ಬಾಣಂತಿಯರ ಸಾಂಪ್ರದಾಯಿಕ ಅಡುಗೆ ಮೆಂತೆ ಸಿಹಿ ಮುದ್ದೆ ಮಾಡುವ ಸರಳ ವಿಧಾನ

0 38

ಸಿಹಿ ಮುದ್ದೆಯೂ ಒಂದು ಬಗೆಯ ತಿಂಡಿಯಾಗಿದೆ. ಈ ತಿಂಡಿಯು ಬಾಣಂತಿಯರಿಗೆ, ಟೀನೇಜ್ ಅಲ್ಲಿರುವವರಿಗೆ, ಪ್ರಾಯದ ಹೆಣ್ಣು ಮಕ್ಕಳಿಗೆ, ತುಂಬಾ ಆರೋಗ್ಯಕರವಾದ ಮತ್ತು ಉತ್ತಮವಾದ ತಿನಿಸಾಗಿದೆ. ಈ ಮೆಂತೆ ಸಿಹಿ ಮುದ್ದೆಯ ಮಾಡುವ ವಿಧಾನದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮೊದಲನೆಯದಾಗಿ 150 ಗ್ರಾಮ್ ಅಕ್ಕಿಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಹದದಲ್ಲಿ ಕೆಂಪಾಗುವ ರೀತಿಯಲ್ಲಿ ಹುರಿದುಕೊಳ್ಳಬೇಕು. ಅದಾದ ನಂತರ ಅರ್ಧ ಕೆಜಿ ಯಷ್ಟು ಮೆಂತೆಯನ್ನು ತೆಗೆದುಕೊಂಡು ಅದನ್ನು ಕೂಡ ಹದ ಉರಿಯಲ್ಲಿ ಹುರಿದುಕೊಳ್ಳಬೇಕು. ಗೋಧಿಯನ್ನು ಸರಿಯಾಗಿ ಬಿಸಿಲಿನಲ್ಲಿ ಒಣಗಿಸಿಟ್ಟುಕೊಳ್ಳಬೇಕು. ಹುರಿದ ಅಕ್ಕಿ ಮತ್ತು ಮೆಂತೆ ಜೊತೆಗೆ ಒಣಗಿಸಿಟ್ಟುಕೊಂಡ ಗೋಧಿಯನ್ನು ಸೇರಿಸಿ ಹಿಟ್ಟನ್ನು ಮಾಡಿಸಿಟ್ಟುಕೊಳ್ಳಬೇಕು. ನಂತರ ಒಂದು ಕಪ್ ಈ ಮೂರು ಮಿಶ್ರಣದ ಪುಡಿಯನ್ನು ಜೊತೆಗೆ 1ಕಪ್ ಬೆಲ್ಲವನ್ನು ಹಾಗೂ ತುಪ್ಪವನ್ನು ತೆಗೆದುಕೊಳ್ಳಬೇಕು. ಒಂದುವರೆ ಗ್ಲಾಸ್ ನಷ್ಟು ನೀರನ್ನು ಪಾತ್ರೆಗೆ ಹಾಕಿ ಅದಕ್ಕೆ ಒಂದು ಕಪ್ ಬೆಲ್ಲವನ್ನು ಹಾಗೂ ಎರಡು ಚಮಚ ಮಿಶ್ರಣದ ಪುಡಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.

ಮಿಶ್ರಣ ಮಾಡಿದ ನಂತರ ಇದನ್ನು ಸರಿಯಾಗಿ ಕುದಿಸಬೇಕು. ನಂತರ ಅದು ಕುದಿಯುತ್ತಿರುವಾಗಲೇ ಮಿಶ್ರಣದ ಹುಡಿಯನ್ನು ಹಾಕಿ ಸರಿಯಾಗಿ ಮಿಶ್ರಣವನ್ನು ಮಾಡಬೇಕು. ಮಿಶ್ರಣ ಮಾಡಿದ ನಂತರ ಇದನ್ನು ಸರಿಯಾಗಿ ಕುದಿಯಲು ಬಿಡಬೇಕು. ಕುದ್ದಿದ ನಂತರ ಇದಕ್ಕೆ ಎರಡು ಚಮಚದಷ್ಟು ತುಪ್ಪವನ್ನು ಸೇರಿಸಬೇಕು. ಇದನ್ನು ಸೇರಿಸುವುದರಿಂದ ಹಿಟ್ಟು ಗಂಟಾಗುವುದಿಲ್ಲ. ಜೊತೆಗೆ ತುಂಬಾ ಮೃದುವಾಗುತ್ತದೆ. ಅದನ್ನು ಸರಿಯಾಗಿ ಮಿಶ್ರಣ ಮಾಡಿದ ನಂತರ ಎರಡು ನಿಮಿಷಗಳ ಕಾಲ ಮತ್ತೆ ಬೇಯಲು ಬಿಡಬೇಕು. ನಂತರ ಇದು ಗಂಟಾಗದ ರೀತಿಯಲ್ಲಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ಸರಿಯಾಗಿ ಬೆಂದ ಐದು ನಿಮಿಷಗಳ ನಂತರ ಅದನ್ನು ಒಂದು ಪ್ಲೇಟ್ ಗೆ ಹಾಕಿ ಸರಿಯಾಗಿ ಮುದ್ದೆಯನ್ನು ಕಟ್ಟಿಕೊಳ್ಳಬೇಕು. ಈ ಮುದ್ದೆಯನ್ನು ತುಪ್ಪದ ಜೊತೆ ಸೇವಿಸಬಹುದು.

ಊಟದ ಜೊತೆಯು ಕೂಡ ಸೇವಿಸಬಹುದಾಗಿದೆ. ಮೆಂತೆ ಸಿಹಿ ಉಂಡೆಯನ್ನು ಯಾರು ಬೇಕಾದರೂ ಸೇವಿಸಬಹುದಾಗಿದೆ. ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸುವವರು ಪ್ರತಿನಿತ್ಯವೂ ಇದನ್ನು ಸೇವಿಸುವುದರಿಂದ ದೇಹದ ತೂಕ ಹೆಚ್ಚುತ್ತದೆ. ನಂತರ ಮೆಚೂರ್ ಆದ ಹೆಣ್ಣು ಮಕ್ಕಳಿಗೆ ಸತತ ಐದು ತಿಂಗಳುಗಳವರೆಗೆ ಇದನ್ನು ನೀಡುತ್ತಾರೆ. ಹಾಗೂ ಬಾಣಂತಿಯರಿಗು ಕೂಡ ಇದನ್ನು ನೀಡುತ್ತಾರೆ. ಡಿಲೆವರಿ ಆದ 12 ದಿವಸಗಳ ನಂತರ 5 ತಿಂಗಳುಗಳವರೆಗೆ ಪ್ರತಿನಿತ್ಯ ಇದನ್ನು ಸೇವಿಸಲು ನೀಡುತ್ತಾರೆ. ಅಂಥವರಿಗೆ ಇದು ತುಂಬಾ ಒಳ್ಳೆಯದಾಗಿದ್ದು ದೇಹಕ್ಕೆ ಒಳ್ಳೆಯ ಸಾಮರ್ಥ್ಯವನ್ನು ನೀಡುತ್ತದೆ. ಇದೊಂದು ಅತ್ಯುತ್ತಮವಾದ ಆರೋಗ್ಯಕರ ಮತ್ತು ರುಚಿಕರವಾದ ತಿನಿಸಾಗಿದೆ.

Leave A Reply

Your email address will not be published.