ದ್ವಾದಶ ರಾಶಿಗಳಲ್ಲಿ 2ನೇ ರಾಶಿ ಆಗಿರುವ ವೃಷಭ ರಾಶಿಯವರ ಮುಂದಿನ ವರ್ಷದ ರಾಶಿ ಭವಿಷ್ಯ ಹಾಗೂ ಒಳಿತು ಕೆಡುಕು ಸಾಧಕ ಬಾದಕಗಳು ಹೇಗಿವೆ ಹೇಗಿರಲಿವೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ವಿದೇಶಕ್ಕೆ ಹೋಗಿ ಕೆಲಸ ಮಾಡುವಂತಹ ಭಾಗ್ಯ ಕೂಡ ನಿಮಗೆ ಕಂಡು ಬರಲಿದ್ದು ಇದಕ್ಕಾಗಿ ನೀವು ಸಾಕಷ್ಟು ಪರಿಶ್ರಮವನ್ನು ಪಡಬೇಕಾಗುತ್ತದೆ. ಇನ್ನು ಈ ಸಮಯದಲ್ಲಿ ಯಾರಿಗೂ ಕೂಡ ಸಾಲ ನೀಡುವ ಮುನ್ನ ನೂರಾರು ಬಾರಿ ಯೋಚಿಸಿ ನಂತರವೇ ನಿರ್ಧಾರ ತೆಗೆದುಕೊಳ್ಳಿ.

ಕೇವಲ ಸಾಲ ನೀಡುವುದು ಮಾತ್ರವಲ್ಲ ಸಾಲ ತೆಗೆದುಕೊಳ್ಳುವುದು ಕೂಡ ನಿಮಗೆ ಅಶುಭವಾಗಿ ಪರಿಣಮಿಸಬಹುದಾದ ಸಾಧ್ಯತೆ ಇದೆ ಯಾಕೆಂದರೆ ಕೇತುವಿನ ವಕ್ರದೃಷ್ಟಿ ಈ ಸಂದರ್ಭದಲ್ಲಿ ನಿಮ್ಮ ಮೇಲಿರುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ನೀವು ವಿಘ್ನನಾಶಕ ಗಣಪತಿಯ ಆರಾಧನೆ ಹಾಗೂ ಆತನ ಮಂತ್ರಸ್ಮರಣೆ ಮಾಡುವುದು ಉತ್ತಮವಾಗಿದೆ. ಈ ಸಮಯದಲ್ಲಿ ಯುವಕರಿಗೆ ಹಾಗೂ ಅದರಲ್ಲೂ ವಿಶೇಷವಾಗಿ ಪ್ರೇಮಿಗಳಿಗೆ ಸ್ವಲ್ಪಮಟ್ಟಿಗೆ ಅಗ್ನಿ ಪರೀಕ್ಷೆಯನ್ನು ಎದುರಿಸಬೇಕಾದ ಸಾಧ್ಯತೆ ಇರುತ್ತದೆ.

ಈ ಸಮಯದಲ್ಲಿ ಸ್ತ್ರೀಯರು ಗರ್ಭಧಾರಣೆ ಮಾಡುವ ವಿಚಾರದ ಕುರಿತಂತೆ ಕೂಡ ಕೊಂಚಮಟ್ಟಿಗೆ ಜಾಗ್ರತೆ ವಹಿಸಬೇಕು. ಕೇತು ಕನ್ಯಾ ರಾಶಿಗೆ ಬರುವ ಸಮಯದಲ್ಲಿ ಶೇರು ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡುತ್ತಿದ್ದರೆ ಕೂಡ ಸ್ವಲ್ಪ ಮಟ್ಟಿಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಇನ್ನು 2023ರಲ್ಲಿ ಬರಹಗಾರರಿಗೆ ಉತ್ತಮ ಅವಕಾಶ ಹಾಗೂ ಪ್ರೋತ್ಸಾಹಗಳು ಸಿಗುವ ಸಾಧ್ಯತೆ ಹೆಚ್ಚಾಗಿದೆ. ಗುರು ಮೀನ ರಾಶಿಯಲ್ಲಿ ಇರುವ ಸಂದರ್ಭದಲ್ಲಿ ವೃಷಭ ರಾಶಿಯವರಿಗೆ ಸಾಕಷ್ಟು ಶುಭ ಸುದ್ದಿಗಳು ಕೇಳಿ ಬರುತ್ತವೆ.

ಅದರಲ್ಲಿ ಮದುವೆ ಆಗುವ ಆಲೋಚನೆ ಇದ್ದರೆ ಅಥವಾ ಪಾರ್ಟ್ನರ್ಶಿಪ್ ವ್ಯವಹಾರವನ್ನು ಪ್ರಾರಂಭಿಸುವ ಯೋಚನೆಯಲ್ಲಿದ್ದರೆ ನಿಮಗೆ ಗ್ರೀನ್ ಸಿಗ್ನಲ್ ಸಿಗಬಹುದು. ಈ ಸಮಯದಲ್ಲಿ ಹೊಸದಾಗಿ ಯಾವುದೇ ವಿಚಾರಗಳನ್ನು ಪ್ರಾರಂಭಿಸಿದರು ಕೂಡ ನೀವು ಅದರಲ್ಲಿ ಗೆಲುವನ್ನು ಕಾಣುವ ಸಾಧ್ಯತೆ ನೂರಕ್ಕೆ ನೂರರಷ್ಟು ಇದೆ ಎಂದು ಹೇಳಬಹುದು.

ಇನ್ನು ಈ ಸಂದರ್ಭದಲ್ಲಿ ಆಗುವಂತಹ ಆಸ್ತಿ ವ್ಯವಹಾರ ವಿಚಾರಗಳು ಮತ್ತು ಕೋರ್ಟ್ ವಿಚಾರಗಳು ಕೂಡ ಇತ್ಯರ್ಥ ಆಗಲಿದ್ದು ಈ ಕುರಿತಂತೆ ನೀವು ಸಂಪೂರ್ಣವಾಗಿ ಗಮನವಹಿಸಬೇಕು. ಒಟ್ಟಾರೆಯಾಗಿ ಮುಂದಿನ ವರ್ಷ ಎನ್ನುವುದು ಬೇವು ಹಾಗೂ ಬೆಲ್ಲದ ಸಿಹಿ ಕಹಿಗಳನ್ನು ನೀಡುವ ವರ್ಷವಾಗಿರಲಿದೆ ಎಂಬುದಾಗಿ ಹೇಳಬಹುದಾಗಿದೆ.

Leave a Reply

Your email address will not be published. Required fields are marked *