ಏಲಕ್ಕಿ ತಿನ್ನುವುದರಿಂದ ಗಂಡಸರಲ್ಲಿ ಆಗುವ ಚಮತ್ಕಾರ ನೋಡಿ

0 84

men cardamom eating benefits for health: ನಮ್ಮ ಅಡುಗೆಯಲ್ಲಿ ಅದರಲ್ಲೂ ಸಿಹಿ ತಿಂಡಿಗಳಲ್ಲಿ ಏಲಕ್ಕಿಯನ್ನು ಬಳಸುತ್ತಾರೆ. ನೋಡಲು ಚಿಕ್ಕದಾಗಿರುವ ಏಲಕ್ಕಿಯ ಸೇವನೆಯಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ. ಹಾಗಾದರೆ ಏಲಕ್ಕಿ ಸೇವನೆಯಿಂದ ಯಾವೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಭಾರತೀಯರು ಹಿಂದಿನ ಕಾಲದಿಂದಲೂ ತಮ್ಮ ಆಯುರ್ವೇದ ಪದ್ಧತಿಗಳಲ್ಲಿ ಏಲಕ್ಕಿಯನ್ನು ಬಳಸಿಕೊಂಡು ಬರುತ್ತಲೆ ಇದ್ದಾರೆ. ಏಲಕ್ಕಿ ಜೀರ್ಣಕ್ರಿಯೆ ಸಮಸ್ಯೆ, ಒತ್ತಡ, ಶೀತ, ಜ್ವರದಂತಹ ಸಮಸ್ಯೆಯನ್ನು ಹೋಗಲಾಡಿಸಿ ಆರೋಗ್ಯವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಡುಗೆಯಲ್ಲಿ ಏಲಕ್ಕಿಯನ್ನು ಬಳಸಿದರೆ ಸುವಾಸಿತವಾಗಿ ಅಡುಗೆ ರುಚಿಯಾಗಿರುತ್ತದೆ.

ಕೆಲವರು ಅಡುಗೆಗೆ ಏಲಕ್ಕಿ ಹಾಕುತ್ತಾರೆ ಇದರಿಂದ ಸುಗಂಧವಾಗಿ ಅದರ ರುಚಿ ಹೆಚ್ಚುತ್ತದೆ. ಕೆಟ್ಟ ಆಹಾರ ಪದ್ಧತಿ, ಜೀವನಶೈಲಿಯಿಂದ ಬಹಳಷ್ಟು ಜನರು ಗ್ಯಾಸ್, ಅಸಿಡಿಟಿ, ವಾಕರಿಕೆ, ಸೆಳೆತ, ಎದೆಯುರಿ ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಏಲಕ್ಕಿಯನ್ನು ಸೇವಿಸುವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕುದಿಯುವ ನೀರಿಗೆ ಏಲಕ್ಕಿ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.

ನಾಲ್ಕೈದು ಏಲಕ್ಕಿ, ಸಣ್ಣ ತುಂಡು ಶುಂಠಿ, 2 ಲವಂಗ, 1 ಟೀ ಚಮಚ ಕೊತ್ತಂಬರಿ ಬೀಜಗಳನ್ನು ಹಾಕಿ ಪುಡಿಮಾಡಿಟ್ಟುಕೊಂಡು ಉಗುರು ಬೆಚ್ಚಗಿನ ನೀರಿಗೆ ಒಂದು ಸ್ಪೂನ್ ಪುಡಿಯನ್ನು ಹಾಕಿ ಕುಡಿಯುವುದರಿಂದ ಹೊಟ್ಟೆ ಉಬ್ಬರ, ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.

ಏಲಕ್ಕಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳಿದ್ದು ಪ್ರಥಮ ಸ್ಟೇಜ್ ನಲ್ಲಿರುವಾಗ ಏಲಕ್ಕಿಯನ್ನು ಸೇವಿಸಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಪ್ರತಿದಿನ ಬೆಳಗ್ಗೆ ಬಿಸಿ ನೀರು, ಹಾಲು, ಟೀ ಕುಡಿಯುವಾಗ ಅದಕ್ಕೆ ಏಲಕ್ಕಿಯನ್ನು ಸೇರಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಅಲ್ಲದೆ ಒಳ್ಳೆಯ ಔಷಧಿಯಾಗಿದೆ.

ಮಳೆಗಾಲದಲ್ಲಿ ಗಂಟಲು ಉರಿ, ಕೆಮ್ಮು, ಕಫ ಕಾಣಿಸಿಕೊಂಡರೆ ಏಲಕ್ಕಿ ಟೀ ಕುಡಿಯುವುದರಿಂದ ನಿವಾರಣೆಯಾಗುತ್ತದೆ. ಏಲಕ್ಕಿ ಸೇವಿಸುವುದರಿಂದ ಕಿಡ್ನಿ, ಮೂತ್ರಕೋಶ, ಮೂತ್ರನಾಳಗಳಲ್ಲಿರುವ ವಿಷಪದಾರ್ಥಗಳನ್ನು ಹೊರಹಾಕುತ್ತದೆ. ಪ್ರತಿದಿನ ಬ್ರೆಡ್ ಅಥವಾ ಹಣ್ಣುಗಳನ್ನು ಸೇವಿಸುವಾಗ ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ತಿನ್ನುವುದರಿಂದ ರುಚಿಯಾಗಿರುತ್ತದೆ ಮತ್ತು ಆರೋಗ್ಯಕ್ಕೆ ಒಳ್ಳೆಯದು.

ಏಲಕ್ಕಿಯಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ಊಟದ ನಂತರ ಏಲಕ್ಕಿ ಟೀ ಅಥವಾ ಎರಡು ಏಲಕ್ಕಿಯನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆ ಹೋಗುತ್ತದೆ. ಹಿಂದಿನಿಂದಲೂ ಏಲಕ್ಕಿಯನ್ನು ಮೌತ್ ಫ್ರೆಶ್ ನಂತೆ ಬೆಳಸಿಕೊಂಡು ಬರುತ್ತಿದ್ದಾರೆ ಅಲ್ಲದೆ ಏಲಕ್ಕಿ ಅಲ್ಸರ್ ಖಾಯಿಲೆಯನ್ನು ನಿವಾರಿಸುವ ಗುಣವನ್ನು ಹೊಂದಿದೆ. ಹಾನಿಕಾರಕ ಸೂಕ್ಷ್ಮಜೀವಿಗಳಾದಂತಹ ಶಿಲೀಂದ್ರ, ಬ್ಯಾಕ್ಟೀರಿಯಾ, ವೈರಸ್ ಗಳ ವಿರುದ್ಧ ಹೋರಾಡುತ್ತದೆ.

ಏಲಕ್ಕಿ ಸೇವನೆಯಿಂದ ಅಧಿಕ ರಕ್ತದೊತ್ತಡ ಸಮತೋಲನದಲ್ಲಿರುತ್ತದೆ ಮತ್ತು ಮಧುಮೇಹದ ವಿರುದ್ಧ ಏಲಕ್ಕಿ ಹೋರಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಹಲ್ಲಿನ ಆರೋಗ್ಯವನ್ನು ಕಾಪಾಡುವಲ್ಲಿ ಏಲಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ. ಅಸ್ತಮಾದಂತಹ ಉಸಿರಾಟದ ತೊಂದರೆಗಳು ಇರುವವರು ಪ್ರತಿ ದಿನ ಏಲಕ್ಕಿ ಸೇವಿಸುವುದರಿಂದ ಅವರ ಆರೋಗ್ಯಕ್ಕೆ ಒಳ್ಳೆಯದು. ವಾಕರಿಕೆ, ವಾಂತಿಯ ಸಮಸ್ಯೆ ಕಂಡುಬಂದರೆ ಏಲಕ್ಕಿಯನ್ನು ಜಗಿಯುತ್ತಾರೆ.

ಗರ್ಭಧರಿಸುವ ಸಮಯದಲ್ಲಿ ವಾಕರಿಕೆ, ವಾಂತಿ ಕಂಡುಬಂದಲ್ಲಿ ಏಲಕ್ಕಿ ಜಗಿಯುವುದರಿಂದ ನಿವಾರಣೆಯಾಗುತ್ತದೆ. ಏಲಕ್ಕಿ ಹಾಕಿದ ನೀರನ್ನು ಕುದಿಸಿ ಕುಡಿಯುವುದರಿಂದ ಬಿಕ್ಕಳಿಕೆ ನಿವಾರಣೆ ಆಗುತ್ತದೆ. ಏಲಕ್ಕಿಯನ್ನು ಹಾಲು ಮತ್ತು ಜೇನುತುಪ್ಪದಲ್ಲಿ ಬೆರೆಸಿ ಕುಡಿಯುವುದರಿಂದ ಲೈಂ ಗಿಕ ಸಮಸ್ಯೆ ನಿವಾರಣೆಯಾಗುತ್ತದೆ. ಸಾಂಬಾರು ಪದಾರ್ಥಗಳಲ್ಲಿ ಒಂದಾದ ಏಲಕ್ಕಿ ಸೇವನೆಯಿಂದ ಜ್ಞಾಪಕಶಕ್ತಿ ಹೆಚ್ಚುತ್ತದೆ. ಈ ಮಾಹಿತಿ ಉಪಯುಕ್ತವಾಗಿದ್ದು ನಿಮ್ಮ ಪ್ರತಿದಿನದ ಅಡುಗೆಯಲ್ಲಿ ಏಲಕ್ಕಿಯನ್ನು ತಪ್ಪದೆ ಸೇರಿಸಿ, ಆರೋಗ್ಯವಾಗಿರಿ.

Leave A Reply

Your email address will not be published.