ಜ್ಯೋತಿಷ್ಯ ಶಾಸ್ತ್ರದಲ್ಲಿರುವ 12 ರಾಶಿಗಳು ತಮ್ಮದೇ ಆದ ಮಹತ್ವವನ್ನು ಹೊಂದಿದೆ. ಒಂದೊಂದು ರಾಶಿಯವರು ತಮ್ಮದೇ ಆದ ಗುಣ ಸ್ವಭಾವ, ಯೋಗವನ್ನು ಹೊಂದಿರುತ್ತಾರೆ. ಅದರಂತೆ ಮೊದಲ ರಾಶಿಯಾದ ಮೇಷ ರಾಶಿಯವರು ಯಾವ ರೀತಿಯ ಗುಣ ಸ್ವಭಾವವನ್ನು ಹೊಂದಿರುತ್ತಾರೆ, ಅವರಿಗೆ ಯಾವ ವಿಷಯಗಳಲ್ಲಿ ಆಸಕ್ತಿ ಇರುತ್ತದೆ ಮುಂತಾದ ವಿಷಯಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದೆ. ಮಂಗಳ ಗ್ರಹವು ಪರಾಕ್ರಮ ಹಾಗೂ ಉತ್ಸುಕತೆಯ ಪ್ರತೀಕವಾಗಿದೆ. ಮೇಷ ರಾಶಿಯವರು ಆಕರ್ಷಕವಾಗಿ ನೋಡಲು ಸುಂದರವಾಗಿರುತ್ತಾರೆ, ಕಲಾತ್ಮಕರಾಗಿರುತ್ತಾರೆ ಮತ್ತು ಪ್ರಾಮಾಣಿಕರಾಗಿರುತ್ತಾರೆ. ಇವರು ಸ್ವಾತಂತ್ರ್ಯ ಪ್ರಿಯರಾಗಿರುತ್ತಾರೆ, ಆಶಾವಾದಿಗಳಾಗಿರುತ್ತಾರೆ ಹಾಗೂ ಮುಗ್ಧರಾಗಿರುತ್ತಾರೆ. ಇವರು ಸರಿ-ತಪ್ಪುಗಳ ಬಗ್ಗೆ ಇವರಿಗೆ ಇವರದೇ ಆದ ದೃಷ್ಟಿಕೋನ ಇರುತ್ತದೆ. ಈ ರಾಶಿಯವರು ಸ್ವಾಭಿಮಾನಿಗಳಾಗಿರುತ್ತಾರೆ ಪರಿಶ್ರಮಿಗಳಾಗಿರುತ್ತಾರೆ ಮತ್ತು ಸ್ಟ್ರೇಟ್ ಫಾರ್ವರ್ಡ್ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಬಹಳ ಸುಲಭವಾಗಿ ಬೇರೆಯವರನ್ನು ನಂಬುತ್ತಾರೆ ಇದರಿಂದ ಇವರು ಪದೇ ಪದೇ ಮೋಸ ಹೋಗುತ್ತಾರೆ, ಇವರು ಮೋಸ ಹೋದಾಗ ಬಹಳ ದುಃಖಿತರಾಗುತ್ತಾರೆ ಹಾಗೆಯೇ ಇವರು ಬೇಗನೆ ಮೋಸವನ್ನು ಮರೆಯುತ್ತಾರೆ.

ಮೇಷ ರಾಶಿಯವರು ತಮಗೆ ಇಷ್ಟವಾದವರ ಮೇಲೆ ಅಧಿಕಾರವನ್ನು ಚಲಾಯಿಸಲು ನೋಡುತ್ತಾರೆ. ಇವರಿಗೆ ಕೀರ್ತಿ ಐಶ್ವರ್ಯವನ್ನು ಪಡೆಯುವ ಆಸೆ ಇರುತ್ತದೆ ಆದರೆ ಮೋಸದಿಂದ ಪಡೆಯಲು ಇವರು ಇಷ್ಟಪಡುವುದಿಲ್ಲ. ಇವರು ತಮ್ಮ ಜೀವನದಲ್ಲಿ ತಮ್ಮದೇ ಆದಂತಹ ತತ್ವಗಳನ್ನು ಅನುಸರಿಸುತ್ತಾರೆ. ಇವರಿಗೆ ಸಂಗೀತ, ಕಲೆಯ ಬಗ್ಗೆ ಆಸಕ್ತಿ ಇರುತ್ತದೆ. ಮೇಷ ರಾಶಿಯವರು ಸ್ನೇಹಿತರಿಗೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಾರೆ, ಸ್ನೇಹಿತರಿಗೆ ಹಣ ಕೊಡುತ್ತಾರೆ ಸಮಯವನ್ನು ಕೂಡ ಅವರಿಗಾಗಿ ಮೀಸಲಿಡುತ್ತಾರೆ. ಮೇಷ ರಾಶಿಯವರು ಲಾಯಲ್ ಆಗಿರುತ್ತಾರೆ ಇವರು ಯಾವಾಗಲೂ ಸುಳ್ಳು ಹೇಳುವುದಿಲ್ಲ. ಇವರು ಶಿಸ್ತಿನ ಸಿಪಾಯಿಗಳಾಗಿರುತ್ತಾರೆ, ಸಂಬಂಧಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಮೇಷ ರಾಶಿಯವರು ಬೇರೆಯವರ ಆದೇಶದಂತೆ ಜೀವನ ಮಾಡುವುದಿಲ್ಲ ಹಾಗೆ ಇವರು ಯಾರನ್ನೂ ಕೇರ್ ಮಾಡುವುದಿಲ್ಲ. ಇವರು ಯಾರಿಗೂ ಹೆದರುವುದಿಲ್ಲ ಇವರ ಈ ಗುಣದಿಂದಲೇ ಇವರು ಎಲ್ಲರಿಗೂ ಆಕರ್ಷಕರಾಗುತ್ತಾರೆ ಎಂದು ಹೇಳಬಹುದು.

ಮೇಷ ರಾಶಿಯವರಿಗೆ ಬಹಳ ಬೇಗ ಕೋಪ ಬರುತ್ತದೆ ತಾಳ್ಮೆ ಕಡಿಮೆ ಆದರೆ ಬೇಗನೆ ಇವರನ್ನು ಶಾಂತಗೊಳಿಸಬಹುದು. ಮೇಷ ರಾಶಿಯವರ ಒಂದು ಪ್ರಮುಖ ಗುಣವೆಂದರೆ ಇವರು ತಾವು ಹೇಳಿದ ಕೆಲಸವನ್ನು ಮುಗಿಸುವವರೆಗೆ ಬಿಡುವುದಿಲ್ಲ. ಇವರು ತಮ್ಮ ಸಂಗಾತಿಯನ್ನು ಸ್ನೇಹಿತರಂತೆ ಪ್ರೀತಿ ಕಾಳಜಿಯಿಂದ ನೋಡುತ್ತಾರೆ. ಪ್ರೀತಿ ವಿಷಯದಲ್ಲಿ ಈ ರಾಶಿಯವರು ಯಾರಿಗೂ ಮೋಸ ಮಾಡುವುದಿಲ್ಲ ಹಾಗೆಯೇ ಮೋಸ ಮಾಡುವವರನ್ನು ಕಂಡರೆ ಇವರಿಗೆ ಆಗುವುದಿಲ್ಲ. ಇವರು ಉತ್ತಮ ಸಲಹೆಗಾರರಾಗಿರುತ್ತಾರೆ, ಬೇರೆಯವರ ಸಮಸ್ಯೆಗೆ ಒಳ್ಳೆಯ ಪರಿಹಾರ ಹೇಳುತ್ತಾರೆ ಹಾಗೆಯೆ ಇವರು ತಮ್ಮ ಕೆಲಸಕ್ಕೆ ಬೇರೆಯವರಿಂದ ಸಹಾಯ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ.

ಇವರನ್ನು ಹೊರಗಡೆಯಿಂದ ನೋಡಿದರೆ ತುಂಬಾ ಗಡಸು ವ್ಯಕ್ತಿತ್ವದವರಂತೆ ಕಾಣುತ್ತಾರೆ ಆದರೆ ಇವರಿಗೆ ಕರುಣೆ ಪ್ರೀತಿ ಹೆಚ್ಚಿರುತ್ತದೆ, ಇವರು ಭಾವನಾತ್ಮಕ ಜೀವಿಯೂ ಆಗಿರುತ್ತಾರೆ. ಇವರಿಗೆ ಸೋಲನ್ನು ಆಯ್ಕೆ ಮಾಡಿಕೊಳ್ಳಲು ಕಷ್ಟ ಆಗುತ್ತದೆ. ಮೇಷ ರಾಶಿಯವರು ಕ್ಲೀನಾಗಿರಲು ಇಷ್ಟಪಡುತ್ತಾರೆ. ಇವರು ಹಠವಾದಿಯಾಗಿರುತ್ತಾರೆ ಅಲ್ಲದೆ ಬುದ್ಧಿವಂತರೂ ಆಗಿರುತ್ತಾರೆ. ಇವರು ಕ್ರೀಡೆಯಲ್ಲಿ ಬಹಳ ಆಸಕ್ತರಾಗಿರುತ್ತಾರೆ ಹಾಗೂ ಉತ್ಸುಕರಾಗಿರುತ್ತಾರೆ. ಮೇಷ ರಾಶಿಯವರು ತಮ್ಮ ಜನ್ಮ ಸ್ಥಾನದಿಂದ ದೂರವಿದ್ದರೆ ಎಲ್ಲಾ ಕೆಲಸದಲ್ಲೂ ಸಫಲರಾಗುತ್ತಾರೆ ಯಶಸ್ಸು ಅವರನ್ನು ಹುಡುಕಿಕೊಂಡು ಬರುತ್ತದೆ.

ಮೇಷ ರಾಶಿಯವರು ಆರೋಗ್ಯದ ವಿಚಾರ ನೋಡುವುದಾದರೆ ಇವರಿಗೆ ತಲೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳು ಬರಬಹುದು. ಮೇಷ ರಾಶಿಯವರು ರಾಜಕೀಯ, ಲಾಯರ್, ಪೊಲೀಸ್, ಟೇಲರಿಂಗ್, ಟೀಚರ್, ಕಂಪನಿಗೆ ಸಂಬಂಧಿಸಿದಂತೆ ಅಥವಾ ಭೂಮಿಗೆ ಸಂಬಂಧಿಸಿದಂತೆ ಇವರಿಗೆ ಭವಿಷ್ಯವಿದೆ. ಮೇಷ ರಾಶಿಯವರಿಗೆ ಕೋಪ ಜಾಸ್ತಿ ಬರುವುದರಿಂದ ಕಡಿಮೆ ಮಾಡಿಕೊಳ್ಳಬೇಕು ಧ್ಯಾನ,ಯೋಗ ಮಾಡುವುದರಿಂದ ಕೋಪ ಕಡಿಮೆಯಾಗುತ್ತದೆ. ಈ ರಾಶಿಯವರು ಸ್ಟ್ರೇಟ್ ಫಾರ್ವರ್ಡ್ ಸ್ವಭಾವ ಹೊಂದಿರುವುದರಿಂದ ಬೇರೆಯವರಿಗೆ ನೋವಾಗುತ್ತದೆ ಆದ್ದರಿಂದ ಮಾತನಾಡುವಾಗ ಎಚ್ಚರವಹಿಸಬೇಕು. ಮೇಷ ರಾಶಿಯವರು ಶಿವ ಮತ್ತು ಸುಬ್ರಹ್ಮಣ್ಯನ ಧ್ಯಾನ ಮಾಡುವುದರಿಂದ ಒಳ್ಳೆಯದಾಗುತ್ತದೆ. ನೀವು ಮೇಷ ರಾಶಿಯವರಾಗಿದ್ದಲ್ಲಿ ಈ ಲೇಖನವನ್ನು ತಪ್ಪದೆ ಓದಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *