ಶಿವನಿಗೆ ಪ್ರಿಯವಾದ 16 ಸೋಮವಾರದ ಪೂಜಾ ವೃತ ಮಾಡೋದು ಹೇಗೆ? ಇದರಿಂದ ಏನ್ ಲಾಭ ಓದಿ

0 11

ಸೋಮವಾರ ಎಂದರೆ ಶಿವನಿಗೆ ಪ್ರಿಯ, ಆ ದಿನ ಶಿವನನ್ನು ಪೂಜಿಸಬೇಕು ಎಂದು ಹೇಳುತ್ತಾರೆ. ಶಿವನಿಗೆ ಪ್ರಿಯವಾದ 16 ಸೋಮವಾರದ ಪೂಜಾ ವೃತವನ್ನು ಆಚರಿಸಿದರೆ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಹಾಗಾದರೆ 16 ಸೋಮವಾರದ ಪೂಜೆಯನ್ನು ಹೇಗೆ ಆಚರಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಈಶ್ವರನಿಗೆ 16 ಸೋಮವಾರ ವೃತ ಮಾಡುವುದರಿಂದ ನಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತದೆ. ಪ್ರತಿವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯವರೆಗೆ ಈ ನಾಲ್ಕು ತಿಂಗಳುಗಳಲ್ಲಿ ಬರುವ ಹದಿನಾರು ಸೋಮವಾರದಂದು ಈ ವೃತವನ್ನು ಆಚರಿಸಬಹುದು. ಈ ವೃತವನ್ನು ಆಚರಿಸುವುದರಿಂದ ಕಷ್ಟಗಳು ದೂರವಾಗಿ ಸಕಲ ಸಂಪತ್ತು, ನೆಮ್ಮದಿ ಆರೋಗ್ಯ ನಿಮ್ಮದಾಗುತ್ತದೆ.

ಈ ವೃತವನ್ನು ಪುರುಷರು ಸ್ತ್ರೀಯರು ಇಬ್ಬರು ಆಚರಿಸಬಹುದು. ವೃತ ಮಾಡುವವರು ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ ನಂತರ ಬರುವ ಸೋಮವಾರದಂದು ಅರುಣೋದಯಕ್ಕೆ ಎದ್ದು ಸ್ನಾನ ನಿತ್ಯ ಕರ್ಮಗಳನ್ನು ಪೂರೈಸಿ ಸಂಧ್ಯಾವಂದನೆ ಮಾಡಿದ ನಂತರ ಪ್ರಾರಂಭಿಸಬೇಕು ಅಂದು ಊಟಮಾಡದೇ ಹಾಲು ಹಣ್ಣನ್ನು ಸೇವಿಸಬೇಕು ಇದು ಅಲ್ಲದೆ ಪೂರ್ಣಪ್ರಮಾಣದಲ್ಲಿ ಉಪವಾಸವನ್ನು ಕೂಡ ಮಾಡಬಹುದು.

ಸೂರ್ಯಾಸ್ತ ಸಮಯಕ್ಕೆ ಸ್ನಾನಮಾಡಿ ಮಡಿಯಲ್ಲಿ ಹುತ್ತದ ಮಣ್ಣಿನಿಂದ ಈಶ್ವರ ಲಿಂಗವನ್ನು ತಯಾರಿಸಬೇಕು ನಂತರ ಮಡಿಯಲ್ಲಿ ಪೂಜಾ ಸಾಮಗ್ರಿಗಳೊಂದಿಗೆ ಕುಳಿತು ಪಂಚಾಮೃತ ಅಭಿಷೇಕ ಮೊದಲಾದ ಪೂಜೆಗಳಿಂದ ಲಿಂಗವನ್ನು ಪೂಜಿಸಬೇಕು. ಪೂಜೆ ಮುಗಿದ ನಂತರ ಬ್ರಾಹ್ಮಣೋತ್ತಮರಿಗೆ ವಾಯನ ದಾನವನ್ನು ದಕ್ಷಿಣೆಯೊಂದಿಗೆ ಕೊಡಬೇಕು. ಶಿವಲಿಂಗದ ನೈವೇದ್ಯಕ್ಕೆ ಅರ್ಧ ಸೇರು ಗೋದಿಹಿಟ್ಟನ್ನು ಹುರಿದು ಅದಕ್ಕೆ ಸಕ್ಕರೆ ಅಥವಾ ಬೆಲ್ಲ ತುಪ್ಪ ಏಲಕ್ಕಿ, ಬಾಜಿಕಾಯಿಯನ್ನು ಸೇರಿಸಿ ಗುಳ್ಳೆ ಪಪ್ಪಡಿಯನ್ನು ಮಾಡಬೇಕು ಅದರಲ್ಲಿ ಮೂರು ಭಾಗ ಮಾಡಿಕೊಂಡು ಮೂರು ಉಂಡೆಯನ್ನು ಕಟ್ಟಬೇಕು. ಮೂರು ಉಂಡೆಯನ್ನು ಶಿವಲಿಂಗಕ್ಕೆ ನೈವೇದ್ಯ ಇಡಬೇಕು ಪೂಜೆ ಮುಗಿದ ನಂತರ 3 ಉಂಡೆಗಳಲ್ಲಿ ಒಂದನ್ನು ಹಸುವಿಗೆ ಕೊಡಬೇಕು, ಒಂದು ಉಂಡೆಯನ್ನು ಪ್ರಸಾದದ ರೂಪದಲ್ಲಿ ಪೂಜೆಗೆ ಬಂದ ಅತಿಥಿಗಳಿಗೆ ಕೊಡಬೇಕು, ಉಳಿದ ಒಂದು ಉಂಡೆಯನ್ನು ಪ್ರಸಾದದ ರೂಪದಲ್ಲಿ ವೃತ ಮಾಡುವವರು ಸೇವಿಸಬೇಕು.

ನಂತರ ಪೂಜಿಸಿದ ಲಿಂಗವನ್ನು ನದಿಯಲ್ಲಾಗಲಿ ಕೆರೆಯಲ್ಲಾಗಲಿ ಅಥವಾ ಬಾವಿಯಲ್ಲಾಗಲಿ ವಿಸರ್ಜಿಸಬೇಕು. ಹೀಗೆ 16 ಸೋಮವಾರಗಳ ಕಾಲ ವೃತವನ್ನು ಆಚರಿಸಿ 17 ನೇ ಸೋಮವಾರದಂದು ಹಿಂದಿನ ಸೋಮವಾರದಂದು ಲಿಂಗವನ್ನು ಪೂಜಿಸಿದಂತೆ ಪೂಜಿಸಬೇಕು ನೈವೇದ್ಯಕ್ಕಾಗಿ 5 ಸೇರು ಗೋಧಿಯ ಹಿಟ್ಟನ್ನು ಹುರಿದು ಅದಕ್ಕೆ ಬೇಕಾದಷ್ಟು ಬೆಲ್ಲ ಅಥವಾ ಸಕ್ಕರೆ, ತುಪ್ಪ, ಏಲಕ್ಕಿ, ಬಾಜಿಕಾಯಿಯನ್ನು ಸೇರಿಸಿ ಗುಳ್ಳ ಪಪ್ಪಡಿಯನ್ನು ಮಾಡಬೇಕು ಹಿಂದಿನ ಸೋಮವಾರ ಮಾಡಿದಂತೆ ಉಂಡೆ ಮಾಡಿ ಒಂದನ್ನು ಹಸುವಿಗೆ, ಒಂದನ್ನು ಬಂದವರಿಗೆ ಪ್ರಸಾದವಾಗಿ ಕೊಟ್ಟು, ಉಳಿದ ಒಂದನ್ನು ತಾನು ಸ್ವೀಕರಿಸಿ ಆ ದಿನ ವೃತವನ್ನು ಮಾಡಿದ ಅಡುಗೆಯನ್ನು ಶಿವಲಿಂಗಕ್ಕೆ ಅರ್ಪಿಸಬೇಕು

ನಂತರ ಬ್ರಾಹ್ಮಣರಿಗೆ ಸಂತರ್ಪಣೆ ಮಾಡಿ ದಕ್ಷಿಣೆಯನ್ನು ಕೊಡಬೇಕು ಆಗ ಈ ವೃತ ಸಮಾಪ್ತಿಯಾಗುತ್ತದೆ. ಈ ವೃತ ಮಾಡುವವರು ದೂರಾಲೋಚನೆ, ದುರ್ವ್ಯಸನಗಳಿಂದ ದೂರ ಇರಬೇಕು ಪವಿತ್ರವಾದ ಶಿವಾಪಂಚಾಕ್ಷರ ಮಂತ್ರವನ್ನು ಜಪಿಸುತ್ತಿರಬೇಕು. ಈ ವೃತವನ್ನು ಆಚರಿಸುವುದರಿಂದ ವಿದ್ಯಾರ್ಥಿಗಳು ವಿದ್ಯೆಯನ್ನು, ಧನಾರ್ಥಿಗಳು ಧನವನ್ನು, ಪುತ್ರಾರ್ಥಿಗಳು ಪುತ್ರನನ್ನು ಪಡೆದು ಎಲ್ಲಾ ಪಾಪಗಳಿಂದ ಮುಕ್ತರಾಗಿ ಶಿವ ಸಾನಿಧ್ಯವನ್ನು ಸೇರುವವರು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.