2023ರಲ್ಲಿ ಮೇಷ ರಾಶಿಯವರಿಗೆ ಶನಿಕಾಟ ಇರೋದಿಲ್ಲ ಇವರ ಲೈಫ್ ಹೇಗಿರತ್ತೆ ಗೊತ್ತಾ..

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

2023ರಲ್ಲಿ ಮೇಷ ರಾಶಿಯವರ ರಾಶಿ ಫಲ ಹಾಗೂ ಅವರ ಭವಿಷ್ಯ ಹೇಗಿರಲಿದೆ ಎಂಬುದಾಗಿ ತಿಳಿಯುವುದಕ್ಕೆ ಹೊರಟರೆ ಮೊದಲನೇದಾಗಿ ಆರ್ಥಿಕ ವಿಚಾರದ ಕುರಿತಂತೆ ಮಾತನಾಡುವುದಾದರೆ ನಿಮಗೆ ಈಗ ತಿಳಿದಿರುವುದಿಲ್ಲ ಆದರೆ ಮುಂದಿನ ವರ್ಷದಲ್ಲಿ ಹಲವಾರು ಆರ್ಥಿಕ ಮೂಲಗಳಿಂದ ಆದಾಯಗಳು ಬೇಡ ಎಂದರು ಕೂಡ ನೀರಿನಂತೆ ಹರಿದು ಬರುತ್ತದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಹೊಸ ಮನೆ ಅಥವಾ ಮನೆ ಕಟ್ಟಲು ಹೊಸ ಜಾಗವನ್ನು ಖರೀದಿಸುವ ಯೋಗ ನಿಮಗೆ ಮುಂದಿನ ವರ್ಷದಲ್ಲಿ ಸಿಗಲಿದೆ.

ಈ ಸಮಯದಲ್ಲಿ ನಿಮಗೆ ಅನಗತ್ಯ ಖರ್ಚುಗಳು ಕೂಡ ಎದುರಾಗಬಹುದು ಹಾಗಾಗಿ ಕೊಂಚಮಟ್ಟಿಗೆ ನೋಡಿಕೊಂಡು ಖರ್ಚು ಮಾಡುವುದು ಒಳ್ಳೆಯದು ಇದರಿಂದಾಗಿ ಮುಂದಿನ ಸಮಯಗಳಲ್ಲಿ ಹಣದ ಉಳಿತಾಯ ನಿಮಗೆ ಆಗಬಹುದು. ಇನ್ನು ಪ್ರೀತಿ ಪ್ರೇಮದ ವಿಚಾರಕ್ಕೆ ಬಂದರೆ ವರ್ಷದ ಆರಂಭಿಕ ತಿಂಗಳುಗಳಲ್ಲಿ ಕೊಂಚಮಟ್ಟಿಗೆ ಸಂಬಂಧದಲ್ಲಿ ಆಗುಹೋಗುಗಳು ನಿಮ್ಮ ಹಾಸಿಗೆ ವಿರುದ್ಧವಾಗಿ ನಡೆಯಬಹುದು ಆದರೆ ತಿಂಗಳುಗಳು ಕಳೆಯುತ್ತಾ ಹೋದಂತೆ ನೀವು ನಿಮ್ಮ ಪ್ರೀತಿಯ ಸಂಬಂಧದಲ್ಲಿ ಸಿಹಿಯನ್ನು ಕಾಣುತ್ತೀರಿ ಎನ್ನಬಹುದಾಗಿದೆ.

2023ರಲ್ಲಿ ಶನಿಯ ಸಾಡೆ ಸಾತಿ ನಿಮಗೆ ಇರುವುದಿಲ್ಲ ಹೀಗಾಗಿ ಯಾವುದೇ ಕೆಲಸಗಳನ್ನು ಮಾಡಿದರೂ ಕೂಡ ಅದು ವೇಗವಾಗಿ ನಡೆಯುತ್ತಿದೆ ಎಂಬ ಭಾವನೆ ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಯಾವುದು ಕೆಲಸಗಳನ್ನು ನೀವು ಪ್ರಾರಂಭಿಸಿದ್ದಾರೆ 2023ರಲ್ಲಿ ಅದರಿಂದಾಗಿ ನೀವು ದೊಡ್ಡ ಮಟ್ಟದ ಲಾಭಾಂಶವನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೂ ನೀವು ಕೈ ಹಾಕಿರುವ ಎಲ್ಲಾ ಕೆಲಸಗಳು ಕೂಡ ಸಂಪೂರ್ಣ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಒಂದೊಳ್ಳೆ ಕೆಲಸದ ಅವಕಾಶಕ್ಕಾಗಿ ನೀವು ಕಾಯುತ್ತಿದ್ದರೆ ಮುಂದಿನ ವರ್ಷ ಅಂದರೆ 2023 ನಿಮಗೆ ದೊಡ್ಡ ಸಿಹಿ ಸುದ್ದಿಯನ್ನು ನೀಡಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಈ ಸಂದರ್ಭದಲ್ಲಿ ಕೆಲವೊಂದು ನಿಮ್ಮ ಪ್ರಮುಖ ನಿರ್ಧಾರಗಳಿಗೆ ನಿಮ್ಮ ಫ್ಯಾಮಿಲಿ ಸಪೋರ್ಟ್ ಮಾಡುವುದು ಕೂಡ ಅನುಮಾನವಾಗಿದೆ. ಇನ್ನು 2023ರಲ್ಲಿ ನೀವು ವಿದೇಶಿ ಪ್ರಯಾಣವನ್ನು ಕೂಡ ವೈಯಕ್ತಿಕ ಅಥವಾ ಕೆಲಸದ ವಿಚಾರವಾಗಿ ಮಾಡಬೇಕಾಗಿ ಬರುತ್ತದೆ.

ವರ್ಷದ ಆರಂಭದಲ್ಲಿ ನಿಮಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಂಡು ಬರಬಹುದು ಹೀಗಾಗಿ ಆರೋಗ್ಯದ ಕುರಿತಂತೆ ಹೆಚ್ಚಿನ ಗಮನವನ್ನು ವಹಿಸಿ. ನಂತರ ಯೋಗ ಹಾಗೂ ಉತ್ತಮ ಆಹಾರ ಕ್ರಮವನ್ನು ಅನುಸರಿಸುವ ಮೂಲಕ ವರ್ಷದ ಕೊನೆಯ ಒಳಗೆ ನೀವು ಮತ್ತೆ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *