ಇದು ಪ್ರಶಸ್ತವಾದ ತಿಂಗಳು. ಕುಟುಂಬದವರ ಬೆಂಬಲ ನಿಮ್ಮ ಕಡೆಗಿರುತ್ತದೆ. ಮಕ್ಕಳು ಅದ್ಯಯನದಲ್ಲಿ ಪ್ರಗತಿ ಸಾಧಿಸುತ್ತಾರೆ. ಒಟ್ಟರೆ ಈ ತಿಂಗಳಲ್ಲಿ ಕುಟುಂಬದಲ್ಲಿ ಶಾಂತಿ ನೆಲೆಸಿರುತ್ತದೆ.

ಆರೋಗ್ಯದ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು. ಮಧುಮೇಹ ಇರುವವರಿಗೆ ಆರೋಗ್ಯ ತೊಂದರೆ ಹೆಚ್ಚಾಗಬಹುದು. ಎಣ್ಣೆ ಪದಾರ್ಥಗಳ ಸೇವನೆ ಕಡಿಮೆ ಮಾಡಿಕೊಂಡರೆ ಒಳ್ಳೆಯದು. ಮದ್ಯಪಾನ, ಧೂಮಪಾನ ಮಾಡುವವರಿಗೆ ಆರೋಗ್ಯ ಕೆಡುವ ಸಾಧ್ಯತೆ ಹೆಚ್ಚು ಎಂದು ಗ್ರಹಗಳ ಸ್ಥಾನ ತೋರಿಸುತ್ತಿದೆ. ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ ನಿರ್ಲಕ್ಷ್ಯಬೇಡ. ಆರೋಗ್ಯದ ಬಗೆಗೆ ಗಮನ ನೀಡಿ.

ಶಿಕ್ಷಣದಲ್ಲಿನ ಉನ್ನತಿಗೆ ಪರಿಶ್ರಮ ಒಂದೆ ಮಾರ್ಗ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಈ ತಿಂಗಳು ಉನ್ನತ ಶಿಕ್ಷಣದ ಪರೀಕ್ಷೆಗಳನ್ನು ಎದುರಿಸುವ ಸಮಯವಾಗಿದೆ. ಮಾನಸಿಕ ಬಲವನ್ನು ಗಟ್ಟಿ ಮಾಡಿಕೊಳ್ಳಬೇಕು. ನಿರೀಕ್ಷಿತ ಫಲಿತಾಂಶಕ್ಕಾಗಿ ವಿಧ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ತಾಂತ್ರಿಕ ಹಾಗೂ ಇಂಜನಿಯರಿಂಗ್ ತೆಗೆದುಕೊಂಡವರಿಗೆ ಕಷ್ಟವಾಗಬಹುದು.

ಮೇಷ ರಾಶಿಯವರ ಲಗ್ನದಲ್ಲಿ ಗುರು ತನ್ನ ಸ್ವಂತ ಮನೆಯಲ್ಲಿ ಇರುವುದರಿಂದ ವೃತ್ತಿ ಜೀವನ ಸಂಮೃದ್ದಿ ಹೊಂದುತ್ತದೆ. ವೃತಿಯಲ್ಲಿ ಮುನ್ನಡೆಯುವ ಸಮಯ ಹಾಗೂ ಹೆಚ್ಚಿನ ಹುದ್ದೆಗಳ ನಿರೀಕ್ಷೆ ಇದೆ. ನಿಮ್ಮ ಕೆಲಸದ ಸ್ಥಳದ ಆಕರ್ಷಣೆ ನೀವಸಗಿರುತ್ತಿರಿ. ಕಳೆದ ತಿಂಗಳಿಗಿಂತ ನಿಮ್ಮಕಾರ್ಯ ಕ್ಷಮತೆ ಹೆಚ್ಚಾಗಿರುತ್ತದೆ ಇದರಿಂದ ಗೌರವ ಹೆಚ್ಚಾಗುತ್ತದೆ. ಕೆಲಸದ ನಿರೀಕ್ಷೆ ಇರುವವರಿಗೆ ಉತ್ತಮ ಕಾಲ ಆದರೆ ಸಿಕ್ಕ ಕೆಲಸಕ್ಕೆ ಹೊಂದಿಕೊಳ್ಳಬೇಕಾಗುವ ಸಂಭವ ಎದುರಾಗಬಹುದು. ನಿಮ್ಮ ಕೆಲಸದ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸುತ್ತಿರಿ.

ನೀವು ಉತ್ತಮವಾಗಿ ಗಳಿಸುವ ಕ್ಷಮತೆ ಹೊಂದಿರುವ ಬುದ್ದಿವಂತರಾಗಿರುತ್ತಿರಿ. ಉತ್ತಮ ಆದಾಯದ ಹರಿವನ್ನು ಗ್ರಹಗತಿಗಳು ತೋರಿಸುತ್ತವೆ.ಜೀವನ ಶೈಲಿ, ಐಶಾರಾಮಿ ಬದುಕಿಗಾಗಿ ಹಾಗೂ ಸೌಕರ್ಯಕ್ಕಾಗಿ ಖರ್ಚು ಮಾಡುತ್ತಿರಿ. ಹೆಚ್ಚಿನ ಲಾಭಕ್ಕಾಗಿ ಕೆಲಸವನ್ನು ವಿಸ್ತರಿಸುತ್ತಿರಿ. ಉದ್ಯೋಗದಲ್ಲಿ ಇರುವವರು ತಮ್ಮ ಪ್ರಯತ್ನದಿಂದ ಇತರರನ್ನು ಮೆಚ್ಚಿಸುತ್ತಾರೆ. ಸ್ವಂತ ಉದ್ಯೋಗಿಗಳಿಗೆ ಶುಭ ಫಲವಿದೆ. ಈ ತಿಂಗಳು ಮೇಷ ರಾಶಿಯವರ ಆರ್ಥಿಕ ಸ್ಥಿತಿಗೆ ಉತ್ತಮವಾಗಿದೆ. ಈ ತಿಂಗಳ ಸಮಸ್ಯೆಗಳನ್ನು ನಿಗಿಸಿಕೊಳ್ಳಲು ವೆಂಕಟೇಶ್ವರ ಸನ್ನಿಧಿಗೆ ಭೇಟಿ ನೀಡಿ ಅರ್ಚನೆ ಮಾಡಿಸಿ.ಹನುಮಾನ್ ಚಾಲೀಸಾ ಕೇಳುವುದು ಮತ್ತು ಹೇಳುವುದರಿಂದ ಒಳ್ಳೆಯದಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!