ನಾವಿಂದು ಸೆಪ್ಟಂಬರ್ ತಿಂಗಳಲ್ಲಿ ಮೇಷ ರಾಶಿಯವರ ಮಾಸ ಭವಿಷ್ಯ ಹೇಗಿದೆ ಅದರ ಫಾಲಾಫಲ ಏನು ಎಂಬುದನ್ನು ತಿಳಿದುಕೊಳ್ಳೋಣ. ಮೇಷ ರಾಶಿಯವರಿಗೆ ಸ್ವಲ್ಪ ಶುಕ್ರನ ಪರಿವರ್ತನೆ ಹಾಗೆ ರವಿಯು ಕೂಡ ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪರಿವರ್ತನೆ ಆಗುವುದು. ದಶಮದಲ್ಲಿ ಗುರು ಇದ್ದಾಗ ಕೆಲಸ ಕಾರ್ಯಗಳಲ್ಲಿ ಒಳ್ಳೆಯದಾಗುವಂತಹದ್ದನ್ನೂ ಗುರು ಮಾಡುತ್ತಾನೆ ಅಂತಹ ಗುರು ನಿಮ್ಮ ರಾಶಿಗೆ ಶುಭವನ್ನುಂಟು ಮಾಡಿದರು ಕೂಡ ಹದಿನೇಳು ಒಂಬತ್ತು ಏರಡುಸಾವಿರದಇಪ್ಪತ್ತೊಂದಕ್ಕೆ ಸ್ವಲ್ಪ ವಕ್ರವಾಗುತ್ತಾನೆ.

ವಕ್ರ ಆಗಿದ್ದಾಗ ಇದ್ದಕ್ಕಿದ್ದ ಹಾಗೇ ಸ್ವಲ್ಪ ಕಿರಿಕಿರಿಯಾಗುವುದು. ನಾವು ಬಹಳ ಮುಖ್ಯವಾಗಿ ದಶಾಮುಕ್ತಿಗಳು ಹೇಗಿವೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಜಾತಕದ ವಿಮರ್ಶೆ ಬಹಳ ಮುಖ್ಯವಾದದ್ದು ಅಂತಹ ಜಾತಕದಲ್ಲಿ ಶುಭಕಾರಕನಾದಂತಹ ಗುರುವು ಒಂದು ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಶುಭಕರವಾದ ದಶಾಮುಕ್ತಿಗಳು ನಡೆಯುತ್ತಿದ್ದರೆ ನಿಮಗೆ ಹೆಚ್ಚಿನ ಶುಭ ಫಲಗಳೆ ಜಾಸ್ತಿಯಾಗುತ್ತದೆ. ಅದೇ ದಾಶಾಮುಕ್ತಿಗಳು ಸ್ವಲ್ಪ ಕಿರಿಕಿರಿಯಾಗಿದ್ದರೆ ಮತ್ತು ನಿಮ್ಮ ರಾಶ್ಯಾಧಿಪತಿ ಕುಜ ಆರನೇ ಭಾವದಲ್ಲಿದ್ದಾನೆ. ಅಂದರೆ ಶತ್ರುವಿನ ಭಾವದಲ್ಲಿದ್ದಾನೆ ಹಾಗಿದ್ದಾಗ ಸ್ವಲ್ಪ ಕೆಲಸದಲ್ಲಿ ಶತೃತ್ವಗಳುಂಟಾಗುತ್ತವೆ ಹಾಗಿದ್ದರೆ ಹೇಗೆ ಶತ್ರುತ್ವ ಉಂಟಾಗುತ್ತದೆ ಎಂದರೆ ನೀವು ಚೆನ್ನಾಗಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದೀರಿ.

ಆದರೆ ನಿಮ್ಮ ಮೇಲಧಿಕಾರಿಗಳು ಕೆಳಗಡೆ ಇರುವ ವ್ಯಕ್ತಿಗಳು ಕಿರಿಕಿರಿ ಕೋಡುವಂತದ್ದು ಅಥವಾ ನೀವು ಚೆನ್ನಾಗಿ ಕೆಲಸ ಮಾಡುತ್ತಿದ್ದರೂ ಕೂಡಾ ಎನನ್ನಾದರೂ ಹೇಳುವಂತದ್ದು ನೀವು ಏನೇ ಕೆಲಸ ಮಾಡಿದರೂ ಕಿರಿಕಿರಿ ಮಾಡುವಂತಹದ್ದು ಸರಿಯಾಗಿ ಕೆಲಸ ಮಾಡುವುದಕ್ಕೆ ಕೊಡುವುದಿಲ್ಲ. ಹೀಗೆಲ್ಲ ಒಂದಷ್ಟು ಅನರ್ಥಗಳು ಉಂಟಾಗುವಂತಹ ಸಾಧ್ಯತೆ ಇರುತ್ತದೆ.

ಆರಂಭದ ದಿವಸದಲ್ಲಿ ಆತಂಕ ಪಡುವುದು ಬೇಡ ಗುರುವಿನ ಪ್ರಭಾವ ಚೆನ್ನಾಗಿಯೇ ಇದೆ. ಆದರೂ ಸ್ವಲ್ಪ ಜಾತಕ ದುರ್ಬಲ ಇರುವವರು ಜಾತಕ ತೋರಿಸಿ ಕೊಳ್ಳುವ ಪ್ರಯತ್ನ ಮಾಡುವಂಥದ್ದು. ದಕ್ಷಿಣಾಧಿಪತಿ ಆಗಿರುವಂತಹ ಗುರುವಿಂದ ಸಾಹಸಗಳು ಮತ್ತು ನಿಮಗೆ ಪ್ರಶಸ್ತಿಗಳು ಗೌರವಗಳು ಮನ್ನಣೆಗಳು ನಿಮಗೆ ಸಿಗುತ್ತದೆ. ಕೆಲಸದ ಬಗ್ಗೆ ಗಮನಿಸಿ ಹೆಚ್ಚಿನದಾದಂತಹ ಹಣಕಾಸಿನ ಕಡೆ ಜಾಸ್ತಿ ಗಮನವನ್ನು ಕೊಡುವುದನ್ನು ಕಡಿಮೆ ಮಾಡಿ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಅದರಿಂದ ನೀವು ಹೆಚ್ಚಿನ ಶ್ರೇಯಸ್ಸನ್ನು ಪಡೆಯುವ ಸಾಧ್ಯತೆ ಇದೆ.

ಇನ್ನು ನಿಮ್ಮ ರಾಶಿಯಿಂದ ಎರಡನೇ ಭಾವದಲ್ಲಿ ರಾಹು ಇದ್ದಾನೆ ಮತ್ತು ಆರನೇ ಭಾಗದಲ್ಲಿ ರಾಶ್ಯಾಧಿಪತಿ ಕುಜ ಇದ್ದಾನೆ ಹೀಗಿದ್ದಾಗ ಕುಜನ ಪರಿವರ್ತನೆ, ಯಾವಾಗಲೂ ಕೂಡ ಗೋಚಾರಫಲವನ್ನು ಹೇಳುವಾಗ ಷಷ್ಠ ಭಾವದಲ್ಲಿ ಅಂದರೆ ಆರನೇ ಮನೆ ಮೂರನೇ ಮನೆ ಹಾಗೂ ಎಂಟನೇ ಮನೆಗಳಲ್ಲಿ ಅಪಗ್ರಹಗಳಿದ್ದರೆ ತೊಂದರೆ ಕೊಡುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. ಮಾತಿನಲ್ಲಿ ಎಚ್ಚರಿಕೆ ವಹಿಸಿ.

ಕೆಲವೊಂದು ಬಾರಿ ನೀವು ಒಳ್ಳೆಯದನ್ನೇ ಹೇಳಿರುತ್ತಿರಿ ಆದರೆ ಅದರ ಅಡ್ಡ ಪರಿಣಾಮ ಬೇರೆ ರೀತಿಯಲ್ಲಾಗುತ್ತದೆ. ಅಂದರೆ ನಿಮ್ಮ ಏರಿಳಿತದ ಧ್ವನಿ ಇರಬಹುದು ಅಥವಾ ನಿಮ್ಮ ಅವಸರದ ತೀರ್ಮಾನಗಳು ಇರಬಹುದು ಅಥವಾ ಅವಸರದಲ್ಲಿ ಮಾತು ಕೊಡುವಂತಹದ್ದಿರಬಹುದು ಇಂತಹ ಮಾತಿನ ವಿಚಾರದಲ್ಲಿ ಬಹಳಷ್ಟು ಜಾಗ್ರತೆಯನ್ನುವಹಿಸಿ ಮಾತನಾಡಿ. ಆದಷ್ಟು ಮೃದು ಮೆತ್ತಗೆ ಬೇರೆಯವರ ಮನಸ್ಸಿಗೆ ನೋವಾಗದಂತೆ ಮಾತನಾಡಿ.

ಈ ರಾಶಿಯ ಸಪ್ತಮದಲ್ಲಿ ಶುಕ್ರನಿದ್ದಾನೆ ಆ ಶುಕ್ರ ರಾಶಿಯನ್ನು ನೋಡುತ್ತಿದ್ದಾನೆ ಹಾಗಾಗಿ ಬಹಳ ಮಂಗಳಕಾರ್ಯವನ್ನು ಉಂಟುಮಾಡುತ್ತಾನೆ. ದಾಂಪತ್ಯ ಜೀವನದಲ್ಲಿ ಕಲಹಗಳಿದ್ದರೆ ಅವೆಲ್ಲ ದೂರವಾಗಿ ಪುನಃ ಒಮ್ಮನಸ್ಸು ಬರುವಂತಹದ್ದು ಅನ್ಯೋನ್ಯತೆ ಆಗುವಂತಹ ಸಾದ್ಯತೆ ಇರುತ್ತದೆ. ನಿಶ್ಚಯವಾದ ವಿವಾಹವು ಮುಂದೆ ಮುಂದೆ ಹೋಗುತ್ತಿರುತ್ತದೆ ಸರಿಯಾದ ದಿನಾಂಕ ಸಿಗುವುದಿಲ್ಲ ಮುಹೂರ್ತ ಸಿಗುವುದಿಲ್ಲ ಹೀಗೆ ಮುಂದೆ ಹೋಗುತ್ತಿರುತ್ತದೆ ಹೀಗಿದ್ದಾಗ ಅನಿರೀಕ್ಷಿತವಾಗಿ ಯಾವುದೋ ಒತ್ತಡಕ್ಕೆ ಸುಲಭವಾಗಿ ವಿವಾಹ ನಡೆಯುವಂತದ್ದು ಮತ್ತು ಈ ರಾಶಿಯವರಿಗೆ ಮನೆಯಲ್ಲಿ ಮಂಗಳಕರ ವಾತಾವರಣ ಉಂಟಾಗುತ್ತದೆ. ಅನಿರೀಕ್ಷಿತವಾಗಿ ಧನಾಗಮನವು ಆಗುತ್ತದೆ.

ಆರೋಗ್ಯದ ವಿಷಯವನ್ನು ಗಮನಿಸುತ್ತಾ ಹೋದರೆ ಕಣ್ಣಿನ ತೊಂದರೆ ಕಾಣಿಸಿಕೊಳ್ಳುತ್ತದೆ ಪಂಚಮಾಧಿಪತಿ ಆದಂತಹ ರವಿ ಷಷ್ಠಿಗೆ ಹೋಗುತ್ತಾನೆ ಹಾಗಾಗಿ ಕಣ್ಣಿನ ತಾಪತ್ರಯ ಬರುವಂತಹ ಸಾದ್ಯತೆ ಇರುತ್ತದೆ. ಕಣ್ಣಿನ ಬಗ್ಗೆ ಜಾಗ್ರತೆಯನ್ನು ವಹಿಸಬೇಕಾಗುತ್ತದೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಮೋಬೈಲ್ ನೋಡುವುದಕ್ಕೆ ಹೆಚ್ಚಿನ ಸಮಯವನ್ನು ಉಪಯೋಗಿಸುತ್ತಾರೆ. ಈ ರಾಶಿಯವರು ಅದನ್ನು ಸ್ವಲ್ಪ ಕಡಿಮೆ ಮಾಡಬೇಕು. ಹದಿನೇಳನೇ ತಾರಿಕಿನಿಂದ ರವಿಯು ಕೂಡ ಕನ್ಯಾ ರಾಶಿಗೆ ಹೋಗುತ್ತಿದ್ದಾನೆ ಕನ್ಯಾ ರಾಶಿ ಅಂದರೆ ಕುಜನ ಉತ್ತಮ ರಾಶಿಅಲ್ಲ ಹಾಗಾಗಿ ನೀವು ಕಣ್ಣಿನ ತೊಂದರೆಗೆ ಸಂಬಂಧಿಸಿದ ಪರಿಹಾರ ಅಥವಾ ಚಿಕಿತ್ಸೆ ಪಡೆಯುವುದು ಉತ್ತಮ.

ಈ ರಾಶಿಯ ರಾಜಕೀಯ ವ್ಯಕ್ತಿಗಳಿಗೆ ಸ್ವಲ್ಪ ಕಿರಿಕಿರಿ ಆಗುವಂತಹದ್ದು ರಾಶ್ಯಾಧಿಪತಿ ಷಷ್ಠದಲ್ಲಿದ್ದಾಗ ಪರಸ್ಪರ ನಿಮ್ಮ ಆಸುಪಾಸಿನ ವ್ಯಕ್ತಿಗಳು ಮತ್ತು ನಿಮ್ಮ ಸ್ಥಾನಗಳು ವ್ಯತ್ಯಾಸವಾಗುವಂತಹ ಸ್ಥಿತಿ. ಮತ್ತು ನಿಮ್ಮ ಉದ್ದೇಶವನ್ನು ಸಫಲ ಆಗುವುದಕ್ಕೆ ಕೊಡುವುದಿಲ್ಲ. ಜನರಿಂದ ತಿರಸ್ಕಾರ ಭಾವನೆ ಅಸಡ್ಡೆ ಅಥವಾ ನಿಮ್ಮ ಅಧಿಕಾರಿವರ್ಗದ ಬೆಂಬಲವಿಲ್ಲದ ಅಸಹಕಾರಿ ಸ್ಥಿತಿ ನಿಮ್ಮದಾಗಬಹುದು. ಹಾಗಾಗಿ ಬಹಳ ಜಾಗ್ರತೆ ವಹಿಸಬೇಕು. ಇನ್ನು ಸಣ್ಣಪುಟ್ಟ ಉದ್ಯಮವನ್ನು ಮಾಡುತ್ತಿರುವವರು ಮತ್ತು ಕೃಷಿ ಚಟುವಟಿಕೆಗಳನ್ನು ಮಾಡುತ್ತಿರುವವರಿಗೆ ಬಹಳ ಉತ್ತಮವಾದ ಸ್ಥಿತಿ ಇದೆ ಹೆಚ್ಚಿನದಾಗಿ ಆತಂಕ ಪಡುವ ಯಾವುದೇ ಸ್ಥಿತಿ ಇಲ್ಲ.

ಹತ್ತನೇ ತಾರೀಖು ಶುಕ್ರವಾರ ಗಣೇಶ ಹಬ್ಬ ವಿಶೇಷವಾದದ್ದು ಈ ರಾಶಿಯವರು ಗಣೇಶನನ್ನು ಚೆನ್ನಾಗಿ ಪೂಜೆ ಮಾಡಿ ಏಕೆಂದರೆ ನಮ್ಮೆಲ್ಲ ವಿಘ್ನಗಳು ದೂರವಾಗಬೇಕು ಕೆಲಸ ಕಾರ್ಯದಲ್ಲಿ ಅಭಿವೃದ್ಧಿ ಆಗಬೇಕು ಆದ್ದರಿಂದ ನಿಮಗೆ ಸಾದ್ಯವಿದ್ದರೆ ಗರಿಕೆಯನ್ನು ಗಣೇಶನಿಗೆ ಒಪ್ಪಿಸಿ ಶ್ರದ್ಧೆಯಿಂದ ಗಣೇಶನನ್ನು ಪೂಜೆ ಮಾಡಿ ಇದರಿಂದ ಶುಭವಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!